94ನೇ ಅಕಾಡೆಮಿ ಅವಾರ್ಡ್ ಕಾರ್ಯಕ್ರಮದಲ್ಲಿ ನಟ ವಿಲ್ ಸ್ಮಿತ್, ಕ್ರಿಸ್ ರಾಕ್ ಅವರಿಗೆ ಕಪಾಳಕ್ಕೆ ಹೊಡೆದ ಘಟನೆ ಬಗ್ಗೆ ಸ್ಮಿತ್ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ನಿಜಕ್ಕೂ ಆಘಾತವುಂಟು ಮಾಡಿದೆ ಎಂದು ಹೇಳಿದ್ದಾರೆ. 

ಪ್ರತಿಷ್ಠಿತ ಆಸ್ಕರ್ ಸಮಾರಂಭದಲ್ಲಿ ಡಾಕ್ಯುಮೆಂಟರಿ ಫೀಚರ್ ವಿಭಾಗದ ಪ್ರಶಸ್ತಿಯನ್ನು ಘೋಷಿಸಲು ಬಂದ ಕ್ರಿಸ್ ರಾಕ್(Chris Rock), ನಟ ವಿಲ್ ಸ್ಮಿತ್(Will Smith) ಪತ್ನಿ ಹಾಗೂ ಜಡಾ ಪಿಂಕೆಟ್ ಸ್ಮಿತ್ ಬಗ್ಗೆ ತಮಾಷೆ ಮಾಡಿದ ಕಾರಣಕ್ಕೆ ವೇದಿಕೆಯ ಮೇಲೆ ಹೋಗಿ ವಿಲ್ ಸ್ಮಿತ್ ಕಪಾಳಕ್ಕೆ ಬಾರಿಸುವ ಮೂಲಕ ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದ್ದರು. ಈ ಘಟನೆ ಈಗ ಸಿಕ್ಕಾಪಟ್ಟೆ ಚರ್ಚೆಗೆ ಗುರಿಯಾಗಿದೆ. ವಿಲ್ ಸ್ಮಿತ್ ಕ್ಷಮೆ ಕೇಳಿದರು ಸಹ ಈ ಬಗ್ಗೆ ಚರ್ಚೆ ಮುಂದುವರೆದಿದೆ. ಇದೀಗ ವಿಲ್ ಸ್ಮಿತ್ ತಾಯಿ ಕರೊಲಿನ್ ಸ್ಮಿತ್(Carolyn Smith) ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕ್ರಿಸ್ ರಾಕ್ ಆಸ್ಕರ್ ವೇದಿಕೆ ಮೇಲೆ ನಟ ವಿಲ್ ಸ್ಮಿತ್ ಪತ್ನಿಯ ಬೋಳು ತಲೆಯ ಬಗ್ಗೆ ತಮಾಷೆ ಮಾಡಿ ಕಪಾಳಕ್ಕೆ ಪೆಟ್ಟು ತಿಂದಿದ್ದರು. ಕಪಾಳಕಕ್ಕೆ ಬಾರಿಸಿ ಬಂದ ಸ್ಮಿತ್ ನನ್ನ ಪತ್ನಿ ಬಗ್ಗೆ ಮಾತನಾಬೇಡ ಎಂದು ಕಿರುಚಾಡಿದರು. 'ನನ್ನ ಪತ್ನಿಯ ಹೆಸರನ್ನು ನಿನ್ನ ಕೆಟ್ಟ ಬಾಯಿಯಿಂದ ಹೊರಗಿಡು' ಎಂದು ಸ್ಮಿತ್ ಕೂಗಾಡಿದ್ದರು. ಈ ಘಟನೆ ಎಲ್ಲರಿಗೂ ಶಾಕ್ ನೀಡಿದ್ದು. ಕಪಾಳಕ್ಕೆ ಬಾರಿಸಿದ ಕೆಲವೇ ನಿಮಿಷಗಳಲ್ಲಿ ವಿಲ್ ಸ್ಮಿತ್ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದು ಬೀಗಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಲ್ ಸ್ಮಿತ್ ಕಣ್ಣೀರು ಹಾಕಿದ್ದರು. ಇದೀಗ ಈ ಘಟನೆ ಬಗ್ಗೆ ವಿಲ್ ಸ್ಮಿತ್ ತಾಯಿ ಮಾತನಾಡಿದ್ದಾರೆ. ಮಗನನ್ನು ಪೀಪಲ್ ಪರ್ಸನ್ ಎಂದು ಕರೆದಿದ್ದಾರೆ.

