ಧೂಮಪಾನ, ಮದ್ಯಪಾನ ಅಮಿತಾಭ್ ಬಿಟ್ಟಿದ್ದು ಹೇಗೆ? ನಟ ನೀಡಿದ್ರು ಅದ್ಭುತ ಟಿಪ್ಸ್
ಅಮಿತಾಭ್ ಬಚ್ಚನ್ ಹಿಂದೊಮ್ಮೆ ಕುಡಿತದ ಮತ್ತು ಧೂಮಪಾನದ ದಾಸರಾಗಿದ್ದರು. ಅದನ್ನು ಹೇಗೆ ಬಿಟ್ಟೆ ಎಂಬುದನ್ನು ಅವರೀಗ ವಿವರಿಸಿದ್ದಾರೆ.
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಇದೇ 6ರಂದು ಶೂಟಿಂಗ್ ವೇಳೆ ಗಾಯಗೊಂಡಿದ್ದರು. ಸದ್ಯ ಪ್ರಭಾಸ್ ಮತ್ತು ದೀಪಿಕಾ ನಟನೆಯ 'ಪ್ರಾಜೆಕ್ಟ್ ಕೆ' (Projeck K) ಸಿನಿಮಾದ ನಿಮಿತ್ತ ಹೈದರಾಬಾದ್ ನಲ್ಲಿ ಶೂಟಿಂಗ್ನಲ್ಲಿ ಅಮಿತಾಭ್ ಭಾಗಿಯಾಗಿದ್ದರು. ಚಿತ್ರೀಕಕಣದ ಆಕ್ಷನ್ ದೃಶ್ಯದ ಚಿತ್ರೀಕರಣ ವೇಳೆ ತೀವ್ರವಾಗಿ ಗಾಯಗೊಂಡಿದ್ದರು. ಈ ಬಗ್ಗೆ ಸ್ವತಃ ಅಮಿತಾಭ್ ಬಚ್ಚನ್ ಅವರೇ ತಮ್ಮ ಬ್ಲಾಕ್ ನಲ್ಲಿ ಬಹಿರಂಗ ಪಡಿಸಿದ್ದರು. ಪಕ್ಕೆಲುಬಿಗೆ ಬಲವಾಗಿ ಏಟು ಬಿದ್ದಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಅಮಿತಾಭ್ ಹೈದರಾಬಾದ್‌ನಿಂದ ಮುಂಬೈಗೆ ತೆರಳಿದ್ದು ಜಲ್ಸಾ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ನಂತರ ಅವರ ಅಭಿಮಾನಿಗಳಿಗೆ "ನಾನು ಕ್ರಮೇಣ ಪ್ರಗತಿ ಹೊಂದುತ್ತಿದ್ದೇನೆ. ಯಾರೂ ಆತಂಕ ಪ ಡುವ ಅಗತ್ಯವಿಲ್ಲ. ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ವೈದ್ಯರು ಮಾಡಿರುವ ಶಿಫಾರಸುಗಳನ್ನು ನಾನು ಶ್ರದ್ಧೆಯಿಂದ ಅನುಸರಿಸುತ್ತಿದ್ದೇನೆ. ಸದ್ಯ ಎಲ್ಲಾ ಕೆಲಸಗಳನ್ನೂ ಸ್ಥಗಿತಗೊಳಿಸಿದ್ದೇನೆ' ಎಂದಿದ್ದರು.
ರೆಸ್ಟ್ ತೆಗೆದುಕೊಳ್ಳುತ್ತಿರುವ ಮಧ್ಯೆಯೇ ಬಿಗ್ ಬಿ ತಮ್ಮ ಬ್ಲಾಗ್ನಲ್ಲಿ ಮದ್ಯಪಾನ (Alcohol) ಮತ್ತು ಧೂಮಪಾನದ ಚಟದ ಕುರಿತು ಮಾತನಾಡಿದ್ದಾರೆ. ಹಿಂದೊಮ್ಮೆ ಶರಾಬಿಯಾಗಿದ್ದ ತಾವು ಈ ಚಟಗಳಿಂದ ಹೇಗೆ ಮುಕ್ತಿ ಪಡೆದಿದ್ದೆ ಎಂಬ ಬಗ್ಗೆ ವಿವರಣೆ ನೀಡಿದ್ದಾರೆ. ತಾವು ಕೂಡ ಹಿಂದೆ ವಿಪರೀತ ಪ್ರಮಾಣದಲ್ಲಿ ಮದ್ಯ ಸೇವನೆ ಮತ್ತು ಸಿಗರೇಟ್ ಸೇವನೆ ದಾಸರಾಗಿದ್ದು, ಎರಡೂ ಚಟಗಳಿಂದ ಹೇಗೆ ಹೊರಗೆ ಬಂದೆ ಎನ್ನುವುದನ್ನು ಹೇಳಿದ ನಟ, ಉಳಿದವರಿಗೂ ಅದೇ ರೀತಿ ಮಾಡಿ ಎಂದು ಸಲಹೆ ನೀಡಿದ್ದಾರೆ. ತಮ್ಮ ಬ್ಲಾಗ್ನಲ್ಲಿ ಈ ವಿಷಯದ ಕುರಿತು ಬರೆದುಕೊಂಡಿದ್ದಾರೆ.
