Asianet Suvarna News Asianet Suvarna News

ಕೆಜಿಎಫ್, ಕಾಂತಾರಗಾಗಿ ವಿವೇಕ್-ಅನುರಾಗ್ ಕಶ್ಯಾಪ್ ಕಿತ್ತಾಟ; ಇಬ್ಬರೂ ಖ್ಯಾತ ನಿರ್ದೇಶಕರ ನಡುವೆ ಏನಾಯಿತು?

ಬಾಲಿವುಡ್‌ನ ಇಬ್ಬರೂ ಖ್ಯಾತ ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿ ಮತ್ತು ಅನುರಾಗ್ ಕಶ್ಯಪ್ ನಡುವೆ ಕಿತ್ತಾಟ ಜೋರಾಗಿದೆ. 

Filmmakers Anurag Kashyap, Vivek Agnihotri Spar On Twitter sgk
Author
First Published Dec 16, 2022, 5:14 PM IST

ಬಾಲಿವುಡ್‌ನ ಇಬ್ಬರೂ ಖ್ಯಾತ ನಿರ್ದೇಶಕರ ನಡುವೆ ಕಿತ್ತಾಟ ಜೋರಾಗಿದೆ. ಇಬ್ಬರೂ ಟ್ವಿಟ್ಟರ್‌ನಲ್ಲಿ ವಾದ-ಪ್ರತಿವಾದ ಮಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಇಬ್ಬರ ಕಿತ್ತಾಟಕ್ಕೆ ಕಾರಣವಾಗಿದ್ದು ಕಾಂತಾರ ಮತ್ತು ಕೆಜಿಎಫ್ ಸಿನಿಮಾಗಳ ಬಗ್ಗೆ ಹೇಳಿಕೆ. ಹೌದು, ಇತ್ತೀಚಿಗಷ್ಟೆ ವಿವೇಕ್ ಅಗ್ನಿಹೋತ್ರಿ ದಕ್ಷಿಣ ಭಾರತದ ಸಿನಿಮಾಗಳು ಹೇಗೆ ಬಾಲಿವುಡ್ ಅನ್ನು ನಾಶಪಡಿಸುತ್ತಿದೆ ಎಂದು ಹೇಳಿದ್ದರು. ವಿವೇಕ್ ಅಗ್ನಿಹೋತ್ರಿ ಮಾತಿಗೆ ಪ್ರತಿಯಾಗಿ ಅನುರಾಗ್ ಕಶ್ಯಪ್, ತಮ್ಮ ಚಿತ್ರಗಳಿಗಾಗಿ ನಡೆಸುವ ಸಂಶೋಧನೆಯನ್ನು ಪ್ರಶ್ನೆ ಮಾಡಿದ್ದರು. 

ಬಾಲಿವುಡ್‌ಗೆ 2022 ಭಾರಿ ನಿರಾಸೆಯ ವರ್ಷವಾಗಿದೆ. ಹಿಂದಿ ಸಿನಿಮಾರಂಗದಲ್ಲಿ ಬೇರೆ ಭಾಷೆಯ ಸಿನಿಮಾಗಳೇ ರಾರಾಜಿಸಿವೆ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದೆ. ದಕ್ಷಿಣದ ಸಾಲು ಸಾಲು ಸಿನಿಮಾಗಳು ಬಾಲಿವುಡ್ ‌ನಲ್ಲಿ ಅಬ್ಬರಿಸಿದೆ. ಅದರಲ್ಲೂ ಕನ್ನಡದ ಕೆಜಿಎಫ್ ಮತ್ತು ಕಾಂತಾರ ಸಿನಿಮಾಗಳು ದಾಖಲೆ ನಿರ್ಮಿಸಿವೆ. ಇದರಿಂದ ಬಾಲಿವುಡ್ ಮಂದಿಯ ನಿದ್ದೆ ಗೆಡಿಸಿದೆ. ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಬಾಲಿವುಡ್ ಮಂದಿ ಹೆಚ್ಚು ಮಾತನಾಡುವಂತೆ ಆಗಿದೆ. ಇತ್ತೀಚಿಗಷ್ಟೆ ಮಾತನಾಡಿದ್ದ ಅನುರಾಗ್ ಕಶ್ಯಪ್ ಮತ್ತು ವಿವೇಕ್ ಅಗ್ನಿಹೋತ್ರಿ ಇಬ್ಬರು ಕಿತ್ತಾಡುತ್ತಿದ್ದಾರೆ. 

