Asianet Suvarna News Asianet Suvarna News

ಅಲ್ಲು ಅರ್ಜುನ್ 'ಪುಷ್ಪ-2'ನಲ್ಲಿ ಫಾರಿನ್ ಹಿರೋಯಿನ್; ರಶ್ಮಿಕಾ ಕಥೆಯೇನು?

ಪುಷ್ಪ-2 ಸಿನಿಮಾಗೆ ಫಾರಿನ್ ನಾಯಕಿ ಎಂಟ್ರಿ ಕೊಡುತ್ತಿದ್ದಾರಂತೆ.  ಪುಷ್ಪ-2 ತಂಡ ಆರ್ ಆರ್ ಆರ್ ಸಿನಿಮಾವನ್ನು ಪಾಲೋ ಮಾಡುತ್ತಿದೆ. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲಿ ಫಾರಿನ್ ನಾಯಕಿ ಮಿಂಚಿದ್ದರು. ಇದೀಗ ಪುಷ್ಪ-2 ಸಿನಿಮಾಗೂ ವಿದೇಶಿ ಹಿರೋಯಿನ್ ಕರೆತರುವ ನಿರ್ಧಾರ ಮಾಡಿದೆಯಂತೆ ಸಿನಿಮಾತಂಡ.

Foreign Actress To Be Roped In For Allu arjun starrer Pushpa 2 sgk
Author
Bengaluru, First Published Jun 24, 2022, 10:50 AM IST

ಅಲ್ಲುಅರ್ಜುನ್ ನಟನೆಯ ಪುಷ್ಪ (Pushpa) ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ (Director Sukumar) ಸಾರಥ್ಯದಲ್ಲಿ ಬಂದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಂದ ಈ ಸಿನಿಮಾಗೆ ಎಲ್ಲಾ ಭಾಷೆಯ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಪುಷ್ಪ-2 (Pushpa-2)ಸಿನಿಮಾಗೆ ಚಿತ್ರತಂಡ ಸಜ್ಜಾಗಿದೆ. ಚಿತ್ರೀಕರಣಕ್ಕೆ ಹೊರಡಲು ತಯಾರಿ ನಡೆಸುತ್ತಿದೆ. ಮೂಲಗಳ ಪ್ರಕಾರ ಮೊದಲ ಭಾಗದ ದೊಡ್ಡ ಮಟ್ಟದ ಸಕ್ಸಸ್‌ ಹಿನ್ನಲ್ಲೇ 2ನೇ ಭಾಗದ ಕಥೆಯಲ್ಲಿ ಬದಲಾವಣೆ ಮಾಡಲಾಗಿದೆ, ಮತ್ತಷ್ಟು ಪವರ್ ಫುಲ್ ಆಗಿ ಪುಷ್ಪ-2 ಅಭಿಮಾನಿಗಳ ಮುಂದೆ ಬರಲಿದೆ ಹಾಗಾಗಿ ತಡವಾಗತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. 

ಈ ನಡುವೆ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ಬಹಿರಂಗವಾಗಿದ್ದು ಸಾಕಷ್ಟು ಚರ್ಚೆ ನಡೆಯುತ್ತಿದೆ. ಮುಖ್ಯವಾಗಿ ಸಿನಿಮಾದ ನಾಯಕಿ ಪಾತ್ರ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಈಗಾಗಲೇ ಸಿನಿಮಾದ ಕಥೆ ಲೀಕ್ ಆಗಿದ್ದು ನಾಯಕಿ ರಶ್ಮಿಕಾ ಪಾತ್ರ ಆರಂಭದಲ್ಲೇ ಕೊನೆಗೊಳ್ಳಲಿದೆ ಎನ್ನುವ ಮಾತು ಕೇಳಿಬರುತ್ತಿದೆ.  ಪುಷ್ಪ-2ನಲ್ಲಿ ರಶ್ಮಿಕಾ ಅವರ ಶ್ರೀವಲ್ಲಿ ಪಾತ್ರ ಹೆಚ್ಚು ಇರುವುದಿಲ್ಲವಂತೆ. ಕಾರಣ ಶ್ರೀವಲ್ಲಿ ಸಿನಿಮಾದ ಪ್ರಾರಂಭದಲ್ಲಿಯೇ ಸಾಯುತ್ತಾಳೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಇದನ್ನು ನಿರ್ದೇಶಕರು ತಳ್ಳಿ ಹಾಕಿದ್ದಾರೆ. 

ಅಲ್ಲು ಅರ್ಜುನ್ 'ಪುಷ್ಪ-2' ಸಿನಿಮಾದ ಕಥೆ ಲೀಕ್; ರಶ್ಮಿಕಾ ಪಾತ್ರ ಇಷ್ಟೇನಾ?

