Asianet Suvarna News Asianet Suvarna News

ಹಾಲಿವುಡ್‌ನಿಂದ Jr.NTRಗೆ ಬಂತು ದೊಡ್ಡ ಆಫರ್: RRR ಸ್ಟಾರ್ ಜೊತೆ ಕೆಲಸ ಮಾಡಬೇಕೆಂದ ಖ್ಯಾತ ನಿರ್ದೇಶಕ

ಹಾಲಿವುಡ್‌ ಖ್ಯಾತ ನಿರ್ದೇಶಕ ಜೇಮ್ಸ್ ಗನ್ ಟಾಲಿವುಡ್ ಸ್ಟಾರ್ Jr.NTR ಜೊತೆ ಕೆಲಸ ಮಾಡಬೇಕು ಎನ್ನುವ ಆಸೆ ಹೊರಹಾಕಿದ್ದಾರೆ.  

Guardians of the Galaxy Director James Gunn wants to work with RRR star Jr NTR sgk
Author
First Published Apr 26, 2023, 5:09 PM IST


ಟಾಲಿವುಡ್ ಸ್ಟಾರ್ ನಟ ಜೂ.ಎನ್‌ಟಿಆರ್ ಆರ್ ಆರ್ ಆರ್ ಸಿನಿಮಾ ಬಳಿಕ ದೇಶ-ವಿದೇಶಗಳಲ್ಲಿ ಖ್ಯಾತಿಗಳಿಸಿದ್ದಾರೆ. ರಾಜಮೌಳಿ ಸಾರಥ್ಯದಲ್ಲಿ ಬಂದ ಆರ್ ಆರ್ ಆರ್ ಸಿನಿಮಾ ಗೋಲ್ಡನ್ ಗ್ಲೋಬ್ಸ್, ಆಸ್ಕರ್ ಅಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆದಿದೆ. ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸಿದ ಬಹುತೇಕ ಕಲಾವಿದರಿಗೂ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದೆ. ಅದರಲ್ಲೂ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಗ್ಲೋಬಲ್ ಸ್ಟಾರ್ ಆಗಿದ್ದಾರೆ. ಈ ಇಬ್ಬರೂ ಸ್ಟಾರ್ ಕಲಾವಿದರ ಜೊತೆ ಕಲೆಸ ಮಾಡಲು ಅನೇಕರು ಎದುರು ನೋಡುತ್ತಿದ್ದಾರೆ. ಅಂದಹಾಗೆ ಜೂ.ಎನ್ ಟಿ ಆರ್ ಜೊತೆ ನಟಿಯಬೇಕೆಂದು ಹಾಲಿವುಡ್‌ನ ಖ್ಯಾತ ನಿರ್ದೇಶಕರೊಬ್ಬರು ಆಸೆ ವ್ಯಕ್ತಪಡಿಸಿದ್ದಾರೆ. 

ಟಾಲಿವುಡ್ ಸ್ಟಾರ್ ಜೂ.ಎನ್ ಟಿ ಆರ್ ಜೊತೆ ಕೆಲಸ ಮಾಡುವ ಆಸೆ ವ್ಯಕ್ತಪಡಿಸಿದ ಖ್ಯಾತ ನಿರ್ದೇಶಕ ಮತ್ಯಾರು ಅಲ್ಲ ಗಾರ್ಡಿಯನ್ ಆಫ್ ದಿ ಗ್ಯಾಲಕ್ಸಿ ಸೀರಿಸ್‌ನ ನಿರ್ದೇಶಕ ಜೇಮ್ಸ್ ಗನ್. ಆರ್ ಆರ್ ಆರ್ ಇಷ್ಟಪಟ್ಟಿದ್ದ ಜೇಮ್ಸ್ ಗನ್ ಇದೀಗ ಜೂ.ಎನ್ ಟಿ ಆರ್ ಜೊತೆ ಕೆಲಸ ಮಾಡಬೇಕೆಂದು ಹೇಳಿದ್ದಾರೆ.  ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜೇಮ್ಸ್ ಗನ್, ಜೂ.ಎನ್ ಟಿ ಆರ್ ಅದ್ಭುತ, ಕೂಲ್ ಎಂದು ಹೇಳಿದ್ದಾರೆ. ' ಆರ್ ಆರ್ ಆರ್‌ನಲ್ಲಿ ನಟಿಸಿದ ಆ ವ್ಯಕ್ತಿ ಯಾರು..ಎಷ್ಟು ಅದ್ಭುತವಾಗಿ ನಟಿಸಿದ್ದಾರೆ. ಎಲ್ಲಾ ಹುಲಿಗಳು ಪಂಜರದಿಂದ ತಪ್ಪಿಸಿಕೊಂಡು ಆ ವ್ಯಕಿ ಬಳಿ ಬರುತ್ತವೆಲ್ಲ ಆ ವ್ಯಕ್ತಿ' ಎಂದು ಜೂ.ಎನ್ ಟಿ ಆರ್ ಬಗ್ಗೆ ಹೇಳಿದ್ದಾರೆ. 

