ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.ಈ ನಡುವೆ ಅಭಿಮಾನಿಗಳು ರಾಜಮೌಳಿಗೆ ರಾಮಾಯಣ ಮತ್ತು ಮಹಾಭಾರತ ಸಿನಿಮಾ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ.ಬಾಹುಬಲಿ ಸಿನಿಮಾ ನಂತರ ರಾಜಮೌಳಿ ಸಿನಿಮಾಗಳ ಮೇಲಿನ ನಿರೀಕ್ಷೆ ಹೆಚ್ಚಾಗಿದ್ದು, ಪೌರಾಣಿಕ ಸಿನಿಮಾಗಳನ್ನು ಅದ್ಭುತವಾಗಿ ಕಟ್ಟಿಕೊಡಲಿದ್ದಾರೆ ಎನ್ನುವುದು ಅಭಿಮಾನಿಗಳ ನಂಬಿಕೆ.

ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿ ಟಾಲಿವುಡ್ ನಲ್ಲಿ ಸರಿಲೆರು ನೀಕೇವರು ಎಂಬ ಬ್ಲಾಕ್ ಬ್ಲಸ್ಟರ್ ಸಿನಿಮಾ ನೀಡಿದ ಸೂಪರ್ ಸ್ಟಾರ್ ಮಹೇಶ್ ಬಾಬು ಅವರಿಗೆ ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಆಕ್ಷನ್ ಕಟ್ ಹೇಳ್ತಾರಾ ?ಸದ್ಯ ರಾಮಚರಣ್ ಮತ್ತು ಜೂನಿಯರ್ ಎನ್ ಟಿ ಆರ್ ಜೊತೆಯಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಆರ್ ಆರ್ ಆರ್ ಸಿನಿಮಾದ ನಿರ್ದೇಶನದಲ್ಲಿ ಬ್ಯುಸಿಯಾಗಿರುವ ರಾಜಮೌಳಿ ಅವರು ಇದೀಗ ಅವರ ಮುಂದಿನ ಚಿತ್ರಕ್ಕೆ ತಯಾರಿ ಮಾಡುಕೊಳ್ಳುತ್ತಿದ್ದಾರಾ? 

ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪೋಸ್ಟರ್ ಒಂದು ಸಾಕಷ್ಟು ಸದ್ದು ಮಾಡುತ್ತಿದ್ದು ಆರ್ ಆರ್ ಆರ್ ಸಿನಿಮಾದ ನಂತರ ನಿರ್ದೇಶಕ ರಾಜಮೌಳಿ ಅವರು ಮತ್ತೊಂದು ಬಿಗ್ ಬಜೆಟ್ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರಾ?ಆ ಸಿನಿಮಾದಲ್ಲಿ ಮಹೇಶ್ ಬಾಬು ಅವರು  ರಾಮನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರಾ? 

ನಟನ ಮಗನಿಗೆ ರಾಜಮೌಳಿ ಹೆಸರು

ಈ ಹಿಂದೆ ಸಂದರ್ಶನವೊಂದರಲ್ಲಿ 'ರಾಮಾಯಣ ಮತ್ತು ಮಹಾಭಾರತ' ವನ್ನು ಸಿನಿಮಾ ಮಾಡುವುದರ ಬಗ್ಗೆ ಮಾತನಾಡಿದ್ದ ರಾಜಮೌಳಿ ಅವರ ಮಾತಿಗೆ ಪುಷ್ಟಿ ನೀಡುವಂತೆ ಈಗ ಬಿಡುಗಡೆಯಾಗಿರುವ ಪೋಸ್ಟರ್ ಅಭಿಮಾನಿಗಳಿಗೆ ರೋಮಾಂಚನವುಂಟುಮಾಡಿದೆ. ರಾಜಮೌಳಿ ರಾಮಾಯಣ ಸಿನಿಮಾ ಮಾಡಲಿ ಎನ್ನುವುದು ಇಡೀ ಭಾರತೀಯ ಚಿತ್ರರಂಗ ಹೇಳುವ ಮಾತು ಅದರಂತೆ ಇದರಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯಿಸಲಿ ಎಂದು ಅಭಿಮಾನಿಗಳು ಆಸೆ ಪಡುತ್ತಿದ್ದಾರೆ.ಈಗಾಗಲೆ ಫ್ಯಾನ್ಸ್ ರಾಜಮೌಳಿ ರಾಮಾಯಣದಲ್ಲಿ ಮಹೇಶ್ ಬಾಬು ರಾಮನಾಗಿ ಕಾಣಸಿಕೊಳ್ಳಲಿದ್ದಾರೆ ಎಂದು ವೈರಲ್ ಮಾಡುತ್ತಿದ್ದಾರೆ.

ಮಹೇಶ್ ಬಾಬು ಫೋಟೋಗೆ ರಾಮನ ಗೆಟಪ್ ಹಾಕಿ ಡಿಸೈನ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ಪೋಸ್ಟರ್ ಹಿಂದಿನ ಅಸಲಿ ಕಥೆ ಏನೆಂದರೆ ಅಭಿಮಾನಿ ಕಿರಣ್ ಎನ್ನುವವರು ಡಿಸೈನ್ ಮಾಡಿರುವ ಪೋಟೋ ಇದಾಗಿದೆ.

ಮಹೇಶ್ ಬಾಬು ರಾಮನ ಅವತಾರದಲ್ಲಿರುವ ಈ ಪೋಸ್ಟರ್ ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ಸಂಚಲನ ಮೂಡಿಸುವ ಸೂಚನೆ ನೀಡಿದೆ. 

ನೆಲ ಒರೆಸಿ ಜೂ.ಎನ್‌ಟಿಆರ್‌ಗೆ ರಾಜಮೌಳಿ ಚಾಲೆಂಜ್

ಲಾಕ್ ಡೌನ್ ಸಮಯದಲ್ಲಿ ದೂರದರ್ಶನದಲ್ಲಿ ಮರುಪ್ರಸಾರಗೊಂಡ 'ರಾಮಾಯಣ' ಧಾರಾವಾಹಿ ಜನಮೆಚ್ಚುಗೆ ಪಡೆದ ಈ ಸಮಯದಲ್ಲಿ ಇಂಥದೊಂದು ಸುದ್ದಿ ಸದ್ದು ಮಾಡುತ್ತಿರುವುದು ಸಿನಿರಸಿಕರು ಮತ್ತೊಂದು ಭರ್ಜರಿ ಮನರಂಜನೆಗೆ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. 

ರಾಮನ ಅವತಾರದಲ್ಲಿ ಮಹೇಶ್ ಬಾಬು ಅವರನ್ನು ಕಂಡು ಪುಳಕಿತರಾಗಿರುವ ಅಭಿಮಾನಿಗಳು ಆರ್ ಆರ್ ಆರ್ ಸಿನಿಮಾದ ನಂತರ ರಾಜಮೌಳಿ ಅವರು ಅದ್ಧೂರಿಯಾಗಿ ರಾಮಾಯಣ ನಿರ್ದೇಶನ ಮಾಡಲಿ ಎಂದು ಆಶಿಸುತ್ತಿದ್ದಾರೆ.