ಚಾಕು ತೋರಿಸಿ ಖ್ಯಾತ Rapper ದೇವ್ ಆನಂದ್ ಅಪಹರಣ: 5 ಮಂದಿಯ ಬಂಧನ

ಚಾಕು ತೋರಿಸಿ ಖ್ಯಾತ Rapper ದೇವ್ ಆನಂದ್ ಅಪಹರಣ ಪ್ರಕರಣದಲ್ಲಿ ಚೆನ್ನೈ ಪೊಲೀಸರು 5 ಮಂದಿಯನ್ನು ಬಂಧಸಿ. ಉಳಿದವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.  

Five arrested for kidnapped Tamil rapper Dev Anand in Chennai sgk

ತಮಿಳಿನ ಖ್ಯಾತ ರ್ಯಾಪರ್ ದೇವ್ ಆನಂದ್ ಅಪಹರಣ ಪ್ರಕಣದಲ್ಲಿ 5 ಮಂದಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ದೇವ್ ಆನಂದ್ ಅವರನ್ನು ಗುರುವಾರ (ಜೂನ್ 22) ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಕಿಡ್ನಾಪ್ ಮಾಡಲಾಗಿತ್ತು. ದೇವ್ ಆನಂದ್ ಮನೆಗೆ ಮರಳುತ್ತಿದ್ದಾಗ 10 ಜನರ ಗ್ಯಾಂಗ್ ಅಟ್ಯಾಕ್ ಮಾಡಿ ಚಾಕು ತೋರಿಸಿ ಅಪಹರಣ ಮಾಡಲಾಗಿದೆ. ಇದೀಗ 5 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ದೇವ್ ಆನಂದ್ ಅವರನ್ನು ಪುದುಕ್ಕೊಟ್ಟೈನಲ್ಲಿ ರಕ್ಷಣೆ ಮಾಡಲಾಗಿದೆ. ಸುರಕ್ಷಿತರಾಗಿದ್ದಾರೆ ಎನ್ನಲಾಗಿದೆ. 
  
ಪೊಲೀಸರ ಪ್ರಕಾರ, ಮಧುರೈನ 29 ವರ್ಷದ ರ್ಯಾಪರ್ ಕಾರ್ಯಕ್ರಮ ನೀಡಿ ನಂತರ ಕಲ್ಪಾಕ್ಕಂ ಕಡೆಗೆ ಹೋಗುತ್ತಿದ್ದರು. ತನ್ನ ಇಬ್ಬರು ಸ್ನೇಹಿತರನ್ನು ತಿರುವೆರ್ಕಾಡುನಲ್ಲಿ ಡ್ರಾಪ್ ಮಾಡಬೇಕಾಯಿತು. ಮಧ್ಯರಾತ್ರಿಯ ಸುಮಾರಿಗೆ ಕಾರು ಮಧುರವಾಯಲ್ ಬೈಪಾಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ ದ್ವಿಚಕ್ರ ವಾಹನವೊಂದು ಹಿಂದಿನಿಂದ ಕಾರಿಗೆ ಡಿಕ್ಕಿ ಹೊಡೆದಿದೆ'  ಎಂದು ಮಾಹಿತಿ ನೀಡಿದ್ದಾರೆ. 

'ದೇವ್ ಆನಂದ್ ಮತ್ತು ಅವರ ಸ್ನೇಹಿತರು ಕಾರಿಗಾದ ಹಾನಿಯನ್ನು ಪರಿಶೀಲಿಸಲು ಇಳಿದರು. ಅದೇ ಸಮಯದಲ್ಲಿ, ಎರಡು ಕಾರುಗಳಲ್ಲಿ ಬಂದ 10 ಜನರ ತಂಡವು ದೇವ್ ಆನಂದ್ ಅವರನ್ನು ಚಾಕು ತೋರಿಸಿ ಅಪಹರಿಸಿದರು. ಜೊತೆಯಲ್ಲಿದ್ದ ದೇವ್ ಸ್ನೇಹಿತರಿಗೆ ಬೆದರಿಕೆ ಹಾಕಿ ಅಹಪರಿಸಿದರು' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರ್‍ಯಾಪ್ ಗಾಯಕನಾಗಲು ಕಳ್ಳತನ ಮಾಡ್ದ: ಹಾಡು ಹೇಳಿಯೇ ಜೈಲು ಪಾಲಾದ ಯುವಕ..!

ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ತಿರುವೆರ್ಕಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸಿದ್ದರು. ಅರೋಪಿಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ರಾಪರ್‌ ದೇವ್ ಕರೆದುಕೊಂಡು ಮಧುರೈಗೆ ಹೋಗುತ್ತಿದ್ದಾರೆ ಎಂಬ ಸುಳಿವಿನ ಆಧಾರದ ಮೇಲೆ, ಪೊಲೀಸರು ತಮ್ಮ ಮಧುರೈ ಕೌಂಟರ್‌ಪಾರ್ಟ್‌ಗಳನ್ನು ಎಚ್ಚರಿಸಿ ಅಪಹರಣಕಾರಲ್ಲಿ 5 ಮಂದಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಅವರನ್ನು ಚೆನ್ನೈಗೆ ಕರೆತರಲಾಗಿದ್ದು ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆತ್ತಲೆ ಹೆಣ್ಣಿನ ಮೇಲೆ ಆಹಾರವಿಟ್ಟು ತಿಂದ ಸ್ಟಾರ್ ನಟ; ವಿಡಿಯೋ ವೈರಲ್,ಸ್ತ್ರೀ ದ್ವೇಷಿ ಎಂದ ನೆಟ್ಟಿಗರು

ಪ್ರಾಥಮಿಕ ತನಿಖೆಯ ನಂತರ, ಆನಂದ್ ಅವರ ಸಹೋದರ ಸಿರಂಜೀವಿ ಅವರು ಚಿಟ್ ಫಂಡ್ ಯೋಜನೆಯಲ್ಲಿ ಮಧುರೈನಲ್ಲಿ ಹಲವಾರು ಜನರಿಂದ 2.5 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ. ಆದರೆ ಆ ಹಣವನ್ನು ಹಿಂದಿರುಗಿಸಲು ವಿಫಲರಾಗಿದ್ದಾರೆ ಎನ್ನುವ ಕಾರಣಕ್ಕೆ ದೇವ್ ಮೋಹನ್ ಅವರನ್ನು ಅಪಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios