ಶ್ರೀನಿವಾಸ ಜೋಕಟ್ಟೆ, ಮುಂಬಯಿ

ಲಾಕ್‌ಡೌನ್‌ನಿಂದ ಸ್ಥಗಿತಗೊಂಡ ಉದ್ಯಮದ ಚಟುವಟಿಕೆಗಳು, ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ವಿವಾದ ಪ್ರಕರಣ, ಬಾಲಿವುಡ್‌ನಲ್ಲಿ ಅಂಡರ್‌ ವಲ್ಡ್‌ರ್‍ ಹಣ ಇರುವುದಾಗಿ ಕೆಟ್ಟಇಮೇಜ್‌ ಸೃಷ್ಟಿಆಗುತ್ತಿರುವುದು..

ಈ ಎಲ್ಲಾ ಕಾರಣಗಳಿಂದ ಕಳೆದ 5 ತಿಂಗಳಲ್ಲಿ ಎಂಟರ್‌ಟೇನ್‌ಮೆಂಟ್‌ ಇಂಡಸ್ಟ್ರಿಗೆ ಆದ ನಷ್ಟಹತ್ತು ಸಾವಿರ ಕೋಟಿ ರೂಪಾಯಿ. ಲೆಕ್ಕಾಚಾರ ಕೊಟ್ಟಿದ್ದು ಬಾಲಿವುಡ್‌ ಫಿಲ್ಮ್‌ ಕ್ರಿಟಿಕ್‌ ಆ್ಯಂಡ್‌ ಟ್ರೇಡ್‌ ಅನಾಲಿಸ್ಟ್‌ ಕೋಮಲ್‌ ನಹತಾ. ಕ್ರಿಟಿಕಲ್‌ ಇನ್‌ಸೈಡರ್‌ ಎಂದೇ ಕರೆಯಲ್ಪಡುವ ಅವರ ಮಾತು ಅಂದರೆ ಬಾಲಿವುಡ್‌ ಮಂದಿಗೆ ನಂಬಿಕೆ.

ಸೌಂದರ್ಯ ಸ್ಪರ್ಧೆ ಗೆದ್ದು, ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿಯರು!

ಇನ್ನೂ ಕೆಲವು ಲೆಕ್ಕ ಹೇಳುವುದಾದರೆ ಚಿತ್ರಮಂದಿರಗಳು ಬಂದ್‌ ಇರುವುದರಿಂದ ಕೇವಲ ಟಿಕೆಟ್‌ ಕಿಟಕಿಯಿಂದ ಸುಮಾರು 4,000 ಕೋಟಿ ರೂಪಾಯಿ ನಷ್ಟಆಗಿದೆ. ಸಾಮಾನ್ಯವಾಗಿ ಒಂದು ವರ್ಷದಲ್ಲಿ ಬಾಕ್ಸಾಫೀಸ್‌ನಿಂದ ಸುಮಾರು ಆರು ಸಾವಿರ ಕೋಟಿ ರೂಪಾಯಿ ಟರ್ನ್‌ ಓವರ್‌ ಇದೆ. ಸ್ಯಾಟಲೈಟ್‌ ಮತ್ತು ಓಟಿಟಿ ರೈಟ್ಸ್‌ನಿಂದ 9 ಸಾವಿರ ಕೋಟಿ ರೂಪಾಯಿಯಷ್ಟುಸಿಗುತ್ತದೆ. 300-400 ಕೋಟಿ ರೂಪಾಯಿ ಪಾಲು ಮ್ಯೂಸಿಕ್‌ ವಲ್ಡ್‌ರ್‍ನಲ್ಲಿ ಇರುತ್ತದೆ. ಆದರೆ ಅವೆಲ್ಲವೂ ಈ ಐದು ತಿಂಗಳಲ್ಲಿ ನಿಂತು ಬಿಟ್ಟಿದೆ.