Oscars 2022: ಡ್ಯೂನ್‌ಗೆ 6 ಪ್ರಶಸ್ತಿ, ವಿಲ್ ಸ್ಮಿತ್ ಅತ್ಯುತ್ತಮ ನಟ!

ಕ್ರಿಸ್ ರಾಕ್ ಅವರಿಗೆ ಹೊಡೆದಿದ್ದು ನನಗೂ ಕೂಡ ಆಘಾತವುಂಟು ಮಾಡಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಟಿವಿ ವಾಹಿನಿ ಜೊತೆ ಮಾತನಾಡಿದ ಸ್ಮಿತ್ ತಾಯಿ, ಅವನು ತುಂಬಾ ಪೀಪಲ್ ಪರ್ಸನ್. ಈ ರೀತಿ ನಾನು ಅವನನ್ನು ಮೊದಲ ಬಾರಿಗೆ ನೋಡಿದ್ದೇನೆ. ಈ ಮೊದಲು ಯಾವತ್ತೂ ನಾನು ಅವನನ್ನು ಹೀಗೆ ನೋಡಿರಲಿಲ್ಲ ಎಂದಿದ್ದಾರೆ. ಇದು ನನಗೂ ಆಘಾತವಾಗಿದೆ ಎಂದು ಹೇಳಿದ್ದಾರೆ.

ಇನ್ನು ಸ್ಮಿತ್ ಸಹೋದರಿ ಎಲೆನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಸಹೋದರ ಹಾಲಿವುಡ್ ನಲ್ಲಿ ಸಾಕಷ್ಟು ಒತ್ತಡಗಳನ್ನು ಎದುರಿಸಿ ಇಂದು ಯಶಸ್ವಿಯಾಗಿದ್ದಾನೆ ಎಂದು ಹೇಳಿದ್ದಾರೆ. ಪ್ರತಿಯೊಬ್ಬರು ಹಿಂಸೆಗೆ ಒಳಗಾಗಿದ್ದಾರೆ. ಕೆಲವು ರೀತಿಯ ನಿಂದನೆ ಮಾಡಲಾಗುತ್ತದೆ. ಅವನ ಜೊತೆ ಮಾತನಾಡಿದೆ ನಿಜಕ್ಕೂ ಬೇಸರ ಆಯಿತು ಎಂದಿದ್ದಾರೆ.

Oscars/Academy Awards: ಸತ್ಯಜಿತ್ ರೇ - ರೆಹಮಾನ್ ಗೋಲ್ಡನ್ ಟ್ರೋಫಿ ಗೆದ್ದ ಭಾರತೀಯರು!

ಈ ಬಗ್ಗೆ ಸ್ಮಿತ್ ಪತ್ನಿ ಜಾಡ ಪಿಂಕೆಟ್ ಸ್ಮಿತ್ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಇದು ಗುಣಪಡಿಸುವ ಸಮಯ ಮತ್ತು ಅದಕ್ಕಾಗಿ ನಾನು ಇಲ್ಲಿ ಇದ್ದೀನಿ ಎಂದು ಪರೋಕ್ಷವಾದ ಪೋಸ್ಟ್ ಶೇರ್ ಮಾಡಿದ್ದಾರೆ. ವಿಲ್ ಸ್ಮಿತ್ ಕಿಂಗ್ ರಿಚರ್ಡ್ಸ್ ಸಿನಿಮಾದ ನಟನೆಗೆ ಅತ್ಯುತ್ತಮ ನಟ ವಿಭಾಗದಲ್ಲಿ ನಾಮಿನೇಟ್ ಆಗಿದ್ದರು. ಈ ವರ್ಷದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸಹ ವಿಲ್ ಸ್ಮಿತ್ ಪಡೆದುಕೊಂಡರು.