Asianet Suvarna News Asianet Suvarna News

ಸೆಲ್ಫಿ ಕೇಳಿದ ಅಭಿಮಾನಿಯನ್ನು ತಳ್ಳಿದ ಹೃತಿಕ್ ರೋಷನ್; ನೆಟ್ಟಿಗರಿಂದ ಸಖತ್ ಕ್ಲಾಸ್

ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ತಳ್ಳಿದ ಹೃತಿಕ್ ರೋಷನ್ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

Hrithik Roshan Slammed By Netizens For Pushing Away A Fan Who Asked For A Selfie sgk
Author
First Published Dec 3, 2022, 10:56 AM IST

ಬಾಲಿವುಡ್ ಸ್ಟಾರ್, ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ವಿಕ್ರಮ್ ವೇದ ಸಿನಿಮಾ ಬಳಿಕ ಮತ್ತೆ ಅಭಿಮಾನಿಗಳ ಮುಂದೆ ಬಂದಿಲ್ಲ. ಈ ನಡುವೆ ಹೃತಿಕ್ ರೋಷನ್ ಗರ್ಲ್‌ಫ್ರೆಂಡ್ ಸಬಾ ಅಜಾದ್ ಜೊತೆ ಸುತ್ತಾಡುತ್ತಿದ್ದಾರೆ. ಸಬಾ ಮತ್ತು ಹೃತಿಕ್ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಮಾತು ಸಹ ಕೇಳಿ ಬರುತ್ತಿದೆ. ಯಾವುದೇ ಕಾರ್ಯಕ್ರಮ, ಈವೆಂಟ್‌ಗಳಿಗೆ ಹೃತಿಕ್ ಮತ್ತು ಸಬಾ ಕೈ ಕೈ ಹಿಡಿದು ಎಂಟ್ರಿ ಕೊಡುತ್ತಾರೆ. ಇಬ್ಬರ ಪ್ರೀತಿ ವಿಚಾರ ಏನು ಗುಟ್ಟಾಗಿ ಉಳಿದಿಲ್ಲ. ಸಿನಿಮಾಗಿಂತ ಹೆಚ್ಚಾಗಿ ಹೃತಿಕ್ ಪ್ರೀತಿ ಪ್ರೇಮದ ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ. 

ಹೃತಿಕ್ ರೋಷನ್ ಇತ್ತೀಚಿಗಷ್ಟೆ ಗರ್ಲ್ ಫ್ರೆಂಡ್ ಸಬಾ ಜೊತೆ ಡಿನ್ನರ್‌ಗೆ ಹೋಗಿದ್ದರು. ಊಟ ಮುಗಿಸಿ ಇಬ್ಬರೂ ಹೋಟೆಲ್‌ನಿಂದ ಹೊರಬಂದರು. ತಮ್ಮ ಕಾರಿನ ಕಡೆ ಹೋದರು. ಆಗ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಆದರೆ ಹೃತಿಕ್ ರೋಷನ್ ಅಭಿಮಾನಿಯನ್ನು ತಳ್ಳಿ ಕಾರು ಹತ್ತಿದ್ದರು. ಅಭಿಮಾನಿಯನ್ನು ತಳ್ಳಿ ಗರ್ಲ್‌ಫ್ರೆಂಡ್ ಸಬಾ ಅವರನ್ನು ಕಾರು ಹತ್ತಿಸಿದ್ದರು ಬಳಿಕ ಹೃತಿಕ್ ಕೂಡ ಕಾರ್ ಹತ್ತಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿ ನೆಟ್ಟಿಗರು ಹೃತಿಕ್ ರೋಷನ್ ಅವರನ್ನು ತರಾಟೆ ತೆಗೆದುಕೊಂಡರು. ಹೃತಿಕ್ ವರ್ತನೆಯನ್ನು ಖಂಡಿಸಿದರು. 'ನಾಚಿಕೆ ಆಗಬೇಕು ನಿಮಗೆ..' ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಈ ರೀತಿಯ ಜನರನ್ನು ಈಗ ಬೇಡ ಅಂತ ತಳ್ಳ ಬಹುದು ಆದರೆ ನಿಮಗೆ ಈ ಜನಗಳೇ ಬೇಕು' ಎಂದು ಮತ್ತೋರ್ವ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಗರ್ಲ್‌ಫ್ರೆಂಡ್ ಜೊತೆ ಹೊಸ ಮನೆಗೆ ಶಿಫ್ಟ್ ಆದ ಹೃತಿಕ್; ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ

ಮತ್ತೋರ್ವ ಕಾಮೆಂಟ್ ಮಾಡಿ 'ಅವರಿಂದಾಗಿಯೇ ನೀವು ತಲೆ ಎತ್ತಿ ಓಡಾಡುತ್ತಿದ್ದೀರಾ ಅದನ್ನು ಮರೆಯಬೇಡ' ಎಂದು ಹೇಳಿದರು. ಈ ರೀತಿಯ ಮನೋಭಾವದಿಂದನೆ ನೀವು ತಲೆ ಕೂದಲನ್ನು ಕಳೆದುಕೊಳಅಳುತ್ತಿದ್ದೀರಾ ಎಂದು ಕಾಮೆಂಟ್ ಮಾಡಿ ತರಾಟೆ ತೆಗೆದುಕೊಂಡಿದ್ದಾರೆ. ತರಹೇವಾಗಿ ಕಾಮೆಂಟ್ ಮಾಡಿ ಹೃತಿಕ್ ರೋಷನ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಆದರೆ ಹೃತಿಕ್ ಯಾವುದಕ್ಕೂ ಹೆಚ್ಚು ತಲೆಕೊಡಿಸಿಕೊಳ್ಳದೇ ಗರ್ಲ್‌ಫ್ರೆಂಡ್ ಜೊತೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.

ಅದ್ದೂರಿಯಾಗಿ ಪ್ರೇಯಸಿ ಜನ್ಮದಿನ ಆಚರಿಸಿದ ಹೃತಿಕ್; ಗೆಳೆಯನಿಗೆ ಪ್ರೀತಿಯ ಸಾಲು ಬರೆದ ಸಬಾ

ಸಿನಿಮಾಗಳ ಹೇಳುವುದಾದರೆ ಹೃತಿಕ್ ರೋಷನ್ ಸದ್ಯ ಫೈಟರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಹೃತಿಕ್‌ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ದೀಪಿಕಾ ಮತ್ತು ಹೃತಿಕ್ ಒಟ್ಟಿಗೆ ನಟಿಸುತ್ತಿದ್ದು ಇಬ್ಬರನ್ನೂ ಒಟ್ಟಿಗೆ ನೋಡಲು ಅಭಿಮಾನಿಗಳ ಕಾತರರಾಗಿದ್ದಾರೆ. ಈ ಸಿನಿಮಿದಲ್ಲಿ ಬಾಲಿವುಡ್‌ನ ಮತ್ತೋರ್ವ ಸ್ಟಾರ್ ಅನಿಲ್ ಕಪೂರ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕ್ರಿಸ್4 ಸಿನಿಮಾ ಕೂಡ ಸಾಲಿನಲ್ಲಿದೆ. ಮೊದಲು ಫೈಟರ್ ಮೂಲಕ ಹೃತಿಕ್ ಅಭಿಮಾನಿಗಳ ಮುಂದೆ ಬರುವ ಸಾಧ್ಯತೆ ಇದೆ.  


 

Follow Us:
Download App:
  • android
  • ios