ಶಾರುಖ್​ಗೂ ಗೌರಿ, ಆಮೀರ್​ಗೂ ಗೌರಿ! 'ಗೌರಿ'ಗಳೇ ಖಾನ್​ ನಟರಿಗೆ ಯಾಕಿಷ್ಟು ಪ್ರಿಯ? ಬಿಸಿಬಿಸಿ ಚರ್ಚೆ

ನಟ ಆಮೀರ್​ ಖಾನ್​ ಅವರು ತಮ್ಮ ಪ್ರೇಯಸಿ ಗೌರಿ ಅವರನ್ನು ಪರಿಚಯ ಮಾಡಿಸುತ್ತಿದ್ದಂತೆಯೇ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ. ಏನದು?
 

heated discussion on social media as soon as Aamir Khan introduced his new girl friend Gauri suc

​ಸದ್ಯ ಬಾಲಿವುಡ್​ನಲ್ಲಿ ಸಕತ್​ ಸುದ್ದಿಯಾಗ್ತಿರೋ ನಟ ಆಮೀರ್​ ಖಾನ್​. 60ನೇ ವಯಸ್ಸಿನಲ್ಲಿ ಮೂರನೆಯ ಮದುವೆಗೆ ರೆಡಿಯಾಗಿದ್ದಾರೆ ಆಮೀರ್​. ಕುತೂಹಲದ ವಿಷಯ ಏನೆಂದರೆ, ಇವರ ಮೊದಲ ಇಬ್ಬರು ಪತ್ನಿಯರು ಹಾಗೂ ಈಗ ಮದುವೆಯಾಗ ಹೊರಟವರು ಎಲ್ಲರೂ ಹಿಂದೂಗಳೇ. ಮೊದಲ ಪತ್ನಿಯ ಹೆಸರು ರೀನಾ ದತ್ತಾ. 1986 ರಿಂದ 2002ರ ತನಕ ಇವರ ಜೊತೆ ಆಮೀರ್​ ಖಾನ್​ ಸಂಸಾರ ಮಾಡಿದ್ದರೆ, 2005 ರಿಂದ 2021ರ ವರೆಗೆ ಕಿರಣ್​ ರಾವ್​ ಜೊತೆ ಸಂಸಾರ ಮಾಡಿದ್ದರು. ಮಗಳು ಇರಾ ಖಾನ್​ ಮದುವೆಯಾಗಿದೆ. ಮಗ ಜುನೈದ್ ಖಾನ್​ ಕೂಡ ಮದುವೆಗೆ ಸಿದ್ಧರಾಗಿದ್ದಾರೆ. ಇದೀಗ ಆಮೀರ್​ ಖಾನ್​ ಗೌರಿ ಸ್ಪ್ರಾಟ್ ಎನ್ನುವವರ ಜೊತೆ ಮದುವೆಗೆ ಸಿದ್ಧರಾಗಿದ್ದಾರೆ. ಇವರ ಹೆಸರು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣ, ನಟ ಶಾರುಖ್​ ಖಾನ್​ ಅವರ ಪತ್ನಿ ಕೂಡ ಗೌರಿ. ಅವರೀಗ ಗೌರಿ ಖಾನ್​​ ಎಂದೇ ಫೇಮಸ್ಸು. ಆಮೀರ್​ ಖಾನ್​ ಪತ್ನಿ ಕೂಡ ಇನ್ನು ಮುಂದೆ ಗೌರಿ ಖಾನ್​ ಆಗಲಿದ್ದಾರೆ.

ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ಹುಟ್ಟುಹಾಕಿದೆ. ಆಮೀರ್​ ಖಾನ್​ ಮೂರು ಮದುವೆಯೂ ಹಿಂದೂಗಳ ಜೊತೆ. ಅತ್ತ ಶಾರುಖ್​ಗೂ ಹಿಂದೂ ಹುಡುಗಿಯೇ ಬೇಕಾಯ್ತು, ಇನ್ನು ಸೈಫ್​ ಅಲಿ ಖಾನ್​ ಕೂಡ ಇಬ್ಬರು ಹಿಂದೂ ಹುಡುಗಿಯರನ್ನೇ ಮದುವೆಯಾಗಿದ್ದಾರೆ. ಏನಪ್ಪಾ ಇದು ಖಾನ್​ಗಳ ಮಸಲತ್ತು ಎಂದು ಪ್ರಶ್ನಿಸುತ್ತಿದ್ದಾರೆ. ಬಾಲಿವುಡ್​ನ ಖಾನ್​ತ್ರಯರು ಎಂದೇ ಫೇಮಸ್​ ಆದವರು ಶಾರುಖ್​, ಆಮೀರ್ ಮತ್ತು ಸಲ್ಮಾನ್​. ಆದರೆ ಸಲ್ಮಾನ್​ ಖಾನ್​ ಇದಾಗಲೇ ಹಲವು ನಟಿಯರ ಜೊತೆ ಸಂಬಂಧ ಹೊಂದಿದ್ದಾರೆ ಎನ್ನಲಾಗುತ್ತಿದ್ದರೂ ಇನ್ನೂ ಮದುವೆಯಾಗಲಿಲ್ಲ ಎನ್ನುವುದು ಬಿಟ್ಟರೆ ಉಳಿದವರಿಗೆ ಹಿಂದೂ ಹುಡುಗಿಯರೇ ಯಾಕೆ ಬೇಕು ಎನ್ನುವ ಚರ್ಚೆಯನ್ನು ಜಾಲತಾಣದಲ್ಲಿ ಹುಟ್ಟುಹಾಕಲಾಗಿದೆ. 

23 ವರ್ಷಗಳ ಬಳಿಕ ಶಾರುಖ್​ ಪತ್ನಿ ಗೌರಿ ಮತಾಂತರ? ವೈರಲ್​ ಫೋಟೋಗಳ ಹಿಂದೆ ಭಯಾನಕ ಸತ್ಯ!

ಹಿಂದೂ ಸಂಪ್ರದಾಯದಲ್ಲಿ ಮಹಿಳೆಯರನ್ನು ಗೌರಿಗೆ ಹೋಲಿಸಲಾಗುತ್ತದೆ. ಕುತೂಹಲದ ವಿಷಯ ಎಂದರೆ ಶಾರುಖ್ ಮತ್ತು ಆಮೀರ್​ ಇಬ್ಬರಿಗೂ ಗೌರಿಯರೇ ಒಲಿದಿರುವ ಕಾರಣ ಗೌರಿಯರಿಗೆ ಯಾಕಿಷ್ಟು ಡಿಮಾಂಡ್​ ಎನ್ನುವ ತಲೆಬಿಸಿ ಮಾಡಿಕೊಂಡಿದ್ದಾರೆ ಕೆಲವು ನೆಟ್ಟಿಗರು. ಇನ್ನು ಆಮೀರ್ ಖಾನ್​ರವರ ಈ ಮೂರನೆಯ ಭಾವಿ ಪತ್ನಿಯ ಬಗ್ಗೆ ಹೇಳುವುದಾದರೆ, ಇವರಿಬ್ಬರೂ  25 ವರ್ಷಗಳಿಂದ ತಿಳಿದಿದ್ದಾರೆ ಎನ್ನಲಾಗಿದೆ. ಆದರೆ ಲವ್ ಶುರುವಾಗಿ 18 ತಿಂಗಳು ಆಗಿದ್ದು, ಇದೀಗ ಅದನ್ನು ರಿವೀಲ್​ ಮಾಡಿದ್ದದಾರೆ ನಟ. ಅಷ್ಟಕ್ಕೂ ಗೌರಿ ಅವರು ಬೆಂಗಳೂರಿನ ಮಹಿಳೆ. ಸಿನಿಮಾಗಳ ಬಗ್ಗೆ ಅಷ್ಟೇನೂ ಅಟ್ರಾಕ್ಷನ್​ ಇಲ್ಲದಿದ್ದರೂ ಆಮೀರ್​ ಖಾನ್​ರ  ದಿಲ್ ಚಾಹತಾ ಹೈ ಮತ್ತು ಲಗಾನ್ ನೋಡಿ ಸಕತ್​ ಖುಷಿ ಪಟ್ಟಿದ್ದರಂತೆ. ಕಿರಣ್​ ಅವರ ಜೊತೆ ವಿಚ್ಛೇದನದ ಬಳಿಕ ಮಾಜಿ ಪತ್ನಿಯನ್ನು ಆಗಾಗ್ಗೆ ಭೇಟಿಯಾಗುತ್ತಿದ್ದರೂ ಆಮೀರ್​ ಅವರಿಗೆ ಒಬ್ಬ ಸಂಗಾತಿ ಬೇಕು ಎನ್ನಿಸಿದ್ದರಿಂದ ಅವರೂ ಗೌರಿ ಜೊತೆ ಪ್ರೀತಿಗೆ ಬಿದ್ದಿದ್ದಾರೆ.  