ಇದೀಗ ಕೇಳಿಬರುತ್ತಿರುವ ಮತ್ತೊಂದು ಸುದ್ದಿ ಪುಷ್ಪ-2 ಸಿನಿಮಾಗೆ ಫಾರಿನ್ ನಾಯಕಿ ಎಂಟ್ರಿ ಕೊಡುತ್ತಿದ್ದಾರಂತೆ. ಪುಷ್ಪ-2 ತಂಡ ಆರ್ ಆರ್ ಆರ್ (RRR) ಸಿನಿಮಾವನ್ನೇ ಫಾಲೋ ಮಾಡುತ್ತಿದೆ. ರಾಜಮೌಳಿ (Rajamouli) ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲಿ ಫಾರಿನ್ ನಾಯಕಿ ಮಿಂಚಿದ್ದರು. ಇದೀಗ ಪುಷ್ಪ-2 ಸಿನಿಮಾಗೂ ವಿದೇಶಿ ಹಿರೋಯಿನ್ ಕರೆತರುವ ನಿರ್ಧಾರ ಮಾಡಿದೆಯಂತೆ ಸಿನಿಮಾತಂಡ. ಅಂದಹಾಗೆ ಪುಷ್ಪ-2 ವಿದೇಶಿ ಚಿತ್ರೀಕರಣಕ್ಕೆ ಹೊರಡಲು ಸಜ್ಜಾಗಿದೆ. ವಿದೇಶದಲ್ಲೂ ಪುಷ್ಪನ ಹವಾ ಹೆಚ್ಚಾಗಲಿದೆ. ಸಿಂಗಾಪುರ್, ತೈವಾನ್, ಜಪಾನ್ ಸೇರಿದಂತೆ ಅನೇಕ ಕಡೆ ಚಿತ್ರೀಕರಣ ಮಾಡಲು ನಿರ್ಧರಿಸಿದೆ. ಹಾಗಾಗಿ ವಿದೇಶಿ ನಾಯಕಿಯನ್ನು ಆಯ್ಕೆ ಮಾಡುತ್ತಿದೆ ಸಿನಿಮಾತಂಡ. ವಿದೇಶಿ ನಾಯಕಿಯ ಎಂಟ್ರಿಯಾಗುತ್ತದೆ ಅಂದ್ಮೇಲೆ ರಶ್ಮಿಕಾ ಪಾತ್ರ ಆರಂಭದಲ್ಲಿ ಮಾತ್ರ ಇರಲಿದೆ ಎನ್ನುವ ಸುದ್ದಿಗೆ ಮತ್ತಷ್ಟು ಪುಷ್ಟಿಸಿಕ್ಕಂತೆ ಆಗಿದೆ. 

ಸಲ್ಮಾನ್‌ ಖಾನ್‌ 'ನೋ ಎಂಟ್ರಿ' ಗೆ ಎಂಟ್ರಿ ಕೊಡ್ತಾರಂತೆ ರಶ್ಮಿಕಾ ಮಂದಣ್ಣ..!

ಅಂದಹಾಗೆ ಪುಷ್ಪ-2ನಲ್ಲಿ ವಿಲನ್ ಆಗಿ ದಕ್ಷಿಣ ಭಾರತದ ಖ್ಯಾತ ನಟ ಫಹಾದ್ ಫಾಸಿಲ್ ಕಾಣಿಸಿಕೊಂಡಿದ್ದಾರೆ. ಫಹಾದ್ ಪಾತ್ರ ಮೊದಲ ಭಾಗದ ಕೊನೆಯಲ್ಲಿ ತೊರಿಸಲಾಗಿದೆ. ಪೊಲೀಸ್ ಅಧಿಕಾರಿಯಾಗಿ ಫಹಾದ್ ಎಂಟ್ರಿ ಕೊಟ್ಟಿದ್ದಾರೆ. ಪಾರ್ಟ್-1 ರಲ್ಲಿ ಫಹಾದ್ ಮತ್ತು ಅಲ್ಲು ಅರ್ಜುನ್ ನಡುವಿನ ದೃಶ್ಯ ಪಾರ್ಟ್-2ನ ತೀವ್ರರತೆಯನ್ನು ತೋರುತ್ತಿತ್ತು. ಹಾಗಾಗಿ ಪಾರ್ಟ್-2ನಲ್ಲಿ ಫಹಾದ್ ಮತ್ತು ಅಲ್ಲು ಅರ್ಜುನ್ ನಡುವಿನ ಜಿದ್ದಾಜಿದ್ದಿಯ ದೃಶ್ಯಗಳೇ ಜಾಸ್ತಿ ಇರುವ ಸಾದ್ಯತೆ ಇದೆ. ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.     

Follow Us:
Download App:
  • android
  • ios