ಆರು ತಿಂಗಳು ಖಾಲಿ ಪರದೆ

ಮುಂಬೈಯಲ್ಲಿ ಮಾಚ್‌ರ್‍ 13ರಿಂದ ಟಾಕೀಸ್‌ಗಳು ಬಾಗಿಲು ಹಾಕಿವೆ. ಸೆಪ್ಟೆಂಬರ್‌ 13ರ ತನಕ ಟಾಕೀಸ್‌ಗಳು ತೆರೆಯದಿದ್ದರೆ ಅಲ್ಲಿಗೆ ಆರು ತಿಂಗಳು ಪೂರ್ತಿಯಾಗಲಿದೆ. ಟಾಕೀಸ್‌ ಮಾಲಿಕರು ತೆರಿಗೆಯಲ್ಲಿ ರಿಯಾಯಿತಿ ಮತ್ತು ಸರಕಾರದಿಂದ ಪರಿಹಾರ ಕೇಳುತ್ತಿದ್ದಾರೆ. ದೀಪಾವಳಿಗಾದರೂ ಟಾಕೀಸ್‌ಗಳು ಆರಂಭವಾದರೆ ಉಸಿರಾಡಬಹುದು ಎನ್ನುವ ಅಳಲು ಅವರದು. ಇವರು ಆದಷ್ಟುಶೀಘ್ರ ಟಾಕೀಸ್‌ ತೆರೆಯಲು ಅನುಮತಿ ನೀಡುವಂತೆ ಒತ್ತಾಯಿಸಿದರೆ ಅತ್ತ ಪ್ರಮುಖ ಸ್ಟಾರ್‌ಗಳು ಮಾತ್ರ ಸೇಫ್ಟಿಮೊದಲು, ಸಿನಿಮಾ ನಂತರ ಎನ್ನುತ್ತಿದ್ದಾರೆ. ವಿಚಿತ್ರ ಎಂದರೆ ಬಾಲಿವುಡ್‌ ತನ್ನ ಸಿನಿಮಾಗಳಲ್ಲಿ ನೂರಾರು ಸಂಕಷ್ಟಗಳ ಕಥೆಗಳನ್ನು ಹೇಳಿದ್ದಿದೆ. ಇದೀಗ ಸ್ವತಃ ಬಾಲಿವುಡ್ಡೇ ಸಂಕಷ್ಟದ ಕಥೆಯೊಂದರ ಭಾಗವಾದಂತಿದೆ.

ರಣಬೀರ್‌ ಕಪೂರ್‌ ಈ ನಟನ ಹೆಂಡತಿಯನ್ನೂ ಬಿಟ್ಟಿಲ್ವಂತೆ!

ಓಟಿಟಿಯಲ್ಲಿ ಎಷ್ಟಾದರೂ ರಿಲೀಸ್‌ ಆಗಲಿ

ಒಂದು ಕಾಲದಲ್ಲಿ ವಾರದಲ್ಲಿ ಮೂರ್ನಾಲ್ಕು ಫಿಲ್ಮ್‌ಗಳು ಏಕಕಾಲಕ್ಕೆ ಬಿಡುಗಡೆಯಾದರೆ ಬಾಕ್ಸ್‌ ಆಫೀಸ್‌ ಗೋತಾ ಹೊಡೆಯಬಹುದೇ ಎಂದು ಟೆನ್ಶನ್‌ ಮಾಡುತ್ತಿದ್ದ ಟಾಕೀಸ್‌ ಮಾಲೀಕರು ಮತ್ತು ನಿರ್ಮಾಪಕರ ಮನಸ್ಥಿತಿ ಈಗ ಬದಲಾಗಿದೆ. ತೀಸ್ರಾ ಪರದೆಯಲ್ಲಿ( ಓಟಿಟಿ ಪ್ಲಾಟ್‌ಫಾಮ್‌ರ್‍) ಒಂದೇ ವಾರದಲ್ಲಿ 4 ಫಿಲ್ಮ್‌ಗಳು ಬಿಡುಗಡೆಯಾದರೂ ಟೆನ್ಶನ್‌ ಇಲ್ಲ ಎನ್ನುತ್ತಿದ್ದಾರೆ. ಅದಕ್ಕೆ ತಕ್ಕಂತೆ ವಿದ್ಯಾಬಾಲನ್‌ರ ಶಕುಂತಳಾ ದೇವಿ, ಕುನಾಲ್‌ ಕೇಮೂ ಅವರ ಲೂಟ್‌ ಕೇಸ್‌, ವಿದ್ಯುತ್‌ ಜಮ್‌ವಾಲ ಅವರ ಯಾರಾ, ನವಾಜುದ್ದೀನ್‌ ಸಿದ್ದೀಕಿಯ ರಾತ್‌ ಅಕೇಲಿ ಹೈ ಸಿನಿಮಾಗಳು ಜೀ 5, ಅಮೆಜಾನ್‌, ಡಿಸ್ನಿ ಹಾಟ್‌ಸ್ಟಾರ್‌, ನೆಟ್‌ಫ್ಲಿಕ್ಸ್‌, ಸೋನಿ ಓಟಿಟಿಯಲ್ಲಿ ಬಿಡುಗಡೆಯಾಗಿವೆ. ಅನೇಕ ಸಿನಿಮಾಗಳು ರಿಲೀಸ್‌ ಆಗಲು ಬಾಕಿ ಇವೆ. ಆದರೂ ನೋ ಟೆನ್ಷನ್‌ ಅನ್ನುತ್ತಿದ್ದಾರೆ ನಿರ್ಮಾಪಕರು. ಕಾರಣ ಓಟಿಟಿಯಲ್ಲಿ ಟಾಕೀಸ್‌ಗಳಂತೆ ವೀಕೆಂಡ್‌ನಲ್ಲಿ ಸಿನಿಮಾಗಳ ಯಶಸ್ಸು ನಿರ್ಧಾರವಾಗುವುದಿಲ್ಲ.

