Asianet Suvarna News Asianet Suvarna News

ಸಿಫಿಲಿಸ್‌ ರೋಗ ಸ್ಫೋಟದ ಬೆನ್ನಲ್ಲೇ ಶೂಟಿಂಗ್‌ ನಿಲ್ಲಿಸಿದ ಪಾರ್ನ್‌ ಸ್ಟಾರ್‌ಗಳು; ಏನಿದು ಹೊಸ ರೋಗ?

Porn industry on halt after Syphilis scare: ಸಿಫಿಲಿಸ್‌ ಎಂಬ ಹೊಸ ಖಾಯಿಲೆಗೆ ಹೆದರಿ ಇಂಗ್ಲೆಂಡ್‌ನ ಪಾರ್ನ್‌ ಉದ್ಯಮ ತಲ್ಲಣಗೊಂಡಿದೆ. ಲೈಂಗಿಕ ಸಂಪರ್ಕದಿಂದ ಹಬ್ಬುವ ಈ ರೋಗದ ಭಯದಿಂದ ಎಲ್ಲಾ ಚಿತ್ರೀಕರಣಗಳನ್ನು ಸ್ಥಗಿತಗೊಳಿಸಲಾಗಿದೆ. ಕೊರೋನಾ ವೈರಸ್‌ನ ಭೀಕರತೆಯ ನಂತರ ಚೇತರಿಸಿಕೊಂಡಿದ್ದ ಉದ್ಯಮಕ್ಕೆ ಹೊಸ ಖಾಯಿಲೆ ಮತ್ತೆ ತಲೆ ನೋವಾಗಿದೆ.

UK and US porn stars stops shooting after new disease syphilis scare in europe
Author
First Published Sep 29, 2022, 11:09 AM IST

ನವದೆಹಲಿ: ಯುರೋಪ್‌ನಲ್ಲಿ ಸಿಫಿಲಿಸ್‌ (Syphilis disease scare in Europe) ಎಂಬ ರೋಗ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡಿನ ಖ್ಯಾತ ಪಾರ್ನ್‌ ಸ್ಟಾರ್‌ಗಳು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ. ಜತೆಗೆ ಪಾರ್ನ್‌ ಸ್ಟಾರ್‌ಗಳಿಗಾಗಿ ಯೂನಿಯನ್‌ ಒಂದನ್ನು ಮಾಡಬೇಕು ಎಂದು ಅಡಲ್ಟ್‌ ನಟ ನಟಿಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂದು ದಿ ಇಂಡಿಪೆಂಡೆಂಟ್‌ ವರದಿ ಮಾಡಿದೆ. ಸಿಫಿಲಿಸ್‌ ಖಾಯಿಲೆ ಯುರೋಪ್‌ ಖಂಡದಲ್ಲಿ ವ್ಯಾಪಕವಾಗಿ ಹೆಚ್ಚುತ್ತಿದ್ದು, ಸೋಂಕಿಗೆ ತಗಲುವ ಭಯದಿಂದ ಚಿತ್ರೀಕರಣ ಸ್ಥಗಿತಗೊಳಿಸಲು ನಟನಟಿಯರು ನಿರ್ಧರಿಸಿದ್ದಾರೆ. ಈ ಬಗ್ಗೆ ಇಂಡಿಪೆಂಡೆಂಟ್‌ ಪತ್ರಿಕೆಯೊಂದಿಗೆ ಕೆಲವರು ಮಾತನಾಡಿದ್ದು, ಸರ್ಕಾರ ಯೂನಿಯನ್‌ ಮಾಡುವ ಮೂಲಕ ಮೂಲಭೂತ ಸಮಸ್ಯೆಗಳನ್ನು ಮತ್ತು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಮುಂದಾಗಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ವರದಿ ಮಾಡಲಾಗಿದೆ. 

