ಫಿಟ್ನೆಸ್ ಹುಚ್ಚಿಗೆ ಅನೇಕರು ಜೀವಕ್ಕೆ ಅಪಾಯ ತಂದ್ಕೊಳ್ತಿದ್ದಾರೆ. ಈಗ ಗಂಗ್ನಮ್ ನಟಿ ಹ್ಯೂನಾ ಇದೇ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಹಾಡು ಹಾಡುವಾಗ್ಲೇ ವೇದಿಕೆ ಮೇಲೆ ಕುಸಿದು ಬಿದ್ದ ನಟಿಗೆ ಏನಾಯ್ತು?
ದಕ್ಷಿಣ ಕೊರಿಯಾದ ಗಾಯಕಿ, ರ್ಯಾಪರ್ ಮತ್ತು ಮಾಡೆಲ್ ಹ್ಯೂನಾ ಮಕಾವು ಫ್ಯಾನ್ಸ್ ಗೆ ಶಾಕ್ ಆಗಿದೆ. ಶೋ ನೀಡ್ತಿದ್ದ ವೇಳೆಯೇ ಹ್ಯೂನಾ ಮಕಾವು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರ್ಯಕ್ರಮ ರದ್ದು ಮಾಡಲಾಗಿದೆ. ಸದ್ಯ ಹ್ಯುವಾ ಚೇತರಿಸಿಕೊಂಡಿದ್ದು, ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ. ಒಂದು ತಿಂಗಳಲ್ಲಿ 10 ಕೆ.ಜಿ ತೂಕ ಇಳಿಸಿಕೊಂಡಿದ್ದೇ ಇದಕ್ಕೆ ಕಾರಣವಾಗಿದೆ.
ಹಾಡು ಹೇಳ್ತಿರುವಾಗ್ಲೇ ಕುಸಿದು ಬಿದ್ದ ನಟಿ :
ದಕ್ಷಿಣ ಕೋರಿಯಾದ ಪಾಪ್ ಐಕಾನ್ ಹ್ಯೂನಾ ವಯಸ್ಸು 33 ವರ್ಷ. ಮಕಾವ್ನಲ್ಲಿ ನಡೆದ ಸಂಗೀತೋತ್ಸವದ ವೇಳೆ ತಮ್ಮ ಪ್ರಸಿದ್ಧ ಗೀತೆ “ಬಬಲ್ ಪಾಪ್!” (Bubble Pop!) ಹಾಡುತ್ತಿದ್ದಾಗ ಅಚಾನಕ್ ವೇದಿಕೆಯಲ್ಲಿ ಕುಸಿದು ಬಿದ್ದಿದ್ದಾರೆ. ಈ ಘಟನೆಯ ನಂತರ ಹ್ಯೂನಾ ದೌರ್ಬಲ್ಯ ಮತ್ತು ನೆನಪಿನ ನಷ್ಟವನ್ನು ಉಲ್ಲೇಖಿಸಿದ್ದಾರೆ . ಘಟನೆಯ ಬಗ್ಗೆ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ. ನನಗೆ ಏನಾಗಿದೆ ಎಂಬುದು ನನಗೆ ನೆನಪಿಲ್ಲ. ನಾನು ವೃತ್ತಿಪರವಾಗಿರಲಿಲ್ಲ ಎಂಬ ಭಾವನೆ ಬರುತ್ತಿದೆ. ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ, ನನ್ನನ್ನು ಕ್ಷಮಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ್ದಾರೆ.
YouTube ಗಾಗಿಯೇ 2ನೇ ಮದ್ವೆ ಆರೋಪ ಹೊತ್ತ Armaan Malik ಮಗಂಗೆ ಸಿನಿಮಾ ಆಫರ್, ದಿನದ ಸಂಬಳ ಕೇಳಿ ನೆಟ್ಟಿಗರು ಕಂಗಾಲು
ವರದಿಗಳ ಪ್ರಕಾರ, ಹ್ಯೂನಾಗೆ ವಾಸೋವೇಗಲ್ ಸಿಂಕೋಪಿ (Vasovagal Syncope) ಎಂಬ ಕಾಯಿಲೆ ಇರುವುದಾಗಿ ದೃಢಪಟ್ಟಿದೆ. ಈ ಸ್ಥಿತಿಯಲ್ಲಿ ಹೃದಯದ ನಾಡಿ ಹಾಗೂ ರಕ್ತದ ಒತ್ತಡ ಅಚಾನಕ್ ಕಡಿಮೆಯಾಗುವುದರಿಂದ ವ್ಯಕ್ತಿ ತಕ್ಷಣ ಪ್ರಜ್ಞೆ ತಪ್ಪುತ್ತಾನೆ. ಇದು ಸಾಮಾನ್ಯವಾಗಿ ಒತ್ತಡ, ನೋವು ಸೇರಿದಂತೆ ಅನೇಕ ಕಾರಣಗಳಿಂದ ಸಂಭವಿಸುತ್ತದೆ. ಇದು ಅಪಾಯಕಾರಿಯಾಗಿದೆ. ಆದ್ರೆ ಪ್ರಜ್ಞೆ ತಪ್ಪುವ ಮುನ್ನ ತಲೆತಿರುಗುವಿಕೆ, ವಾಕರಿಕೆ, ದೃಷ್ಟಿ ಮಸುಕಾಗುವುದು ಮುಂತಾದ ಲಕ್ಷಣಗಳು ಮೊದಲೇ ಕಾಣಿಸಿಕೊಳ್ಳುತ್ತವೆ. ತಜ್ಞರ ಪ್ರಕಾರ, ಲಕ್ಷಣ ಕಾಣಿಸಿಕೊಳ್ತಿದ್ದಂತೆ ಅದಕ್ಕೆ ಸೂಕ್ತ ಚಿಕಿತ್ಸೆ ಅಗತ್ಯ.