ಅಮಿತಾಭ್‌ ಬಂದರು, ಉಳಿದವರೂ ಬರಬಹುದು!

ಮತ್ತೊಂದೆಡೆ ಪ್ರಸಿದ್ಧ ನಟರ ಫಿಲ್ಮ್‌ಗಳ ಸ್ವಲ್ಪವೇ ಶೂಟಿಂಗ್‌ ಬಾಕಿ ಇದ್ದರೂ ಸದ್ಯ ಶೂಟಿಂಗ್‌ ನಿಂದ ದೂರ ಸರಿದಿದ್ದಾರೆ. ಶೂಟಿಂಗ್‌ ಆರಂಬಿಸಲು ಅನಮತಿ ಸಿಕ್ಕ ನಂತರವೂ ಶೂಟಿಂಗ್‌ ಮತ್ತು ಡಬ್ಬಿಂಗ್‌ಗೆ ಬರಲು ಸೆಲೆಬ್ರಿಟಿಗಳು, ಟೆಕ್ನಿಶಿಯನ್‌ ಈಗಲೂ ಭಯಪಡುತ್ತಿದ್ದಾರೆ. ಹಾಗಾಗಿಯೇ ಅನೇಕ ಫಿಲ್ಮ್‌ಗಳು, ಸೀರಿಯಲ್‌ಗಳ ಶೂಟಿಂಗ್‌ ಆರಂಭ ಮಾಡಿದ್ದೂ ಮುಂದೂ ಡಲಾಗಿದೆ. ಬಾಲಿವುಡ್‌ನ ನೂರಕ್ಕೂ ಹೆಚ್ಚು ಜನರಿಗೆ ಕೊರೋನಾ ಪಾಸಿಟಿವ್‌ ಕಾಣಿಸಿದ ನಂತರ ಸೀರಿಯಲ್‌ ಗಳ ನಟ-ನಟಿಯರಿಗೆ ಶೂಟಿಂಗ್‌ಗೆ ತೆರಳಲು ಅವರ ತಂದೆತಾಯಿಗಳ ಅನುಮತಿ ಪಡೆಯಲೂ ಕಷ್ಟವಾಗುತ್ತಿದೆ.

ಕರೀನಾ ಧರಿಸಿರೋ ಶಿಬುಯಾ ಸಿಲ್ಕ್‌ ಜಾಕೆಟ್‌ ಭಾರೀ ದುಬಾರಿ..!

