ಮೇಲೆ ಹಲ್ಲೆ ನಡೆದ ಬಳಿಕ ಮೊದಲ ಖ್ಯಾತ ಗಾಯಕ ಸೋನು ನಿಗಮ್ ಮುಂಬೈ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡರು. ಪಾಪರಾಜಿಗಳ ಜೊತೆ ಮಾತನಾಡಿದ ಸೋನು ಎಲ್ಲಾ ಓಕೆ ಎಂದು ಹೇಳಿದರು. 

ಸೆಲ್ಫಿ ವಿಚಾರಕ್ಕೆ ಪ್ರಾರಂಭವಾದ ಜಗಳ ಸೋನು ನಿಗಂ ಮತ್ತು ಅವರ ತಂಡದ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಹೋಗಿದೆ. ಮುಂಬೈನ ಚೆಂಬೂರಿನಲ್ಲಿ ಈ ಘಟನೆ ಸಂಭವಿಸಿದ್ದು ಖ್ಯಾತ ಗಾಯಕ ಸೋನು ನಿಗಂ ದೂರು ನೀಡಿದ್ದಾರೆ. ಈ ಘಟನೆ ಬಳಿಕ ಸೋನು ನಿಗಂ ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಸೋಮವಾರ ರಾತ್ರಿ (ಫೆಬ್ರವರಿ 20) ಈ ಘಟನೆ ನಡೆದಿದೆ. ಸದ್ಯ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Add Asianetnews Kannada as a Preferred SourcegooglePreferred

ಈ ಘಟನೆ ಬಳಿಕ ಮುಂಬೈ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ ಸೋನು ನಿಗಮ್ ಅವರನ್ನು ಪಾಪರಾಜಿಗಳು ಪ್ರಶ್ನಿಸಿದರು. ಯೋಗಕ್ಷೇಮ ವಿಚಾರಿಸಿದ ಪಾಪರಾಜಿಗಳ ಜೊತೆ ಮಾತನಾಡಿದ ಸೋನು ನಿಗಮ್ 'ಎಲ್ಲಾ ಓಕೆ' ಎಂದು ಹೇಳಿದ್ದಾರೆ. ಬಳಿಕ ಕ್ಯಾಮರಾ ಮುಂದೆ ಕಿಸ್ ಮಾಡಿ ಅಲ್ಲಿಂದ ಹೊರಟರು.

ಸೋಮವಾರ ತಡರಾತ್ರಿ ಚೆಂಬೂರಿನಲ್ಲಿ ನಡೆದ ಸಂಗೀತೋತ್ಸವದಲ್ಲಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಸೋನು ನಿಗಮ್ ಅವರನ್ನು ತಳ್ಳಲಾಯಿತು ಮತ್ತು ಅವರ ತಂಡದ ಸದಸ್ಯ ರಬ್ಬಾನಿ ಅವರನ್ನು ಮೆಟ್ಟಿಲುಗಳಿಂದ ಕಳಗೆ ಎಸೆಯಲಾಯಿತು. ಸೆಲ್ಫಿಗೆ ಪೋಸ್ ನೀಡುವಂತೆ ಒತ್ತಾಯಿಸಿ ಜಗಳ ಪ್ರಾರಂಭಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಆರೋಪಿಗಳಲ್ಲಿ ಒಬ್ಬರು ಸ್ಥಳೀಯ ಶಾಸಕರೊಬ್ಬರ ಪುತ್ರ ಎಂದು ತಿಳಿದುಬಂದಿದೆ.

ಹಿಂದಿ ಹೇರಿಕೆಯಿಂದ ದೇಶದಲ್ಲಿ ಬಿರುಕು: ಸೋನು ನಿಗಮ್‌

ಘಟನೆಯ ನಂತರ ಸೋನು ನಿಗಮ್ ಚೆಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರು ದಾಖಲಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಗಾಯಕ, ಸಂಗೀತ ಕಾರ್ಯಕ್ರಮ ಮುಗಿಸಿ ವೇದಿಕೆಯಿಂದ ಕೆಳಗೆ ಬರುತ್ತಿದ್ದಾಗ ವ್ಯಕ್ತಿಯೊಬ್ಬರು ನನ್ನನ್ನು ಗಟ್ಟಿಯಾಗಿ ಹಿಡಿದರು. ನಂತರ ನನ್ನನ್ನು ರಕ್ಷಿಸಲು ಬಂದ ಹರಿ ಮತ್ತು ರಬ್ಬಾನಿಯನ್ನು ಕೆಳಗೆ ತಳ್ಳಿದರು. ಆಗ ನಾನು ಮೆಟ್ಟಿಲುಗಳ ಮೇಲೆ ಬಿದ್ದೆ. ಕಬ್ಬಿಣದ ಸರಳುಗಳ ಮೇಲೆ ಬಿದ್ದಿದ್ದರೆ ರಬ್ಬಾನಿ ಸಾಯುತ್ತಿದ್ದರು. ನೀವು ವೀಡಿಯೋದಲ್ಲಿ ನೋಡಬಹುದು' ಎಂದು ಹೇಳಿದರು.

View post on Instagram

ಸೆಲ್ಫಿಗೆ ಒತ್ತಾಯಿಸಿ ಉದ್ಧವ್‌ ಠಾಕ್ರೆ ಬಣದ ಶಾಸಕನ ಪುತ್ರನಿಂದ ಸೋನು ನಿಗಮ್ ಹಾಗೂ ತಂಡದ ಮೇಲೆ ಹಲ್ಲೆ: ಕೇಸ್‌ ದಾಖಲು

ಸೋನು ಮತ್ತು ಅವರ ತಂಡದ ಮೇಲೆ ಹಲ್ಲೆ ನಡೆಸಿದ್ದು ಉದ್ಧವ್‌ ಠಾಕ್ರೆ ಬಣದ ಶಾಸಕನ ಪುತ್ರ ಎಂದು ಹೇಳಲಾಗುತ್ತಿದೆ. ಶಾಸಕ ಪ್ರಕಾಶ್ ಫತೇರ್‌ಪೇಕರ್ ಅವರ ಪುತ್ರ ಎಂದು ವರದಿಯಾಗಿದೆ. ಅವರ ಹೆಸರನ್ನು ಸಹ ತನ್ನ ದೂರಿನಲ್ಲಿ ಸೋನು ನಿಗಮ್ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇದು ವರೆಗೂ ಪೊಲೀಸರು ಯಾರನ್ನು ಬಂಧಿಸಿಲ್ಲ.