ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್ ನಟ ಗೋವಿಂದ ಸಿನಿಮಾ ಕ್ಷೇತ್ರದಿಂದ ದೂರವಿದ್ದರೂ ಅವರ ವಿರುದ್ಧ ಕೌಟುಬಿಂಕ ಆರೋಪಗಳು ಕೇಳಿ ಬರುತ್ತಿವೆ. ಅಳಿಯ ಕೃಷ್ಣ ಮಾಡಿರುವ ಆರೋಪಗಳನ್ನು ಸಾಬೀತು ಮಾಡಲು ಗೋವಿಂದ ಆಗ್ರಹಿಸಿದ್ದಾರೆ.
80-90ರ ದಶಕದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ವಿಭಿನ್ನ ಅಭಿನಯದ ಮೂಲಕ ಚಾಪು ಮೂಡಿಸಿದ ನಟ ಗೋವಿಂದ ಅವರ ಕುಟುಂಬದ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. ಅವಳಿ ಮಕ್ಕಳ ಬಗ್ಗೆ ಮಾತನಾಡಬೇಕಾ ಅಥವಾ ಅಳಿಯ ಕೃಷ್ಣ ಹಾಗೂ ಪತ್ನಿ ಮಾಡಿರುವ ಕಾಮೆಂಟ್‌ಗೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾ?
ಜೆನಿಲಿಯಾ ಗಂಡ ಅಂದ್ರೆ ರಿತೀಶ್‌ಗೆ ಹರ್ಟ್ ಆಗುತ್ತಂತೆ!
ಗೋವಿಂದ ಅಳಿಯ ಕೃಷ್ಣ ಅಭಿಷೇಕ್ ಕಿರುತೆರೆ ಜನಪ್ರಿಯ ಕಾರ್ಯಕ್ರಮ 'ದಿ ಕಪಿಲ್ ಶರ್ಮಾ ಶೋ'ನಲ್ಲಿ ಹಾಸ್ಯ ಕಲಾವಿದರಾಗಿದ್ದಾರೆ. ಗೋವಿಂದ ಈ ಜನಪ್ರಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ವಿಚಾರ ತಿಳಿದು, ಹತ್ತು ದಿನಗಳ ಮುನ್ನವೇ ಶೋ ಅನ್ನು ಅರ್ಧದಲ್ಲಿಯೇ ನಿಲ್ಲಿಸಿ ಹೊರ ಬಂದಿದ್ದಾರೆ. ಕಾರಣವೇನು ಎಂದು ತಿಳಿಯದ ತಂಡ ಶಾಕ್‌ನಲ್ಲಿಯೇ ಉಳಿದ ಭಾಗದ ಚಿತ್ರೀಕರಣ ಮುಗಿಸಿದೆ.
ಕೃಷ್ಣ ಹೀಗೆ ಮಾಡಲು ಕಾರಣವೇನು?
ಕೃಷ್ಣ ಅಭಿಷೇಕ್ ಹಾಗೂ ಅವರ ಪತ್ನಿ ಇಬ್ಬರೂ ಕಲಾವಿದರು. ಅವರಿಗೆ ಅವಳಿ ಮಕ್ಕಳಿದ್ದು ಅನಾರೋಗ್ಯದಿಂದ ಬಳಲುತ್ತಿದ್ದ ಸಮಯದಲ್ಲಿ ಅವರನ್ನು ಸಂಪರ್ಕಿಸಿ, ಗೋವಿಂದ ಕಷ್ಟ ಸುಖ ವಿಚಾರಿಸಿಕೊಳ್ಳಲಿಲ್ಲ ಎಂಬ ಬೇಸರವೇ ಈ ರಾದ್ಧಾಂತಕ್ಕೆ ಕಾರಣವೆನ್ನಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಗೋವಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಕಪಿಲ್ ಶರ್ಮಾ ಶೋ ಅಶ್ಲೀಲ ಶೋ ಎಂದ ಮಹಾಭಾರತ ನಟ..!
'ಮಕ್ಕಳಿಗೆ ಹುಷಾರಿಲ್ಲ ಎಂದು ತಿಳಿದ ತಕ್ಷಣವೇ ನಾನು ಆಸ್ಪತ್ರೆಗೆ ಭೇಟಿ ನೀಡಿದ್ದೆ. ವೈದ್ಯರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ ಕಾರಣ ಹತ್ತಿರ ಹೋಗಲು ಬಿಡಲಿಲ್ಲ. ದೂರದಲ್ಲಿಯೇ ನಿಂತು ಮಗುವನ್ನು ನೋಡಿದ್ದೇವೆ. ಅವರಿಗೆ ಈ ವಿಚಾರ ತಿಳಿದಿಲ್ಲ. ಅದಕ್ಕೆ ಈ ಮುನಿಸು,' ಎಂದು ಗೋವಿಂದ ಗೊಂದಲಕ್ಕೆ ತೆರೆ ಎಳೆಯಲು ಯತ್ನಿಸಿದ್ದಾರೆ.
ಇದೇ ಸಮಯದಲ್ಲಿ ಕೃಷ್ಣ ಪತ್ನಿ ಗೋವಿಂದ ಅವರ ನೃತ್ಯದ ಬಗ್ಗೆಯೂ ಕಾಮೆಂಟ್ ಮಾಡಿದ್ದಾರೆ. ಕುಟುಂಬದವರ ವಿರುದ್ಧವೇ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ ಎಂದು ಅಲ್ಲಿಯೂ ಮನಸ್ಥಾಪವಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಔಟ್‌ಆಫ್ ಟಾಪಿಕ್ ಆಗಿದ್ದ ಗೋವಿಂದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಎಲ್ಲ ಕುಟುಂಬಗಳಲ್ಲಿ ಮನಸ್ಥಾಪಗಳು ಬರುವಂತೆಯೇ ಗೋವಿಂದ ಕುಟುಂಬದಲ್ಲಿಯೂ ಬಂದಿವೆ. ಆದರೆ, ಅದನ್ನು ಅಲ್ಲಿಗೇ ನಿಲ್ಲಿಸುವ ಬದಲು ಚುಯಿಂಗ್ ಗಮ್‌ನಂತೆ ಎಳೆಯಲಾಗುತ್ತಿದೆ.
ಒಟ್ಟಿನಲ್ಲಿ ಈ ಗೊಂದಲಗಳಿಗೆ ಆದಷ್ಟು ತೆರೆ ಬಿದ್ದು, ಕುಟುಂಬದಲ್ಲಿ ಸದಸ್ಯರ ನಡುವೆ ನಡೆಯುತ್ತಿರುವ ಮುನಿಸು ಅಂತ್ಯವಾಗಲೆಂದು ನಾವೂ ಹಾರೈಸೋಣ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 23, 2020, 3:02 PM IST