Asianet Suvarna News Asianet Suvarna News

ಡಾನ್ಸ್​, ಆ್ಯಕ್ಷನ್​ ಸೀನ್​ ಮಾಡಿದ್ರೆ ಹೃತಿಕ್‌ ಜೀವಕ್ಕೆ ಅಪಾಯ ಎಂದಿದ್ರಂತೆ ಡಾಕ್ಟರ್!

ಡಾನ್ಸ್​, ಆ್ಯಕ್ಷನ್​ ಸೀನ್​ಗೆ ಹೆಸರಾಗಿರುವ ನಟ ಹೃತಿಕ್​ ರೋಷನ್​ ಅವರ ಕುರಿತು ಕುತೂಹಲದ ಮಾಹಿತಿ ಹಂಚಿಕೊಂಡಿದ್ದಾರೆ ಅವರ ತಂದೆ ರಾಕೇಶ್​ ರೋಷನ್​. ಏನದು?
 

Hrithik Roshan was told he couldnt build physique due to spinal problem says Rakesh Roshan
Author
First Published Mar 27, 2023, 5:14 PM IST

1980 ರ ಸಿನಿಮಾಗಳಲ್ಲಿ ಬಾಲನಟರಾಗಿ ಕಾಣಿಸಿಕೊಂಡ ನಂತರ ಹೃತಿಕ್​ ರೋಷನ್ (Hritik Roshan) ಮೊದಲ ಬಾರಿಗೆ 2000ನೇ ಸಾಲಿನಲ್ಲಿ ತೆರೆ ಕಂಡ ಕಹೋ ನಾ ಪ್ಯಾರ್ ಹೈ (Kaho na pyar hai) ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿದರು. ಇದಕ್ಕಾಗಿ ರೋಷನ್‌ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಪುರುಷ ವಿಭಾಗದಲ್ಲಿನ ಆರಂಭಿಕ ನಟನಿಗೆ ನೀಡುವ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಗಳಿಸಿದರು. ನಟಿ ಅಮಿಷಾ ಪಟೇಲ್​ ಅವರದ್ದೂ ಇದು ಚೊಚ್ಚಲ ಚಿತ್ರ. ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದ ಹೃತಿಕ್ ರಾತ್ರೋರಾತ್ರಿ ಸೂಪರ್‌ಸ್ಟಾರ್ ಆದರು. ಮಾಧ್ಯಮಗಳು ಅವರ ಯಶಸ್ವಿ ಪದಾರ್ಪಣೆಯನ್ನು 'ಹೃತಿಕ್ ಮೇನಿಯಾ' ಎಂದು ಕರೆದರು. ಇದಾದ ಬಳಿಕ 2001 ರಲ್ಲಿ ಭಾವಾವೇಶದ ಚಿತ್ರವಾದ ಕಭಿ ಖುಷಿ ಕಭಿ ಗಮ್... ನಲ್ಲಿ ಕಾಣಿಸಿಕೊಂಡರು. ಇದು ಸಾಗರೋತ್ತರ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಹಣಗಳಿಸಿದ ಭಾರತದ ಚಲನಚಿತ್ರವಾಯಿತು. ಅಲ್ಲದೇ ಅವರ ವಾಣಿಜ್ಯಿಕವಾಗಿ ದೊಡ್ಡ ಯಶಸ್ಸನ್ನು ಕಂಡ ಚಿತ್ರವಾಯಿತು. ಅದಾದ ಬಳಿಕ ಹೃತಿಕ್​ ಹಲವಾರು ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ.

