ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟನೆಯ ‘ವಾರ್’ ಸಿನಿಮಾ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ರಿಲೀಸ್ ಆದ 7 ದಿನಕ್ಕೆ 200 ಕೋಟಿ ಕಲಕ್ಷನ್ ಮಾಡಿದೆ. 

ವಾರ್ ಸಿನಿಮಾ ಕಥೆಗಿಂತ ಹೆಚ್ಚಾಗಿ ಆ್ಯಕ್ಷನ್ ನಿಂದಲೇ ಪ್ರೇಕ್ಷಕರ ಮನ ಗೆದ್ದಿದೆ. ಪ್ರೇಕ್ಷಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬುರುತ್ತಿದೆ. ವಾರ್ ನೋಡಿದ ಖ್ಯಾತ ನಿರೂಪಕಿ ಭಾವನಾ ಬಾಲಕೃಷ್ಣ ಮಾಡಿದ ಟ್ವೀಟ್ ಭಾರೀ ಗಮನ ಸೆಳೆಯುತ್ತಿದೆ. ಹಾಲಿವುಡ್ ರೀತಿಯ ಸ್ಟಂಟ್ಸ್ ಗಳು, ಆ್ಯಕ್ಷನ್, ಕಾರ್ ಚೇಸ್ ನೋಡಿದ ಗಂಡಸರಿಗೆ ವಾರ್ ಇಷ್ಟವಾಗುವುದು ಖಂಡಿತ. ಹೃತಿಕ್ ಮತ್ತು ಟೈಗರ್ ಶ್ರಾಫ್ ಆ್ಯಕ್ಟಿಂಗ್ ಇಷ್ಟವಾಗುತ್ತದೆ. ಹೃತಿಕ್ ಇನ್ನು ಹೆಚ್ಚೆಚ್ಚು ಸಿನಿಮಾಗಳನ್ನು ಮಾಡಬೇಕು. ನಿಮ್ಮ ವೀರ್ಯಾಣುಗಳನ್ನು ದಾನ ಮಾಡಿ’ ಎಂದು ಟ್ವೀಟ್ ಮಾಡಿದ್ದಾರೆ.

 

ನಿರೂಪಕಿ ಭಾವನಾ ಭಾವಕೃಷ್ಣ ಖ್ಯಾತ ನಿರೂಪಕಿ. ಸಾಕಷ್ಟು ಸ್ಪೋರ್ಟ್ಸ್ ಶೋಗಳನ್ನು ನಡೆಸಿಕೊಟ್ಟಿದ್ದಾರೆ.