ಪೆಹಲ್ಗಾಂ ಉಗ್ರದಾಳಿಯನ್ನು ಬುಡಕಟ್ಟು ಜಗಳಕ್ಕೆ ಹೋಲಿಸಿದ ನಟ ವಿಜಯ್ ದೇವರಕೊಂಡ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಎಸ್‌ಸಿ/ಎಸ್‌ಟಿ ಸಮುದಾಯದ ಮುಖಂಡರು ಹೇಳಿಕೆ ಖಂಡಿಸಿ ಕ್ಷಮೆಗೆ ಆಗ್ರಹಿಸಿದ್ದಾರೆ. ವಕೀಲರೊಬ್ಬರು ಎಸ್‌ಸಿ/ಎಸ್‌ಟಿ ಕಾಯ್ದೆ ಉಲ್ಲಂಘನೆ ಆರೋಪದಡಿ ದೂರು ದಾಖಲಿಸಿದ್ದಾರೆ. ಈ ಹಿಂದೆ ಪಾಕಿಸ್ತಾನ ಮತ್ತು ದಾಳಿಯನ್ನು ವಿಜಯ್ ಖಂಡಿಸಿದ್ದರು.
ಹೈದರಾಬಾದ್(ಮೇ.02) ಪೆಹಲ್ಗಾಂ ಉಗ್ರ ದಾಳಿಗೆ ದೇಶಾದ್ಯಂತ ಆಕ್ರೋಶ ಮಡುಗಟ್ಟಿದೆ. ಭಾರತೀಯ ಸೇನೆ ಉಗ್ರರಿಗೆ ತಕ್ಕ ಶಾಸ್ತಿ ಮಾಡಲು ಜನ ಕಾಯುತ್ತಿದ್ದಾರೆ. ಇದರ ನಡುವೆ ಹಲವು ರಾಜಕಾರಣಗಳು ಅಸಂಬಂದ್ಧ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ. ಇದರ ನಡುವೆ ಜನಪ್ರಿಯ ನಟ ವಿಜಯ್ ದೇವರಕೊಂಡ ನೀಡಿದ ಹೇಳಿಕೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ವಿಜಯ್ ದೇವರಕೊಂಡ ವಿರುದ್ದ ಟೀಕೆ, ಆಕ್ರೋಶ ಹೆಚ್ಚಾಗುತ್ತಿದೆ. ಪೆಹಲ್ಗಾಂ ಉಗ್ರ ದಾಳಿಯನ್ನು ಭಾರತದ ಬಡುಕಟ್ಟ ಸಮುದಾಯ ಬಡಿದಾಟಕ್ಕೆ ಹೋಲಿಕೆ ಮಾಡಿ ಭಾರಿ ವಿರೋಧ ಎದುರಿಸುತ್ತಿದ್ದಾರೆ. ಇದೀಗ ವಿಜಯ್ ದೇವರಕೊಂಡ ವಿರುದ್ದ ಪ್ರಕರಣ ದಾಖಲಾಗಿದೆ.
ಸ್ಟಾರ್ ನಟ ಸೂರ್ಯ ಅಭಿನಯದ ರೆಟ್ರೋ ಸಿನಿಮಾ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಮಾತನಾಡಿದ್ದರು. ಸ್ಟೇಜ್ ಮೇಲೆ ಹತ್ತಿ ಸಾವಿರಾರು ಜನರನ್ನು ನೋಡಿ ಮಾತನಾಡಿದ್ದಾರೆ. ಆದರೆ ವಿಜಯ್ ದೇವರಕೊಂಡ ಹೇಳಿದ ಮಾತುಗಳು ನಟನಿಗೆ ಮುಳುುವಾಗಿದೆ. ಪೆಹಲ್ಗಾಂ ಉಗ್ರ ದಾಳಿ ಹಾಗೂ ರಾಷ್ಟ್ರೀಯ ಭದ್ರತೆಯನ್ನು ಬುಡುಕಟ್ಟ ಸಮುದಾಯದ ಬಡಿದಾಟಕ್ಕೆ ಹೋಲಿಕೆ ಮಾಡಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ.