ಈಗ ಅವರ ಕುರಿತು ಕುತೂಹಲದ ಮಾಹಿತಿಯೊಂದನ್ನು ನಟ ಕಮ್-ನಿರ್ಮಾಪಕ ಹಾಗೂ ಹೃತಿಕ್​ ಅವರ ತಂದೆ ರಾಕೇಶ್ ರೋಷನ್  (Rakesh Roshan) ತೆರೆದಿಟ್ಟಿದ್ದಾರೆ. ಅವರು ತಮ್ಮ ಮಗನ ಚೊಚ್ಚಲ ಚಿತ್ರ ಕಹೋ ನಾ ಪ್ಯಾರ್ ಹೈ ಬಗ್ಗೆ ಮಾಹಿತಿ ನೀಡಿದ್ದಾರೆ.   ರಿಯಾಲಿಟಿ ಷೋ 'ಇಂಡಿಯನ್ ಐಡಲ್‌'ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಾಗ, ಅವರು ಈ ವಿಷಯ ತಿಳಿಸಿದ್ದಾರೆ.  ಹೃತಿಕ್​ ರೋಷನ್​ ನೃತ್ಯ ಎಂದರೆ ಹುಚ್ಚೆದ್ದು ಕುಣಿಯುವವರೇ ಹೆಚ್ಚು. ಆದರೆ ಅವರಿಗೆ ಅನಾರೋಗ್ಯ ಇದ್ದ ಹಿನ್ನೆಲೆಯಲ್ಲಿ ದೇಹವನ್ನು ಮಣಿಸದಂತೆ ವೈದ್ಯರು ಸಲಹೆ ನೀಡಿದ್ದರು. ಇದರ ಹೊರತಾಗಿಯೂ ಹೃತಿಕ್​ ಈ ಸಿನಿಮಾದಲ್ಲಿ ಹೇಗೆ ಕಷ್ಟಪಟ್ಟು ಕೆಲಸ ಮಾಡಿದರು ಎನ್ನುವುದನ್ನು ರಾಕೇಶ್​ ಅವರು ತೆರೆದಿಟ್ಟಿದ್ದಾರೆ.

ಕಂಗನಾ, ಹೃತಿಕ್​ ರೋಷನ್​ ಲವ್​ ಸ್ಟೋರಿಗೆ ಸಾಕ್ಷಿಯಾಯ್ತು ಎಲಾನ್​ ಮಸ್ಕ್​ ಟ್ವೀಟ್​!
  
'ಹೃತಿಕ್​ ತುಂಬಾ ತೆಳ್ಳಗಿದ್ದ. ಆದ್ದರಿಂದ ನೃತ್ಯ ಮಾಡಲೇಬಾರದು ಎಂದು ವೈದ್ಯರು ಸೂಚಿಸಿದ್ದರು.  ಹೃತಿಕ್ ಅವರು ತಮ್ಮ ದೇಹವನ್ನು ಸರಿಯಾಗಿ ನೋಡಿಕೊಳ್ಳಬೇಕು. ಬೆನ್ನಹುರಿಯಲ್ಲಿ ಸಮಸ್ಯೆ ಇರುವ ಕಾರಣ, ಅದಕ್ಕೆ ಹೆಚ್ಚಿನ ಸಮಸ್ಯೆ ಕೊಡಬಾರದು, ಅದನ್ನು ಹೆಚ್ಚು ಪಳಗಿಸಬಾರದು ಎಂದು ವೈದರು ಹೇಳಿದ್ದರು. ಹೀಗಾದರೆ ಜೀವಕ್ಕೆ ಅಪಾಯ ಎಂದಿದ್ದರು. ಆದರೆ ಅವನು ಎಲ್ಲವನ್ನೂ ಸವಾಲಾಗಿ (Challenge)ಸ್ವೀಕರಿಸಿದ. ದಿನನಿತ್ಯವೂ  ವ್ಯಾಯಾಮ ಮಾಡಿದ. ನಂತರ ನಿಧಾನವಾಗಿ  ಡಂಬ್ಬೆಲ್ಸ್ ರೂಢಿ ಮಾಡಿಕೊಂಡ. ಇದಾದ ಬಳಿಕ ಆತ ತನ್ನ ಮೈಯನ್ನು ತನಗೆ ಬೇಕಾದ ಹಾಗೆ ಪಳಗಿಸಿಕೊಂಡ' ಎಂದಿದ್ದಾರೆ ರಾಕೇಶ್​.

