ಹಸುಗೂಸು ನೋಡಿ ಮದ್ಯಪಾನ ತ್ಯಜಿಸಿದ್ದೆ: ಕುತೂಹಲದ ಘಟನೆ ನೆನಪಿಸಿಕೊಂಡ ನಿರ್ಮಾಪಕ ಮಹೇಶ್​ ಭಟ್​

ವಿಪರೀತ ಕುಡಿತದ ದಾಸನಾಗಿದ್ದ ಖ್ಯಾತ ನಿರ್ಮಾಪಕ ಮಹೇಶ್​ ಭಟ್​ ಅವರು, ಕುಡಿತದಿಂದ ಮುಕ್ತಿ ಹೊಂದಿದ್ದು ಹೇಗೆ? ಈ ಕುರಿತು ಅವರು ಹೇಳಿದ್ದೇನು? 
 

Filmmaker Mahesh Bhatt says he gave up alcohol after sensing deep sense of rejection from daughter

ಚಿತ್ರ ನಿರ್ಮಾಪಕ ಮಹೇಶ್ ಭಟ್ (Mahesh Bhatt) ಹಿಂದಿ ಚಿತ್ರರಂಗಕ್ಕೆ ಅನೇಕ ಹಿಟ್‌ ಸಿನಿಮಾಗಳನ್ನು ಕೊಟ್ಟಿದ್ದಾರೆ. ಅವರ ಸಿನಿಮಾಗಳು ಎಷ್ಟು ಫೇಮಸ್‌ ಆಗಿದ್ಯೋ, ಅವರ ಮಾತುಗಳು ಅಷ್ಟೇ ವಿವಾದದಿಂದ ಕೂಡಿರುತ್ತದೆ. ಸಾಮಾನ್ಯವಾಗಿ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ ಒಮ್ಮೆ ಅವರು ಅನುಪಮ್ ಖೇರ್ ಅವರ 'ದಿ ಅನುಪಮ್ ಖೇರ್ ಶೋ' ಶೋನಲ್ಲಿ ವೈಯಕ್ತಿಕ ಜೀವನದ ಕುರಿತು ಬಹಿರಂಗಪಡಿಸಿದ್ದರು. ಅವರು ಚಿಕ್ಕವರಿದ್ದಾಗ, ಅವರು ತುಂಬಾ ಕುಡಿಯುತ್ತಿದ್ದರು. ಇದಕ್ಕೆ ಕಾರಣ ತಿಳಿಸಿರೋ ಮಹೇಶ್​ ಭಟ್​, ತಾವು ಕೋಪಗೊಂಡ, ಅಸಮಾಧಾನಗೊಂಡ ಮತ್ತು ವಿಫಲ ವ್ಯಕ್ತಿ ಎಂದು ಹೇಳಿದರು. ಅವರು ಮದ್ಯಪಾನ ಮಾಡುವ ಮೂಲಕ ತಮ್ಮ ಹತಾಶೆ ಮತ್ತು ವೈಫಲ್ಯಗಳನ್ನು ದೂರ ಮಾಡುತ್ತಿದ್ದೆ ಎಂದು  ಭಾವಿಸುತ್ತಿದ್ದರಂತೆ. ತಾವು ಮದ್ಯ ಸೇವಿಸಿ ನಶೆಯಲ್ಲಿದ್ದಾಗ ಅನುಪಮ್ ಅವರು ತಮ್ಮನ್ನು  ಮನೆಗೆ ಡ್ರಾಪ್ ಮಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ.   ಕುಡಿಯುವುದನ್ನು ಬಿಡುವ ನಿರ್ಧಾರವನ್ನು ಏಕೆ ಮತ್ತು ಹೇಗೆ ತೆಗೆದುಕೊಂಡರು ಎಂದೂ ಅವರು ಇದೇ ಸಂದರ್ಭದಲ್ಲಿ ವಿವರಿಸಿದ್ದಾರೆ. 

ತಮ್ಮ ಜೀವನದ ಕುರಿತು ಮಾತನಾಡಿದ ಮಹೇಶ್​ ಭಟ್​, 'ಮನುಷ್ಯ ತನ್ನ ಬಗ್ಗೆಯೇ ಅತೃಪ್ತಿ ಹೊಂದಿದ್ದಾಗ ಆತನಿಗೆ ಜಗತ್ತಿನ ಬಗ್ಗೆ ಅತೃಪ್ತಿ ಮೂಡುತ್ತದೆ. ನನ್ನ ಬಗ್ಗೆ ನನಗೆ ಅತೃಪ್ತಿ ಇತ್ತು. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಾನು ಏನನ್ನೂ ಸಾಧಿಸಿಲ್ಲ ಎಂದು ನನಗೆ ತಿಳಿದಿತ್ತು. ನಾನು ತಾಳ್ಮೆ (patience) ಕಳೆದುಕೊಂಡೆ. ಆದರೆ ಚಿತ್ರ ನಿರ್ಮಾಪಕರಾದ ಮೇಲೆ ಅವರ ಜೀವನ ಮರೆಮಾಚೋಕೆ ಆಗುವುದಿಲ್ಲ.  ಏಕೆಂದರೆ ಅವರ ಸತ್ಯ ಯಾವಾಗಲೂ ಪರದೆಯ ಮೇಲೆ ಗೋಚರಿಸುತ್ತದೆ. ತಮ್ಮ ಕಾಲ್ಪನಿಕ ಕಥೆಗಳೊಂದಿಗೆ ಚಲನಚಿತ್ರ ನಿರ್ಮಾಪಕರು ಯಾವಾಗಲೂ ಬೆತ್ತಲೆಯಾಗುತ್ತಾರೆ ಎಂದು ರಾಜ್ ಖೋಸ್ಲಾ ಅವರು ಹೇಳುತ್ತಿದ್ದರು. ಇದು ನಿಜವಾದ ಮಾತು. ನಿರ್ಮಾಪಕರ ಖಾಸಗಿ ಜೀವನ ಮುಚ್ಚಿಡುವುದು ಕಷ್ಟ ಎಂದಿದ್ದಾರೆ ಮಹೇಶ್​ ಭಟ್​.