ಇನ್‌ಸ್ಟಾದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ದಕ್ಷಿಣ ಭಾರತದ ಟಾಪ್ 10 ನಟರು
ವಿಜಯ್ ದೇವರಕೊಂಡ ಹೇಳಿಕೆಯನ್ನು ಎಸ್‌ಸಿ ಎಸ್‌ಟಿ ಸಮುದಾಯ ಮುಖಂಡರು ಖಂಡಿಸಿದ್ದಾರೆ.ತಕ್ಷಣವೇ ಈ ಹೇಳಿಕೆ ಕುರಿತು ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಇದೇ ವೇಳೆ ಹೈದರಾಬಾದ್ ವಕೀಲ ಲಾಲ್ ಚೌಹಾನ್ ವಿಜಯ್ ದೇವರಕೊಂಡ ವಿರುದ್ದ ದೂರು ದಾಖಲಿಸಿದ್ದಾರೆ. ಎಸ್‌ಸಿ ಎಸ್‌ಟಿ ಕಾಯ್ದೆ ನಿಯಮ ಉಲ್ಲಂಘಿಸಿದ್ದಾರೆ. ಪರಿಶಿಷ್ಠ ಜಾತಿ ಹಾಗೂ ಪಂಗಡ ಸಮುದಾಯವನ್ನು ಭಯೋತ್ಪಾದಕತೆ ಜೊತೆ ಹೋಲಿಕೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ಇದಕ್ಕೂ ಮೊದಲು ಪಾಕಿಸ್ತಾನ ಹಾಗೂ ಪೆಹಲ್ಗಾಂ ದಾಳಿಯನ್ನು ವಿಜಯ್ ದೇವರಕೊಂಡ ಖಂಡಿಸಿದ್ದರು. ಕಾಶ್ಮೀರ ಭಾರತದ್ದೇ. ಅವರು ಭಾರತೀಯರು. ಖುಷಿ ಚಿತ್ರದ ಚಿತ್ರೀಕರಣಕ್ಕಾಗಿ ಅಲ್ಲಿಗೆ ಹೋದಾಗ ನನ್ನನ್ನು ಮತ್ತು ನನ್ನ ತಂಡವನ್ನು ಅವರು ತುಂಬಾ ಚೆನ್ನಾಗಿ ಸ್ವಾಗತಿಸಿದರು. ಅಲ್ಲಿ ನನಗೆ ಒಳ್ಳೆಯ ನೆನಪುಗಳಿವೆ. ಪಾಕ್ ಜನರು ತಮ್ಮ ಜನರನ್ನೇ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಶ್ಮೀರವನ್ನು ತೆಗೆದುಕೊಂಡು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದ್ದರು. ಪಾಕಿಸ್ತಾನದಲ್ಲಿ ಸರಿಯಾಗಿ ವಿದ್ಯುತ್ ಇಲ್ಲ, ಆಹಾರವಿಲ್ಲ, ಈ ರೀತಿ ನೋಡಿದರೆ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕಾಗಿಲ್ಲ. ಅವರಿಗೇ ಬೇಸರ ಬಂದು ಅಲ್ಲಿನ ಜನ ಅವರ ಸರ್ಕಾರದ ಮೇಲೆ ದಾಳಿ ಮಾಡುವ ದಿನ ಬರುತ್ತದೆ. ಪಾಕಿಸ್ತಾನದ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಖಂಡಿತವಾಗಿಯೂ ಅದು ಸಂಭವಿಸುತ್ತದೆ ಎಂದು ವಿಜಯ್ ದೇವರಕೊಂಡ ಕಾಶ್ಮೀರ ವಿಷಯದ ಹೇಳಿದ್ದಾರೆ.
Vijay Deverakonda: ಹೋರಾಟದ ಕಥೆ ಸೀಕ್ರೆಟ್ ಬಯಲಾಯ್ತು.. 'ಎಲ್ಲಿಗೆ ಹೋಗಲಿ, ಯಾರನ್ನು ಕೇಳಲಿ'...?


