ಸೆರಗಿನ ಪಿನ್​ ತೆಗೆಯುವಂತೆ ನಿರ್ದೇಶಕ ಹೇಳಿದ್ರು: ಆ ದಿನ ನೆನಪಿಸಿಕೊಂಡ ನಟಿ ಹೇಮಾ ಮಾಲಿನಿ

70ರ ದಶಕದಲ್ಲಿ ನಿರ್ದೇಶಕರೊಬ್ಬರು ತಮ್ಮ ಸಾರಿಯ ಸೆರಗಿನ ಪಿನ್​ ತೆಗೆಯುವಂತೆ ಹೇಳಿದ ಘಟನೆಯನ್ನು ನಟಿ ಹೇಮಾ ಮಾಲಿನಿ ನೆನಪಿಸಿಕೊಂಡರು.
 

Hema Malini recalls director asking her to remove saree pin during a scene suc

ಬಾಲಿವುಡ್​ನ ಡ್ರೀಮ್​ಗರ್ಲ್​ಎಂದಾಕ್ಷಣ ನೆನಪಿಗೆ ಬರುವುದು ನಟಿ ಹೇಮಾ ಮಾಲಿನಿ. ಸಂಸದೆಯಾಗಿ, ನಟಿಯಾಗಿ ಹೇಮಾ ಮಾಲಿನಿ ಅವರದ್ದು ಬಹುದೊಡ್ಡ ಪಾತ್ರ. ಇವರು  ತಮ್ಮ ಚಲನಚಿತ್ರಗಳ ಹೊರತಾಗಿ ಆಕರ್ಷಕ ನೋಟಕ್ಕೆ ಹೆಸರುವಾಸಿಯಾಗಿದ್ದಾರೆ. ಇವರ 'ಡ್ರೀಮ್ ಗರ್ಲ್' (Dream Girl) ಪಟ್ಟಕ್ಕೆ ಬಹುಶಃ ಯಾರೂ ಏರಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ವಯಸ್ಸು 74 ಆದರೂ ಇಂದಿಗೂ ಚಾರ್ಮ್​ ಉಳಿಸಿಕೊಂಡಿದ್ದಾರೆ ನಟಿ. 1968ರಲ್ಲಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದ ನಟಿ,  ಬಾಲಿವುಡ್‌ನಲ್ಲಿ 'ಸಪ್ನೋ ಕಾ ಸೌದಾಗರ್' ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅದರ ನಂತರ, 'ಸೀತಾ ಔರ್ ಗೀತಾ', 'ಶೋಲೆ', 'ಸತ್ತೆ ಪೆ ಸತ್ತಾ', 'ಧರ್ಮಾತ್ಮ', 'ಬಾಘವಾನ್' ನಲ್ಲಿ ಕಾಣಿಸಿಕೊಂಡರು ಮತ್ತು ಅನೇಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. 50ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಹೇಮಾ ಮಾಲಿನಿ ಅವರು ಹಲವಾರು ಬ್ಲಾಕ್​ಬಸ್ಟರ್​ ಚಿತ್ರಗಳನ್ನು ನೀಡಿದ್ದಾರೆ. 

