ಪತಿ ಧರ್ಮೇಂದ್ರ ನಿಧನದ ನಂತ್ರ ಹೇಮಾ ಮಾಲಿನಿ ಟ್ರೋಲ್ ಆಗಿದ್ದಾರೆ. ಅದಕ್ಕೆ ಕಾರಣ ಅವರ ಆಟಿಟ್ಯೂಡ್. ಕ್ರೀಡಾಪಟುಗಳಿಗೆ ನಗ್ತಾ ಮೆಡಲ್ ನೀಡುವ ಬದಲು ಹೇಮಾ ಮಾಲಿನಿ ಮಾಡಿದ ಕೆಲ್ಸ ಎಲ್ಲರ ಕೋಪಕ್ಕೆ ಕಾರಣವಾಗಿದೆ.
ಬಾಲಿವುಡ್ ಡ್ರೀಮ್ ಗರ್ಲ್ ಹೇಮಾ ಮಾಲಿನಿ (Dream Girl Hema Malini), ಪತಿ ಧರ್ಮೇಂದ್ರ ಅವರನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ನಿಧಾನವಾಗಿ ತಮ್ಮ ನಿತ್ಯದ ಕೆಲಸಕ್ಕೆ ಅವರು ವಾಪಸ್ ಆಗ್ತಿದ್ದಾರೆ. ಸದ್ಯ ಹೇಮಾ ಮಾಲಿನಿ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಜನರು ನಟಿಯನ್ನು ಟ್ರೋಲ್ ಮಾಡ್ತಿದ್ದಾರೆ.
ನಗುವಿಲ್ಲ, ಶುಭಕೋರಿಲ್ಲ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹೇಮಾ ಮಾಲಿನಿ ವೇದಿಕೆ ಮೇಲೆ ನಿಂತಿದ್ದಾರೆ. ಕ್ರೀಡಾಪಟುಗಳಿಗೆ ಅವರು ಮೆಡಲ್ ನೀಡ್ತಿದ್ದಾರೆ. ಸಾಮಾನ್ಯವಾಗಿ ಮೆಡಲ್ ಗೆದ್ದ ಸ್ಪರ್ಧಿಗಳಿಗೆ ವಿಶ್ ಮಾಡೋದು, ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಬಂದ ಗಣ್ಯರ ಕರ್ತವ್ಯ. ನಗ್ತಾ ಮೆಡಲ್ ನೀಡಿ, ವಿಶ್ ಮಾಡಿದ್ರೆ ಸ್ಪರ್ಧಿಗಳ ಖುಷಿ ಡಬಲ್ ಆಗುತ್ತೆ. ಆದ್ರೆ ಹೇಮಾ ಮಾಲಿನಿ ಮುಖದಲ್ಲಿ ಒಂದೇ ಒಂದು ಸಣ್ಣ ನಗು ಇಲ್ಲ. ಯಾವುದೇ ವಿಜೇತರಿಗೆ ಹೇಮಾ ಮಾಲಿನಿ ಶುಭಕೋರಿಲ್ಲ. ನಿರ್ವಾಹಕರು ನೀಡಿದ ಮೆಡಲ್, ಪ್ರಮಾಣ ಪತ್ರವನ್ನು ಮನಸ್ಸಿಲ್ಲದ ಮನಸ್ಸಿನಲ್ಲಿ, ಕೋಪದ ಮುಖದಲ್ಲಿ ವಿಜೇತರಿಗೆ ನೀಡ್ತಿದ್ದಾರೆ.
ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ 8 ಗಂಟೆ ಆತನ ಜೊತೆಗಿದ್ದೆ , ಅನುಭವ ಬಿಚ್ಚಿಟ್ಟ ನಟಿ ಪಾರ್ವತಿ
ಈ ವಿಡಿಯೋ ಸಂಸದೀಯ ಕ್ಷೇತ್ರವಾದ ಮಥುರಾದಲ್ಲಿ ನಡೆದ ಕ್ರೀಡಾಕೂಟ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅಂತ ಊಹಿಸಲಾಗ್ತಿದೆ. ಕ್ರೀಡಾಪಟುಗಳನ್ನು ಗೌರವಿಸುವ ಮನಸ್ಸಿಲ್ಲ ಅಂದ್ರೆ ರಾಜಕೀಯಕ್ಕೆ ಏಕೆ ಬರಬೇಕು, ಸಂಸದರ ಪಟ್ಟ ಏಕೆ ಬೇಕು ಎಂದು ಜನರು ಪ್ರಶ್ನೆ ಮಾಡಿದ್ದಾರೆ. ಕ್ರೀಡಾಪಟುಗಳಿಗೆ ಇದು ವಿಶೇಷ. ಅವರ ಜೀವನದ ಒಂದು ದೊಡ್ಡ ಸಂಭ್ರಮ. ಅವರ ಕೈ ಕುಲುಕಿ, ಶುಭಕೋರುವುದು ಅತಿಥಿಯಾಗಿ ಬಂದಿರುವ ಹೇಮಾ ಮಾಲಿನಿ ಕರ್ತವ್ಯ ಎಂಬುದು ನೆಟ್ಟಿಗರ ಆರೋಪ.
