ಸೆಕ್ಸ್ ಸೀನ್, ರೊಮ್ಯಾಂಟಿಕ್ ಸೀನ್‌ ಅಥವಾ ಕಿಸ್ಸಿಂಗ್ ಸೀನ್‌ಗಳನ್ನು ಬಾಲಿವುಡ್ ತಾರೆಯರು ಹೇಗೆ ನೋಡ್ತಾರೆ? ಇದರ ಕುರಿತು ಯಾವ ತಾರೆಯ ಅನುಭವ ಏನು? ಇಲ್ಲಿದೆ ನೋಡಿ.

ಐಶ್ವರ್ಯ ಥರದ ಕೆಲವು ನಟಿಯರು ತಾವು ಇಂಟಿಮೇಟ್ ಅಥವಾ ಕಿಸ್ಸಿಂಗ್ ಸೀನ್‌ಗಳಲ್ಲಿ ನಟಿಸೋದೇ ಇಲ್ಲ ಅಂತಾರೆ. ಇನ್ನು ಕೆಲವರು ಅಂಥ ಸೀನ್‌ಗಳನ್ನು ಎಂಜಾಯ್ ಮಾಡುತ್ತಾರೆ. ಸಾಮಾನ್ಯವಾಗಿ ಇಂಥ ಸೀನ್‌ಗಳನ್ನು ಶೂಟ್ ಮಾಡುವಾಗ ಸೆಲೆಬ್ರಿಟಿಗಳ ಮೂಡ್ ಹೇಗಿರುತ್ತದೆ? ಅವರು ಹೇಗೆ ವರ್ತಿಸುತ್ತಾರೆ ಎಂದು ತಿಳಿಯುವುದು ಕುತೂಹಲಕಾರಿ ಅಲ್ವೇ?

ಇಲಿಯಾನಳ ಜಾಕೆಟ್ 
ಇಲಿಯಾನ ಡಿಕ್ರುಜ್ ಮತ್ತು ಅಜಯ್ ದೇವಗನ್ ಜೊತೆಯಾಗಿ ನಟಿಸಿದ ಬಾದಶಹೊ ಫಿಲಂನಲ್ಲಿ ಅವರಿಬ್ಬರ ನಡುವೆ ಒಂದು ತುಂಬಾ ರೊಮ್ಯಾಂಟಿಕ್ ಸೀನ್ ಇದೆ. ಅದೇನೆಂದರೆ, ಇಬ್ಬರೂ ಮಳೆಯಲ್ಲಿ ಒಂದಾಗುತ್ತಾರೆ. ಆಗ ಇಲಿಯಾನ ತನ್ನ ಮೇಲಿರುವ ಒಂದೇ ಒಂದು ಜಾಕೆಟ್ ತೆಗೆದೆಸೆದು ಬೆತ್ತಲೆ ಬೆನ್ನಿನಲ್ಲಿ ಅಜಯ್‌ಗೆ ಮುಖಾಮುಖಿಯಾಗಿ ನಿಲ್ಲುತ್ತಾಳೆ. ಬಳಿಕ ಆಕೆ ಹೇಳಿದ್ದೇನೆಂದರೆ, ಜಾಕೆಟ್ ಕಳಚುವ ಐಡಿಯಾ ಆಕೆಯೇ ನಿರ್ದೇಶಕರಿಗೆ ನೀಡಿದ್ದಂತೆ. ಅಜಯ್ ದೇವಗನ್ ಬಗ್ಗೆ ಇರುವ ತುಂಬು ಭರವಸೆಯಿಂದ ಹಾಗೆ ಮಾಡಿದೆ ಎಂದಿದ್ದಾಳೆ. ಸೀನ್ ಶೂಟಿಂಗ್ ಬಳಿಕ ಸ್ವತಃ ಅಜಯ್ ಆಕೆಯನ್ನು ಕವರ್ ಮಾಡಿ ಜಾಕೆಟ್ ತೊಡಿಸಿದನಂತೆ.
ರಾಧಿಕಾ ಆಪ್ಟೆಯ ಕತೆಗಳು
ರಾಧಿಕ ಆಪ್ಟೆ ಇತ್ತೀಚೆಗೆ ಗಮನ ಸೆಳೆಯುತ್ತಿರುವ ಪ್ರತಿಭೆ. ಈಕೆಯ ಪಾರ್ಚ್‌ಡ್ ಫಿಲಂ ಬಿಸಿಬಿಸಿ ಕಾರಣಗಳಿಗಾಗಿ ಸುದ್ದಿಯಾಗಿತ್ತು. ಅದರಲ್ಲಿ ಕೆಲವು ಬಿಸಿಬಿಸಿ ಸೀನುಗಳೂ ಇವೆ. ಕೋ ಆಕ್ಟರ್ ಆದಿಲ್ ಹುಸೇನ್ ಜೊತೆಗೆ ಆಕೆಗೆ ಸೆಕ್ಸ್ ದೃಶ್ಯಗಳಿದ್ದವು. ಇದರಲ್ಲಿ ನಟಿಸಿದ ಬಳಿಕ, ಆ ಸಂದರ್ಭದಲ್ಲಿ ತಾನು ಕಾಮೋದ್ರಿಕ್ತನಾಗಿದ್ದೆ ಎಂದು ಆದಿಲ್ ಹುಸೇನ್, ರಾಧಿಕಾಳ ಬಳಿ ಕ್ಷಮೆ ಕೇಳುತ್ತಿದ್ದನಂತೆ. ಒಂದು ವೇಳೆ ಕಾಮೋದ್ರೇಕವೇ ಉಂಟಾಗದಿದ್ದರೂ ಕ್ಷಮೆ ಕೇಳುತ್ತಿದ್ದನಂತೆ! ತಮಾಷೆಯಾಗಿದೆ ಅಲ್ವೇ!