ಅನುರಾಗ್ ಕಶ್ಯಪ್ ಅವರು ಸಂಶೋಧನೆ ಮಾತಿನಿಂದ ಗರಂ ಆದ ವಿವೇಕ್ ಅಗ್ನಿಹೋತ್ರಿ ಕೂಡ ಪ್ರತಿಕ್ರಿಯೆ ನೀಡಿದ್ದರು. 'ಡಿಯರ್ ಗಾಡ್, ಕಾಶ್ಮೀರ ಫೈಲ್ಸ್‌ಗಾಗಿ 4 ವರ್ಷಗಳ ಸುದೀರ್ಘ ಸಂಶೋಧನೆಯು ಸುಳ್ಳು ಎಂದು ಎಲ್ಲವೂ ಸುಳ್ಳು. ಕಾಶ್ಮೀರಿ ಪಂಡಿತರ 700 ವಿಡಿಯೋಗಳು ಸುಳ್ಳು. ಹಿಂದೂಗಳನ್ನು ಎಂದಿಗೂ ಕೊಲ್ಲಲಾಗಿಲ್ಲ ಎಂದು ನೀವು ಸಾಬೀತುಪಡಿಸಿ. ನಾನು ಈ ತಪ್ಪನ್ನು ಮತ್ತೆ ಪುನರಾವರ್ತಿಸುವುದಿಲ್ಲ' ಎಂದು ಹೇಳಿದರು. 

'ಸೈರಾಟ್' ಮರಾಠಿ ಸಿನಿರಂಗವನ್ನೇ ನಾಶಪಡಿಸಿತು, ಆ ತಪ್ಪು ಮಾಡಬೇಡಿ; ರಿಷಬ್ ಶೆಟ್ಟಿಗೆ ಅನುರಾಗ್ ಕಶ್ಯಪ್ ಎಚ್ಚರಿಕೆ

ಅನುರಾಗ್ ಕಶ್ಯಪ್ ಇತ್ತೀಚಿಗಷ್ಟೆ ಸೈರಾಟ್ ಸಿನಿಮಾದ ಸೂಪರ್ ಸಕ್ಸಸ್ ಮರಾಠಿ ಸಿನಿಮಾರಂಗವನ್ನು ಹೇಗೆ ನಾಶಪಡಿಸಿತು. ಹಾಗೆ ಕಾಂತಾರ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಅದೇ ತಪ್ಪನ್ನು  ಮಾಡಬಾರದು ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಎಚ್ಚರಿಕೆ ನೀಡಿದರು. 'ಒಂದು ವೇಳೆ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ತನ್ನ ದಾರಿಯನ್ನು ಬದಲಾಯಿಸಲು ಪ್ರಾರಂಭಿಸಿದರೆ ಬಾಕ್ಸ್  ಆಫೀಸ್ ಮೇಲೆ ಕಣ್ಣಿಟ್ಟು ದೊಡ್ಡ ಬಜೆಟ್ ಸಿನಿಮಾಗಳ ಹಿಂದೆ ಬಿದ್ದರೆ ದೊಡ್ಡ ಸಮಸ್ಯೆ ಆಗಲಿದೆ' ಎಂದು ರಿಷಬ್ ಶೆಟ್ಟಿಯನ್ನು ಎಚ್ಚರಿಸಿದ್ದರು ಅನುರಾಗ್ ಕಶ್ಯಪ್. 

ರಿಷಬ್ ಶೆಟ್ಟಿಯ ಮಾಸ್ಟರ್‌ಪೀಸ್; 'ಕಾಂತಾರ' ನೋಡಿ ಹೊಗಳಿದ 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಅಗ್ನಿಹೋತ್ರಿ

ಹೇಳಿಕೆಗೆ ಪ್ರತಿಕ್ರಿಯಾಗಿ ವಿವೇಕ್ ಅಗ್ನಿಹೋತ್ರಿ, 'ಬಾಲಿವುಡ್‌ನ ಏಕೈಕ ಮೈಲಾರ್ಡ್‌ನ ಅಭಿಪ್ರಾಯವನ್ನು ನಾನು ಸಂಪೂರ್ಣವಾಗಿ ಸಂಪೂರ್ಣವಾಗಿ ಒಪ್ಪುವುದಿಲ್ಲ. ನೀವು ಒಪ್ಪಿಕೊಳ್ಳುತ್ತೀಯಾ?' ಎಂದು ಹೇಳಿದ್ದರು. ಇಬ್ಬರ ಟ್ವಿಟ್ಟರ್ ವಾರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  
 

Follow Us:
Download App:
  • android
  • ios