ಪತಿ ನಿಧನದಿಂದ ಹೇಮಾ ಮಾಲಿನಿ ದುಃಖದಲ್ಲಿದ್ದಾರೆ, ಅದರಿಂದ ಹೊರ ಬರಲು ಸ್ವಲ್ಪ ಸಮಯ ಬೇಕು ಅಂತ ಕೆಲವರು ಹೇಮಾ ಮಾಲಿನಿ ಪರ ಮಾತನಾಡಿದ್ರೆ ಮತ್ತೆ ಕೆಲವರು, ದುಃಖದಲ್ಲಿರುವಾಗ ಕಾರ್ಯಕ್ರಮಕ್ಕೆ ಬರುವ ಅಗತ್ಯವೇನಿತ್ತು, ಮನೆಯಲ್ಲಿ ಕುಟುಂಬದ ಜೊತೆ ಇರ್ಬೇಕಿತ್ತು ಎನ್ನುವ ಅಭಿಪ್ರಾಯವನ್ನು ಜನರು ವ್ಯಕ್ತಪಡಿಸಿದ್ದಾರೆ.
150- 200 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದ ಪ್ರಭಾಸ್ ರಾಜಾ ಸಾಬ್‌ಗೆ ಪಡೆದಿದ್ದು ಇಷ್ಟು ಕಡಿಮೆನಾ?
ಹೇಮಾ ಮಾಲಿನಿ ವಿಡಿಯೋ ವೈರಲ್ ಆಗ್ತಿರೋದು ಇದೇ ಮೊದಲಲ್ಲ. ಹೇಮಾ ಮಾಲಿನಿ ಹಾಗೂ ಜಯಾ ಬಚ್ಚನ್ ಇಬ್ಬರನ್ನೂ ನೆಟ್ಟಿಗರು ಆಗಾಗ ಟ್ರೋಲ್ ಮಾಡ್ತಿರುತ್ತಾರೆ. ಪಾಪರಾಜಿಗಳನ್ನು ಕಂಡ್ರೆ ಜಯಾ ಬಚ್ಚನ್ ಉರಿದು ಬೀಳ್ತಾರೆ. ಹೇಮಾ ಮಾಲಿನಿ ಕೂಡ ಎಲ್ಲರ ಜೊತೆ ಸಲುಗೆಯಿಂದ ಮಾತನಾಡೋದಿಲ್ಲ. ಈ ಹಿಂದೆ ಅಭಿಮಾನಿಯೊಬ್ಬರು ಅವರ ಹೆಗಲ ಮೇಲೆ ಕೈ ಹಾಕಲು ಮುಂದಾಗಿದ್ರು. ಆಗ ಹೇಮಾ ಮಾಲಿನಿ ಅವರ ಕೈ ತಳ್ಳಿದ್ರು. ಇದು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಹೇಮಾ ಮಾಲಿನಿಗೆ ಈಗ 77 ವರ್ಷ ವಯಸ್ಸು. ಈಗ್ಲೂ ಯುವತಿಯರನ್ನು ನಾಚಿಸುವ ಸೌಂದರ್ಯ ಅವರಲ್ಲಿದೆ. ಸಿನಿಮಾ ನಂತ್ರ ರಾಜಕೀಯ ಜೀವನಕ್ಕೆ ಕಾಲಿಟ್ಟ ಹೇಮಾ ಮಾಲಿನಿ ಸಂಸದೆಯಾಗಿದ್ದಾರೆ. ನವೆಂಬರ್ 24, 2025ರಲ್ಲಿ ಅವರು ತಮ್ಮ ಪತಿ 89 ವರ್ಷದ ಧರ್ಮೇಂದ್ರ ಅವರನ್ನು ಕಳೆದುಕೊಂಡಿದ್ದಾರೆ. ಇಡೀ ಕುಟುಂಬ ಧರ್ಮೇಂದ್ರ ಅವರನ್ನು ಕಳೆದುಕೊಂಡ ನೋವಿನಲ್ಲಿದೆ. ಧರ್ಮೇಂದ್ರ ನಿಧನದ ನಂತ್ರ ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಅವರ ಮೊದಲ ಪತ್ನಿ ಮಕ್ಕಳ ಮಧ್ಯೆ ಗಲಾಟೆ ನಡೆಯುತ್ತಿದೆ ಎಂಬ ಚರ್ಚೆ ಹುಟ್ಟಿಕೊಂಡಿದೆ. ಈ ಬಗ್ಗೆ ಹೇಮಾಮಾಲಿನಿ ಸ್ಪಷ್ಟನೆ ಕೂಡ ನೀಡಿದ್ದಾರೆ. ಸನ್ನಿ ಡಿಯೋಲ್ ಹಾಗೂ ಬಾಬಿ ಡಿಯೋಲ್ ಜೊತೆ ಮೊದಲಿನಿಂದಲೂ ಸಂಬಂಧ ಚೆನ್ನಾಗಿತ್ತು, ಈಗ್ಲೂ ಇದೆ ಎಂದು ಹೇಮಾಮಾಲಿನಿ ಹೇಳಿಕೆ ನೀಡಿದ್ದಾರೆ.