ಧೂಮಪಾನ, ಮದ್ಯಪಾನ ಅಮಿತಾಭ್​ ಬಿಟ್ಟಿದ್ದು ಹೇಗೆ? ನಟ ನೀಡಿದ್ರು ಅದ್ಭುತ ಟಿಪ್ಸ್​

ಮಹೇಶ್ ಭಟ್ ಅವರು ಕುಡಿಯುವುದನ್ನು (Drinking) ಬಿಡಲು ನಿರ್ಧರಿಸಿದ ಬಗ್ಗೆ ವಿವರಣೆ ನೀಡಿದ ಅವರು,  'ನನ್ನ ಮಗಳು ಶಾಹೀನ್ ಜನಿಸಿದಳು, ಮತ್ತು ಅವಳು ಹುಟ್ಟಿದ ಕೆಲವು ದಿನಗಳವರೆಗೂ ನಾನು ಕುಡಿಯುತ್ತಿದ್ದೆ. ಅವಳು ಮನೆಗೆ ಬಂದಾಗ, ನಾನು ಅವಳನ್ನು ನನ್ನ ತೋಳುಗಳಲ್ಲಿ ಎತ್ತಿಕೊಂಡೆ, ಅವಳು ನನಗೆ ಬೆನ್ನು ತಿರುಗಿಸಿದಳು ಎಂದು ನನಗೆ ಅನಿಸಿತು. ನಾನು ನಿರಾಕರಣೆಯ ಆಳವಾದ ಅರ್ಥವನ್ನು ಅನುಭವಿಸಿದೆ. ಅವತ್ತಿನಿಂದಲೇ ಕುಡಿತ ಬಿಟ್ಟೆ ಅಷ್ಟೇ ಅಲ್ಲದೇ ನಾನು ಮತ್ತೆ ಕುಡಿಯುವುದಿಲ್ಲ ಎಂದು ಆಣೆ ಮಾಡಿದೆ. ಅದನ್ನು ಉಳಿಸಿಕೊಂಡು ಹೋಗುವ ಭರವಸೆ ನನಗಿದೆ' ಎಂದಿದ್ದಾರೆ. 

ಅಂದಹಾಗೆ, ಪೂಜಾ ಭಟ್‌ (Pooja Bhatt) ಹಾಗೂ ರಾಹುಲ್‌, ಮಹೇಶ್‌ ಭಟ್‌ ಮೊದಲ ಪತ್ನಿ ಕಿರಣ್‌ ಭಟ್‌ಗೆ ಜನಿಸಿದ ಮಕ್ಕಳು. ನಂತರ ಮಹೇಶ್‌ ಭಟ್‌ ಸೋನಿ ರಾಜ್ದನ್‌ ಅವರನ್ನು ಮದುವೆಯಾದರು. ಈ ದಂಪತಿಗೆ ಜನಿಸಿದ ಮಗಳೇ ಆಲಿಯಾ ಭಟ್.‌ ಆಲಿಯಾಗೆ ಶಾಹಿನ್‌ (Shahin) ಎಂಬ ಅಕ್ಕ ಇದ್ದಾರೆ. ಪೂಜಾ ಭಟ್‌ 80-90 ರ ದಶಕದಲ್ಲಿ ಬಾಲಿವುಡ್‌ ಚಿತ್ರರಂಗದಲ್ಲಿ ಬೇಡಿಕೆ ನಟಿಯಾಗಿದ್ದರು. ಆದರೆ ಈಗ ಆಕೆ ನಟನೆಯಿಂದ ದೂರ ಸರಿದು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಆಲಿಯಾ ಭಟ್‌ ಸದ್ಯಕ್ಕೆ ಬಾಲಿವುಡ್‌ನಲ್ಲಿ ಹೆಸರು ಮಾಡಿರುವ ನಟಿ. ಆಲಿಯಾ ಈಗ 5 ತಿಂಗಳ ಗರ್ಭಿಣಿ. ಇತ್ತೀಚೆಗೆ ಪತಿ ರಣಬೀರ್‌ ಕಪೂರ್‌ ಜೊತೆ ನಟಿಸಿದ್ದ ಬ್ರಹ್ಮಾಸ್ತ್ರ ಸಿನಿಮಾ ತೆರೆ ಕಂಡಿದೆ.

ಕೆನ್ನೆಗೆ ಹೊಡೆದವನನ್ನೇ ಮದ್ವೆಯಾದ ಇಶಾ ಡಿಯೋಲ್​: ಇಂಟರೆಸ್ಟಿಂಗ್​ ಲವ್​ ಸ್ಟೋರಿ

Latest Videos
Follow Us:
Download App:
  • android
  • ios