ಬ್ರಿಟಿಷ್‌ನ ಟಿವಿ ಸರಣಿ 'ದಿ ಆವೇಂಜರ್ಸ್'ನಲ್ಲಿ ಅಭಿನಯಿಸಿದ ಡಯಾನ್ ರಿಗ್ (82) ಕೊನೆ ಉಸಿರೆಳೆದಿದ್ದಾರೆ.
1960ರಲ್ಲಿ ಐಕಾನಿಕ್ ಸ್ಪೈ ಸೀರಿಸ್‌ನಲ್ಲಿ ಅಭಿನಯಿಸುವ ಮೂಲಕ ಡಯನಾ ರಿಗ್ ಬಾಂಡ್ ನಟಿಯಾಗಿ ಗುರುತಿಸಿಕೊಂಡಿದ್ದರು. ದಿ ಆವೆಂಜರ್ಸ್, ಗೇಮ್ ಆಫ್ ಥ್ರೋನ್ಸ್ ಸರಣಿಗಳಲ್ಲಿ ಮಿಂಚಿದ ನಟಿ ಡಿಯಾನ ಇನ್ನಿಲ್ಲ ಎಂಬ ಸುದ್ದಿ ಜನರಲ್ಲಿ ಆಘಾತ ಉಂಟುಮಾಡಿದೆ. ಪುತ್ರಿ ರೇಚಲ್ ತಾಯಿ ನಿಧನ ಬಗ್ಗೆ ಮಾಹಿತಿ ನೀಡಿದ್ದಾರೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸ್ಟಾರ್ ನಟ ಚಾಡ್ವಿಕ್ ಬೋಸ್‌ಮನ್ ನಿಧನ
'ಮಾರ್ಚ್‌ನಲ್ಲಿ ರಿಗ್‌ಗೆ ಕ್ಯಾನ್ಸರ್ ಇರುವ ವಿಚಾರ ತಿಳಿದು ಬಂದಿತ್ತು. ಕೊನೆ ದಿನಗಳನ್ನು ತುಂಬಾನೇ ಸಂತೋಷದಿಂದ ಕಳೆದಳು. ಮಕ್ಕಳ ಜೊತೆ ಸಮಯ ಕಳೆಯುತ್ತಾ, ತಮ್ಮ ಸಿನಿಮಾ ಜರ್ನಿ ಮೆಲುಕು ಹಾಕಿದ್ದಳು. ಸ್ಫೂರ್ತಿ ನೀಡುವಂಥ ಆಕೆಯ ಮಾತುಗಳನ್ನು ನಾನು ಮಿಸ್ ಮಾಡಿಕೊಳ್ಳುವೆ,' ಎಂದು ಪುತ್ರಿ ಹೇಳಿದ್ದಾರೆ.
![]()
ದಿ ಆವೆಂಜರ್ಸ್ ಸರಣಿಯಲ್ಲಿ ಎಮ್ಮಾ ಸಿಪ್ಪೆ ಎಂಬ ಸ್ಪೈ ಏಜೆಂಟ್ ಪಾತ್ರದಲ್ಲಿ ಈ ನಟಿ ಕಾಣಿಸಿಕೊಂಡಿದ್ದರು. 1969ರಲ್ಲಿ ಜೇಮ್ಸ್ ಬಾಂಡ್ ಥ್ರಿಲರ್ ಮೆಜೆಸ್ಟಿ ಸೀಕ್ರೆಟ್‌ನಲ್ಲಿಯೂ ನಟಿಸಿದ್ದು, ಇದು ಈ ನಟಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ಗೇಮ್ ಆಫ್ ಥ್ರೋನ್ಸ್‌ನಲ್ಲಿ ಒಲೆನ್ನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಏಮಿ ಅವಾರ್ಡ್‌ಗೆ ನಾಮಿನೇಟ್ ಆಗಿದ್ದರು.
ರೇಪ್ ದೃಶ್ಯಗಳಲ್ಲೇ ನಟಿಸಿದ್ದ 27 ವರ್ಷದ ನಟಿ ಕ್ಯಾನ್ಸರ್‌ಗೆ ಬಲಿ
ಡಯಾನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಲವು ಹಾಲಿವುಡ್ ಗಣ್ಯರು ಪ್ರಾರ್ಥಿಸಿದ್ದಾರೆ.