ಈ ಮಧ್ಯೆ 65 ವರ್ಷದ ಮೇಲ್ಪಟ್ಟವರು ಸೆಟ್‌ಗೆ ಬರುವಂತಿಲ್ಲ ಎಂಬ ಮಹಾರಾಷ್ಟ್ರ ಸರಕಾದರ ನಿಯಮವನ್ನು ಆಗಸ್ಟ್‌ 7ರಂದು ಮುಂಬಯಿ ಹೈಕೋರ್ಟ್‌ ರದ್ದುಗೊಳಿಸಿದೆ. ಆ ಪ್ರಕಾರ ಅಮಿತಾಭ್‌ ಬಚ್ಚನ್‌ ಕರೋಡ್‌ಪತಿ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರೇ ಬಂದ ಮೇಲೆ ನಾವೂ ಯಾಕೆ ಹೋಗಬಾರದು ಎಂದು ಉಳಿದವರೂ ಶೂಟಿಂಗಿಗೆ ಬಂದರೆ ಅಚ್ಚರಿಯಿಲ್ಲ.

ಡಿಜಿಟಲ್‌ ಕಥಾ ಪ್ರಸಂಗ

ಕೊರೋನಾ ಕಾರಣ ಲೈವ್‌ ಈವೆಂಟ್ಸ್‌ಗಳೆಲ್ಲವೂ ನಿಂತುಹೋವೆ. ಆ ಜಾಗದಲ್ಲಿ ಆನ್‌ಲೈನ್‌ ಈವೆಂಟ್‌ ಇಂಡಸ್ಟ್ರಿ ನಿಧಾನವಾಗಿ ಸ್ಥಾಪನೆಯಾಗುತ್ತಿದೆ. ವೆಬಿನಾರ್‌, ವರ್ಚುವಲ್‌ ಕಾನ್ಸರ್ಟ್‌, ಆನ್‌ಲೈನ್‌ ಲಾಂಚ್‌ ಇತ್ಯಾದಿ ಪದಗಳು ಸಹಜವಾಗಿ ಕೇಳಿಸತೊಡಗಿವೆ. ಹೊಸ ಫಿಲ್ಮ್‌ನ ಘೋಷಣೆ, ಟಿವಿ ಶೋ ಲಾಂಚ್‌, ಅವಾರ್ಡ್‌ ಸಮಾರಂಭ, ಮ್ಯೂಸಿಕ್‌ ಕಾನ್ಸರ್ಟ್‌, ಫಿಲಂ ಫೆಸ್ಟಿವಲ್‌ ಇತ್ಯಾದಿಗಳೆಲ್ಲವೂ ಆನ್‌ಲೈನ್‌ನಲ್ಲಿ ನಡೆಯುತ್ತಿವೆ. ಆಯೋಜಕರ ಜೊತೆ ಜೊತೆ ಸೆಲೆಬ್ರಿಟಿಗಳು ಕೂಡ ತಮ್ಮ ಫ್ಯಾನ್ಸ್‌ ತಲುಪಲು ಈ ರೀತಿಯ ಡಿಜಿಟಲ್‌ ಈವೆಂಟ್ಸ್‌ ಮೊರೆ ಹೋಗುತ್ತಿದ್ದಾರೆ.

ಅಕ್ಷಯ ಕುಮಾರ್‌ ಬ್ರಾಂಡ್‌ ಕ್ಯಾಂಪೇನ್‌ ವೆಬಿನಾರ್‌ ಮೂಲಕ ಲಾಂಚ್‌ ಮಾಡಿದ್ದರು. ಅಕ್ಷಯ್‌ ಕುಮಾರ್‌, ಅಜಯ್‌ ದೇವಗನ್‌, ಅಭಿಷೇಕ್‌ ಬಚ್ಚನ್‌, ಅಲಿಯಾ ಭಟ್‌ ತಮ್ಮ ಸಿನಿಮಾಗಳಾದ ಲಕ್ಷ್ಮಿಬಾಂಬ್‌, ಬುಜ್‌, ದ ಬಿಗ್‌ ಬುಲ್‌, ಸಡಕ್‌ 2 ಬಗ್ಗೆ ಡಿಜಿಟಲ್‌ ಪ್ಲಾಟ್‌ಫಾಮ್‌ರ್‍ನಲ್ಲಿಯೇ ಮಾಹಿತಿ ನೀಡಿದರು. ಇದೊಂಥರಾ ಆನ್‌ಲೈನ್‌ ಸುದ್ದಿಗೋಷ್ಠಿ ಇದ್ದಂತೆ.

