Asianet Suvarna News Asianet Suvarna News

ನಟಿ ಆಸಿನ್ ದಾಂಪತ್ಯದಲ್ಲಿ ಬಿರುಗಾಳಿ ವಂದತಿ: ಕೊನೆಗೂ ಮೌನ ಮುರಿದ 'ಗಜನಿ' ನಾಯಕಿ

ನಟಿ ಆಸಿನ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ ಎನ್ನುವ ಸುದ್ದಿಯ ಬಗ್ಗೆ ಕೊನೆಗೂ 'ಗಜನಿ' ನಾಯಕಿ ಮೌನ ಮುರಿದಿದ್ದಾರೆ. 

Ghajini Actress Asin reacts to divorce rumours with husband Rahul Sharma sgk
Author
First Published Jun 28, 2023, 1:53 PM IST

ದಶಕದ ಹಿಂದೆ ಸ್ಟಾರ್ ಆಗಿ ಮೆರೆದಿದ್ದ ಖ್ಯಾತ ನಟಿ ಆಸಿನ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಪತಿ ರಾಹುಲ್ ಶರ್ಮಾ ಅವರಿಂದ ದೂರ ಆಗಿದ್ದು ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ವದಂತಿ ಕೇಳಿ ಬರುತ್ತಿದೆ. ಈ ಬಗ್ಗೆ ಇದೀಗ ನಟಿ ಆಸಿನ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಶೇರ್ ಮಾಡಿದ್ದಾರೆ. ಸದ್ಯ ಹರಿದಾಡುತ್ತಿರುವ ಸುದ್ದಿ ವದಂತಿ ಅಷ್ಟೆ ಎಂದು ಹೇಳುವ ಮೂಲಕ ವಿಚ್ಛೇದನ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ಈ ಬಗ್ಗೆ ದೀರ್ಘವಾದ ಪೋಸ್ಟ್ ಹಂಚಿಕೊಂಡಿದ್ದಾರೆ. 

ಬೇಸಿಗೆ ರಜೆಯ ಮಧ್ಯದಲ್ಲಿ ನಾವು ಪುರಸ್ಪರ ಒಟ್ಟಿಗೆ ಕುಳಿತು ಬೆಳಗ್ಗೆಯ ಉಪಹಾರವನ್ನು ಆನಂದಿಸುತ್ತಿದ್ದೇವೆ. ಕೆಲವು ಆಧಾರ ರಹಿತ ಕಾಲ್ಪನಿಕ ಸುದ್ದಿಗಳನ್ನು ನೋಡಿದೆವು. ನಾವು ಮದುವೆ ಯೋಜನೆ ಮತ್ತು ಒಟ್ಟಿಗೆ ಇರುವ ಸಮಯವನ್ನು ನೆನಪಿಸಿಕೊಳ್ಳುತ್ತಿದ್ದೇವೆ. ನಾವು ಬೇರೆ ಆಗಿದ್ದೀವಿ ಎನ್ನುವ ಸುದ್ದಿ ಕೇಳಿಬರುತ್ತಿದೆ. ನಿಜಕ್ಕೂ? ಇದಕ್ಕಿಂತ ಉತ್ತಮವಾದುದ್ದನ್ನು ಮಾಡಿ.  ಈ ಅದ್ಭುತ ರಜಾದಿನದಲ್ಲಿ ಇದಕ್ಕಾಗಿ 5 ನಿಮಿಷಗಳನ್ನು ವ್ಯರ್ಥ ಮಾಡಿದ್ದಕ್ಕಾಗಿ ನಿರಾಶೆಗೊಂಡೆವು' ಎಂದು ಹೇಳಿದ್ದಾರೆ.

ಮದ್ವೆಯಾಗಿ 12 ವರ್ಷ ಆದ್ಮೇಲೆ ಡಿವೋರ್ಸ್‌; ನೋವು ಹಂಚಿಕೊಂಡ ಗಿಚ್ಚಿ ಗಿಲಿಗಿಲಿ ಜಾನ್ವಿ!

ಆಸಿನ್ ಮತ್ತು ರಾಹುಲ್ ಶರ್ಮಾ 2016ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು. ಇವರ ದಾಂಪತ್ಯಕ್ಕೆ ಒಬ್ಬಳು ಮಗಳು ಕೂಡ ಇದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದ ನಟಿ ಮಗಳ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಆಸಿನ್ ಸೋಶಿಯಲ್ ಮೀಡಿಯಾದಿಂದನೂ ದೂರ ಸರಿದಿದ್ದರು. ಜೊತೆ ಪತಿಯ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಇದು ವಿಚ್ಛೇದನ ವದಂತಿಗೆ ಮತ್ತಷ್ಟು ಪುಷ್ಠಿ ನೀಡುವಂತೆ ಮಾಡಿತ್ತು.  

ಆಸಿನ್ ಸೂಪರ್ ಹಿಟ್ ಗಜನಿ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಖ್ಯಾತಿಗಳಿಸಿದರು. 2005ರಲ್ಲಿ ರಿಲೀಸ್ ಆಗಿದ್ದ ಗಜನಿ ಚಿತ್ರದ ಮೂಲಕ ಅಸಿನ್ ವೃತ್ತಿ ಬದುಕಿಗೆ ತಿರುವು ನೀಡಿದ ಸಿನಿಮಾ. ನಟ ಸೂರ್ಯ ಜೊತೆ ಕಾಣಿಸಿಕೊಂಡಿದ್ದ ಅಸಿನ್ ಅಭಿಮಾನಿಗಳ ಹೃದಯ ಗೆದ್ದರು. ಈ ಸಿನಿಮಾ ಬಳಿಕ ಆಸಿನ್ ಸೌತ್‌ನಿಂದ ಬಾಲಿವುಡ್‌ಗೆ ಜಿಗಿದರು. ಹಿಂದಿಯಲ್ಲಿ ಒಂದಿಷ್ಟು ಸಿನಿಮಾ ಮಾಡುವಾಗಲೇ ಆಸಿನ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 

ನಟಿ ಆಸಿನ್ ದಾಂಪತ್ಯದಲ್ಲಿ ಬಿರುಗಾಳಿ: ವಿಚ್ಛೇದನಕ್ಕೆ ಮುಂದಾದ್ರಾ 'ಗಜನಿ' ನಟಿ?

ಜಾಹೀರಾತಿನ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ ನಟಿ ಆಸಿನ್ ಬಳಿಕ ಸಿನಿಮಾರಂಗದಲ್ಲಿ ಖ್ಯಾತಿ ಗಳಿಸಿದರು. ಸೂರ್ಯ ಜೊತೆ ನಟಿಸಿದ 'ಗಜನಿ' ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಟ್ಟಿತು. ಈ ಸಿನಿಮಾ ಬಾಲಿವುಡ್ ಎಂಟ್ರಿಗೆ ಅವಕಾಶ ಮಾಡಿಕೊಟ್ಟಿತು. ಹಿಂದಿಯಲ್ಲಿ ಆಮೀರ್ ಖಾನ್, ಸಲ್ಮಾನ್ ಖಾನ್, ಅಕ್ಷಯ್‌ ಕುಮಾರ್‌ರಂತಹ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿ ಅಸಿನ್ ಸೈ ಎನಿಸಿಕೊಂಡರು. 

Follow Us:
Download App:
  • android
  • ios