ರೇಪ್ ದೃಶ್ಯಗಳಲ್ಲೇ ನಟಿಸಿದ್ದ 27 ವರ್ಷದ ನಟಿ ಕ್ಯಾನ್ಸರ್ಗೆ ಬಲಿ
ಬಾಲಿವುಡ್ನ ಹಳೆಯ ನಟಿ ನಜೀಮಾ ಅವರಿಗೆ ಸಂಬಂಧಿಸಿದ ವಿಷಯ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ನಾಯಕಿಯ ಫ್ರೆಂಡ್ ಅಥವಾ ಸಹೋದರಿ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ ನಜೀಮಾ ಬಾಲಿವುಡ್ನಲ್ಲಿ ಅತಿಹೆಚ್ಚು ಅತ್ಯಾಚಾರದ ದೃಶ್ಯಗಳಲ್ಲಿ ನಟಿಸಿದ್ದರು. ಅವರು ತಮ್ಮ 27ನೇ ವಯಸ್ಸಿಗೆ ಕ್ಯಾನ್ಸರ್ಗೆ ತುತ್ತಾದರು ಈ ನಟಿ.
ಬಾಲಿವುಡ್ನಲ್ಲಿ 60 - 70 ರ ದಶಕದ ನಟಿಯರಲ್ಲಿ ನಜೀಮಾರ ಹೆಸರು ಮೊದಲು ನೆನಪಿಗೆ ಬರುತ್ತದೆ. ವೃತ್ತಿಜೀವನದಲ್ಲಿ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದ ನಟಿ ಇದ್ದಕ್ಕಿದ್ದಂತೆ ಮಾರಣಾಂತಿಕ ಕಾಯಿಲೆಗೆ ಒಳಗಾಗಿ ಜಗತ್ತನ್ನು ತೊರೆದರು.
ಚಲನಚಿತ್ರಗಳಲ್ಲಿ, ನಜೀಮಾ ಹೆಚ್ಚಾಗಿ ಸಹೋದರಿ ಅಥವಾ ನಟಿಯ ಸ್ನೇಹಿತೆಯ ಪಾತ್ರ ನಿರ್ವಹಿಸಿದ್ದಾರೆ. ಮುಗ್ಧ ಮತ್ತು ಸುಂದರವಾದ ಮುಖದ ನಜೀಮಾರನ್ನು , ನಿರ್ದೇಶಕರು ನಾಯಕನ ಸಹೋದರಿಯ ಪಾತ್ರಕ್ಕಾಗಿ ಇಷ್ಟಪಡುತ್ತಿದ್ದರು.
1948 ರಲ್ಲಿ ನಾಸಿಕ್ನಲ್ಲಿ ಜನಿಸಿದ ನಜೀಮಾ ಮೊದಲಿನಿಂದಲೂ ಚಲನಚಿತ್ರಗಳ ಬಗ್ಗೆ ಆಸಕ್ತಿ ಹೊಂದಿದ್ದರು. ಬೇಬಿ ಚಂದ್, ಹಮ್ ಪಾಂಚಿ ಏಕ್ ದಾಲ್ ಕೆ ಮುಂತಾದ ಚಿತ್ರಗಳಲ್ಲಿ ಬಾಲ ಕಲಾವಿದರಾಗಿ ಕೆಲಸ ಮಾಡಿದರು.
60 ಮತ್ತು 70 ರ ದಶಕದಲ್ಲಿ ಮಹಿಳೆಯರು ಮನೆಯಲ್ಲಿ ಮತ್ತು ಸಮಾಜದಲ್ಲಿ ಸಾಮಾಜಿಕ ಕಿರುಕುಳ ಹಾಗೂ ಲೈಂಗಿಕ ಕಿರುಕುಳವನ್ನು ಹೆಚ್ಚು ಎದುರಿಸುತ್ತಿದ್ದರು. ಈ ಅನ್ಯಾಯವನ್ನು ಸಿನಿಮಾದಲ್ಲೂ ತೆರೆಯ ಮೇಲೆ ತೋರಿಸಿಲಾಗುತ್ತಿತ್ತು ಮತ್ತು ಈ ಪಾತ್ರಕ್ಕೆ ನಜೀಮಾ ನಿರ್ದೇಶಕರ ಮೊದಲ ಆಯ್ಕೆಯಾಗಿದ್ದರು.
ಹೆಚ್ಚಿನ ಚಿತ್ರಗಳಲ್ಲಿ ರೇಪ್ ಸೀನ್ಗಳನ್ನು ಮಾಡಿದ ಏಕೈಕ ಬಾಲಿವುಡ್ ನಟಿ ನಜೀಮಾ.
ನಿಶಾನ್ (1965), ಅರ್ಜು (1965), ದಿಲ್ಲಗಿ, (1966), ತಮನ್ನಾ (1969), ಅಂಜನಾ (1969) ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು ಹೆಚ್ಚಾಗಿ ಸಹೋದರಿ ಪಾತ್ರವನ್ನು ಪಡೆಯುತ್ತಿದ್ದರು.
1972 ರಲ್ಲಿ ಬಿಡುಗಡೆಯಾದ 'ಬೀಮನ್' ಚಿತ್ರದ ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟ ನಜೀಮಾ ಮೊದಲ ಚಿತ್ರದಲ್ಲೇ ಫಿಲ್ಮ್ಫೇರ್ ಪ್ರಶಸ್ತಿಯನ್ನೂ ಗಳಿಸಿದ್ದರು.
ಕೊನೆಯ ಚಿತ್ರ 'ಲವ್ ಅಂಡ್ ಗಾಡ್' ಇದು ಅವರ ಮರಣದ ನಂತರ ಬಿಡುಗಡೆಯಾಯಿತು. 1975 ರಲ್ಲಿ ಕ್ಯಾನ್ಸರ್ ನಿಂದ 27 ನೇ ವಯಸ್ಸಿನಲ್ಲಿ ನಿಧನರಾದರು ನಟಿ ನಜೀಮಾ.