ಯೂಟ್ಯೂಬರ್ ಅರ್ಮಾನ್ ಮಲಿಕ್ ತನ್ನ ಫ್ಯಾನ್ಸ್ ಗೆ ಖುಷಿ ಸುದ್ದಿ ನೀಡಿದ್ದಾರೆ. ತಮ್ಮ ಎರಡನೇ ಪತ್ನಿ ಮಗನಿಗೆ ಸಿನಿಮಾದಲ್ಲಿ ಆಫರ್ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇಲ್ಲಿ ಅರ್ಮಾನ್ ಮಲಿಕ್ ಮಗನಿಗೆ ಸಿಗಲಿರುವ ದಿನದ ಸಂಭಾವನೆ ಎಲ್ಲರನ್ನು ಅಚ್ಚರಿಗೊಳಿಸಿದೆ.
ಇಬ್ಬರು ಪತ್ನಿಯರನ್ನು ಹೊಂದಿರುವ ಪ್ರಸಿದ್ಧ ಯೂಟ್ಯೂಬರ್ ಅರ್ಮಾನ್ ಮಲಿಕ್ (YouTuber Armaan Malik), ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರ್ತಾರೆ. ಅವರ ಎರಡನೇ ಪತ್ನಿ ಕೃತಿಕಾ ಹಾಗೂ ಮಲಿಕ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಆಗಿದ್ದು, ಈಗ ಖುಷಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಅರ್ಮಾನ್ ಮಲಿಕ್ ಹಾಗೂ ಕೃತಿಕಾ ಮಲಿಕ್ ಮಗನಿಗೆ ಸಿನಿಮಾದಲ್ಲಿ ನಟಿಸುವ ಆಫರ್ ಬಂದಿದೆ. 100 ಕೋಟಿ ಬಜೆಟ್ ಸಿನಿಮಾದಲ್ಲಿ ಕೃತಿಕಾ ಮಲಿಕ್ 2.5 ವರ್ಷದ ಮಗ ನಟಿಸಲಿದ್ದಾನೆ. ಜೈದ್ ಮಲಿಕ್ಗೆ ಈ ಸಿನಿಮಾಗೆ ಸಂಭಾವನೆ ಕೂಡ ಸಿಗ್ತಿದೆ. ಆ ಮೊತ್ತ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಯೂಟ್ಯೂಬರ್ ಅರ್ಮಾನ್ ಮಲಿಕ್ ಮಗನಿಗೆ ಸಿನಿಮಾ ಆಫರ್ :
ಅರ್ಮಾನ್ ಮಲಿಕ್ ಯೂಟ್ಯೂಬ್ ನಲ್ಲಿ ಸಂತೋಷದ ಸುದ್ದಿ ಹಂಚಿಕೊಂಡಿದ್ದು, ಶೀಘ್ರವೇ ತಮ್ಮ ಮಗ ದಕ್ಷಿಣ ಭಾರತದ ಸಿನಿಮಾದಲ್ಲಿ ಕಾಣಿಸಲಿದ್ದಾನೆ ಎಂದಿದ್ದಾರೆ. ದಕ್ಷಿಣ ಭಾರತದ ನಟ ಸೇತುರಾಮನ್ ಕುಮಾನನ್ ಮತ್ತು ನಿರ್ದೇಶಕ ಪ್ರಸಾದ್, ಅರ್ಮಾನ್ ಮಲಿಕ್ ಮನೆಗೆ ಭೇಟಿ ನೀಡಿದ್ದರು. ಜೈದ್ ಮಲಿಕ್ ಗೆ ಸಿನಿಮಾ ಆಫರ್ ನೀಡುವ ಬಗ್ಗೆ ಮಾತುಕತೆ ನಡೆದಿದೆ. ಜನವರಿ 2026 ರಲ್ಲಿ ಪೊಂಗಲ್ ನಂತರ ಸಿನಿಮಾ ಶೂಟಿಂಗ್ ಶೂರುವಾಗಲಿದೆ. 100 ಕೋಟಿ ಬಜೆಟ್ ನಲ್ಲಿ ಸಿನಿಮಾ ಸಿದ್ಧವಾಗಲಿದೆ. ಕೃತಿಕಾ ಮಲಿಕ್ ಮಗ ಜೈದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಪ್ಯಾನ್ ಇಂಡಿಯಾ ಚಿತ್ರ ಇದಾಗಲಿದ್ದು, ಬಹು ಭಾಷೆಗಳಲ್ಲಿ ಡಬ್ ಆಗಲಿದೆ. ಯೂಟ್ಯೂಬ್ ನಲ್ಲಿ ಚಿತ್ರಕ್ಕೆ ಸಹಿ ಮಾಡಿದ ಪತ್ರವನ್ನು ಮಲಿಕ್ ತೋರಿಸಿದ್ದಾರೆ.
