ಕಾಲಿವುಡ್ ನಟ, ನಿರ್ಮಾಪಕ ಹಾಗೂ ವಿತರಕ ವಿಶಾಲ್ ವೈಯಕ್ತಿಕ ಜೀವನದ ಬಗ್ಗೆ ಹಲವಾರು ಸೆಲೆಬ್ರಿಟಿಗಳು ಈಗಾಗಲೇ ಕಾಮೆಂಟ್ ಮಾಡಿದ್ದಾರೆ. ವಿಶಾಲ್ ಗುಣದ ಬಗ್ಗೆ ಯಾರೇ ಮಾತನಾಡಿದರೂ ನಟ ಸುಮ್ಮನಿರುತ್ತಾನೆ ಆದರೆ ಹಿಂದೆ ಏನು ಆಗುತ್ತಿದೆ ಎಂಬುವುದು ಮಾತ್ರ ಯಾರಿಗೂ ಗೊತ್ತಿಲ್ಲ.

ಮದ್ರಾಸ್ ಹೈಕೋರ್ಟ್‌ ನೋಟಿಸ್‌; 8 ಕೋಟಿ ನೀಡುವಂತೆ ನಟ ವಿಶಾಲ್‌ ವಿರುದ್ಧ ದೂರು? 

ಹೌದು! ಇತ್ತೀಚಿಗೆ ನಟಿ ಗಾಯತ್ರಿ  ರಘುರಾಮ್‌ ವಿಶಾಲ್ ವಿರುದ್ಧ ಟ್ಟೀಟ್ ಮಾಡಿದ್ದಾರೆ. 'ಮನಸೆಲ್ಲಾ ನೀನೇ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿರುವ ಗಾಯತ್ರಿ ಬಿಗ್ ಬಾಸ್‌ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ನಂತರ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡರು. ಆನಂತರ ಬಿಜೆಪಿ ಸೇರಿಕೊಂಡು ರಾಜಕಾರಣಿ ಆಗಿದ್ದಾರೆ.

ಗಾಯತ್ರಿ ಟ್ಟೀಟ್:

' ನಟ ವಿಶಾಲ್ ಮತ್ತು ಸ್ನೇಹಿತರು ಚಿತ್ರರಂಗಕ್ಕೆ ಬರುವ ಹೊಸ ನಟಿಯರ ಮೇಳೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅವರನ್ನು ಬಳಸಿಕೊಂಡು ಬಿಸಾಡುತ್ತಾರೆ. ನಾನು ಚಿತ್ರರಂಗದಲ್ಲಿ ಇರುವ ವ್ಯಕ್ತಿಯಾಗಿ ಇದರ ಬಗ್ಗೆ ಧ್ವನಿ  ಎತ್ತಬೇಕಿದೆ. ವಿಶಾಲ್ ನೀವು ಮೊದಲು ನಿನ್ನ ಸುತ್ತಲೂ ನೋಡು ಏನಾಗುತ್ತಿದೆ ಎಂದು. ನೀನು ಮತ್ತು ನಿನ್ನ ಗೆಳೆಯರು ಅದೇ ವಿಭಾಗಕ್ಕೆ ಸೇರಿದವರು. ಬಳಸಿ ಬಿಸಾಡುವುದು ನಿಮಗೆ ಅಭ್ಯಾಸವಾಗಿದೆ.  ಸಾಕಷ್ಟು ಮಂದಿ ನಟಿಯರು ನಿಮ್ಮಿಂದ ತೊಂದರೆ ಅನುಭವಿಸಿದ್ದಾರೆ. ನೀನು ಪದೇ ಪದೇ ಪೀಡಿಸುವ ಕಾರಣಕ್ಕೆ ನಟಿಯರು ನಿನ್ನನ್ನು ಕಂಡು ದೂರು ಓಡುತ್ತಾರೆ. ಈ ವಿಚಾರ ನಿನಗೆ ಗೊತ್ತಾ? ಚಿತ್ರರಂಗದ ಯುವತಿಯರನ್ನು ಕಾಪಾಡಲು ನೀನು ನಿನ್ನ ಹೀರೋತನ ಪ್ರದರ್ಶಿಬೇಕು ಆದರೆ ನೀನು ವಿಲನ್ ರೀತಿ ವರ್ತಿಸಿದೆ' ಎಂದು ಗಾಯತ್ರಿ ಟ್ಟೀಟ್ ಮಾಡಿದ್ದಾರೆ.