ಹೃತಿಕ್​ ಅವರ ಸಿಕ್ಸ್​ ಪ್ಯಾಕ್​ಗೆ (Six pack) ಮರುಳಾಗುವ ಹುಡುಗಿಯರೇ ಹೆಚ್ಚು. ಆದರೆ ಹೀಗೆ ಮಾಡಿಕೊಳ್ಳಬೇಕಾದರೆ ಅವರು ಅದೆಷ್ಟು ಶ್ರಮ ಪಟ್ಟಿದ್ದಾರೆ ಎಂದು ರಾಕೇಶ್​ ಅವರು ಈ ಸಂದರ್ಶನದ ವೇಳೆ ಹೇಳಿದ್ದಾರೆ.  ಬೆನ್ನುಹುರಿಯ ಸಮಸ್ಯೆ ಇರುವುದರಿಂದ ಇವೆಲ್ಲಾ ದೇಹಕ್ಕೆ ತೀರಾ ಅಪಾಯಕಾರಿ ಎಂದು ವೈದ್ಯರು ಹೇಳಿದರೂ ಕೇಳದೇ ಕಷ್ಟಪಟ್ಟು ಎಲ್ಲವನ್ನೂ ಚಾಲೆಂಜ್​ ಆಗಿ ಸ್ವೀಕರಿಸಿರುವ ಮಗನ ಬಗ್ಗೆ ರಾಕೇಶ್​ ಹೆಮ್ಮೆ ವ್ಯಕ್ತಪಡಿಸಿದರು. ಚಿತ್ರದಲ್ಲಿ ಹೃತಿಕ್​ ನಟಿಸುತ್ತಿದ್ದಾರೆ ಎಂದು ತಿಳಿದಾಗ ವೈದ್ಯರು  ಯಾವುದೇ ರೀತಿಯ ಆಕ್ಷನ್ ಅಥವಾ ಡ್ಯಾನ್ಸ್ ಚಿತ್ರಗಳನ್ನು ಮಾಡದಂತೆ ನಿರ್ಬಂಧ ವಿಧಿಸಿದ್ದರು. ಆದರೆ ವೈದ್ಯರಿಗೇ ಹೃತಿಕ್​ ಸವಾಲು ಹಾಕಿದ್ದರು.  ನಾನು ಆಕ್ಷನ್ ಚಿತ್ರಗಳು ಮತ್ತು ನೃತ್ಯ ಚಿತ್ರಗಳನ್ನು ಮಾಡಬಲ್ಲೆ, ನಾನು ಈ ರೋಗನಿರ್ಣಯವನ್ನು ಸವಾಲಾಗಿ ತೆಗೆದುಕೊಂಡು ನನ್ನ ಆರೋಗ್ಯ ಮತ್ತು ಫಿಟ್‌ನೆಸ್‌ನತ್ತ ಗಮನ ಹರಿಸಬಲ್ಲೆ ಎಂದು ವೈದ್ಯರ ಎದುರಿಗೆ ಹೇಳಿ ಅದನ್ನೇ ಸವಾಲಾಗಿ ಸ್ವೀಕರಿಸಿ ಎಲ್ಲವನ್ನೂ ಸಾಧಿಸಿರುವ ಬಗ್ಗೆ ರಾಕೇಶ್​ ರೋಷನ್​  ಮಾತನಾಡಿದರು. 

ಹೃತಿಕ್​ ರೋಷನ್​ ಮದ್ವೆ: ಅಪ್ಪ Rakesh Roshan ಹೀಗ್ಯಾಕೆ ಹೇಳಿದ್ರು?

25 ಚಿತ್ರಗಳಲ್ಲಿಯೂ ಹೃತಿಕ್​  ಆಕ್ಷನ್ (Action Movies) ಮಾಡಿದ್ದಾರೆ, ನೃತ್ಯ ಮಾಡಿದ್ದಾರೆ, ಮೈಯನ್ನು ಬಳ್ಳಿಯಂತೆ ಬಳುಕಿಸಿದ್ದಾರೆ. ಇವೆಲ್ಲವೂ ಪವಾಡ ಎಂದು ಹೃತಿಕ್​  ಕೂಡ ಹೇಳಿಕೊಂಡಿದ್ದಾರೆ. ಈಗ ಹೃತಿಕ್​ ಅವರು, ಸಿದ್ಧಾರ್ಥ್ ಆನಂದ್ ಅವರ ಆಕ್ಷನ್ ಚಿತ್ರ ಫೈಟರ್‌ನಲ್ಲಿ ದೀಪಿಕಾ ಪಡುಕೋಣೆ ಎದುರು ಕಾಣಿಸಿಕೊಳ್ಳಲಿದ್ದಾರೆ. ಅವರು ಚಲನಚಿತ್ರೋದ್ಯಮದಲ್ಲಿ ಫಿಟೆಸ್ಟ್ ನಟರು ಮತ್ತು ನೃತ್ಯಗಾರರಲ್ಲಿ ಒಬ್ಬರು ಎಂದು ಕರೆಯುತ್ತಾರೆ.

Follow Us:
Download App:
  • android
  • ios