Pitru Paksha and Soul: ಗೋಕರ್ಣದಲ್ಲಿ ಆ ಪ್ರೇತ, ವಂಶ ನಿರ್ವಂಶ ಮಾಡ್ತೀನಿ ಎಂದು ಹೇಳಿತು: ಮಾಸ್ಟರ್ ಆನಂದ್
ಜೈದ್ ಮಲಿಕ್ ಗೆ ಸಿಗಲಿದೆ ಇಷ್ಟೊಂದು ಹಣ :
ಅರ್ಮಾನ್ ಮಲಿಕ್ ಹಾಗೂ ಕೃತಿಕಾ, ಜೈದ್ ಮಲ್ಲಿಕ್ ಗೆ ಎಷ್ಟು ಸಂಭಾವನೆ ಸಿಗಲಿದೆ ಎಂಬುದನ್ನೂ ಬಹಿರಂಗಪಡಿಸಿದ್ದಾರೆ. ಹೊಸ ಚಿತ್ರದಲ್ಲಿ ಜೈದ್ ಮಲಿಕ್ 28 ದಿನಗಳ ಕಾಲ ಶೂಟಿಂಗ್ ಮಾಡಲಿದ್ದಾನೆ. ಒಂದು ದಿನಕ್ಕೆ 3 ಲಕ್ಷ ರೂಪಾಯಿ ಸಂಭಾವನೆ ಸಿಗಲಿದೆ ಎಂದು ಮಲಿಕ್ ಹೇಳಿದ್ದಾರೆ. ಅಂದ್ರೆ ಮಲಿಕ್ ಪ್ರಕಾರ, ಜೈದ್ ಮಲಿಕ್ ಗೆ ಒಟ್ಟೂ 8,400,000 ರೂಪಾಯಿ ಸಿಗಲಿದೆ. ಜೈದ್ ಮಲಿಕ್ ಸಿನಿಮಾ ಸುದ್ದಿ ಕೇಳಿ ಅರ್ಮಾನ್ ಮಲಿಕ್ ಕುಟುಂಬಸ್ಥರು ಹಾಗೂ ಫ್ಯಾನ್ಸ್ ಖುಷಿಯಾಗಿದ್ದಾರೆ. ಅರ್ಮಾನ್, ಮಗನ ಆಯ್ಕೆಯನ್ನು ಸಂಭ್ರಮಿಸಿದ್ರೆ ಕೃತಿಕಾ ಭಾವುಕರಾಗಿದ್ದಾರೆ. ಜೈದ್ ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಿನಿಮಾ ಮಾಡುತ್ತಾರೆಂದು ನಾವು ಎಂದಿಗೂ ಊಹಿಸಿರಲಿಲ್ಲ. ಇದು ಅವರಿಗೆ ದೇವರು ಕೊಟ್ಟ ಆಶೀರ್ವಾದ ಎಂದು ಕೃತಿಕಾ ಹೇಳಿದ್ದಾರೆ.
BBK 12: ಥೂ ಥೂ ಎಂದು ಉಗಿದ್ರು; ಆರ್ಭಟಿಸಿದ ಉತ್ತರ ಕರ್ನಾಟಕದ ಹುಲಿ ಮಾಳು ನಿಪನಾಳ!
ಅರ್ಮಾನ್ ಮಲಿಕ್ ಯಾರು ? :
ಅರ್ಮಾನ್ ಮಲಿಕ್ ಪ್ರಸಿದ್ಧ ಯೂಟ್ಯೂಬರ್. ಇಬ್ಬರು ಪತ್ನಿಯನ್ನು ಮಲಿಕ್ ಹೊಂದಿದ್ದಾರೆ. ಮೊದಲ ಪತ್ನಿ ಪಾಯಲ್ ಮತ್ತು ಎರಡನೇ ಪತ್ನಿ ಕೃತಿಕಾ ಮಲಿಕ್. ಸದ್ಯ ಅರ್ಮಾನ್ ಮಲ್ಲಿಕ್ ಮೂವರು ಮಕ್ಕಳ ತಂದೆ. ಈಗ ಹಿರಿಯ ಪತ್ನಿ ಪಾಯಲ್ ಗರ್ಭಿಣಿ. ವ್ಲಾಗ್, ಫುಡ್ ಯೂಟ್ಯೂಬ್ ಚಾನೆಲ್ ಸೇರಿದಂತೆ ಸೋಶಿಯಲ್ ಮೀಡಿಯಾ ಮೂಲಕ ಅರ್ಮಾನ್ ಮಲಿಕ್ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ. ಅರ್ಮಾನ್ ಮಲಿಕ್ ಅವರ ಫ್ಯಾಮಿಲಿ ಫಿಟ್ನೆಸ್ ಯೂಟ್ಯೂಬ್ ಚಾನೆಲ್ 15.5 ಮಿಲಿಯನ್ ಫಾಲೋವರ್ಗಳನ್ನು ಹೊಂದಿದೆ. ಮಲಿಕ್ ಅವರ ವ್ಲಾಗ್ ಚಾನೆಲ್ 8.5 ಮಿಲಿಯನ್ ಫಾಲೋವರ್ಗಳನ್ನು ಹೊಂದಿದೆ. ಅವರು ತಮ್ಮ ಮೂವರು ಮಕ್ಕಳ ಹೆಸರಿನಲ್ಲಿ ಪ್ರತ್ಯೇಕ ಚಾನೆಲ್ಗಳನ್ನು ಸಹ ರಚಿಸಿದ್ದಾರೆ.
