Asianet Suvarna News Asianet Suvarna News

ಅಯ್ಯೋ ಪ್ಯಾಂಟ್ ಜಾರಿದ್ದು ಗೊತ್ತಾಗಿಲ್ವಾ? ಒಳ ಉಡುಪು ತೋರಿಸುತ್ತಾ ಬಂದ ಜೆನಿಲಿಯಾ ಸಖತ್ ಟ್ರೋಲ್

ಒಳ ಉಡುಪು ತೋರಿಸುತ್ತಾ ಬಂದ ಜೆನಿಲಿಯಾ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. 

genelia d'souza gets trolled for dress sgk
Author
First Published Dec 27, 2022, 1:21 PM IST

ಬಹುಭಾಷ ನಟಿ ಜೆನಿಲಿಯಾ ಆಗಾಗ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಜೆನಿಲಿಯಾ ಆಗಾಗ ರೀಲ್ಸ್ ಮತ್ತು ಕ್ಯೂಟ್ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಜೆನಿಲಿಯಾ ಪತಿ, ಖ್ಯಾತ ನಟ ರಿತೇಶ್ ದೇಶ್‌ಮುಖ್ ಜೊತೆ ಪಾರ್ಟಿ, ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಸ್ಟಾರ್ ಜೋಡಿ ಸದ್ಯ ವೇದ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಅನೇಕ ವರ್ಷಗಳ ಜೆನಿಲಿಯಾ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಈ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರುವ ಜೆನಿಲಿಯಾ ದಂಪತಿ ಮುಂಬೈನ ಅನೇಕ ಪ್ರದೇಶಗಳಿಗೆ ಭೇಟಿ ನೀಡಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. 

ಈ ನಡುವೆ ಜೆನಿಲಿಯಾ ತನ್ನ ಬಟ್ಟೆ ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಇತ್ತೀಚಿಗಷ್ಟೆ ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದ ಜೆನಿಲಿಯಾ ಒಳ ಉಡುಪು ತೋರಿಸುತ್ತಾ ಬಂದಿದ್ದಾರೆ. ಕಾರಿನಿಂದ ಇಳಿದ ಜೆನಿಲಿಯಾ ಪ್ಯಾಂಟ್ ಜಾರಿತ್ತು. ಒಳ ಉಡುಪು ಕ್ಯಾಮರಾದಲ್ಲಿ ಸೆರೆಯಾಗಿದೆ. ಅಯ್ಯೋ ಜೆನಿಲಿಯಾ ಪ್ಯಾಂಟ್ ಜಾರಿದೆ ಎಂದು ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಇನ್ನು  ಕೆಲವರು ಅದು ಹೊಸ ಸ್ಟೈಲ್ ಎಂದು ಹೇಳಿದ್ದಾರೆ. ಅಷ್ಟು ಗೊತ್ತಾಗಿಲ್ವಾ ಜೆನಿಲಿಯಾ ಎಂದು ಇನ್ನು ಅನೇಕರು ಕಾಮೆಂಟ್ ಮಾಡಿ ಕಾಲೆಳೆಯುತ್ತಿದ್ದಾರೆ. 

ಅಂದಹಾಗೆ ಟ್ರೋಲ್‌ಗಳ ಕಾಟ ಜೆನಿಲಿಯಾಗೆ ಇದೇ ಮೊದಲಲ್ಲ. ಅನೇಕ ಬಾರಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ವಿಡಿಯೋಗಳನ್ನು ಶೇರ್ ಮಾಡುತ್ತಿದ್ದ ಜೆನಿಸಿಯಾಗೆ ಅನೇಕರು ಆಂಟಿ, ವಯಸ್ಸಾದ್ರು ಚಿಕ್ಕ ಮಕ್ಕಳ ಹಾಗೆ ನಡೆದುಕೊಳ್ತಾರೆ ಅಂತೆಲ್ಲ ಟ್ರೋಲ್ ಮಾಡಿದ್ದರು. ಆದರೂ ಜೆನಿಲಿಯಾ ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಟ್ರೋಲ್ ಆಗಿದ್ದಾರೆ. 

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಮನೆಗೆ ಜೆನಿಲಿಯಾ ದಂಪತಿ ಭೇಟಿ

ಅಂದಹಾಗೆ ಜೆನಿಲಿಯಾ ಮತ್ತು ರಿತೇಶ್ ದೇಶ್‌ಮುಖ್ ಇಬ್ಬರೂ ವೇದ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಸೌತ್ ಸೂಪರ್ ಹಿಟ್ ಚಿತ್ರದ ರಿಮೇಕ್ ಆಗಿದೆ. ಸಮಂತಾ ಮತ್ತು ನಾಗಚೈತನ್ಯ ನಟಿಸಿದ್ದ ಮಜಿಲಿ ಸಿನಿಮಾದ ರಿಮೇಕ್ ಆಗಿದೆ. ಈ ಸಿನಿಮಾ ತೆಲುಗಿನಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಸಮಂತಾ ಮತ್ತು ನಾಗ ಚೈತನ್ಯ ಮದುವೆ ಬಳಿಕ ಒಟ್ಟಿಗೆ ಕಾಣಿಸಿಕೊಂಡಿದ್ದ ಸಿನಿಮಾವಿದು. ಅದೇ ಸಿನಿಮಾ ಇದೀಗ ಬಾಲಿವುಡ್ ಕ್ಯೂಟ್ ಕಪಲ್ ಜೆನಿಲಿಯಾ ಮತ್ತು ರಿತೇಶ್ ನಟಿಸಿದ್ದಾರೆ.

ಜಿಮ್ ಹೊರಗೆ ಕಾಯುತ್ತಿದ್ದ ವಿಶೇಷ ಅತಿಥಿಯನ್ನು ಮುದ್ದಿಸಿದ ಜೆನಿಲಿಯಾ; ಕ್ಯೂಟ್ ವಿಡಿಯೋ ವೈರಲ್

ಅಂದಹಾಗೆ ವೇದ್ ಮರಾಠಿಯಲ್ಲಿ ಸಿದ್ಧವಾದ ಸಿನಿಮಾ. ವಿಶೇಷ ಎಂದರೆ ಈ ಸಿನಿಮಾಗೆ ರಿತೇಶ್ ದೇಶ್‌ಮುಖ್ ಅವರೇ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಆಗಿದ್ದು ಈ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಅಂದಹಾಗೆ ಈ ಸಿನಿಮಾ ಇದೇ ತಿಂಗಳು ಡಿಸೆಂಬರ್ 30ರಂದು ತೆರೆಗೆ ಬರ್ತಿದೆ.  

Follow Us:
Download App:
  • android
  • ios