ಮ್ಯಾಟ್ರಿಕ್ಸ್: ರಿಸರ್ರೆಕ್ಷನ್ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಕಲೆಕ್ಟ್ ಮಾಡಿದೆ ಗೊತ್ತಿಲ್ಲ. ಆದರೆ ನಟ ಕಿನು ಮಾಡಿರುವ ಕೆಲಸಕ್ಕೆ ಮೆಚ್ಚುಗೆ ಹರಿದು ಬರುತ್ತಿದೆ.
ಹಾಲಿವುಡ್‌ನ (Hollywood) ನಟ ಕಿನು ರಿವೀಸ್ (Keanu Reeves) ತಾನೊಬ್ಬ ಅದ್ಭುತ ನಟ ಅಂತ ಮಾತ್ರವಲ್ಲದೆ ಒಳ್ಳೆಯ ಸಮಾಜ ಸೇವಕನಾಗಿ (Social Work) ಗುರುತಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಮ್ಯಾಟ್ರಿಕ್ಸ್: ರಿಸರ್ರೇಕ್ಷನ್ (The Matrix Resurrections) ನಾಲ್ಕನೇ ಭಾಗ ಸೈಂಟಿಫಿಕ್ ಫಿಕ್ಷನ್ (Sci-fic) ಸೀರಿಸ್‌ನಲ್ಲಿ ನಟಿಸಿದ್ದಾರೆ. ಮೊದಲ ಭಾಗ ಬಿಡುಗಡೆಯಾಗಿ 20 ವರ್ಷಗಳು ಕಳೆದ ನಂತರ, ಈ ಸೀರಿಸ್ ರಿಲೀಸ್ ಆಗಿರುವುದು. ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ನಿರೀಕ್ಷೆ ಮುಟ್ಟಿಲ್ಲ ಎಂಬುದಾಗಿಯೂ ಕೇಳಿ ಬಂದಿದೆ. ಆದರೆ ದೇಶದಾದ್ಯಂತ 100 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ.
ಸಿನಿಮಾ ಯಾಕೆ ಕ್ಲಿಕ್ ಆಗಿಲ್ಲ ಎಂಬುದಕ್ಕೆ ಹಲವು ಕಾರಣಗಳಿವೆ. ಮೊದಲ ಕಾರಣ, ಕೊರೋನಾ ಸೋಂಕು (Covid19) ಹೆಚ್ಚಾಗುತ್ತಿದ್ದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ರಿಲೀಸ್ ಮಾಡಿದ್ದರು. ವೀಕ್ಷಕರ ಸಂಖ್ಯೆ ಕಡಿಮೆ ಇರುವಾಗ ಗಳಿಕೆಯೂ ಕಡಿಮೆ ಆಗುತ್ತದೆ. ಎರಡನೇ ಕಾರಣ ಮಾರ್ವಲ್ ಅವರ ಸ್ಪೈಡರ್ ಮ್ಯಾನ್ ನೋ ವೇ ಹೋಮ್ (Spider Man No Way Home) ಸಿನಿಮಾ. ಈ ಸಿನಿಮಾ ಎದುರು ಯಾವ ಭಾಷೆ ಸಿನಿಮಾನೂ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಲಿಲ್ಲ.
ಮ್ಯಾಟ್ರಿಕ್ಸ್: ರಿಸರ್ರೇಕ್ಷನ್ ಎಷ್ಟು ಕಲೆಕ್ಷನ್ ಮಾಡಿದೆ? ಕಲಾವಿದರು ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ? ಎಂಬುದು ಯಾರಿಗೂ ಮುಖ್ಯವೆನಿಸಿಲ್ಲ. ಆದರೆ ನಟಿ ಕಿನು ಮಾಡಿರುವ ಸಮಾಜ ಸೇವೆ ಈಗ ಬೆಳಕಿಗೆ ಬಂದಿದೆ. ಲಾಲ್ ಬೈಬಲ್ ರಿಪೋರ್ಟ್ ಮಾಡಿರುವ ಮಾಹಿತಿ ಪ್ರಕಾರ ಕಿನು ತನ್ನ ಸಂಭಾವನೆಯಲ್ಲಿ ಗಳಿಸುವ 70% ಹಣವನ್ನು ಕ್ಯಾನ್ಸರ್ (Cancer) ಪೀಡಿತರಿಗೆ ನೀಡುತ್ತಾರೆ ಎನ್ನಲಾಗಿದೆ.
