ಹಿಂದಿ ಗಾಯಕಿ ಹಾಗೂ ಸಂಯೋಜಕಿ ಜಸ್ಲೀನ್ ರಾಯಲ್ ಬಾಲಿವುಡ್‌ನಲ್ಲಿ ನಡೆಯುತ್ತಿರುವ ನೆಪೋಟಿಸಂ ಹಾಗೂ ಅವಾರ್ಡ್ ಕಾರ್ಯಕ್ರಮದ ಗಿಮಿಕ್ ಬಗ್ಗೆ ಮೊದಲ ಬಾರಿ ಮಾತನಾಡಿದ್ದಾರೆ.
ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಹೆಸರು ಮಾಡಿರುವ ಗಾಯಕಿ ಹಾಗೂ ಸಂಗೀತ ಸಂಯೋಜಕಿ ಜಸ್ಲೀನ್ ರಾಯಲ್ ಬಾಲಿವುಡ್ ಬ್ಯಾಗ್ರೌಂಡ್‌ನಲ್ಲಿ ನಡೆಯುತ್ತಿರುವ ಗಿಮಿಕ್‌ಗಳ ರಹಸ್ಯ ಬಯಲು ಮಾಡಿದ್ದಾರೆ. ಫಿಲ್ಲೌರಿ ಚಿತ್ರದ ದಿನ್ ಶಗ್ನಾ ಡಾ, ಗಲ್ಲಿ ಬಾಯ್ ಚಿತ್ರದ ಜಹಾನ್ ತು ಚಲಾ ಸೇರಿದಂತೆ ಅನೇಕ ಸೂಪರ್ ಹಿಟ್ ಹಾಡುಗಳು ಜಸ್ಲೀನ್ ರಾಯಲ್‌ಗೆ ಖ್ಯಾತಿ ತಂದು ಕೊಟ್ಟಿದೆ.
'ಹೃತಿಕ್ ಅಭಿಷೇಕ್ ಬಚ್ಚನ್‌ಗಿಂತ ದೊಡ್ಡ ಸ್ಟಾರ್'..! ನೆಪೊಟಿಸಂ ಬಗ್ಗೆ ನಟ ಹೇಳಿದ್ದಿಷ್ಟು..!
'ನಾನು ಮೊದಲಿನಿಂದಲೂ ಸಂಗೀತ ಸಂಯೋಜನೆ ಮಾಡಿ, ನಿರ್ದೇಶಕಿಯಾಗಬೇಕು ಎಂದು ಕನಸು ಕಂಡಿದ್ದೆ. ಇದರಲ್ಲಿ ಗಂಡು-ಹೆಣ್ಣು ಎಂಬ ಬೇಧ ಭಾವ ಇರಲಿಲ್ಲ. ಆದರೆ ನನಗೆ ಕಡಿಮೆ ಅವಧಿಯಲ್ಲಿ ಇಷ್ಟೊಂದು ಅವಕಾಶಗಳು ಸಿಗಲು ಕಾರಣವೇ ನಾನು ಹೆಣ್ಣು ಎಂದು. ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಹೆಣ್ಣು ಮಕ್ಕಳು ಈ ಕ್ಷೇತ್ರಕ್ಕೆ ಯಾವುದೇ ಭಯವಿಲ್ಲದೇ ಕಾಲಿಡಬೇಕೆಂದು ನಾನು ಬಯಸುತ್ತೇನೆ. ಹಿಂದಿನ ಕಾಲದಲ್ಲಿ ಹೆಣ್ಣು ಮನೆ ನೋಡಿಕೊಳ್ಳಬೇಕು ಎಂದಿತ್ತು. ಆದರೀಗ ಅದು ಬದಲಾಗಿದೆ.' ಎಂದು ಮಾತು ಶುರು ಮಾಡಿದ ಜಸ್ಲೀನ್ ರಾಯಲ್ ಬಿ-ಟೌನ್ ಪ್ರಪಂಚದ ಬಗ್ಗೆ ಹೇಳಿದ್ದಾರೆ.
'ನೆಪೋಟಿಸಂ ಹಾಗೂ ಫೇವರೆಟೀಸಂ ಖಂಡಿತವಾಗಿಯೂ ಇದೆ. ನಾನು ಇದನ್ನು ಕಣ್ಣಾರೇ ನೋಡಿದ್ದೀನಿ ಹಾಗೂ ಅನುಭವಿಸಿದ್ದೀನಿ. ಅದರಲ್ಲೂ ಅವಾರ್ಡ್ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ನಡೆಯುತ್ತದೆ. ಒಬ್ಬ ವ್ಯಕ್ತಿ ಯಾವ ಕೆಲಸವನ್ನು ಮಾಡಿರುವುದಿಲ್ಲ ಜನರಿಗೆ ಓ ಅವರು ಹೀಗೆ ಮಾಡಿದ್ದರಾ ಎಂದು ತಿಳಿದಿರುವುದಿಲ್ಲ. ಅವರಿಗೆ ಅವಾರ್ಡ್ ನೀಡಲಾಗುತ್ತದೆ. ಕಷ್ಟ ಪಟ್ಟು ಕೆಲಸ ಮಾಡಿದವರು ಆ ಪಟ್ಟಿಯಲ್ಲಿ ಇರುವುದಿಲ್ಲ.ಇನ್‌ಫ್ಲೂಯನ್ಸ್ ಫ್ಯಾಮಿಲಿ ಆಗಿರುವ ಕಾರಣ ಅವರಿಗೇ ನೀಡಲಾಗುತ್ತದೆ ಅಷ್ಟೆ. ಆದರೆ ಕೊನೆಯಲ್ಲಿ ನಿಮ್ಮ ಕೆಲಸ ಮಾತ್ರ ಮಾತನಾಡುತ್ತದೆ. ನಿಮ್ಮ ಹೆಸರಿನಿಂದ ಇರುವ ಫ್ಯಾಮಿಲಿ ಹೆಸರಲ್ಲ,' ಎಂದು ಜಸ್ಲೀನ್ ರಾಯಲ್ ಮಾತನಾಡಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಸ್ವಜನಪಕ್ಷಪಾತ; ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ಅಣ್ಣಾವ್ರ ಮೊಮ್ಮಗ!