ನಾನು ಆ ವ್ಯಕ್ತಿ ಜೊತೆ ಕೆಲಸ ಮಾಡಲು ಬಯಸುತ್ತೇನೆ, ಅದ್ಭುತ ಮತ್ತು ಕೂಲ್' ಎಂದು ಹೇಳಿದ್ದಾರೆ. ಕಳೆದ ವರ್ಷ ಆರ್ ಆರ್ ಆರ್ ಸಿನಿಮಾ ನೋಡಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಜೂ.ಎನ್ ಟಿ ಆರ್ ಅವರಿಗೆ ಯಾವ ರೀತಿಯ ಪಾತ್ರ ನೀಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ, ಅದು ಇನ್ನೂ ಗೊತ್ತಿಲ್ಲ, ಆ ಬಗ್ಗೆ ಲೆಕ್ಕಾಚಾರ ಮಾಡಬೇಕಿದೆ. ಇನ್ನು ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ' ಎಂದು ಹೇಳಿದ್ದಾರೆ. 

NTR 30; ಜಾನ್ವಿ ಕಪೂರ್ ಬಳಿಕ ಜೂ.ಎನ್‌ಟಿಆರ್ ಚಿತ್ರಕ್ಕೆ ಮತ್ತೋರ್ವ ಬಾಲಿವುಡ್ ಸ್ಟಾರ್ ಎಂಟ್ರಿ

ಜೇಮ್ಸ್ ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ ವಾಲ್ಯೂನ್ 3 ಮೂಲಕ ಮತ್ತೆ ಬರ್ತಿದ್ದಾರೆ. ಇದು ಬಾಲಿವುಡ್ ಸಿನಿಮಾದಿಂದ ಸ್ಫೂರ್ತಿ ಪಡೆದು ಮಾಡಲಾಗಿದೆ.  ಈ ಬಗ್ಗೆ ಜೇಮ್ಸ್ ಅವರೇ ಬಹಿರಂಗ ಪಡಿಸಿದರು. ಬಾಲಿವುಡ್ ಸಿನಿಮಾಗಳ ಮೇಲಿನ ಪ್ರೀತಿಯನ್ನು ಹೊರಹಾಕಿದರು. ಬಾಲಿವುಡ್ ಸಿನಿಮಾಗಳು ಕಲೆ ಮತ್ತು ಮನೊರಂಜನೆ ವಿಷಯವಾಗಿದೆ ಎಂದು ಹೇಳಿದ್ದಾರೆ. 

ಬಿಗ್ ಬಜೆಟ್ ಸಿನಿಮಾದಿಂದ ಹೊರ ನಡೆದ ರಣ್ವೀರ್ ಸಿಂಗ್; ಜೂ.ಎನ್‌ಟಿಆರ್ OR ಅಲ್ಲು ಅರ್ಜುನ್ ಎಂಟ್ರಿ?

ಜೇಮ್ಸ್ ಗನ್ ಆಸೆಯಂತೆ ಜೂ.ಎನ್ ಟಿಆರ್ 2ಗೆ ಆಕ್ಷನ್ ಕಟ್ ಹೇಳುತ್ತಾರಾ, ಹಾಲಿವುಡ್‌ಗೆ ಜೂ.ಎನ್ ಟಿ ಆರ್ ಅವರನ್ನು ಪರಿಚಯಿಸುತ್ತಾರಾ ಎಂದು ಕಾದುನೋಡಬೇಕಿದೆ. ಜೂ.ಎನ್ ಟಿ ಆರ್ ಸದ್ಯ 30ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೊರಟಾಲ ಶಿವ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾದಲ್ಲಿ ಜೂ.ಎನ್ ಟಿ ಆರ್‌ಗೆ ನಾಯಕಿಯಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಬಾಲಿವುಡ್ ಮತ್ತೋರ್ವ ಸ್ಟಾರ್ ಸೈಫ್ ಅಲಿ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಅದ್ದೂರಿ ಮುಹೂರ್ತದ ಮೂಲಕ ಸಿನಿಮಾಗೆ ಚಾಲನೆ ಕೊಡಲಾಗಿದ್ದು ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ.     


 

Follow Us:
Download App:
  • android
  • ios