ಕಿರುತೆರೆ ಮಾಧ್ಯಮಗಳಲ್ಲಿ ಅಭಿನಯಿಸಿ, ಖ್ಯಾತಿ ಪಡೆದಿರುವ ನಟಿ ನಿಯಾ ಶರ್ಮಾ ಬುಧವಾರ ಅದ್ಧೂರಿಯಾಗಿ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಿಧವಿಧವಾದ ಕೇಕ್‌ಗಳ ನಡುವೆ ಕುಳಿತು ಸಂಭ್ರಮಿಸುತ್ತಿರುವ ನಟಿಗೆ ಶುರುವಾಗಿದೆ ಇದೀಗ ಸಂಕಷ್ಟ.

ಹೌದು! ಹುಟ್ಟುಹಬ್ಬದ ದಿನ ಗೆಳೆಯರು ತಮ್ಮ ನೆಚ್ಚಿನ ಫ್ಲೇವರ್ ಅಥವಾ ಡಿಸೈನರ್‌ ಕೇಕ್‌ ಮಾಡಿಸುತ್ತಾರೆ. ಆದರೆ ನಿಯಾ ಶರ್ಮಾಗೆ ಯಾರೋ ಒಬ್ಬ ಅಪ್ಪಟ ಅಭಿಮಾನಿ ಪುರುಷ ಗುಪ್ತಾಂಗ ಇರೋ ಕೇಕ್‌ ತಂದು ಕೊಟ್ಟಿದ್ದಾರೆ. ಕತ್ತರಿಸುವ ಮುನ್ನವೇ ವಾಕರಿಕೆ ಬರುತ್ತದೆ ಎನ್ನುತ್ತಲೇ, ಅದನ್ನು ತಡೆದುಕೊಂಡು ನಿಯಾ ಸುಮ್ಮನಿರುತ್ತಾರೆ. ಇವೆಲ್ಲಾ ಸ್ವತಃ ನಿಯಾ ಶೇರ್ ಮಾಡಿರುವ ವಿಡಿಯೋದಲ್ಲಿಯೇ ಸೆರೆಯಾಗಿದೆ.

 

ನೆಟ್ಟಿಗರ ಕ್ಲಾಸ್:
ಇಂದಿನ ಜನರೇಷನ್‌ನಲ್ಲಿ ಈ ರೀತಿಯ ಕೇಕ್‌ಗಳನ್ನು ಜನರು ಹೆಚ್ಚಾಗಿ ಬ್ಯಾಚುಲರ್‌ ಪಾರ್ಟಿಗೆ ಮಾಡಿಸುತ್ತಾರೆ. ಆದರೆ ನಿಯಾ ಬರ್ತಡೇಗೆ ಮಾಡಿಸಿರುವುದು ಅಚ್ಚರಿಯ ವಿಚಾರ. ಅಲ್ಲದೇ ಸ್ನೇಹಿತರು ಕೇಕ್‌ ಕತ್ತರಿಸು ಎಂದು ಹೇಳುವ ಬದಲು 'ಅ'ದನ್ನು ತಿನ್ನು ಎಂದು ಒತ್ತಾಯಿಸುರೆ. ಈ ಕಾರಣಕ್ಕೆ ಟ್ರೋಲಿಗರು ಫುಲ್ ಗರಂ ಆಗಿದ್ದಾರೆ.

ಅತಿ ಹೆಚ್ಚು ರೀ-ಟ್ವೀಟ್ ಪಡೆದ ವಿಜಯ್ ದಳಪತಿ ಸೆಲ್ಫಿ ವಿತ್ ಫ್ಯಾನ್ಸ್! 

ನಾಲ್ಕೈದು ರೀತಿಯ ಕೇಕ್ ಫೋಟೋಗಳನ್ನು ಶೇರ್ ಮಾಡಿದ್ದರೆ ಸಾಕಾಗಿತ್ತು. ಇದನ್ನು ಅಪ್ಲೋಡ್ ಮಾಡಬೇಕಿತ್ತಾ? ಏನೂ ಮಾಡದೇ ಸುಮ್ಮನಿದ್ದೇ ನಟ-ನಟಿಯರು ವಿವಾದ, ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಆದರೆ ನೀವು ಇದನ್ನು ಅಪ್ಲೋಡ್ ಮಾಡಿದ್ದೀರಾ. ನಿಮಗೆ ತಲೆ ಕೆಟ್ಟಿದ್ಯಾ? ಎಂದು ಫಾಲೋಯರ್ಸ್ ಪ್ರಶ್ನಿಸಿದ್ದಾರೆ.

 

ಒಟ್ಟಿನಲ್ಲಿ ನಿಯಾ ಕೊರೋನಾ ಟೈಂ ಅಂತ ತಮ್ಮ ನಿವಾಸದಲ್ಲೇ ಹುಟ್ಟುಹಬ್ಬ ಮಾಡಿಕೊಂಡರೂ ಟ್ರೋಲಿಗರಿಗೆ ಮತ್ತೊಂದು ವಿಚಾರಕ್ಕೆ ಗುರಿಯಾಗಿದ್ದಾರೆ.