Sonu Sood Distributes Bicycles: ವಿದ್ಯಾರ್ಥಿಗಳಿಗೆ 1000 ಸೈಕಲ್ ಹಂಚಿದ ಸೋನು ಸೂದ್
ಕಿನು ರಿವೀಸ್ ಅವರಿಗೆ 1999 ಸೈಂಟಿಫಿಕ್ ಫಿಕ್ಷನ್ ಸಿನಿಮಾಗೆ 10 ಮಿಲಿಯನ್ ಡಾಲರ್ ಸಂಭಾವನೆ ನೀಡಲಾಗಿತ್ತು, ಈ ಸಿನಿಮಾ 35 ಮಿಲಿಯನ್ ಡಾಲರ್ ಗಳಿಸಿತ್ತು. ಹೀಗಾಗಿ ಈ ಸಿನಿಮಾವೂ ಸೂಪರ್ ಹಿಟ್ ಆಗಿತ್ತು. ಈ ರಿಪೋರ್ಟ್‌ನಲ್ಲಿರುವ ಮಾಹಿತಿ ಪ್ರಕಾರಣ ಕಿನು ಮ್ಯಾಟ್ರಿಕ್ ಸಿನಿಮಾಗೆ ಪಡೆದುಕೊಂಡಿರುವ ಸಂಭಾವನೆಯಲ್ಲಿ (Remuneration) 31.5 ಮಿಲಿಯನ್ ಡಾಲರ್ ಹಣವನ್ನು ಕ್ಯಾನ್ಸರ್ ಪೀಡಿತರಿಗೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಕಿನು ಈ ರೀತಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಒಂದು ಕಾರಣವಿದೆ. ಕಿನು ಅವರ ಸಹೋದರ ಕಿಮ್ ಅವರು ಹಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಆದರೆ ಇದಕ್ಕೆ ದೊಡ್ಡ ಮೊತ್ತದಲ್ಲಿ ಹಣ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಹಣ ಇದ್ದವರು ಚಿಕಿತ್ಸೆ ಪಡೆಯುತ್ತಾರೆ, ಇಲ್ಲದವರು ಎನು ಮಾಡುತ್ತಾರೆಂದು ಚಿಂತಿಸಿ ಇಂಥದ್ದೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
Rashmika Mandanna: ಡೆಲಿವರಿ ಗರ್ಲ್ ಆದ್ರು ರಶ್ಮಿಕಾ ಮಂದಣ್ಣ!
ಕೊರೋನಾ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡಿದ ಕಾರಣ ತಂಡದಲ್ಲಿದ್ದ ಕಲಾವಿದರು (Artist) ಮತ್ತು ಟೆಕ್ನೀಷಿಯನ್‌ಗಳಿಗೆ (technician) ಸಮಸ್ಯೆ ಆಗಿದ್ದು ನಿಜ. ಈ ವಿಚಾರ ತಿಳಿಯುತ್ತಿದ್ದಂತೆ, ಕಿನು ಸ್ಪೆಷಲ್ ಎಫೆಕ್ಟ್ ಡಿಸೈನರ್ ಮತ್ತು ವಸ್ತ್ರ ವಿನ್ಯಾಸ (Costume desinger) ಮಾಡುವ ಕಲಾವಿದರ ತಂಡಕ್ಕೆ 75 ಮಿಲಿಯನ್ ಡಾಲರ್ ಹಣವನ್ನು ನೀಡಿದ್ದಾರೆ.
ಈ ಹಿಂದೆ ಕಿನು ಜೊತೆ ಜಾನ್ ವಿಕ್ (John Wick) ಸಿನಿಮಾದಲ್ಲಿ ಕೆಲಸ ಮಾಡಿದ ಸ್ಟಂಟ್ ಮಾಸ್ಟರ್ (Stunt Master) ತಂಡಕ್ಕೆ ಸ್ಪೆಷಲ್ ಗಿಫ್ಟ್ ಎಂದು ಏನೋ ಕೊಟ್ಟರು. ಆದರೆ ಯಾರಿಗೂ ಏನೂ ರಿವೀಲ್ ಮಾಡಿರಲಿಲ್ಲ. ಆದರೆ ಅವರ ಉದಾರ ಮನಸ್ಸನ್ನು ಮೆಚ್ಚಿ ಸ್ಟಂಟ್ ತಂಡ ಬಯಲು ಮಾಡಿದೆ. ಸುಮಾರು 10 ಸಾವಿರ ಡಾಲರ್ ಹಣವನ್ನು ಅವರ ತಂಡಕ್ಕೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಿನು ಅವರನ್ನು 'nicest guy in Hollywood' ಎಂದು ಕರೆಯಲಾಗಿದೆ.
