'ಮಿರ್ಜಾಪುರ್' ನಟನ ಜೊತೆ ತಮನ್ನಾ ಡೇಟಿಂಗ್; ಹೊಸ ವರ್ಷಕ್ಕೆ ತಬ್ಬಿ ಕಿಸ್ ಮಾಡಿದ ಮಿಲ್ಕಿ ಬ್ಯೂಟಿ ವಿಡಿಯೋ ವೈರಲ್
ಟಾಲಿವುಡ್ ಸ್ಟಾರ್ ತಮನ್ನಾ ಡೇಟಿಂಗ್ ವಿಚಾರ ವೈರಲ್ ಆಗಿದೆ. ಹೊಸ ವರ್ಷದ ವಿಡಿಯೋ ನೋಡಿ ಅಭಿಮಾನಿಗಳು ಶಾಕ್ ಆದ್ದಾರೆ.
ಉತ್ತರ ಭಾರತ ಮೂಲದ ಸೌತ್ ಸ್ಟಾರ್ ತಮನ್ನಾ ಲವ್ ಸ್ಟೋರಿ ಸದ್ಯ ವೈರಲ್ ಆಗಿದೆ. ಮಿಲ್ಕಿ ಬ್ಯೂಟಿ ಲವ್, ಡೇಟಿಂಗ್ ಗಾಸಿಪ್ ವಿಚಾರಗಳಿಂದ ತುಂಬಾ ಇದ್ದರು. ಇದುವರೆಗೂ ಯಾವ ಸ್ಟಾರ್ ಕಲಾವಿದರ ಜೊತೆಯೂ ತಮನ್ನಾ ಹೆಸರು ಥಳಕು ಹಾಕಿಕೊಂಡಿರಲಿಲ್ಲ. ಆದೀಗ ಹೊಸ ವರ್ಷದ ವಿಡಿಯೋ ತಮನ್ನಾ ಲವ್ ಸ್ಟೋರಿಯ ಬಗ್ಗೆ ಸುಳಿವು ನೀಡಿದೆ. ಮಿಲ್ಕಿ ಬ್ಯೂಟಿ ಸಂಭ್ರಮಾಚರಣೆ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಹೊಸ ವರ್ಷ ಆಚರಣೆ ಮೂಲಕ ತಮನ್ನಾ ತನ್ನ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅಂದಹಾಗೆ ಸೌತ್ ಸ್ಟಾರ್ ತಮನ್ನಾ ಡೇಟಿಂಗ್ ಮಾಡುತ್ತಿರುವ ಮಿರ್ಜಾಪುರ್ ಖ್ಯಾತಿಯ ನಟ ಮತ್ಯಾರು ಅಲ್ಲ ವಿಜಯ್ ವರ್ಮ. ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ಒಟ್ಟಿಗೆ ಹೊಸ ವರ್ಷ ಆಚರಿಸಿದ್ದಾರೆ. ಇಬ್ಬರೂ ಗೋವಾದಲ್ಲಿ 2023ರನ್ನು ಸ್ವಾಗತಿಸಿದ್ದಾರೆ.
ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮನ್ನಾ ಪಾರ್ಟಿಯಲ್ಲಿ ಪಿಂಕ್ ಬಣ್ಣದ ಡ್ರೆಸ್ ಧರಿಸಿದ್ದರು. ವಿಜಯ್ ವರ್ಮಾ ಬಿಳಿ ಬಣ್ಣದ ಶರ್ಟ್ ಧರಿಸಿದ್ದರು. ಇಬ್ಬರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ತಮನ್ನಾ ಮತ್ತು ವಿಜಯ್ ವರ್ಮಾ ಆಗಗಾ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿದ್ದರು. ಆದರೆ ಇಬ್ಬರೂ ಡೇಟಿಂಗ್ ಮಾಡುತ್ತಿರುದ್ದಾರೆ ಎನ್ನುವ ಸುಳಿವು ಎಲ್ಲೂ ನೀಡಿರಲಿಲ್ಲ. ಇದೀಗ ಹೊಸ ವರ್ಷ ಒಟ್ಟಿಗೆ ಆಚರಿಸಿ ಸುದ್ದಿಯಾಗಿದ್ದಾರೆ.
