ಜೊಸೆಫ್ ವಿಜಯ್ಗಾಗಿ ತ್ರಿಷಾ ಕೂಡ ಕ್ರಿಶ್ಚಿಯನ್ ಆದ್ರಾ ಅನ್ನೋ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಈಗಾಗ್ಲೇ ವಿಜಯ್ ಪತ್ನಿ ಡಿವೋರ್ಸ್ ಗೆ ಅಪ್ಲೈ ಮಾಡಿದ್ದು, ವಿಚ್ಛೇದನದ ಬಳಿಕ ವಿಜಯ್ - ತ್ರಿಷಾ ಮದುವೆಯಾಗ್ತಾರೆ ಅನ್ನೋ ಸುದ್ದಿ ಇದೆ. ಈ ನಡುವೆ ತ್ರಿಷಾ ಧರ್ಮಾಂತರ ಸುದ್ದಿ ಬೇರೆ ಕಿಚ್ಚು ಹಚ್ಚಿದೆ. ಆದ್ರೆ ಮದ್ವೆ ಆಗೋಗಿದ್ಯಾ?
ಅಯ್ಯರ್ ಬ್ರಾಹ್ಮಣ ಹುಡುಗಿ ತ್ರಿಷಾ ಕೃಷ್ಣನ್
ನಟಿ ತ್ರಿಷಾ ಕೃಷ್ಣನ್ (Trisha Krishnan) ಜೊತೆ ದಳಪತಿ ವಿಜಯ್ (Thalapathy Vijay) ಹೆಸರು ನಂಟು ಬೆಸೆದುಕೊಂಡು ತುಂಬಾನೇ ದಿನಗಳಾಯ್ತು. ಅದ್ರಲ್ಲೂ ವಿಜಯ್ ಸಂಸಾರ ಮುರಿದುಬೀಳೋದಕ್ಕೆ ತ್ರಿಷಾನೇ ಕಾರಣ ಅಂತ ಹೇಳಲಾಗಿತ್ತು. ಈಗ ನೋಡಿದ್ರೆ ತ್ರಿಚಾ ಬಗ್ಗೆ ಹೊಸ ಗುಸು ಗುಸು ಶುರುವಾಗಿದೆ..? ವಿಜಯ್ಗಾಗಿ ತ್ರಿಷಾ ಮತಾಂತರವಾದ್ರಾ ಅಂತ ಚರ್ಚೆ ಶುರುವಾಗಿದೆ.
ದಳಪತಿ ವಿಜಯ್ಗಾಗಿ ಮತಾಂತರವಾದ್ರಾ ತ್ರಿಷಾ..?
ಹೌದು, ದಳಪತಿ ವಿಜಯ್ ಮತ್ತು ತ್ರಿಷಾ ಲವ್ವಿ ಡವ್ವಿ ಬಗ್ಗೆ ಗಾಸಿಪ್ ಶುರುವಾಗಿ ವರ್ಷಗಳೇ ಆದ್ವು. ಅದ್ರಲ್ಲೂ ವಿಜಯ್ ಪಾಲಿಟಿಕ್ಸ್ಗೆ ಬಂದ ಮೇಲೆ ಇವರ ನಂಟಿನ ಬಗ್ಗೆ ಹೆಚ್ಚು ಹೆಚ್ಚಾಗಿ ಸುದ್ದಿ ಆಗೋದಕ್ಕೆ ಶುರುವಾದ್ವು.
ಅನೇಕ ರಾಜಕೀಯ ನಾಯಕರು, ವಿಜಯ್-ತ್ರಿಷಾ ನಂಟಿನ ಬಗ್ಗೆ ಬಹಿರಂಗವಾಗೇ ಟೀಕೆ ಮಾಡಿದ್ರು. ಈ ನಡುವೆ ವಿಜಯ್ ಪತ್ನಿ ಸಂಗೀತಾ ಡಿವೋರ್ಸ್ಗೆ ಅಪ್ಲೈ ಮಾಡಿದ ಮೇಲೆ, ಒನ್ಸ್ ಅಗೈನ್ ವಿಜಯ್-ತ್ರಿಷಾ ಸಂಬಂಧದ ಬಗ್ಗೆ ಚರ್ಚೆ ಶುರುವಾಗಿತ್ತು.