ಹ್ಯೂನಾ ಯಾರು ? :
ಕಿಮ್ ಹ್ಯೂನಾ (Kim Hyuna) ಎಂಬ ಹೆಸರಿನಲ್ಲಿ 1992ರಲ್ಲಿ ಜನಿಸಿದ ಹ್ಯೂನಾ, ದಕ್ಷಿಣ ಕೊರಿಯಾದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. 2007ರಲ್ಲಿ ವಂಡರ್ ಗರ್ಲ್ಸ್ (Wonder Girls) ಎಂಬ ಗರ್ಲ್ ಬ್ಯಾಂಡ್ನ ಸದಸ್ಯೆಯಾಗಿಯೇ ಅವರು ತಮ್ಮ ಸಂಗೀತ ಯಾನ ಶುರು ಮಾಡಿದ್ರು. ಆದರೆ ಆರೋಗ್ಯ ಸಮಸ್ಯೆಗಳ ಕಾರಣದಿಂದ ಅವರು ಶೀಘ್ರದಲ್ಲೇ ಟೀಂನಿಂದ ಹೊರಗೆ ಬರಬೇಕಾಯ್ತು. 2009ರಲ್ಲಿ ಫೋರ್ ಮಿನಿಟ್ (4Minute) ಟೀಂನ ಪ್ರಮುಖ ರ್ಯಾಪರ್ ಆಗಿ ಮತ್ತೆ ಬಂದ ಹ್ಯೂನಾ ಹೆಸರು ಗಿಟ್ಟಿಸಿಕೊಂಡರು. ಹ್ಯೂನ್ಸಾಂಗ್ (Hyunseung) ಜೊತೆ ಸೇರಿ ಟ್ರಬಲ್ ಮೇಕರ್ (Trouble Maker) ಎಂಬ ಕೋ-ಎಡ್ ಯುನಿಟ್ ರಚಿಸಿದ್ದಾರೆ. ಅವರ ಟ್ರಬಲ್ ಮೇಕರ್ (2011) ಸಾಂಗ್ ಸಿಕ್ಕಾಪಟ್ಟೆ ಪ್ರಸಿದ್ಧಿ ಪಡೆದಿದೆ.
ಅಮಿತಾಭ್ ಬಚ್ಚನ್ ಜೊತೆಗಿನ ಮರೆಯಲಾಗದ 'ಶಿ
ಗಂಗ್ನಮ್ ಸ್ಟೈಲ್ ಮೂಲಕ ಜಾಗತಿಕ ಖ್ಯಾತಿ :
ಹ್ಯೂನಾ 2012ರಲ್ಲಿ ಸೈ (Psy) ಅವರ ವಿಶ್ವಪ್ರಸಿದ್ಧ ಗೀತೆ ಗಂಗ್ನಮ್ ಸ್ಟೈಲ್ ನಲ್ಲಿ ಕಾಣಿಸಿಕೊಂಡು ಅಂತಾರಾಷ್ಟ್ರೀಯ ಖ್ಯಾತಿ ಪಡೆದರು. ಆ ಹಾಡಿನ ಮೂಲ ವೀಡಿಯೊ ಮತ್ತು ಅದರ ಸ್ಪಿನ್ಆಫ್ ಪ್ರಸಿದ್ಧಿ ಹೆಚ್ಚು ಮಾಡಿದೆ. 2016ರ ನಂತ್ರ ಹ್ಯೂನಾ ಅನೇಕ ಹಿಟ್ ಹಾಡುಗಳನ್ನು ನೀಡಿದ್ದಾರೆ.
