Asianet Suvarna News Asianet Suvarna News

ಕೊಟ್ಟ ಮಾತಿನಂತೆ ನಡೆದ ಹನುಮಾನ್​ ಚಿತ್ರತಂಡ: ಅಯೋಧ್ಯೆಗೆ 2.67 ಕೋಟಿ ದೇಣಿಗೆ- ಹೀಗಿದೆ ಲೆಕ್ಕಾಚಾರ

ಹನುಮಾನ್​ ಚಿತ್ರತಂಡವು ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಅಯೋಧ್ಯೆಗೆ ಲೆಕ್ಕಾಚಾರದಂತೆ 2.67 ಕೋಟಿ ರೂಪಾಯಿಗಳನ್ನು ನೀಡಿದೆ. 
 

HanuMan makers donate Rs 2 crore 66 lakhs for Ayodhyas Ram Mandir inauguration suc
Author
First Published Jan 21, 2024, 6:16 PM IST

ಪ್ರಶಾಂತ್ ವರ್ಮಾ ಅವರ ಸೂಪರ್ ಹೀರೋ ಚಿತ್ರ ಹನುಮಾನ್ ಜನವರಿ 12 ರಂದು ಬಿಡುಗಡೆಯಾಯಿತು.  ಚಿತ್ರದ ಬಿಡುಗಡೆಗೂ ಮುನ್ನವೇ  'ಮೆಗಾ ಸ್ಟಾರ್' ಚಿರಂಜೀವಿ ಅವರು ಒಂದು ಮಹತ್ವದ ವಿಚಾರವನ್ನು ಘೋಷಣೆ ಮಾಡಿದ್ದರು.  'ಹನುಮಾನ್‌' ಸಿನಿಮಾದ ಪ್ರತಿ ಟಿಕೆಟ್‌ ಹಣದಲ್ಲಿ 5 ರೂ.ಗಳನ್ನು ರಾಮ ಮಂದಿರಕ್ಕೆ ನೀಡುವುದಾಗಿ ಹೇಳಿದ್ದರು.  ತೇಜ ಸಜ್ಜ, ವರಲಕ್ಷ್ಮಿ ಶರತ್‌ಕುಮಾರ್, ಅಮೃತ ಅಯ್ಯರ್ ಮತ್ತು ವಿನಯ್ ರೈ ನಟಿಸಿರುವ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇದೀಗ ಚಿತ್ರ ತಂಡ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಅಯೋಧ್ಯೆ ರಾಮಮಂದಿರಕ್ಕೆ ₹ 2,66,41,055 ದೇಣಿಗೆ ನೀಡಲಾಗಿದೆ ಎಂದು ಚಿತ್ರತಂಡ ಹೇಳಿದೆ. 

ಸದ್ಯ ಚಿತ್ರವು  ಜಾಗತಿಕವಾಗಿ ₹ 150 ಕೋಟಿಯನ್ನು ದಾಟಿಸಿದೆ.  ಜನವರಿ 12 ರಂದು ಬಿಡುಗಡೆಯಾದ ಈ ಚಿತ್ರ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಪ್ರೈಮ್ ಶೋ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ ನಿರಂಜನ್ ರೆಡ್ಡಿ ನಿರ್ಮಿಸಿರುವ ಈ ಚಿತ್ರ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಪ್ರೀ-ರಿಲೀಸ್ ಈವೆಂಟ್‌ನಲ್ಲಿ ನಿರ್ಮಾಪಕರು ಹೇಳಿದ ಮಾತನ್ನು ಇದೀಗ ಉಳಿಸಿಕೊಂಡಿದ್ದಾರೆ.   ಚಿತ್ರದ ಪ್ರಥಮ ಪ್ರದರ್ಶನದ ಸಮಯದಲ್ಲಿ ಮಾರಾಟವಾದ 2,97,162 ಟಿಕೆಟ್‌ಗಳಿಂದ ₹ 14,85,810 ಚೆಕ್ ಅನ್ನು ನೀಡಿದ್ದರು.ಈಗ, ಅವರು ಮಾರಾಟವಾದ 53,28,211 ಟಿಕೆಟ್‌ಗಳಿಂದ ₹ 2 ಕೋಟಿ 66 ಲಕ್ಷದ 41 ಸಾವಿರದ 055 ಅನ್ನು ದೇಣಿಗೆಯಾಗಿ ಅಯೋಧ್ಯೆ ರಾಮ ಮಂದಿರಕ್ಕೆ ನೀಡಿರುವುದಾಗಿ ಹೇಳಿದ್ದಾರೆ. 

