ಹ್ಯಾರಿ ಪಾಟರ್ ಸಿನಿಮಾದಲ್ಲಿ ರುಬೆಸ್ ಹ್ಯಾಗ್ರಿಡ್ ಪಾತ್ರವನ್ನು ನಿರ್ವಹಿಸಿದ್ದ ಸ್ಕಾಟಿಷ್ ಮೂಲದ ನಟ ರಾಬಿ ಕೋಲ್ಟ್ರೇನ್ ನಿಧನ ಹೊಂದಿದ್ದಾರೆ.

ಹ್ಯಾರಿ ಪಾಟರ್ ಸಿನಿಮಾದಲ್ಲಿ ರುಬೆಸ್ ಹ್ಯಾಗ್ರಿಡ್ ಪಾತ್ರವನ್ನು ನಿರ್ವಹಿಸಿದ್ದ ಸ್ಕಾಟಿಷ್ ಮೂಲದ ನಟ ರಾಬಿ ಕೋಲ್ಟ್ರೇನ್ ನಿಧನ ಹೊಂದಿದ್ದಾರೆ. 72 ವರ್ಷದ ನಟ ರಾಬಿ ಕೋಲ್ಟ್ರೇನ್ ನಿಧನದ ಸುದ್ದಿಯನ್ನು ಅವರ ಎಜೆಂಟ್ ಶುಕ್ರವಾರ ಖಚಿತ ಪಡಿಸದರು. ನಟ ರಾಬಿ ಕೋಲ್ಟ್ರೇನ್, ಹ್ಯಾರಿ ಪಾಟರ್, ಕ್ರ್ಯಾಕರ್, ಜೇಮ್ಸ್ ಬಾಂಡ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಈ ಬಗ್ಗೆ ಬಹಿರಂಗ ಪಡಿಸಿದ ಏಜೆಂಟ್, ನನ್ನ ಕ್ಲೈಂಟ್ ಹಾಗೂ ಸ್ನೇಹಿತ ರಾಬಿ ಕೋಲ್ಟ್ರೇನ್ ಶುಕ್ರವಾರ ಅಕ್ಟೋಬರ್ 14ರಂದು ನಿಧನರಾದರು. ರಾಬಿ ಅವರು ಅದ್ಭುತ ನಟ, ಬುದ್ಧಿವಂತರಾಗಿದ್ದರು. ಕಳೆದ 40 ವರ್ಷದಿಂದ ಅವರ ಏಜೆಂಟ್ ಆಗಿ ಕೆಲಸ ಮಾಡಿದ್ದಕ್ಕೆ ನಮಗೆ ಹೆಮ್ಮೆಯಿದೆ. ಅವರನ್ನು ತುಂಬಾ ಮಿಸ್ ಮಾಡಿಕೊಳ್ತೀನಿ ಅಂತಾ ರಾಬಿಯವರ ಏಜೆಂಟ್ ತಿಳಿಸಿದ್ದಾರೆ. ಆದರೆ ಅವರ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.

ರಾಬಿ ಕೋಲ್ಟ್ರೇನ್ ಅವರು ಮಾರ್ಚ್ 30, 1950 ರಂದು ಗ್ಲ್ಯಾಸ್ಗೋದಲ್ಲಿ ಆಂಥೋನಿ ರಾಬರ್ಟ್ ಮೆಕ್‌ಮಿಲನ್ ಆಗಿ ಜನಿಸಿದರು. ನಟ, ಹಾಸ್ಯನಟ ಮತ್ತು ಬರಹಗಾರರಾಗಿ ತಮ್ಮ ವೃತ್ತಿಜೀವನ ರೂಪಿಸಿದರು. ಶುಕ್ರವಾರ ರಾತ್ರಿ ಸ್ಕಾಟ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ರಾಬಿಯವರು ಮಾಜಿ ಪತ್ನಿ ರೋನಾ ಗೆಮ್ಮೆಲ್ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ನಟ ರಾಬಿ ಕೋಲ್ಟ್ರೇನ್‍ ಜನಪ್ರಿಯ ಟಿವಿ ಸರಣಿ ಕ್ರ್ಯಾಕರ್‌ನಲ್ಲಿ ನಟಿಸುವ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದರು. ಈ ಸಿರೀಸ್‍ನಲ್ಲಿ ಅವರು ಅಪರಾಧ-ಪರಿಹರಿಸುವ ಮನಶ್ಶಾಸ್ತ್ರಜ್ಞನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಅವರ ಅದ್ಭುತ ಅಭಿನಯಕ್ಕೆ ಮೂರು ವರ್ಷಗಳ ಕಾಲ ಬ್ರಿಟಿಷ್ ಅಕಾಡೆಮಿ ಟೆಲಿವಿಷನ್ ಅವಾರ್ಡ್ಸ್ (BAFTA) ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದರು. 

ಸಿಫಿಲಿಸ್‌ ರೋಗ ಸ್ಫೋಟದ ಬೆನ್ನಲ್ಲೇ ಶೂಟಿಂಗ್‌ ನಿಲ್ಲಿಸಿದ ಪಾರ್ನ್‌ ಸ್ಟಾರ್‌ಗಳು; ಏನಿದು ಹೊಸ ರೋಗ?

ಬಳಿಕ JK ರೌಲಿಂಗ್ ಅವರ ಹ್ಯಾರಿ ಪಾಟರ್ ಸಿರೀಸ್‌ನಲ್ಲಿ ಹ್ಯಾಗ್ರಿಡ್ ಪಾತ್ರ ಮಾಡಿ ರಾಬಿ ಕೋಲ್ಟ್ರೇನ್‍ ವಿಶ್ವದಾದ್ಯಂತ ದೊಡ್ಡ ಮಟ್ಟದ ಖ್ಯಾತ ಗಳಿಸಿದರು. 2001-2011ರ ಅವಧಿಯಲ್ಲಿ ಬಂದ 8 ಸಿರೀಸ್‌ನಲ್ಲೂ ರಾಬಿ ಕಾಣಿಸಿಕೊಂಡಿದ್ದರು. ಅವರ ಅದ್ಭುತ ನಟನೆಯಿಂದ ಕೋಟ್ಯಂತರ ಅಭಿಮಾನಿಗಳನ್ನು ರಾಬಿ ಸಂಪಾದಿಸಿದ್ದರು. 

'ಟೈಟಾನಿಕ್' ಹೀರೋಯಿನ್ ಕೇಟ್ ವಿನ್ಸ್‌ಲೆಟ್‌ ಆಸ್ಪತ್ರೆಗೆ ದಾಖಲು

ಇತ್ತೀಚಿನ ವರ್ಷಗಳಲ್ಲಿ, ಅವರು 2016ರ ಕಿರು ಸರಣಿ ನ್ಯಾಷನಲ್ ಟ್ರೆಷರ್‌ನಲ್ಲಿ ಕರಾಳ ರಹಸ್ಯವನ್ನು ಹೊಂದಿರುವ ನೆಚಚ್ಚಿನ ಟಿವಿ ತಾರೆಯಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದರು. ರಾಬಿ ಕೊನೆಯ ಬಾರಿಗೆ ಹ್ಯಾರಿ ಪಾಟರ್ 20ನೇ ವಾರ್ಷಿಕೋತ್ಸವದಲ್ಲಿ ಕಾಣಿಸಿಕೊಂಡಿದ್ದರು.