ನಂಬಬೇಡಿ, ಈ ತಾರೆಯರ ಆಕರ್ಷಕ ಸ್ತನಗಳು ನಿಜವಲ್ಲ!

ಐಶ್ವರ್ಯಾ ಕಿಸ್‌ಗೆ ಊಹೂಂ
ರಣಬೀರ್ ಕಪೂರ್ ಹಾಗೂ ಐಶ್ವರ್ ರೈ ಬಚ್ಚನ್ ಜೊತೆಯಾಗಿ ಏ ದಿಲ್ ಹೈ ಮುಷ್ಕಿಲ್ ಫಿಲಂಗೆ ನಟಿಸಿದ್ದರು. ಇದರಲ್ಲಿ ಇಬ್ಬರ ನಡುವೆ ಹಲವಾರು ಆಪ್ತ ದೃಶ್ಯಗಳಿವೆ. ಒಂದು ದೃಶ್ಯದಲ್ಲಿ ಇವರು ಪರಸ್ಪರ ಕಿಸ್ಸಿಂಗ್ ಮಾಡುವ ಅಗತ್ಯವಿತ್ತು. ಆದರೆ ನಿಮಗೇ ಗೊತ್ತಲ್ಲ, ಐಶ್ವರ್ಯ ಎಂದೂ ಗಂಡ ಅಭಿಷೇಕ್ ಬಚ್ಚನ್ ಬಿಟ್ಟರೆ ಇನ್ಯಾರ ಜೊತೆಗೂ ಕಿಸ್ ಹಂಚಿಕೊಳ್ಳುವುದಿಲ್ಲ. ಕಡೆಗೆ ನಿರ್ದೇಶಕರು, ಐಶ್ವರ್ಯ, ರಣಬೀರ್ ಎಲ್ಲರೂ ಮಾತನಾಡಿ, ಒಂದು ಒಪ್ಪಂದಕ್ಕೆ ಬಂದರು. ಅದೇನೆಂದರೆ ಕಿಸ್ಸಿಂಗ್ ಬದಲು ರಣಬೀರ್ ಹಾಗೂ ಐಶ್ವರ್ಯ ರೊಮ್ಯಾಂಟಿಕ್ಕಾಗಿ ಚಾಕೊಲೇಟ್ ತಿನ್ನುವುದು. ನೋಡುಗ ಈ ಚಾಕೊಲೇಟನ್ನೇ ಐಶ್ವರ್ಯಾ ರೈ ತುಟಿ ಎಂದು ಭಾವಿಸಿಕೊಳ್ಳಬೇಕೋ ಏನೋ.


