ಬಾಲಿವುಡ್ ನಟ ಸೋನು ಸೂದ್ ಈಗ ಸೂಪರ್ ಹೀರೋ. ಫಿಟ್ ಆಗಿರೋ ನಟ ಹಿಂದೆ ಹೇಗಿದ್ರು ಗೊತ್ತಾ ?

ನಟ ಸೋನು ಸೂದ್ ಇಂದು ಬಾಲಿವುಡ್‌ನ ಅತ್ಯಂತ ಚಾರ್ಮಿಂಗ್ ಮತ್ತು ಫಿಟ್ ನಟರಲ್ಲಿ ಒಬ್ಬರು. ಹಿಂದಿ, ತೆಲುಗು, ತಮಿಳು ಸೇರಿ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ ಸೋನು ಸೆಲ್ಫ್ ಮೇಡ್ ಮ್ಯಾನ್.

ಹಲವಾರು ಚಿತ್ರಗಳಲ್ಲಿ ನಾಯಕನಿಗೆ ಸರಿಹೊಂದುವ ವಿಲನ್ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾನೆ. ಇಷ್ಟೊಂದು ಫಿಟ್ ಆಗಿರುವ ಅವರು ಒಮ್ಮೆ ತೆಳ್ಳಗಿನ ವ್ಯಕ್ತಿಯಾಗಿದ್ದರು. ಈಗಿನ ಮಸಲ್ ಅವತಾರದಿಂದ ದೂರವಿದ್ದರು.

ಸೋನು ಅಲ್ಟಿಮೇಟ್ ನಟ ಅಂತ ಪ್ರೂವ್ ಮಾಡುತ್ತೆ ಈ ವಿಲನ್ ಪಾತ್ರಗಳು

ನಟ ತನ್ನ ಹಿಂದಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. 1997 ರ ಚಿತ್ರವೊಂದನ್ನು ಶೇರ್ ಮಾಡಿದ ನಟ, ನನ್ನನ್ನು ತಮಾಷೆ ಮಾಡುತ್ತಿದ್ದವರ ಮುಂದೆ ನಾನು ನಟನಾಗುವ ಧೈರ್ಯ ಮಾಡಿದೆ ಎಂದಿದ್ದಾರೆ. 1997 ತೆಳ್ಳಗಿರುವ ಕಿರಿಯ ಸೋನು ಅವರ ಫೋಟೋ ಬಹಳಷ್ಟನ್ನು ವಿವರಿಸುತ್ತದೆ.

View post on Instagram

ಅಷ್ಟೇನೂ ಸ್ಟಾರ್‌ಡಮ್ ಇಲ್ಲದೆ ಅವರು ಸಡಿಲವಾದ ಡೆನಿಮ್ ಪ್ಯಾಂಟ್ ಮತ್ತು ಶರ್ಟ್ ಧರಿಸಿರುತ್ತಾರೆ. ಈಗ ಸೋನು ನ್ಯಾಷನಲ್ ಹೀರೋ. ಎಲ್ಲರಿಗೂ ತಿಳಿದಿರುವ ಪರಿಚಿತ ಮುಖ. ಇಂದು ನಟ 48ನೇ ವರ್ಷದ ಹುಟ್ಟು ಹಬ್ಬ ಆಚರಿಸಿದ್ದಾರೆ. ಸತತ ಜನಸೇವೆಯಲ್ಲಿ ತೊಡಗಿರುವ ನಟನಿಗೆ ಹ್ಯಾಪಿ ಬರ್ತ್‌ಡೇ.

View post on Instagram