ಹಿಂದಿ ಬಿಗ್ ಬಾಸ್ ಸೀಸನ್ 15ರ ಸ್ಪರ್ಧಿ ಹಿಮಾನ್ಶಿ ಖುರಾನಾ  ಕಿರುತೆರೆಯಲ್ಲಿ  ಪಾಪ್ಯೂಲರ್ ನಟಿಯಾಗಿದ್ದಾರೆ. ಆಕೆ ಎಲ್ಲೇ ಹೋದರು ಏನೇ ಮಾಡಿದರು ಸುದ್ದಿಯಾಗುತ್ತದೆ. ಇನ್ನು ಲಾಕ್‌ಡೌನ್‌ನಲ್ಲಂತೂ ಕೇಳೊದೇ ಬೇಡ ನೆಚ್ಚಿನ ನಟಿಯ ವರ್ಕೌಟ್, ಕುಕ್ಕಿಂಗ್ ಮತ್ತು ಹಳೆ ಟ್ರ್ಯಾವಲ್ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿತ್ತು. 

ಇನ್ನು ಲಾಕ್‌ಡೌನ್‌ ಮುಗಿದ ನಂತರ ಚಿತ್ರೀಕರಣದಲ್ಲಿ ಪಾಲ್ಗೊಂಡ ಹಿಮಾನ್ಶಿ ಚಂಡೀಗಡಕ್ಕೆ ತೆರಳಿದ್ದಾರೆ. ಎಷ್ಟು ಫೇಮ್‌ ಇದ್ಯೋ  ಅಷ್ಟೇ ಹೇಟರ್ಸ್‌ ಹೊಂದಿರುವ ಹಿಮಾನ್ಶಿ ಕಾರಿನ ಮೇಲೆ ರಾತ್ರೋರಾತ್ರಿ ದಾಳಿ ಮಾಡಲಾಗಿದೆ. ಇದರ ಬಗ್ಗೆ ಹಿಮಾನ್ಶಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಏನು ಮಾಡೋಕೆ ಆಗಲ್ಲ:

'ನಿನ್ನೆ ರಾತ್ರಿ ಯಾರೋ ನನ್ನ ಕಾರಿನ ಟೈಯರ್ ಹರಿದಿದ್ದಾರೆ. ನಾನು ಶೂಟಿಂಗ್‌ಗೆಂದು ಚಂಡೀಗಡದ ಹಳ್ಳಿಯೊಂದರಲ್ಲಿ ಇರುವೆ. ನೀವು ನಿಮ್ಮನ್ನು ಏನೆಂದುಕೊಂಡಿದ್ದೀರಾ? ನನ್ನ ಮೇಲೆ ಸುಲಭವಾಗಿ ದಾಳಿ ಮಾಡಬಹುದು ಅಂತ ನೀವು ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ . ಇಂಥ ಸಣ್ಣಪುಟ್ಟ ನೀಚ ಬುದ್ಧಿಗಳು ಮಾಡುವ ಕೆಲಸದಿಂದ ನನ್ನ ಕಾರ್ಯಕ್ಕೆ ಯಾವುದೇ ರೀತಿಯ ಅಡ್ಡಿ ಮಾಡಲು ಸಾಧ್ಯವಿಲ್ಲ' ಎಂದು ಬರೆದುಕೊಂಡಿದ್ದಾರೆ.

ಲವ್‌ ಸ್ಟೋರಿ:

ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಬಾಸ್‌ನಲ್ಲಿ ಕಾಣಿಸಿಕೊಂಡ ಹಿಮಾನ್ಶಿ, ಅಲ್ಲಿದ್ದ ಮಾಡಲ್ ಕಮ್ ನಟ ಆಸಿಂ ಜೊತೆ ವಿಶೇಷವಾದ ಬಾಂಡ್‌ ಬೆಳೆಯುತ್ತದೆ. ರಿಯಾಲಿಟಿ ಶೋ ಅಂತ್ಯಗೊಳ್ಳುವಷ್ಟರಲ್ಲಿ ಇಬ್ಬರು ಪ್ರೀತಿಸಲು ಆರಂಭಿಸುತ್ತಾರೆ. ಶೋ ನಂತರವೂ ಇಬ್ಬರು ಅನೇಕ ಮ್ಯೂಸಿಕ್‌ ಆಲ್ಬಂನಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಕೆಲ ಮಾಧ್ಯಮಗಳು ಹಿಮಾನ್ಶಿಯನ್ನು ಅಸೀಂ ಗರ್ಲ್‌ಫ್ರೆಂಡ್‌ ಎಂದು ಉದ್ದೇಶಿಸಿ ಮಾತನಾಡಲು ಆರಂಭಿಸಿದರು. ಈ ಬಗ್ಗೆ ಟ್ಟಿಟ್ಟರ್‌ನಲ್ಲಿ ಹಿಮಾನ್ಶಿ ಪ್ರತಿಕ್ರಿಯೆ ನೀಡಿದ್ದಾರೆ.

 

 
 
 
 
 
 
 
 
 
 
 
 
 

#khyaalrakhyakar @desimusicfactory #asimriaz #himanshikhurana

A post shared by Himanshi Khurana 👑 (@iamhimanshikhurana) on Jun 19, 2020 at 3:55am PDT

'ಯಾಕೆ ಎಲ್ಲರೂ ನನ್ನನ್ನು ಅಸಿಂ ಗರ್ಲ್‌ಫ್ರೆಂಡ್‌ ಎಂದು ಉದೇಶಿಸುತ್ತೀರಾ ಅದರ ಬದಲು ಅಸಿಂ ನನ್ನ ಬಾಯ್‌ಫ್ರೆಂಡ್‌ ಎಂದು ಹೇಳಿ. ನನಗೆ ಗೊತ್ತು ಇದು ಕಳಂಕ ತರುವ ವಿಚಾರವಲ್ಲ ಆದರೆ ಹೆಣ್ಣುಮಕ್ಕಳು ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಅವರಿಗೂ ಅವರದೇ ಆದ ವಿಭಿನ್ನ ವ್ಯಕ್ತಿತ್ವ ಇರುತ್ತದೆ. ಯಾಕೆ ಯಾವಾಗಲೂ  ಗಂಡಸರ ಹೆಸರು ಮೊದಲಿರಬೇಕು?' ಎಂದು ನೆಟ್ಟಿಗರನ್ನು ಪ್ರಶ್ನಿಸಿದ್ದರು.