ಆಸ್ಟ್ರೇಲಿಯಾದ ಅದ್ದೂರಿ ಈವೆಂಟ್ ನಲ್ಲಿ ಅಭಿಮಾನಿಗಳನ್ನು ರಂಜಿಸಿದ ಹ್ಯಾರಿ ನಡೆದುಕೊಂಡ ರೀತಿ ಅಚ್ಚರಿ ಮೂಡಿಸಿದೆ.

ಖ್ಯಾತ ಗಾಯಕ, ನಟ, ಗೀತರಚನೆಗಾರ ಹ್ಯಾರಿ ಸ್ಟೈಲ್ಸ್ ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದಾರೆ. ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಹ್ಯಾರಿ ಸ್ಟೈಲ್ಸ್ ಪ್ರತಿಷ್ಠಿತ ಗ್ರ್ಯಾಮಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅನೇಕ ದೇಶಗಳಿಗೆ ತೆರಳಿ ವಿಶ್ವದಾದ್ಯಂತ ಸಂಗೀತ ಕಾರ್ಯಕ್ರಮ ನಡೆಸಿಕೊಡುವ ಹ್ಯಾರಿ ಇತ್ತೀಚೆಗಷ್ಟೆ ಆಸ್ಟ್ರೇಲಿಯಾದಲ್ಲಿ ಸಂಗೀತ ಸಮಾರಂಭ ನಡೆಸಿದ್ದರು. ಅದ್ದೂರಿ ಈವೆಂಟ್ ನಲ್ಲಿ ಅಭಿಮಾನಿಗಳನ್ನು ರಂಜಿಸಿದ ಹ್ಯಾರಿ ನಡೆದುಕೊಂಡ ರೀತಿ ಅಚ್ಚರಿ ಮೂಡಿಸಿದೆ. ಇದ್ದಕ್ಕಿಂದ್ದಂತೆ ಶೂ ಒಳಗೆ ನೀರು ಹಾಕಿ ಕುಡಿಯುವ ಮೂಲಕ ಪ್ರೇಕ್ಷಕರು ದಂಗ್ ಆಗುವಂತೆ ಮಾಡಿದರು. 

ಹ್ಯಾರಿ ಸ್ಟೈಲ್​ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ಅಸಹ್ಯ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ತರಾಟೆ ತೆಗೆದುಕೊಂಡಿದ್ದಾರೆ. ಅಂದಹಾಗೆ ಆಸ್ಟ್ರೇಲಿಯಾದಲ್ಲಿ ಈ ರೀತಿಯ ಪದ್ಧತಿ ಇದೆ. ಈ ಮೊದಲು ಫಾರ್ಮುಲಾ 1 ಚಾಲಕ ಡೇನಿಯಲ್ ರಿಕಿಯಾರ್ಡೊ ಅವರೂ ಹೀಗೆ ಮಾಡಿದ್ದರು. ಅವರ ಹಾದಿಯಲ್ಲೇ ಖ್ಯಾತ ಗಾಯಕ ಹ್ಯಾರಿ ಕೂಡ ಸಾಗಿದ್ದಾರೆ. 

ಸೆಲ್ಫಿ ವಿಚಾರಕ್ಕೆ ಹಲ್ಲೆ; ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ ಸೋನು ನಿಗಮ್ ಹೇಳಿದ್ದೇನು?

ಹ್ಯಾರಿ ವಿಡಿಯೋ ನೋಡಿ ಇದು ಅಸಹ್ಯ ಪದ್ಧತಿಯಲ್ಲಿ ಒಂದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ರೀತಿ ಮಾಡಿದ ಬಳಿಕ ತಾವು ಹೊಸ ವ್ಯಕ್ತಿ ಎಂದು ಅವರಿಗೆ ಅನಿಸಲಿದೆಯಂತೆ. ಟ್ವಿಟರ್​ನಲ್ಲಿ ಈ ವಿಡಿಯೋ ಸಖತ್​ ವೈರಲ್​ ಆಗಿದೆ. ಹ್ಯಾರಿ ಸ್ಟೈಲ್ಸ್​​ ಅವರ ವರ್ತನೆ ಅಚ್ಚರಿ ಮೂಡಿಸಿದೆ. ಇನ್ನೂ ಕೆಲವರು ಕಾಮೆಂಟ್ ಮಾಡಿ 'ಇದು ಅಕ್ಷರಶಃ ಆಸ್ಟ್ರೇಲಿಯಾದ ಸಂಪ್ರದಾಯವಾಗಿದೆ. ನೀವು ಜನರು ಚಿಲ್ ಔಟ್ ಮಾಡಿ' ಎಂದು ಹೇಳುತ್ತಿದ್ದಾರೆ.

Scroll to load tweet…

ಭಾರತದ ಅತ್ಯಂತ ದುಬಾರಿ ಟೊಯೋಟಾ ಕಾರು ಖರೀದಿಸಿದ ಗಾಯಕ ಗುರ್ದಾಸ್, ಬುಕಿಂಕ್ ಬೆಲೆ 10 ಲಕ್ಷ ರೂ!

ಹ್ಯಾರಿ ಸ್ಟೈಲ್ಸ್​ ಆಸ್ಟ್ರೇಲಿಯಾದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದು ಇದೇ ಮೊದಲು. ಹಾಗಾಗಿ ಅವರು ಅಲ್ಲಿನ ಜನರ ಜೊತೆ ಬೆರೆಯುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಶೂ ಒಳಗೆ ನೀರು ಹಾಕಿಕೊಂಡು ಕುಡಿದರೆ ಹೆಚ್ಚು ಜನರನ್ನು ಆಕರ್ಷಿಸಬಹುದು ಎಂಬ ಕಾರಣದಿಂದಲೇ ಅವರು ಈ ರೀತಿ ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 2010ರಲ್ಲಿ ಹ್ಯಾರಿ ಸ್ಟೈಲ್ಸ್​ ಅವರ ಸಂಗೀತ ಪಯಣ ಆರಂಭ ಆಯಿತು. ‘ಒನ್​ ಡೈರೆಕ್ಷನ್​’ ಮ್ಯೂಸಿಕ್​ ಬ್ಯಾಂಡ್​ ಜೊತೆ ಅವರು ಗುರುತಿಸಿಕೊಂಡಿದ್ದಾರೆ. ಹಲವು ಸೂಪರ್​ ಹಿಟ್​ ಗೀತೆಗಳನ್ನು ಅವರು ನೀಡಿದ್ದಾರೆ.