"ನಾನು ಯಾರೊಂದಿಗಾದರೂ ಶಾಂತಿಯುತ ಜೀವನ ನಡೆಸಬೇಕೆಂದು ಬಯಸಿದ್ದೆ, ಮತ್ತು ನನಗೆ ಗೌರಿ ಸಿಕ್ಕಳು!" ಎಂದು ನಟ ಹೇಳಿಕೊಂಡಿದ್ದಾರೆ. ಈ ಬಗ್ಗೆಯೂ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇನ್ನು, ಶಾರುಖ್ ಮತ್ತು ಗೌರಿ ಅವರು ಆದರ್ಶ ದಂಪತಿಯೆಂದೇ ಬಿಂಬಿತರಾದವರು. ಅದಕ್ಕಿಂತ ಹೆಚ್ಚಾಗಿ ಏಕಪತ್ನಿವ್ರತಸ್ಥನಾಗಿರುವ ಕಾರಣ ಶಾರುಖ್​ ಬಗ್ಗೆ ಅವರ ಅಭಿಮಾನಿಗಳಿಗೆ ಹೆಮ್ಮೆ ಇದೆ. ಹಿಂದೊಮ್ಮೆ ನಟ,  ನನ್ನ ಮಕ್ಕಳು ಗಾಯತ್ರಿ ಮಂತ್ರ ಹೇಳುತ್ತಾರೆ, ನಾನು ಬಿಸ್ಮಿಲ್ಲಾ ಹೇಳುತ್ತೇನೆ. ಇದೆಲ್ಲವೂ ಓಕೆ. ನನ್ನ ಹಲವಾರು ಮುಸ್ಲಿಂ ಸ್ನೇಹಿತರು ಮನೆಗೆ ಬರುತ್ತಾರೆ. ಅವರೂ ಗಾಯತ್ರಿ ಮಂತ್ರ ಕೇಳುತ್ತಾರೆ. ನಾವು ನಮಾಜ್​ ಮಾಡುವುದನ್ನು ನೋಡುತ್ತಾರೆ. ಕೆಲವೊಮ್ಮೆ ಅದನ್ನು ನಾವು ಸರಿಯಾಗಿ ಮಾಡುವುದೇ ಇಲ್ಲ. ಆ ಸಮಯದಲ್ಲಿ ನನ್ನ ಸ್ನೇಹಿತರು ಸರಿಯಾಗಿ ಹೇಗೆ ಮಾಡುವುದು ಎನ್ನುವುದನ್ನು ಕಲಿಸುತ್ತಾರೆ. ನನ್ನ ಯಾವುದೇ ಸ್ನೇಹಿತರಿಗೂ ನನ್ನ ಬಗ್ಗೆ ಅಸಮಾಧಾನ ಇಲ್ಲ. ನಾನು ಖುರಾನ್​ ಓದುತ್ತೇನೆ. ಅಷ್ಟಕ್ಕೂ ಬೈಬಲ್​, ಗೀತಾ, ಖುರಾನ್​ ಎಲ್ಲವೂ ಒಂದೇ. ಇದಕ್ಕಾಗಿ ಎಲ್ಲರೂ ಬಡಿದಾಡುವುದನ್ನು ನೋಡಿದರೆ ಆಶ್ಚರ್ಯ ಆಗುತ್ತದೆ ಎಂದಿದ್ದರು. 

ಸ್ಮಾರ್ಟ್​ಫೋನ್​ನಿಂದ ಕೆಲ ಕಾಲ ದೂರವಿದ್ದ ಆ ದಿನಗಳು... ರೋಮಾಂಚಕ ಅನುಭವ ಹಂಚಿಕೊಂಡ ಆಮೀರ್​ ಖಾನ್​

Latest Videos
Follow Us:
Download App:
  • android
  • ios