ನವಾಜುದ್ದೀನ್‌ಗೆ ಹಶ್ಮಿ ಆಗುವ ಆಸೆ
ನವಾಜುದ್ದೀನ್ ಸಿದ್ದಿಕ್ ಬೆಸ್ಟ್ ಪರ್‌ಫಾರ್ಮರ್, ಒಳ್ಳೆಯ ನಟ. ಈತ ವಿಲನ್‌ನಿಂದ ಹಿಡಿದು ಹಾಸ್ಯದವರೆಗೂ ಎಲ್ಲ ಪಾತ್ರಗಳಲ್ಲಿ ಮಿಂಚಬಲ್ಲವನು. ಆದರೆ ದುರದೃಷ್ಟವಶಾತ್ ಇಂಟಿಮೇಟ್ ಸೀನ್‌ಗಳು ಈತನ ಕ್ಯಾರೆಕ್ಟರ್‌ಗೆ ಹೆಚ್ಚು ಸಿಗೋಲ್ಲ. ಒಂದು ಸಂದರ್ಶನದಲ್ಲಿ ಈತ ಹೇಳಿದ್ದೇನೆಂದರೆ- ''ಇಮ್ರಾನ್ ಹಶ್ಮಿಯ ಹಾಗೆ ಕಿಸ್ ಮಾಡುವ, ರೊಮ್ಯಾಂಟಿಕ್ ಆಗಿ ನಟಿಸುವ ಇನ್ನೊಬ್ಬನನ್ನು ನಾನು ನೋಡಿಲ್ಲ. ನಂಗೂ ಹಾಗೆ ನಟಿಸುವ ಆಸೆ ಇದೆ'' ಅಂತ. ಪಾಪ ಗುಳಿಗೆ ಸಿದ್ದ, ಒಳಗೊಳಗೇ ಮೆದ್ದ! 

ಡಿಪ್ರೆಶನ್‌ಗೆ ಹೋದರೂ ಚೇತರಿಸಿಕೊಂಡ ಸೆಲೆಬ್ರಿಟಿಗಳು

ಸಲ್ಮಾನ್ ಖಾನ್ ಪರವಾಗಿಲ್ಲ
ಸಲ್ಮಾನ್ ಖಾನ್ ಎಂದೂ ಇಂಟಿಮೇಟ್, ಸೆಕ್ಸ್ ಅಥವಾ ಕಿಸ್ಸಿಂಗ್ ಸೀನ್‌ಗಳಿಗೆ ಬೇಡ ಎಂದವನೇ ಅಲ್ಲ. ಹೇಟ್ ಸ್ಟೋರಿ-೩ಯಲ್ಲಿ ಈತನಿಗೆ ಮೂವರು ಹುಡುಗಿಯರ ಜತೆ ಇಂಟಿಮೇಟ್ ಸೀನ್‌ಗಳಿವೆ. ಎ ಸರ್ಟಿಫಿಕೇಟ್ ಸಿಗದಿರೋವರೆಗೂ ಇಂಥ ಸೀನ್‌ಗಳು ಓಕೆ ಎಂಬುದು ಆತನ ನಿಲುವು. 

ಸೈಫ್- ಕರೀನಾ ಕಿಸ್‌ಗೆ ಸೈ
೨೦೧೨ರಲ್ಲಿ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಮದುವೆಯಾದಾಗ, ಇಬ್ಬರೂ ಮುಂದೆ ಸಿನಿಮಾಗಳಲ್ಲಿ ಯಾರನ್ನೂ ಕಿಸ್ ಮಾಡುವುದಿಲ್ಲ ಎಂದು ವಚನ ಕೊಟ್ಟುಕೊಂಡಿದ್ದರಂತೆ. ತನ್ನ ಗಂಡ/ ಹೆಂಡತಿ ಇನ್ನೊಬ್ಬ/ಳನ್ನು ಚುಂಬಿಸುವುದು ಯಾರಿಗಾದರೂ ಇಷ್ಟವಿಲ್ಲದ ವಿಷಯವೇ. ಆದರೆ ಇತ್ತೀಚೆಗೆ ಇಬ್ಬರೂ ತುಂಬ ಮೆಚ್ಯೂರ್ ಆಗಿದ್ದಾರೆ. ಕರೀನಾ ತೆರೆಯ ಮೇಲೆ ಯಾರನ್ನಾದರೂ ಚುಂಬಿಸಿದರೆ ಸೈಫ್‌ಗೆ ಓಕೆ ಅಂತೆ. ಕರೀನಾಗೂ, ಸಿನಿಆಗೆ ಅಗತ್ಯವಿದ್ದರೆ ಸೈಫ್ ಯಾರನ್ನಾದರೂ ಚುಂಬಿಸಿದರೆ ತಕರಾರು ಇಲ್ಲವಂತೆ. 

ಬಿಗ್‌ಬಾಸ್ ಗೆ ಬಂದಿದ್ದೇ ಸನ್ನಿ ಲಿಯೋನ್‌ ಹೀಗೆ ಮಾಡಿಬಿಡೋದಾ!