ಶೂಟಿಂಗ್ ವೇಳೆ ಅವಘಡ: ಆರೋಗ್ಯದ ಮಾಹಿತಿ ನೀಡಿದ ಅಮಿತಾಭ್ ಬಚ್ಚನ್
ಅದೊಂದು ದಿನ ಈ ಎರಡೂ ಚಟಗಳನ್ನು ಒಟ್ಟಿಗೆ ಬಿಡಬೇಕು ಅಂತ ನಿರ್ಧಾರ ಮಾಡಿದೆ. ಅವತ್ತು ಬಿಟ್ಟ ನಂತರ ಇಂದಿಗೂ ಮತ್ತೆ ಚಟ ನನ್ನ ಹತ್ತಿರ ಬರಲಿಲ್ಲ ಎಂದಿದ್ದಾರೆ ಅಮಿತಾಭ್. ತಮ್ಮ ಕಾಲೇಜು ಕಾಲೇಜು ದಿನಗಳನ್ನು ಮೆಲುಕು ಹಾಕಿದ ನಟ, ಆಲ್ಕೋಹಾಲ್ ಸೇವಿಸಲು ಶುರು ಮಾಡಿದ್ದು, ಹಾಗೂ ಅದೇ ಸಮದಯದಲ್ಲಿ ಬಿಡಲು ನಿರ್ಧಾರ ಮಾಡಿದ್ದರ ಕುರಿತು ಹೇಳಿಕೊಂಡಿದ್ದಾರೆ. ಈ ವೇಳೆ ವಿಜ್ಞಾನದ ಪ್ರಯೋಗಾಲಯಗಳಲ್ಲಿನ ಪ್ರಯೋಗಗಳು, ರಾಸಾಯನಿಕಗಳನ್ನು ಬೆರೆಸುವುದು, ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ಗ್ಯಾಜೆಟ್ ಗಳೊಂದಿಗೆ ಆಟವಾಡುವುದನ್ನು ನೆನಪಿಸಿಕೊಳ್ಳುತ್ತಾ ಅವರು, ಒಂದು ದಿನ ಪದವಿ ಶಿಕ್ಷಣದ ಕೊನೆಯ ಪತ್ರಿಕೆ ಬರೆದು ಮುಗಿಸಿದ ನಂತರ ಕೆಲವು ಸ್ನೇಹಿತರು ಪ್ರಯೋಗಾಲಯದಲ್ಲಿ ಇರಿಸಲಾದ ಶುದ್ಧ ಆಲ್ಕೋಹಾಲ್ ಕುಡಿದು ಸಂಭ್ರಮಿಸಿದ್ದನ್ನು ನೆನಪು ಮಾಡಿಕೊಂಡಿದ್ದಾರೆ. ಅಂದು ಪದವಿಯ ಕೊನೆಯ ದಿನವಾಗಿದ್ದರಿಂದ ಎಲ್ಲರೂ ಕುಡಿದು ಕುಪ್ಪಳಿಸಿದ್ದೆವು. ಆದರೆ ನಂತರ ಆದದ್ದು ಮಾತ್ರ ಮಹಾ ಭಯಾನಕ ಘಟನೆ. ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದೆ. ಆಗಲೇ ಮದ್ಯಪಾನದ ದುಷ್ಪರಿಣಾಮ ಅರಿತು ಬಿಟ್ಟೆ ಎಂದಿದ್ದಾರೆ.ಇದರ ಬಗ್ಗೆ ಇನ್ನಷ್ಟು ಉಲ್ಲೇಖಿಸಿರುವ ಅಮಿತಾಭ್ ತಮ್ಮ ಯೌವನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 'ಕಾಲೇಜಿಗೆ ಕಾಲಿಟ್ಟಾಗ ಮದ್ಯಪಾನ, ಧೂಮಪಾನ (Smoking) ಚಟ ತುಂಬಾನೇ ಜಾಸ್ತಿಯಾಗಿ ಹೋಗಿತ್ತು. ಸ್ನೇಹಿತರ ಜೊತೆ ಕುಳಿತುಕೊಂಡು ಕುಡಿಯುವುದನ್ನು ಶುರು ಮಾಡಿಕೊಂಡಿದ್ದೆ, ಸಿಗರೇಟ್ ಸೇವನೆಯ ಚಟವೂ ಹತ್ತಿತ್ತು. ಕಾಲೇಜಿನಲ್ಲಿದ್ದಾಗ ಕುಡಿದು ಮಾಡಿದ ಅವಾಂತರಗಳನ್ನು ನೆನಪಿಸಿಕೊಂಡರೆ ಮೈ ಝುಂ ಎನ್ನುತ್ತದೆ. ಇದಾದ ಬಳಿಕ ಪ್ರಯೋಗಾಲಯದಲ್ಲಿರುವ ಮದ್ಯ ಸೇವನೆ ಮಾಡಿದ ಬಳಿಕ ಆದ ಅನಾಹುತದಿಂದ ಇನ್ನೆಂದೂ ಕುಡಿಯಬಾರದು ಎಂದು ನಿರ್ಧಾರಕ್ಕೆ ಬಂದಿದ್ದೆ ಎಂದಿದ್ದಾರೆ.
