ನಟ ಸುಶಾಂತ್​ ಸಿಂಗ್​ ರಜಪೂತ್​ ನಿಗೂಢವಾಗಿ ಸಾವನ್ನಪ್ಪಿ ಕೆಲ ವರ್ಷಗಳೇ ಕಳೆದಿವೆ. ಇದೀಗ ಅವರ ಟ್ವಿಟರ್​ನಲ್ಲಿ ಕಾಣಿಯಾಗಿದ್ದ ಬ್ಲೂಟಿಕ್​ ವಾಪಸ್​ ಬಂದಿದೆ. ಏನಿದರ ರಹಸ್ಯ?  

ಸಾಮಾಜಿಕ ಜಾಲತಾಣದಲ್ಲಿ (Social Media) ಅನೇಕ ಸೆಲೆಬ್ರಿಟಿಗಳ ಟ್ವಿಟರ್​ ಬ್ಲೂ ಕಿಟ್ ಏಕಾಏಕಿ ಕಣ್ಮರೆಯಾಗಿ ಆತಂಕ ಮೂಡಿಸಿತ್ತು. ಈ ಬ್ಲೂ ಟಿಕ್ ವಿಶೇಷ ವ್ಯಕ್ತಿಗಳಿಗೆ ಮಾತ್ರ ನೀಡಲಾಗುತ್ತದೆ. ಟ್ವಿಟರ್​ ಖಾತೆಯ ಮುಂದೆ ಬ್ಲೂ ರೈಟ್​ ಮಾರ್ಕ್​ ಇದ್ದರೆ ಅದು ಅಸಲಿ ಖಾತೆ ಎಂದು ಅರ್ಥ. ಸಾರ್ವಜನಿಕರು, ಸೆಲೆಬ್ರಿಟಿಗಳಿಂದ ಹಿಡಿದು ರಾಜಕಾರಣಿಗಳು, ಉದ್ಯಮಿಗಳು ಹಾಗೂ ಇತರೆ ವಲಯಗಳಲ್ಲಿ ಹೆಸರು ಮಾಡಿದವರನ್ನು ಟ್ವಿಟ್ಟರ್ ಪರಿಶೀಲನೆ ಮಾಡುತ್ತದೆ. ಟ್ವಿಟ್ಟರ್‌ನಲ್ಲಿ ಈ ನೀಲಿ ಟಿಕ್ ಎಂದರೆ ನಿಮ್ಮ ಟ್ವಿಟ್ಟರ್ ಖಾತೆಯನ್ನು ಪರಿಶೀಲಿಸಲಾಗಿದೆ ಮತ್ತು ನಕಲಿ ಅಲ್ಲ. ಅಂತಹವರ ನಿಜವಾದ ಖಾತೆಯ ಬಗ್ಗೆ ಜನರಿಗೆ ತಿಳಿಯುವಂತೆ ಮತ್ತು ಯಾವುದೇ ನಕಲಿ ಖಾತೆಯೊಂದಿಗೆ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಲು ಈ ಬ್ಲೂ ಟಿಕ್ ನೀಡಲಾಗಿದೆ. ಅದಕ್ಕೆ ಇಂತಿಷ್ಟು ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಈಗ ಬ್ಲೂಟಿಕ್ ಪಡೆಯಲು ಶುಲ್ಕ ಪಾವತಿಸದ ಕಾರಣ ಬಹುತೇಕ ಸೆಲೆಬ್ರಿಟಿಗಳ ಬ್ಲೂಟಿಕ್ ಮಾಯವಾಗಿದೆ. ಬಾಲಿವುಡ್ ಸ್ಟಾರ್‌ಗಳಾದ ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಕನ್ನಡದ ಸ್ಟಾರ್‌ಗಳಾದ ಸುದೀಪ್, ಯಶ್ ಸೇರಿದಂತೆ ಅನೇಕ ಕಲಾವಿದರ ಟ್ವಿಟ್ಟರ್ (Twitter) ಖಾತೆಯಿಂದ ಬ್ಲೂ ಟಿಕ್ ಕಣ್ಮರೆಯಾಗಿತ್ತು. ಹಣ ನೀಡಿದವರೂ ತಮ್ಮ ಬ್ಲೂಟಿಕ್​ ಸುಮ್ಮನೇ ತೆಗೆದುಹಾಕಿದ್ದಾರೆ ಎಂದು ಆರೋಪಿಸಿದ್ದರು.

ನಟ ಅಮಿತಾಭ್​ ಬಚ್ಚನ್​ ಕೂಡ ಹಣ ನೀಡಿದ್ದರೂ ಬ್ಲೂಟಿಕ್​ ಮಾಯವಾಗಿದ್ದ ಬಗ್ಗೆ ಹೇಳಿದ್ದರು. ಕೊನೆಗೆ ಅವರ ಬ್ಲೂಟಿಕ್​ ವಾಪಸ್​ ನೀಡಲಾಗಿತ್ತು. ಆದರೆ ವಿನಾಕಾರಣ ಹೆಚ್ಚುವರಿ ಹಣ ತೆತ್ತ ಬಗ್ಗೆ ನಟ ವಿಷಾದ ವ್ಯಕ್ತಪಡಿಸಿದ್ದರು. ಇದೀಗ ಈ ಬ್ಲೂಟಿಕ್​ ಮತ್ತೆ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ನಿಗೂಢವಾಗಿ ಸಾವನ್ನಪ್ಪಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಟ್ವಿಟರ್​ ಪ್ರೊಫೈಲ್‌ನಲ್ಲಿ ಇದ್ದಕ್ಕಿದ್ದಂತೆ ಬ್ಲೂ ಟಿಕ್ ಮಾಯವಾಗಿ ಮತ್ತೆ ಅದು ಕಾಣಿಸಿಕೊಂಡಿದೆ! ಅಸಲಿಗೆ ಮೂಲ ಟ್ವಿಟರ್​ ಬಳಕೆದಾರರು ಇಂತಿಷ್ಟು ಹಣವನ್ನು ಪಾವತಿ ಮಾಡಿದರೆ ಮಾತ್ರ ಬ್ಲೂಟಿಕ್​ ವಾಪಸ್​ ನೀಡಲಾಗುತ್ತದೆ. ಮೃತಪಟ್ಟಿರುವ ಸುಶಾಂತ್​ ಟ್ವಿಟರ್​ಗೂ ವಾಪಸ್​ ಬ್ಲೂಟಿಕ್​ ಬಂದಿರುವುದು ಹಲವು ಅನುಮಾನಗಳಿಗೆ ಕಾರಣ ಮಾಡಿಕೊಟ್ಟಿದೆ.

Blue Tick: ಟ್ವಿಟರ್​ ನೀಲಿ ಟಿಕ್​ ಮಾಯ- ಆತಂಕಗೊಂಡ ಅಮಿತಾಭ್​ ಕೈಮುಗಿದು ಹೀಗೆ ಬೇಡಿಕೊಂಡ್ರು!

ಸುಶಾಂತ್ ಸಿಂಗ್ ರಜಪೂತ್ ಅವರ ಖಾತೆಯನ್ನು ಮಾತ್ರವಲ್ಲದೆ, ಅವರ ಫೋನ್ ಸಂಖ್ಯೆಯನ್ನು ಸಹ ಇತ್ತೀಚೆಗೆ ಪರಿಶೀಲಿಸಲಾಗಿದೆ. ಅದು ಹೇಗೆ ಎಂದು ಎಲಾನ್​ ಮಸ್ಕ್‌ (Elon Musk) ಅವರನ್ನು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇದು ಒಂದೋ ಸುಶಾಂತ್​ ಅವರ ಆತ್ಮವಾಗಿರಬೇಕು ಇಲ್ಲವೇ ಮಸ್ಕ್​ ನಾಟಕವಾಗಿರಬೇಕು ಎಂದು ಮಸ್ಕ್​ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಟ್ವಿಟರ್ ಬ್ಲೂಟಿಕ್​ ಅನ್ನು ಪರಿಶೀಲಿಸಿದ ಫೋನ್ ಸಂಖ್ಯೆಯ ಮೂಲಕ ಮಾತ್ರ ಪಡೆಯಲಾಗುತ್ತದೆ ಮತ್ತು ಸತ್ತವರ ಸಂಪರ್ಕ ಪ್ರವೇಶವನ್ನು ಹೊಂದಲು ಯಾವುದೇ ಮಾರ್ಗವಿಲ್ಲ, ಆದರೂ ಸತ್ತವರ ಖಾತೆಯಲ್ಲಿ ಬ್ಲೂ ಟಿಕ್‌ ಕಾಣಿಸಿಕೊಂಡಿದೆ ಅದು ಹೇಗೆ ಸಾಧ್ಯ? ಅಂತಾ ಸೋಶಿಯಲ್‌ ಮೀಡಿಯಾದಲ್ಲಿ ಟ್ವಿಟರ್‌ ಅವಸ್ಥೆಯನ್ನು ಟ್ರೋಲ್‌ ಮಾಡಲಾಗುತ್ತಿದೆ.