ಸದ್ಯ ನಟಿ  ಚಿತ್ರರಂಗಕ್ಕಿಂತ  ರಾಜಕೀಯ ಜಗತ್ತಿನಲ್ಲಿ ಫೇಮಸ್​ ಆಗುತ್ತಿದ್ದಾರೆ. ಸಂಸದೆಯಾಗಿ (MP) ಹೆಸರು ಮಾಡುತ್ತಿದ್ದಾರೆ. ಹೇಮಾ ಅವರು 1960 ರ ದಶಕದಲ್ಲಿ ತಮ್ಮ ನಟನೆಗೆ ಪಾದಾರ್ಪಣೆ ಮಾಡಿದರು ಮತ್ತು ಐದು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ ಅವರು 100 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2004ರಲ್ಲಿ ಅವರು ಭಾರತೀಯ ಜನತಾ ಪಕ್ಷದೊಂದಿಗೆ ಅಧಿಕೃತವಾಗಿ ರಾಜಕೀಯಕ್ಕೆ ಸೇರಿದರು ಮತ್ತು ಪ್ರಸ್ತುತ ಅವರು ಮಥುರಾ ಕ್ಷೇತ್ರದಿಂದ ಲೋಕಸಭೆಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಟನೆಯಿಂದ ದೂರವಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಇತ್ತೀಚೆಗೆ ಅವರು ಕರಣ್ ಡಿಯೋಲ್ ಅವರ ಮದುವೆಯಲ್ಲಿ ಭಾಗವಹಿಸಿದ್ದರು. ಈಗ ಹೇಮಾ ಮಾಲಿನಿ ಅವರು ತಮ್ಮ ಸಂದರ್ಶನವೊಂದರ ಮೂಲಕ ಹೈಲೈಟ್​ ಆಗಿದ್ದಾರೆ. ಇದಕ್ಕೆ ಕಾರಣ,  ನಿರ್ದೇಶಕರೊಬ್ಬರು (Director) ಒಂದು ದೃಶ್ಯಕ್ಕಾಗಿ ತಮ್ಮ ಸೀರೆಯ ಸೆರಗನ್ನು ಜಾರಿಸಲು ಹೇಳಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.  ಈಗಿನ ಬಹುತೇಕ ನಟಿಯರು ಸೆರಗು ಜಾರಿಸುವುದಷ್ಟೇ ಅಲ್ಲ, ಅದಕ್ಕಿಂತಲೂ ಹೆಚ್ಚಿನ ದೃಶ್ಯಗಳನ್ನು ಲೀಲಾಜಾಲವಾಗಿ ಯಾವುದೇ ಅಳುಕು ಇಲ್ಲದೇ ಮಾಡುತ್ತಾರೆ. ಆದರೆ 70ರ  ದಶಕದ ಸನ್ನಿವೇಶವೇ ಬೇರೆ. ಯುವತಿಯೊಬ್ಬಳು ಚಿತ್ರರಂಗಕ್ಕೆ ಪ್ರವೇಶಿಸುತ್ತಾಳೆ ಎಂದರೆನೇ ಮೂಗು ಮುರಿಯುತ್ತಿದ್ದ ಆ ದಿನಗಳಲ್ಲಿ ಇಂಥ ದೃಶ್ಯಗಳನ್ನು ನೆನಪಿಸಿಕೊಳ್ಳುವುದೂ ಕಷ್ಟವಾಗಿತ್ತು. ಆದರೆ ತಾವು ಅಂಥ ಸನ್ನಿವೇಶವನ್ನು ಎದುರಿಸಿರುವುದಾಗಿ ನಟಿ ಹೇಳಿದ್ದಾರೆ. 

ಹೇಮಾ ಮಾಲಿನಿ- ಜೀತೇಂದ್ರ ಮದ್ವೆ ತಪ್ಸಿ ತಾವೇ ತಾಳಿ ಕಟ್ಟಿದಾಗ ಧರ್ಮೇಂದ್ರ ಫುಲ್ ಟೈಟ್!
  