ಆದರೆ ಡಿಜಿಟಲ್‌ ಈವೆಂಟ್ಸ್‌ ಯಾವುದೇ ಕಾರಣಕ್ಕೆ ಲೈವ್‌ ಈವೆಂಟ್ಸ್‌ನ ಜಾಗ ತುಂಬಲಾರದು. ಕೊರೋನಾ ಪ್ರಭಾವ ತಣ್ಣಗಾದಂತೆ ಈ ಡಿಜಿಟಲ್‌ ಈವೆಂಟ್ಸ್‌ ಪ್ರಭಾವ ಕಡಿಮೆಯಾಗಬಹುದು ಎನ್ನುತಾರೆ ಇಂಡಸ್ಟ್ರಿಯ ಹಿರಿಯರು.

ಈವೆಂಟ್ಸ್‌ ಮ್ಯಾನೇಜ್‌ಮೆಂಟ್‌ ಕಂಪನಿಯವರು ಕೂಡ ಲೈವ್‌ ಈವೆಂಟ್ಸ್‌ನಲ್ಲಿ ಹಾಡುವಾಗ ಶ್ರೋತೃಗಳ ಫೀಲಿಂಗ್ಸ್‌ ಇಲ್ಲಿ ನಿರೀಕ್ಷಿಸುವಂತಿಲ್ಲ. ಹಾಗಾಗಿ ಇವೆಲ್ಲಾ ತಾತ್ಕಾಲಿಕವಾದುದು ಎನ್ನುತ್ತಾರೆ. ಈ ಟ್ರೆಂಡ್‌ 20-21ರ ತನಕ ಮಾತ್ರ ನಡೆಯಬಹುದು. ನಂತರ ಜನ ನಾರ್ಮಲ್‌ ಈವೆಂಟ್ಸ್‌ನತ್ತ ಬರಲಿದ್ದಾರೆ ಎನ್ನುತ್ತಾರೆ. ಕಾಯದೇ ವಿಧಿಯಿಲ್ಲ.

ಕತ್ರೀನಾಳನ್ನು ಎತ್ತಿಕೊಂಡ ಸಿದ್ಧಾರ್ಥ್‌: ಕ್ಯೂಟ್ ಜೋಡಿಯ ಕೆಮಸ್ಟ್ರಿ ನೋಡಿ

ಅನೇಕರು ತಮ್ಮ ಫಿಲ್ಮ್‌ಗಳಲ್ಲಿ ಕೊರೋನಾ ಕತೆ ಜೋಡಿಸುತ್ತಿದ್ದಾರೆ. ಧಾರಾವಾಹಿಗಳು ಈಗಾಗಲೇ ಕೊರೋನಾ ಕತೆ ಸೇರಿಸಿ ಆಗಿದೆ. ವರುಣ್‌ ಧವನ್‌ ಮತ್ತು ಸಾರಾ ಅಲಿ ಖಾನ್‌ರ ‘ಕೂಲಿ ನಂಬರ್‌ ವನ್‌’ ಸಿನಿಮಾದಲ್ಲೂ ಕೊರೋನಾ ಕಥೆ ಜೋಡಿಸಿದ್ದಾರೆ.

ಸುಶಾಂತ್‌ ಸಿಂಗ್‌ ರಜಪೂತ್‌ ವಿವಾದಿತ ಆತ್ಮಹತ್ಯೆ ಪ್ರಕರಣದ ನಂತರ ಮುಂಬೈಯಲ್ಲಿ ಏಕಾಂಗಿಯಾಗಿ ಇರುವ ಯುಪಿ, ಬಿಹಾರ, ದೆಹಲಿ, ಪಂಜಾಬ್‌ ಮೂಲದ ಅನೇಕ ನಟ-ನಟಿಯರ ತಂದೆ ತಾಯಿಯರು ಮುಂಬೈಯಲ್ಲಿ ಕೊರೋನಾ ಇರುವ ನೆಪದಿಂದ ಮುಂಬೈ ತ್ಯಜಿಸಿ ತಮ್ಮ ತಮ್ಮ ಮನೆಗಳಿಗೆ ವಾಪಾಸ್‌ ಬರಲು ಒತ್ತಡ ಹಾಕುತ್ತಿದ್ದಾರೆ.