ಮಸ್ಕ್​ ಅವರು ಆಟವಾಡುತ್ತಿದ್ದಾರೆಯೆ ಎಂದು ಹಲವರು ಪ್ರಶ್ನಿಸಿದ್ದಾರೆ. ಹಣ ಸಂದಾಯ ಮಾಡಿದ ಸೆಲೆಬ್ರಿಟಿಗಳ ಬ್ಲೂಟಿಕ್​ ಮಾಯ ಮಾಡಿ ನಂತರ ಹೆಚ್ಚುವರಿ ಹಣ ಪಡೆದುಕೊಳ್ಳಲಾಗಿದೆ, ಈಗ ನೋಡಿದರೆ ಸತ್ತವರ ಖಾತೆಗೂ ಬ್ಲೂಟಿಕ್​ ಮರಳಿಸಲಾಗಿದೆ. ಏನಿದು ಎಂದುಪ್ರಶ್ನಿಸುತ್ತಿದ್ದಾರೆ. ಈ ಬ್ಲೂ ಟಿಕ್‌ ವಿಚಾರವಾಗಿ ಎಲಾನ್​ ಮಸ್ಕ್‌ ಸುಳ್ಳು ಹೇಳುತ್ತಿದ್ದಾರಾ, ಇಲ್ಲಾ ಸತ್ತವರು ಅವರ ಜೊತೆಯೇ ಫೋನ್‌ ತೆಗೆದುಕೊಂಡು ಹೋಗುವ ಮಾರ್ಗ ಕೊಂಡುಕೊಂಡಿದ್ದಾರಾ ಎಂದು ಮಹೇಶ್ವರಿ ಟ್ವಿಟರ್‌ ವಿರುದ್ಧ ವ್ಯಂಗ್ಯವಾಡಿದ್ದಾರೆ. ಟ್ವಿಟರ್​ ಇಂಡಿಯಾದ ಮಾಜಿ ಮುಖ್ಯಸ್ಥ ಮನೀಶ್ ಮಹೇಶ್ವರಿ (Maneesh Maheshwari) ಅವರೂ ಟ್ವೀಟ್‌ ಮಾಡಿ ಈ ಪ್ರಶ್ನೆ ಎತ್ತಿದ್ದಾರೆ. ಇದೀಗ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ.

ಮೋದಿಯನ್ನು ಹಾಡಿ ಹೊಗಳಿದ ಆಮೀರ್​: ಬಿಡ್ತಾರಾ ನೆಟ್ಟಿಗರು! ಕಮೆಂಟ್​ಗಳ ಸುರಿಮಳೆ...

ಎಲಾನ್ ಮಸ್ಕ್ ಟ್ವೀಟ್‌ಗೆ ಪ್ರತಿಕ್ರಿಯಿಸದಿದ್ದರೂ, ಸತ್ತ ಸೆಲೆಬ್ರಿಟಿಗಳ ಖಾತೆಯು ನೀಲಿ ಟಿಕ್‌ನೊಂದಿಗೆ ಮತ್ತೆ ಕಾಣಿಸಿಕೊಂಡ ಏಕೈಕ ಪ್ರಕರಣವಲ್ಲ. ಬಾಸ್ಕೆಟ್‌ಬಾಲ್ ಆಟಗಾರ ಕೋಬ್ ಬ್ರ್ಯಾಂಟ್ ಮತ್ತು ಪ್ಯಾಂಥರ್ಸ್ ತಾರೆ ಚಾಡ್ವಿಕ್ ಬೋಸ್‌ಮನ್ ಅವರ ಖಾತೆಗಳು ಸಹ ಬ್ಲೂಟಿಕ್​ (Blue Tick) ಅನ್ನು ಹೊಂದಿದೆ.