Asianet Suvarna News Asianet Suvarna News

ಮೂಗಿನಲ್ಲಿ ರಕ್ತಸ್ರಾವ; ಚಿತ್ರೀಕರಣ ವೇಳೆ ಖ್ಯಾತ ನಟಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಪಂಜಾಬಿ ನಟಿ, ಗಾಯಕಿ ಮತ್ತು ಬಿಗ್ ಬಾಸ್ 13ರ ಸ್ಪರ್ಧಿ ಹಿಮಾಂಶಿ ಖುರಾನಾ ಆರೋಗ್ಯದಲ್ಲಿ ಏರು-ಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. 

Himanshi Khurana Hospitalised In Romania after suffers high fever and bleeding nose sgk
Author
First Published Dec 26, 2022, 1:53 PM IST

ಪಂಜಾಬಿ ನಟಿ, ಗಾಯಕಿ ಮತ್ತು ಬಿಗ್ ಬಾಸ್ 13ರ ಸ್ಪರ್ಧಿ ಹಿಮಾಂಶಿ ಖುರಾನಾ ಆರೋಗ್ಯದಲ್ಲಿ ಏರು-ಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ರೊಮೇನಿಯಾದಲ್ಲಿ ಚಿತ್ರೀಕರಣದಲ್ಲಿದ್ದ ನಟಿ ಹಿಮಾಂಶಿ ಅವರಿಗೆ ಮೂಗಿನಿಂದ ವಿಪರೀತ ರಕ್ತಸ್ರಾವ ಆಗುತ್ತಿತ್ತು ಮತ್ತು ತೀವ್ರ ಜ್ವರದಿಂದ ಬಳಲುತ್ತಿದ್ದರು. ತಕ್ಷಣ ಅವರನ್ನು ಅಲ್ಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಂದಹಾಗೆ ನಟಿ ಹಿಮಾಂಶಿ ಅವರು ಪಂಜಾಬಿನ 'ಫಟ್ಟೋ ದೇ ಯಾರ್ ಬಡೇ ನೆ' ಚಿತ್ರೀಕರಣದಲ್ಲಿದ್ದರು. ಈ ಚಿತ್ರದ ಹಾಡಿನ ಚಿತ್ರೀಕರಣಕ್ಕೊಂದು ಸಿನಿಮಾತಂಡ ರೊಮೇನಿಯಾಗೆ ತೆರಳಿತ್ತು. 

ತೀವ್ರ ಶೀತ ವಾತಾವರಣದಲ್ಲಿ ಹಾಡಿನ ಮಳೆಯ ದೃಶ್ಯದ ಚಿತ್ರೀಕರಣ ಮಾಡಲಾಗುತ್ತಿತ್ತು ಎನ್ನುವ ಮಾಹಿತಿ ತಿಳಿದು ಬಂದಿದೆ. ಸುಮಾರು ಮೈನೆಸ್ 7 ಡಿಗ್ರಿ ತಾಪಮಾನದಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು ತೀವ್ರ ಜ್ವರದ ಕಾರಣ ಮೂಗಿನಲ್ಲಿ ಜ್ವರ ಬರುತ್ತಿತ್ತು ಎನ್ನಲಾಗಿದೆ. ಸದ್ಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಹಿಮಾಂಶಿ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಪಂಜಾಬಿ ಗಾಯಕಿ ಮತ್ತು ನಟಿ ಜೀತ್ ಜಾಂಗೆ ದಹಾನ್, ಸದ್ದಾ ಹಕ್, ಲೆದರ್ ಲೈಫ್, ಅಫ್ಸರ್ ಸೇರಿದಂತೆ ಅನೇಕ ಸಿನಿಮಾಗಳ ಮೂಲಕ ಖ್ಯಾತಿಗಳಿಸಿದ್ದಾರೆ.  