ಆಕಾಶದಲ್ಲಿ ಪಟಾಕಿಗಳನ್ನು ಸಿಡಿಸುವಾಗ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಆಗ ವಿಜಯ್ ಮತ್ತು ತಮನ್ನಾ ಇಬ್ಬರೂ ತಬ್ಬಿಕೊಂಡು ಸಂಭ್ರಮಿಸಿದ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಆದರೆ ಇಬ್ಬರೂ ಯಾವುದೇ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿಲ್ಲ.
ತಮ್ಮ ಮತ್ತು ವಿಜಯ್ ಫೋಟೋಗಳಿಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ತಮನ್ನಾ ಮತ್ತು ವಿಜಯ್ ಜೋಡಿಗೆ ವಿಶ್ ಮಾಡುತ್ತಿದ್ದಾರೆ. ವಿಜಯ್ ಎಷ್ಟು ಲಕ್ಕಿ ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ನೀವು ತುಂಬಾ ಅದೃಷ್ಟವಂತ ವಿಜಯ್ ಎಂದು ಹೇಳುತ್ತಿದ್ದಾರೆ. ಈ ಸುದ್ದಿ ಬಗ್ಗೆ ತಮನ್ನಾ ಮತ್ತು ವಿಜಯ್ ವರ್ಮಾ ಪ್ರತಿಕ್ರಿಯೆ ನೀಡುತ್ತಾರಾ ಕಾದುನೋಡಬೇಕು.
'ಆ' ಟೈಪ್ ಸೀನ್ ಮಾಡಲು ಹುಡುಗರಿಗೆ ನಾಚಿಕೆ; ನಟಿ ತಮನ್ನಾ ಹೇಳಿಕೆಗೆ ಶಾಕ್ ಆದ ನೆಟ್ಟಿಗರು
ನಟಿ ತಮನ್ನಾ 2005ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಹಿಂದಿ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದರು. ಚಾಂದ್ ಸಾ ರೋಷನ್ ಚೆಹ್ರಾ ಸಿನಿಮಾ ಮೂಲಕ ಮೊದಲ ಬಾರಿಗೆ ತರೆಮೇಲೆ ಮಿಂಚಿದರು. ಬಳಿಕ ತೆಲುಗು ಸಿನಿಮಾರಂಗಕ್ಕೆ ಬಂದರು. ನಂತರ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಲಿಯಾದರು. ಈಗಲೂ ಬಹಿಬೇಡಿಕೆಯ ನಟಿಯಾಗಿರುವ ತಮನ್ನಾ ತಮಿಳು, ತೆಲುಗು ಜೊತೆಗೆ ಹಿಂದಿ ಸಿನಿಮಾಗಳನ್ನೂ ಕಾಣಿಸಿಕೊಂಡಿದ್ದಾರೆ. ಸದ್ಯ ಬೋಲ ಶಂಕರ್. ಬರ್ತೊಂದ ಸೀತಕಲಮ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಚಪ್ಪಲಿ ತೆಗೆದಿಟ್ಟು ದೀಪ ಬೆಳಗಿಸಿದ ತಮನ್ನಾ; ದಕ್ಷಿಣ ಭಾರತ ಕಲಿಸಿದ ಪಾಠ ಎಂದ ನೆಟ್ಟಿಗರು
ಇನ್ನು ವಿಜಯ್ ವರ್ಮಾ ಬಗ್ಗೆ ಹೇಳುವುದಾದರೆ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಪದವಿ ಪಡೆದಿದ್ದಾರೆ. 2012 ರಲ್ಲಿ ಚಿತ್ತಗಾಂಗ್ ಚಿತ್ರದ ಮೂಲಕ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದ್ದರು. ಪಿಂಕ್, ಮಾನ್ಸೂನ್ ಶೂಟೌಟ್, ಮಾಂಟೋ, ಗಲ್ಲಿ ಬಾಯ್ ಮತ್ತು ಘೋಸ್ಟ್ ಸ್ಟೋರೀಸ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಜೊತೆಗೆ ಅನೇಕ ವೆಬ್ ಸೀರಿಸ್ ನಲ್ಲಿ ನಟಿಸಿದ್ದಾರೆ. ಮಿರ್ಜಾಪುರ್, ಶಿ ಸೇರಿದಂತೆ ಅನೇಕ ಸೀರಿಸ್ ನಲ್ಲಿ ನಟಿಸಿದ್ದಾರೆ. ಮಿರ್ಜಾಪುರ್ ದೊಡ್ಡ ಮಟ್ಟದಲ್ಲಿ ಖ್ಯಾತಿ ತಂದುಕೊಂಡಿತ್ತು.