ಈಗ ನೋಡಿದ್ರೆ ಗುರುವಾರ ತಮಿಳುನಾಡಿನಲ್ಲಿ ಮತದಾನ ನಡದಿದೆ. ವೋಟಿಂಗ್ಗೆ ಬಂದ ತ್ರಿಷಾ , ಮತ ಚಲಾಯಿಸಿ ಆ ಫೋಟೋನ ಸೋಷಿಯಲ್ ಮಿಡಿಯಾದಲ್ಲಿ ಹಾಕಿದ್ದಾರೆ. ಜೊತೆಗೆ ವಿಝಲ್ ಸೌಂಡ್ ಹಾಕಿ, ತಾನು ಮತ ಚಲಾಯಿಸಿದ್ದು ವಿಝಲ್ ಗುರುತಿನ ವಿಜಯ್ ಪಾರ್ಟಿಗೆ ಅಂತ ಸಾರಿ ಹೇಳಿದ್ದಾರೆ.
ಅಯ್ಯರ್ ಬ್ರಾಹ್ಮಣ ತ್ರಿಷಾ ಕೃಷ್ಣನ್ ಧರ್ಮಾಂತರ..?
ಹೌದು ತ್ರಿಷಾ ಕೃಷ್ಣನ್ ತಮಿಳಿನ ಸಂಪ್ರದಾಯಸ್ತ ಅಯ್ಯರ್ ಬ್ರಾಹ್ಮಣ ಕುಟುಂಬದಲ್ಲಿ ಜನಸಿದವರು. ಇಂಥಾ ಬ್ರಾಹ್ಮಣ ನಟಿಯ ಕಾರ್ನಲ್ಲಿ ಶಿಲುಬೆ ಇರೋದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣ್ತಾ ಇದೆ. ಇದನ್ನ ನೋಡಿ ತ್ರಿಷಾ ಮತಾಂತರ ಆಗ್ಬಿಟ್ರಾ ಅಂತ ಫ್ಯಾನ್ಸ್ ಪ್ರಶ್ನೆ ಮಾಡ್ತಾ ಇದ್ದಾರೆ.
ನಿಮಗೆಲ್ಲಾ ಗೊತ್ತಿರೋ ಹಾಗೆ ದಳಪತಿ ವಿಜಯ್ ಕ್ರಿಶ್ಚಿಯನ್ ಧರ್ಮ ಫಾಲೋ ಮಾಡ್ತಾರೆ. ವಿಜಯ್ ತಾಯಿ ಹಿಂದೂವಾದ್ರೂ ಅವರ ತಂದೆ ಜೋಸೆಫ್ ಚಂದ್ರಶೇಖರ್ ಕ್ರಿಶ್ಚಿಯನ್. ವಿಜಯ್ ಕೂಡ ಕ್ರಿಶ್ಚಿಯನ್ ಧರ್ಮವನ್ನೇ ಫಾಲೋ ಮಾಡಿಕೊಂಡು ಬಂದಿದ್ದಾರೆ. ಚುನಾವಣೆಗೂ ಮುನ್ನ ವಿಜಯ್ ಚರ್ಚ್ವೊಂದರಲ್ಲಿ ಮಂಡಿ ಮೇಲೆ ನಡೆಯುತ್ತಾ ಸೇವೆ ಮಾಡಿದ ವಿಡಿಯೋ ವೈರಲ್ ಆಗಿತ್ತು.
ಜೊಸೆಫ್ ವಿಜಯ್ಗಾಗಿ ತ್ರಿಷಾ ಕೂಡ ಕ್ರಿಶ್ಚಿಯನ್ ಆದ್ರಾ?
ಸೋ, ಜೊಸೆಫ್ ವಿಜಯ್ಗಾಗಿ ತ್ರಿಷಾ ಕೂಡ ಕ್ರಿಶ್ಚಿಯನ್ ಆದ್ರಾ ಅನ್ನೋ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಈಗಾಗ್ಲೇ ವಿಜಯ್ ಪತ್ನಿ ಡಿವೋರ್ಸ್ ಗೆ ಅಪ್ಲೈ ಮಾಡಿದ್ದು, ವಿಚ್ಛೇದನದ ಬಳಿಕ ವಿಜಯ್ - ತ್ರಿಷಾ ಮದುವೆಯಾಗ್ತಾರೆ ಅನ್ನೋ ಸುದ್ದಿ ಇದೆ. ಈ ನಡುವೆ ತ್ರಿಷಾ ಧರ್ಮಾಂತರ ಸುದ್ದಿ ಬೇರೆ ಕಿಚ್ಚು ಹಚ್ಚಿದೆ. ವಿಜಯ್ನ ಮದುವೆಯಾಗ್ತೀರಾ..? ವಿಜಯ್ಗಾಗಿ ಮತಾಂತರ ಆದ್ರಾ..? ಅಂತ ಫ್ಯಾನ್ಸ್ ಕೇಳ್ತಾ ಇರೋ ಪ್ರಶ್ನೆಗೆ ತ್ರಿಷಾ ಏನುತ್ತರ ಕೊಡ್ತಾರೆ ಕಾದುನೋಡಬೇಕಿದೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...