ಅಂದಹಾಗೆ ಹಿಮಾಂಶಿ ಬಿಗ್ ಬಾಸ್ ಮೂಲಕ ಮತ್ತಷ್ಟು ಖ್ಯಾತಿಗಳಿಸಿದ್ದರು. ಬಿಗ್ ಬಾಸ್ 13ನಲ್ಲಿ ಭಾಗಿಯಾಗಿದ್ದ ಹಿಮಾಂಶಿ ಶೆಹನಾಜ್ ಗಿಲ್ ಜೊತೆ ಸಿಕ್ಕಾಪಟ್ಟೆ ಕಿತ್ತಾಡಿದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹಿಮಾಂಶಿ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್‌ನಲ್ಲಿ ಪ್ರೀತಿ-ಪ್ರೇಮದ ವಿಚಾರಕ್ಕೆ ಹಿಮಾಂಶಿ ಸುದ್ದಿಯಾಗಿದ್ದರು. ಸಹ ಸ್ಪರ್ಧಿ ಆಸಿಮ್ ರಿಯಾಜ್ ಜೊತೆ ಡೇಟಿಂಗ್ ನಲ್ಲಿದ್ದರು. ಈಗಲೂ ಸಹ ಇಬ್ಬರೂ ಒಟ್ಟಿಗೆ ಹೆಚ್ಚಾಗಿ ಸಮಯ ಕಳೆಯುತ್ತಾರೆ ಮತ್ತು ಇಬ್ಬರೂ ಸದ್ಯದಲ್ಲೇ ಮದುವೆ ಸಹ ಆಗಲಿದ್ದಾರೆ ಎನ್ನಲಾಗಿದೆ. 

ಬಿಗ್ ಬಾಸ್‌ ಸ್ಪರ್ಧಿ ಕಾರಿನ ಮೇಲೆ ದಾಳಿ; ಕಾರಿನ ಟೈಯರ್‌ ಪೀಸ್ ಪೀಸ್

ಕಾರಿನ ಮೇಲೆ ದಾಳಿ 

ಹಿಮಾಂಶಿ ಸದಾ ಸುದ್ದಿಯಲ್ಲಿರುವ ನಟಿ. ಎರಡು ವರ್ಷಗಳ ಹಿಂದೆ ಹಿಮಾಂಶಿ ಕಾರಿನ ಮೇಲೆ ದಾಳಿ ನಡೆದಿತ್ತು. ಈ ಬಗ್ಗೆ ಅವರೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಚಿತ್ರೀಕರಣದಲ್ಲಿ ಪಾಲ್ಗೊಂಡ ಹಿಮಾಂಶಿ ಚಂಡೀಗಡಕ್ಕೆ ತೆರಳಿದ್ದರು. ಎಷ್ಟು ಫೇಮ್‌ ಇದ್ಯೋ  ಅಷ್ಟೇ ಹೇಟರ್ಸ್‌ ಹೊಂದಿರುವ ಹಿಮಾಂಶಿ ಕಾರಿನ ಮೇಲೆ ರಾತ್ರೋರಾತ್ರಿ ದಾಳಿ ಮಾಡಲಾಗಿತ್ತು. 'ರಾತ್ರಿ ಯಾರೋ ನನ್ನ ಕಾರಿನ ಟೈಯರ್ ಹರಿದಿದ್ದಾರೆ. ನಾನು ಶೂಟಿಂಗ್‌ಗೆಂದು ಚಂಡೀಗಡದ ಹಳ್ಳಿಯೊಂದರಲ್ಲಿ ಇರುವೆ. ನೀವು ನಿಮ್ಮನ್ನು ಏನೆಂದುಕೊಂಡಿದ್ದೀರಾ? ನನ್ನ ಮೇಲೆ ಸುಲಭವಾಗಿ ದಾಳಿ ಮಾಡಬಹುದು ಅಂತ ನೀವು ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ . ಇಂಥ ಸಣ್ಣಪುಟ್ಟ ನೀಚ ಬುದ್ಧಿಗಳು ಮಾಡುವ ಕೆಲಸದಿಂದ ನನ್ನ ಕಾರ್ಯಕ್ಕೆ ಯಾವುದೇ ರೀತಿಯ ಅಡ್ಡಿ ಮಾಡಲು ಸಾಧ್ಯವಿಲ್ಲ' ಎಂದು ಬರೆದುಕೊಂಡಿದ್ದರು.

Follow Us:
Download App:
  • android
  • ios