ಅದು 1978ರಲ್ಲಿ ಬಿಡುಗಡೆಗೊಂಡಿದ್ದ 'ಸತ್ಯಂ ಶಿವಂ ಸುಂದರಂ' (Satya Shivam Surdaram) ಚಿತ್ರದ ದೃಶ್ಯ. ಈ ಚಿತ್ರದ ಆಫರ್‌ ಇಟ್ಟು ರಾಜ್ ಕಪೂರ್ ಅವರು ತಮ್ಮ ಬಳಿ ಬಂದಿದ್ದರು ಎಂಬುದನ್ನು ಹೇಮಾ ಮಾಲಿನಿ ನೆನಪಿಸಿಕೊಂಡಿದ್ದಾರೆ.  'ಅವರು ನನ್ನ ಬಳಿ ಬಂದು ನೀವು ಮಾಡದ ಚಿತ್ರವಿದೆ, ಈ ಚಿತ್ರವನ್ನು ಮಾಡಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದರು. ಆದರೆ ಆ ಚಿತ್ರದ ಕಥೆ ಕೇಳಿದ ಮೇಲೆ ನನ್ನ ತಾಯಿ ಕೂಡ ಅದನ್ನು ನಿರಾಕರಿಸಿದ್ದರು. ಆ ಚಿತ್ರದಲ್ಲಿ ಜೀನತ್​ ಅಮಾನ್​ ನಟಿಸಿದರು. ಚಿತ್ರವು ಬ್ಲಾಕ್​ಬಸ್ಟರ್​ ಆಯಿತು ಎಂದು ಹೇಳಿದ ಹೇಮಾ ಮಾಲಿನಿಯವರು (Hema Malini), ಪರಿಸ್ಥಿತಿ ಹೀಗಿರುವಾಗ ಚಿತ್ರವೊಂದರಲ್ಲಿ ತಮ್ಮ ಸೀರೆಯ ಸೆರಗನ್ನು ಜರುಗಿಸುವಂತೆ ನಿರ್ದೇಶಕರು ಹೇಳಿದ ಘಟನೆಯನ್ನು ನೆನಪಿಸಿಕೊಂಡರು. 

 ನಿರ್ದೇಶಕರ ಹೆಸರನ್ನು ಹೇಳದ ನಟಿ, ಆ ಚಿತ್ರದ ಶೂಟಿಂಗ್​ ವೇಳೆ  ನಾನು ಉಟ್ಟಿದ್ದ ಸೀರೆಯ ಪಿನ್  ಅನ್ನು ತೆಗೆದುಹಾಕುವಂತೆ ಹೇಳಲಾಯಿತು. ನಾನು ಸೀರೆಯ ಸೆರಗಿಗೆ ಸದಾ ಪಿನ್​ ಹಾಕಿಕೊಂಡೇ ಇರುತ್ತಿದ್ದೆ. ಆದರೆ 74 ವರ್ಷದ ಆ ನಿರ್ದೇಶಕ ಸೆರಗಿನ ಪಿನ್​ ತೆಗೆಯುವಂತೆ ಹೇಳಿದರು. ಆದರೆ ಹಾಗೆ ಮಾಡಿದರೆ ಸೆರಗು ಜಾರುತ್ತದೆ ಎಂದೆ. ನಮಗೂ ಅದೇ ಬೇಕು ಎಂದ ಆ ನಿರ್ದೇಶಕ ಇಂಥ ಸೀನ್​ ಇರುವ ದೃಶ್ಯ  ಚಿತ್ರೀಕರಿಸಲು ಬಯಸಿದ್ದರು ಎಂದು ನೆನಪಿಸಿಕೊಂಡರು. ಆದರೆ ನಂತರ ತಾವು ಯಾವ ರೀತಿಯಲ್ಲಿ ಅದಕ್ಕೆ ರಿಸ್​ಪಾಂಡ್​​ ಮಾಡಿರುವ ಬಗ್ಗೆ ನಟಿ ಹೇಳಲಿಲ್ಲ. ಇಂದಿನ ಚಲನಚಿತ್ರ ನಿರ್ಮಾಪಕರು ತಮ್ಮ ಸಿನಿಮಾ ನಟಿಯರನ್ನು ಚೆನ್ನಾಗಿ ಕಾಣಬೇಕು ಎಂದು ಬಯಸುತ್ತಾರೆ. ಆದರೆ ಆಗಿನ ಪರಿಸ್ಥಿತಿ ಬೇರೆಯೇ ಆಗಿತ್ತು. ಆ ದಿನಗಳಲ್ಲಿ ಶೂಟಿಂಗ್ ತುಂಬಾ ಚಾಲೆಂಜಿಂಗ್ ಆಗಿರುತ್ತಿತ್ತು ಎಂದಿದ್ದಾರೆ. 

ಹೇಮಾ- ಧರ್ಮೇಂದ್ರ ದಾಂಪತ್ಯದ ರೋಚಕಥೆ; ಡಿವೋರ್ಸ್​ ಕೊಡದೇ ನಡೆದಿತ್ತು ಮದುವೆ!

Latest Videos
Follow Us:
Download App:
  • android
  • ios