ಬಾವಿಯ ತುಂಬಾ ಹೆಣಗಳ ರಾಶಿ: ಶ್ರೀರಾಮ ಉಳಿದ ಪ್ರಯಾಗರಾಜ್​ನ ಕೌತುಕ ವಿವರಿಸಿದ್ದಾರೆ ಡಾ.ಬ್ರೋ
 
ಜನವರಿ 7ರಂದು ಅದ್ದೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಮಾಡಿತ್ತು ಚಿತ್ರತಂಡ. ಇದಕ್ಕೆ  'ಮೆಗಾ ಸ್ಟಾರ್' ಚಿರಂಜೀವಿ  ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆ ಸಮಯದಲ್ಲಿ ಮಾತನಾಡಿದ್ದ ಅವರು,  ಚಿತ್ರತಂಡ ನನ್ನ ಮೂಲಕ ಈ ಘೋಷಣೆ ಮಾಡಿಸಲು ಇಷ್ಟಪಟ್ಟಿದೆ. ಅದೇನೆಂದರೆ, ಈ ಸಿನಿಮಾದ ಪ್ರತಿ ಟಿಕೆಟ್‌ನಿಂದ ಸಿಗುವ ಹಣದಲ್ಲಿ 5 ರೂ.ಗಳನ್ನು ರಾಮ ಮಂದಿರಕ್ಕೆ ದೇಣಿಗೆ ನೀಡಲು ಚಿತ್ರತಂಡ ನಿರ್ಧರಿಸಿದೆ ಎಂದು ಹೇಳಿದ್ದರು.  ಚಿರಂಜೀವಿ ಅವರಿಗೂ ಅಯೋಧ್ಯೆಗೆ ಆಹ್ವಾನ ಬಂದಿದ್ದರಿಂದ ಅವರ  ಇಡೀ ಕುಟುಂಬವು ನಾಳೆಯ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕಾತರರಾಗಿದೆ. 

ಇನ್ನು ಈ ಚಿತ್ರದ ಕುರಿತು ಹೇಳುವುದಾದರೆ, ತೆಲುಗು, ಕನ್ನಡ, ಮರಾಠಿ, ತಮಿಳು, ಮಲಯಾಳಂ, ಚೈನೀಸ್ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬಂದಿದೆ. ಪ್ರಶಾಂತ್ ವರ್ಮ ನಿರ್ದೇಶನದ ಈ ಚಿತ್ರದಲ್ಲಿ ಬೆಂಗಳೂರು ಮೂಲಕ ನಟಿ ಅಮೃತಾ ಅಯ್ಯರ್  ನಾಯಕಿಯಾಗಿ ನಟಿಸಿದ್ದಾರೆ.  ನಿರಂಜನ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ.   ವರಲಕ್ಷಿ ಶರತ್ ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ, ಗೆಟಪ್ ಶ್ರೀನು, ಸತ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 

ಅಯೋಧ್ಯೆಯಲ್ಲಿ ಪೂಜೆ ಸಲ್ಲಿಸಿ ದೇವಾಲಯ ಶುಚಿಗೊಳಿಸಿದ ನಟಿ ಕಂಗನಾ: ನೆಟ್ಟಿಗರು ಏನಂದ್ರು?

Follow Us:
Download App:
  • android
  • ios