ಇತ್ತೀಚಿಗೆ ಜಸ್ಲೀನ್ ರಾಯಲ್ ಗಾಯನದ ಸಾಂಗ್ ರಹಿಯೊ ಹಾಡು ಯುಟ್ಯೂಬ್‌ನಲ್ಲಿ ಕೇವಲ ಮೂರು ದಿನಕ್ಕೆ 1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.
ಸುಶಾಂತ್ ಆತ್ಮಹತ್ಯೆ ನಂತರ ಶುರವಾದ ಚರ್ಚೆ:
ಸುಶಾಂತ್ ಸಿಂಗ್ ರಜಪೂತ್ ಎಂಬ ಬಾಲಿವುಡ್‌ಮ ಪ್ರತಿಭಾನ್ವಿತ ನಟ ಆತ್ಮಹತ್ಯೆ ಮಾಡಿ ಕೊಂಡ ನಂತರ ಬಾಲಿವುಡ್‌ನ ಸ್ವಜನಪಕ್ಷಪಾತ ಹಾಗೂ ಮಾಫಿಯಾ ಬಗ್ಗೆ ಹಲವರು ಬಾಯಿ ಬಿಡುತ್ತಿದ್ದಾರೆ. ಅದರಲ್ಲಿಯೂ ಮಣಿಕರ್ಣಿಕಾ ನಟಿ ಕಂಗನಾ ರಣಾವತ್ ಈ ವಿಷಯವಾಗಿ ಮಾತನಾಡಿದ ನಂತರ ಪರ, ವಿರೋಧ ಚರ್ಚೆಗಳು ಜೋರಾಗುತ್ತಿದೆ. ಈ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿರವಾಗಲೇ ಇದೀಗ ಸುಶಾಂತ್ ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿಯನ್ನು ಡ್ರಗ್ ಮಾಫಿಯಾ ಹಿನ್ನೆಯಲ್ಲಿ ಅರೆಸ್ಟ್ ಮಾಡಿದ್ದು, ಹಲವು ಬಾಲಿವುಡ್ ನಟ, ನಟಿಯರು ಇದರೊಂದಿಗೆ ಲಿಂಕ್ ಹೊಂದಿರುವ ವಿಷಯಗಳು ಒಂದೊಂದಾಗಿ ಹೊರ ಬರುತ್ತಿದೆ.
ಬಾಲಿವುಡ್‌ನಲ್ಲಿ ಡ್ರಗ್ಸ್ ಸೇವನೆ ಚಟ ಹೊಂದಿರುವ ಹಲವು ಸೆಲೆಬ್ರಿಟಿಗಳ ಹೆಸರನ್ನು ಬಹಿರಂಗ ಮಾಡಿರುವ ನಟಿ ರಿಯಾ, ಇಂಥ ಕೆಲ ಸೆಲೆಬ್ರಿಟಗಳು, ನಟ ಸುಶಾಂತ್‌ಗೆ ಸೇರಿದ ಲೋನಾವಾಲದಲ್ಲಿನ ತೋಟದ ಮನೆಯಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದರು ಎಂಬ ಸ್ಫೋಟಕ ಮಾಹಿತಿಯನ್ನೂ ರಿವೀಲ್ ಮಾಡಿದ್ದಾರೆ. ಈ ಪಾರ್ಟಿಗಳಲ್ಲಿ ಸುಶಾಂತ್‌ರ ಹಲವು ಬಾಲಿವುಡ್ ಸ್ನೇಹಿತರ ಭಾಗಿಯಾಗಿ ನಶೆ ಏರಿಸಿಕೊಳ್ಳುತ್ತಿದ್ದರು ಎಂದು ಎನ್‌ಸಿಬಿ ವಿಚಾರಣೆಯಲ್ಲಿ ಹೇಳಿದ್ದಾರೆ. ಜತೆಗೆ ಸುಶಾಂತ್‌ರನ್ನು ಸಿನಿಮಾಗೆ ಕರೆತಂದ ನಿರ್ಮಾಪಕರ ಹೆಸರನ್ನೂರಿಯಾ ಹೇಳಿದ್ದು, ಅವರೇ ಸುಶಾಂತ್‌ರನ್ನು ಕೊಕೇನ್, ಮರಿಜುವಾನ ಹಾಗೂ ಎಲ್‌ಎಸ್‌ಡಿ ಪಾರ್ಟಿಗಳಿಗೆ ಕರೆದುಕೊಂಡು ಹೋಗುತ್ತಿದ್ದರು ಎಂದು 20 ಪುಟಗಳ ಹೇಳಿಕೆಯಲ್ಲಿ ರಿಯಾ ಹೇಳಿದ್ದಾರೆ. ಈ ಪ್ರಕರಣ ಅದ್ಯಾವ ತಿರವು ಪಡೆದುಕೊಳ್ಳುತ್ತದೋ ಕಾದು ನೋಡಬೇಕಿದೆ.