ಇದಾದ ಬಳಿಕ ಕೆಲಸಕ್ಕೆಂದು ಕೋಲ್ಕತಾಗೆ ಹೋದೆ. ಅಲ್ಲಿಯೂ ಸಿಕ್ಕ ಸ್ನೇಹಿತರೆಲ್ಲರೂ ಅಂಥವರೇ. ಅವರ ಜೊತೆ ಮತ್ತೆ ಚಟ ಅಂಟಿಕೊಂಡಿತು. ಸ್ನೇಹಿತರ ಜೊತೆಗೂಡಿ ಕುಡಿಯುವುದು ಸ್ವಲ್ಪ ಜಾಸ್ತಿಯಾಯಿತು. ಆದರೆ ಒಂದು ದಿನ ನನ್ನ ಬಗ್ಗೆ ಯೋಚನೆ ಮಾಡಿದಾಗ ನಾನು ತಪ್ಪು ಮಾಡುತ್ತಿದ್ದೇನೆ ಎನ್ನಿಸಿತು. ಇದ್ದಕಿದ್ದಂತೆ ನನಗೆ ಇದನೆಲ್ಲವನ್ನು ಬಿಟ್ಟು ಬಿಡಬೇಕು ಅಂತ ಅನ್ನಿಸಿತು, ಆ ಕ್ಷಣವೇ ನಾನು ಇವೆರಡನ್ನು ಬಿಡಲು ನಿರ್ಧರಿಸಿದೆ” ಎಂದು ಹೇಳಿದ್ದಾರೆ. ಅದನ್ನು ಬಿಡಲು ತಾವು ಅನುಸರಿಸಿದ ಮಾರ್ಗದ ಬಗ್ಗೆಯೂ ಬರೆದುಕೊಂಡಿದ್ದಾರೆ.
ಜೀವದ ಗೆಳೆಯ ಅಮಿತಾಭ್ ಸಿಗದಿದ್ರೂ ಸೊಸೆ, ಮೊಮ್ಮಗಳಿಗೆ ಪ್ರೀತಿಯ ಅಪ್ಪುಗೆ ನೀಡಿದ ರೇಖಾ
ಎರಡೂ ಅಭ್ಯಾಸಗಳಿಗೆ ಒಟ್ಟಿಗೆ ಗುಡ್ ಬೈ ಹೇಳಿದ್ದರ ಬಗ್ಗೆ ಮಾತಾಡುತ್ತಾ ಅಮಿತಾಭ್ ಸಿಗರೇಟ್ ಮತ್ತು ಆಲ್ಕೋಹಾಲ್ ಬಿಡಲು ಒಂದು ಒಳ್ಳೆಯ ದಾರಿಯಿದೆ. ಸಿಗರೇಟಿನಂತೆಯೇ ಮದ್ಯವನ್ನು ಬಿಡುವ ಮಾರ್ಗವು ನಿಜವಾಗಿಯೂ ತುಂಬಾ ಸರಳವಾಗಿದೆ. ಮಾದಕ ದ್ರವ್ಯದ ಆ ಲೋಟವನ್ನು ಮಧ್ಯದಲ್ಲಿ ಇರಿಸಿ ಮತ್ತು ಅದೇ ಸಮಯದಲ್ಲಿ ನಿಮ್ಮ ತುಟಿಗಳ ಮೇಲೆ ಇರಿಸಿಕೊಂಡು ಸಿಗರೇಟನ್ನು ಪುಡಿ ಮಾಡಿ ಮತ್ತು ಅದಕ್ಕೆ ಸಯೋನಾರಾ (ಜಪನೀಸ್ ಭಾಷೆಯಲ್ಲಿ ವಿದಾಯ) ಹೇಳಿ... ಮುಕ್ತಿ ಪಡೆಯಲು ಅತ್ಯುತ್ತಮ ಮಾರ್ಗ ಇದು. ಇದು ಕ್ಯಾನ್ಸರ್ ಅನ್ನು ಒಂದೇ ಬಾರಿಗೆ ತೊಡೆದು ಹಾಕುತ್ತದೆ” ಎಂದು ಬಿಗ್ ಬಿ ಇದರ ಚಟ ಅಂಟಿಸಿಕೊಂಡವರಿಗೆ ಸಲಹೆ ನೀಡಿದ್ದಾರೆ.