ತೃತೀಯಲಿಂಗಿಗಳು ಕೂಡ ಹೆಣ್ಮಕ್ಕಳಂತೆ ಸುಖಪಡ್ತಾರಾ: ಟ್ರಾನ್ಸ್‌ಜಂಡರ್‌ ನಟಿ ಬಳಿ ಪ್ರಶ್ನಿಸಿದ್ದ ಮಲೆಯಾಳಂ ನಟ

ಮಲೆಯಾಳಂ ಚಿತ್ರರಂಗದ ಬಗ್ಗೆ ಜಸ್ಟೀಸ್ ಹೇಮಾ ಕಮಿಟಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದ್ದಂತೆ ಒಬ್ಬೊಬ್ಬರೇ ಚಿತ್ರರಂಗದಲ್ಲಿ ತಾವು ಅನುಭವಿಸಿದ ಕಿರುಕುಳದ ಬಗ್ಗೆ ಬಾಯ್ಬಿಡುತ್ತಿದ್ದಾರೆ.  ಅದೇ ರೀತಿ ಈಗ ಮಲೆಯಾಳಂ ಸಿನಿಮಾ ರಂಗದ ಮೊದಲ ತೃತೀಯ ಲಿಂಗಿ ನಟಿ ಅಂಜಲಿ ಅಮೀರ್ ಅವರು ಕೂಡ ತಮಗಾದ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ.

first transgender actor in Mollywood Anjali Ameer opened up her bad experience in mollywood akb

ಮಲೆಯಾಳಂ ಚಿತ್ರರಂಗದ ಕುರಿತು ಜಸ್ಟೀಸ್ ಹೇಮಾ ಕಮಿಟಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದ್ದಂತೆ ಒಬ್ಬೊಬ್ಬರೇ ಚಿತ್ರರಂಗದಲ್ಲಿ ತಾವು ಅನುಭವಿಸಿದ ಕಿರುಕುಳದ ಬಗ್ಗೆ ಬಾಯ್ಬಿಡುತ್ತಿದ್ದಾರೆ.  ಅದೇ ರೀತಿ ಈಗ ಮಲೆಯಾಳಂ ಸಿನಿಮಾ ರಂಗದ ಮೊದಲ ತೃತೀಯ ಲಿಂಗಿ ನಟಿ ಅಂಜಲಿ ಅಮೀರ್ ಅವರು ಕೂಡ ತಮಗಾದ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ. ಅಂಜಲಿ ಅಮೀರ್ ಅವರು ಮಮ್ಮುಟಿ ಜೊತೆ ತಮಿಳಿನ ಪೆರಂಬು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಪಾತ್ರವೂ ಅವರಿಗೆ ಉತ್ತಮ ಹೆಸರು ನೀಡಿತ್ತು. ಆದರೆ ಇದೇ ಸಿನಿಮಾದಲ್ಲಿದ್ದ ಮಲೆಯಾಳಂ ಸಿನಿಮಾರಂಗದ ಮತ್ತೊಬ್ಬ ಖ್ಯಾತ ನಟ ಸೂರಜ್‌ ವೆಂಜರಮುಂಡು ಅವರು ಟ್ರಾನ್ಸ್‌ಜಂಡರ್‌ಗಳ ಲೈಂಗಿಕ ಸುಖದ ಬಗ್ಗೆ ತನಗೆ ಅಸಭ್ಯವಾಗಿ ಪ್ರಶ್ನಿಸುವ ಮೂಲಕ ಇರಿಸುಮುರಿಸು ಉಂಟು ಮಾಡಿದ್ದರು ಎಂದು ನಟಿ ಅಂಜಲಿ ಅಮೀರ್ ಹೇಳಿಕೊಂಡಿದ್ದಾರೆ. 

ಮಾತೃಭೂಮಿ ಜೊತೆ ಮಾತನಾಡಿದ ನಟಿ ಅಂಜಲಿ ಅದುವರೆಗೂ ನಾನು ಮಲೆಯಾಳಂ ಸಿನಿಮಾರಂಗದಲ್ಲಿ ಯಾವುದೇ ರೀತಿಯ ಕಿರಿಕಿರಿಗೆ ಅಥವಾ ಇರಿಸುಮುರಿಸಿಗೆ ಒಳಗಾಗಿರಲಿಲ್ಲ. ಆದರೆ ಸೂರಜ್ ವೆಂಜರಮುಡು ಅವರು, ನನ್ನ ಬಳಿ ಬಂದು ಟ್ರಾನ್ಸ್‌ಜಂಡರ್‌ಗಳು ಕೂಡ ಹೆಣ್ಣು ಮಕ್ಕಳಂತೆ ಸುಖ ಪಡುತ್ತಾರೆಯೇ ಎಂದು ಪ್ರಶ್ನಿಸಿದರು.  ನಾನೊಬ್ಬಳು ತುಂಬಾ ಸ್ಟ್ರಾಂಗ್ ಆಗಿರುವ ವ್ಯಕ್ತಿ. ಆದರೆ ಅವರ ಈ ಪ್ರಶ್ನೆ ನನ್ನನ್ನು ತೀವ್ರವಾಗಿ ಕೋಪಗೊಳ್ಳುವಂತೆ ಮಾಡಿತ್ತು. ಅಲ್ಲದೇ ಈ ವಿಚಾರದ ಬಗ್ಗೆ ನಾನು ಆತನಿಗೆ ಆಗಲೇ ಎಚ್ಚರಿಕೆ ನೀಡಿದೆ. ಅಲ್ಲದೇ ಈ ವಿಚಾರವನ್ನು ಆಗಲೇ ಬಂದು ಮಮ್ಮುಟ್ಟಿ ಹಾಗೂ ಸಿನಿಮಾದ ನಿರ್ದೇಶಕರಿಗೆ ಬಂದು ಹೇಳಿದೆ. 

ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾದ ಖುಷ್ಬೂ ಹೇಮಾ ಕಮಿಟಿ ವರದಿ ಬಗ್ಗೆ ಹೇಳಿದ್ದಿಷ್ಟು!

ಇದಾದ ನಂತರ ಆತ ನನ್ನ ಬಳಿ ಬಂದು ಕ್ಷಮೆ ಕೇಳಿದ ಅಲ್ಲದೇ ನನ್ನ ಜೊತೆ ಆತ ಉತ್ತಮವಾಗಿ ನಡೆದುಕೊಂಡ,. ಅಂದಿನಿಂದ ಆತ ಯಾವತ್ತೂ ನನ್ನ ಜೊತೆ ಆ ರೀತಿ ಕೆಟ್ಟದಾಗಿ ಮಾತನಾಡಲಿಲ್ಲ, ಈ ವಿಚಾರಕ್ಕೆ ಆತನನ್ನು ನಾನು ಪ್ರಶಂಸಿಸುತ್ತೇನೆ ಎಂದು ನಟಿ ಅಂಜಲಿ ಅಮೀರ್ ಹೇಳಿದ್ದಾರೆ.

ಮಲೆಯಾಳಂ ಸಿನಿಮಾರಂಗದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಮಾ ಕಮಿಟಿ ವರದಿಯ ನಂತರ ಅಂಜಲಿ ಅಮೀರ್ ಈ ರೀತಿ ಹೇಳಿಕೆ ನೀಡಿದ್ದಾರೆ. ಹೇಮಾ ಕಮಿಟಿ ಮಲೆಯಾಳಂ ಸಿನಿಮಾ ರಂಗದಲ್ಲಿ ನಡೆಯುತ್ತಿರುವ  ಲೈಂಗಿಕ ದೌರ್ಜನ್ಯ, ಕಾಸ್ಟಿಂಗ್ ಕೌಚ್‌, ನಟಿಯರಿಗೆ ನೀಡುವ ವೇತನದ ಅಸಮಾನತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಗಮನ ಸೆಳೆದಿದೆ.  ಇದೇ ವೇಳೆ ಅಂಜಲಿ ಅಮೀರ್ ಅವರು ಸಿನಿಮಾ ರಂಗದ ಎಲ್ಲರೂ ಅದೇ ರೀತಿ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆ ರೀತಿಯ ವ್ಯಕ್ತಿಗಳು ಇರುವುದು ಹೌದು ಆದರೆ ಎಲ್ಲರೂ ಅಂತಹವರಲ್ಲ ಎಂದು  ಅವರು ಹೇಳಿದ್ದಾರೆ. ಅಲ್ಲದೇ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಲುವಾಗಿ ವೃತ್ತಿಯಾಚೆಗಿನ ಸಂಬಂಧಗಳಿಗೆ ತಾವೇ ಬೌಂಡರಿ ಎಳೆದುಕೊಂಡಿದ್ದು, ಯಾವುದೇ ಪಾರ್ಟಿಗಳಿಗೆ ಹೋಗುವುದಿಲ್ಲ, ತಾನೇ ಹೇರಿಕೊಂಡಿರುವ ಈ ಬೌಂಡರಿಗಳು ನನ್ನನ್ನು ರಕ್ಷಿಸಿವೆ ಎಂದು ಅವರು ಹೇಳಿಕೊಂಡಿದ್ದಾರೆ. 

ಹೇಮಾ ರಿಪೋರ್ಟ್‌ ಬಿರುಗಾಳಿಗೆ ತತ್ತರಿಸಿದ ಮಲಯಾಳಂ ಸಿನಿರಂಗ; ಕತ್ತಲ ಜಗತ್ತು ಬೆತ್ತಲಾಯ್ತಾ?

Latest Videos
Follow Us:
Download App:
  • android
  • ios