ಏನಿದು ಸಿಫಿಲಿಸ್ ರೋಗ?:
ಸಿಫಿಲಿಸ್‌ ರೋಗ ಲೈಂಗಿಕ ಸಂಪರ್ಕದಿಂದ ಹರಡುತ್ತದೆ. ಈ ರೋಗದಿಂದ ಸೋಂಕು ತಗುಲಿದ ವ್ಯಕ್ತಿಯ ಚರ್ಮದ ಮೇಲೆ ಗಾಯಗಳು ಮತ್ತು ದದ್ದುಗಳು ಉಂಟಾಗುತ್ತದೆ. ಆಂಟಿಬಯೋಟಿಕ್ಸ್‌ ಮಾತ್ರೆಗಳಿಂದ ಇನ್ಫೆಕ್ಷನ್‌ ಮತ್ತು ಬ್ಯಾಕ್ಟೀರಿಯಾಗಳನ್ನು ಗುಣಪಡಿಸಬಹುದಾದರೂ ವ್ಯಾಪಕ ನೋವು ಅನುಭವಿಸಬೇಕು ಎಂದು ತಜ್ಞರು ಮಾಹಿತಿ ನೀಡುತ್ತಾರೆ. ಆದರೆ ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ದೊಡ್ಡ ಸಮಸ್ಯೆಗೆ ಇದು ಮುನ್ನುಡಿಯಾಗಬಹುದು. ದೇಹದ ಆಂತರಿಕ ಅಂಗಗಳು ಮತ್ತು ಮೆದುಳು ನಿಷ್ಕ್ರಿಯಗೊಳ್ಳುವ ಸಾಧ್ಯತೆಯೂ ಇರುತ್ತದೆ ಎನ್ನಲಾಗಿದೆ. 

ಇದನ್ನೂ ಓದಿ: ಭಾರತದಲ್ಲಿ ಪೋರ್ನ್ ನೋಡುವುದು ಅಪರಾಧವಾ? ಪೋರ್ನ್ ನೋಡೋ ಮುಂಚೆ ಇದನ್ನ ತಿಳ್ಕೊಳ್ಳಿ!

PASS ಎಂಬ ಪಾರ್ನ್‌ ನಟ ನಟಿಯರ ಲೈಂಗಿಕ ಆರೋಗ್ಯದ ಮೇಲೆ ಕಣ್ಣಿಡುವ ಡೇಟಾ ಸಂಸ್ಥೆಯ ಪ್ರಕಾರ ಈಗಾಗಲೇ ಯುರೋಪ್‌ ಮತ್ತು ಅಮೆರಿಕಾದ ಹಲವು ಪಾರ್ನ್‌ ಸ್ಟಾರ್‌ಗಳು ಸಿಫಿಲಿಸ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ವರದಿ ಪಡೆದಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯುರೋಪ್‌ ಮತ್ತು ಅಮೆರಿಕಾದಲ್ಲಿ ಇನ್ನಷ್ಟು ಉಲ್ಬಣವಾಗುವ ಸಾಧ್ಯತೆಯಿದೆ ಎಂದು ಸಂಸ್ಥೆ ತಿಳಿಸಿದೆ. ಇದೇ ಭಯದಿಂದ ಪಾರ್ನ್‌ ಸ್ಟಾರ್‌ಗಳು ಚಿತ್ರೀಕರಣವನ್ನು ನಿಲ್ಲಿಸಿದ್ದಾರೆ. 

ಲಿಯಾನ್‌ ಯಂಗ್‌, ನಿವೃತ್ತ ಪಾರ್ನ್‌ ನಟಿ (Former Porn Star Lyanne Young) ನೀಡಿರುವ ಹೇಳಿಕೆ ಪ್ರಕಾರ, ಆತ ಹಲವು ಪಾರ್ನ್‌ ನಟಿಯರ ಜೊತೆ ಇತ್ತೀಚೆಗೆ ಮಾತನಾಡಿದ್ದು ಬಹುತೇಕರು ಸಿಫಿಲಿಸ್‌ ಭಯದಿಂದ ಚಿತ್ರೀಕರಣ ಸ್ಥಗಿತಗೊಳಿಸಿದ್ದಾರೆ. "ಚಿತ್ರೀಕರಣಕ್ಕೆ ಎಲ್ಲಾ ಸಿದ್ಧತೆಗಳಾಗಿದ್ದರೂ, ಕೊನೆಯ ಕ್ಷಣದಲ್ಲಿ ಸ್ಥಗಿತಗೊಳಿಸುತ್ತಿದ್ದಾರೆ," ಎಂದು ಲಿಯಾನ್‌ ಯಂಗ್‌ ತಿಳಿಸಿದ್ಧಾರೆ. 

ಇದನ್ನೂ ಓದಿ: ಪೋರ್ನ್‌ ಚಿತ್ರಗಳಲ್ಲಿ ಮಿಂಚಿದ ಖ್ಯಾತ ನಟಿ ಬಿಚ್ಚಿಟ್ಟ ರೋಚಕ ರಿಯಲ್‌ ಕಥೆಗೆ ಬೆಚ್ಚಿಬಿದ್ದ ಫ್ಯಾನ್ಸ್‌

ಮುಂದುವರೆದ ಅವರು, "ದೊಡ್ಡ ದೊಡ್ಡ ಪಾರ್ನ್‌ ಸ್ಟಾರ್‌ಗಳು ಕೂಡ ಸಿಫಿಲಿಸ್‌ ರೋಗಕ್ಕೆ ಹೆದರಿ ಕೆಲಸ ನಿಲ್ಲಿಸಿದ್ದಾರೆ. ಇದರಿಂದ ಸಾಕಷ್ಟು ನಷ್ಟವಾಗುತ್ತಿದೆ. ಯುರೋಪ್‌ನಲ್ಲಿ ರೋಗದ ಬಗ್ಗೆ ಗಂಭೀ ಮಾಹಿತಿ ನೀಡಲಾಗಿದೆ. ಪಾರ್ನ್‌ ಸಿನೆಮಾ ನಿರ್ಮಾಪಕರು ಮತ್ತು ನಟರು ಬೇರೆ ದೇಶಗಳಿಂದಲೂ ಈ ರೋಗ ಹರಡುವ ಭಯ ವ್ಯಕ್ತಪಡಿಸುತ್ತಿದ್ದಾರೆ," ಎಂದು ತಿಳಿಸಿದ್ದಾರೆ. 
ಪಾರ್ನ್‌ ಇಂಡಸ್ಟ್ರಿ ಹಾಲಿವುಡ್‌ಗಿಂತಲೂ ದೊಡ್ಡ ಇಂಡಸ್ಟ್ರಿ. ಸಾವಿರಾರು ಕೋಟಿ ವ್ಯವಹಾರ ಮತ್ತು ಉದ್ಯಮ ಪಾರ್ನ್‌ ಇಂಡಸ್ಟ್ರಿಯನ್ನೇ ನಂಬಿದೆ. ಈ ರೀತಿ ಚಿತ್ರೀಕರಣ ಸ್ಥಗಿತಗೊಂಡಾಗ ನೂರಾರು ಕೋಟಿ ನಷ್ಟವನ್ನು ನಿರ್ಮಾಪಕರು ಮತ್ತು ನಟರು ಅನುಭವಿಸಬೇಕಾಗುತ್ತದೆ. ಈಗಾಗಲೇ ಕೊರೋನಾ ವೈರಸ್‌ ಸಾಂಕ್ರಾಮಿಕ ರೋಗದಿಂದ ತತ್ತರಿಸಿ, ಮತ್ತೆ ನೆಲೆಯೂರಿದ್ದ ಪಾರ್ನ್‌ ಇಂಡಸ್ಟ್ರಿಗೆ ಇದೀಗ ಸಿಫಿಲಿಸ್‌ ಎಂಬ ರೋಗ ಮತ್ತೆ ಸಮಸ್ಯೆಯಾಗಿ ತಲೆದೂರಿದೆ. 

Follow Us:
Download App:
  • android
  • ios