ಯುಎಫ್ಒ ಕ್ಯೂಬ್ ವೆಚ್ಚ ಕಡಿಮೆ ಮಾಡುವವರೆಗೂ ಸಿನಿಮಾ ರಿಲೀಸ್ ಮಾಡುವುದು ಬೇಡ ಎಂದು ಬಿಡುಗಡೆಗೆ ಸಿದ್ದವಿರೋ ಚಿತ್ರ ನಿರ್ಮಾಪಕರಿಗೆ ನಿರ್ಮಾಪಕರ ಸಂಘ ವಿನಂತಿ ಮಾಡಿದೆ. ಒಂದು ಸಿನಿಮಾ ಒಂದು ವಾರ ಪ್ರದರ್ಶನ ಮಾಡಲು UFO.qube 10,200 ರೂಪಾಯಿಗಳನ್ನ ಚಾರ್ಚ್ ಮಾಡಲಾಗುತ್ತೆ. ಇಂಟರ್ ವೆಲ್ ನಲ್ಲಿ ಅವರದ್ದೆ ಜಾಹೀರಾತು ಪ್ರಸಾರ ಮಾಡಿಕೊಳ್ತಾರೆ. ಅದರಿಂದ ನಿರ್ಮಾಪಕರಿಗೆ ಯಾವುದೇ ಲಾಭ ಬಡುವುದಿಲ್ಲ. 

ಒಂದು ಥಿಯೇಟರ್ ನಲ್ಲಿ ಒಂದು‌ ಸಿನಿಮಾ ಪ್ರದರ್ಶನ ಮಾಡಲು ಎಲ್ಲಾ ಖರ್ಚು ವೆಚ್ಚ ಸೇರಿ 50 ಸಾವಿರ ಖರ್ಚು ಆಗುತ್ತದೆ. ಇಂತಹ ಸಮಯದಲ್ಲಿ ಅಷ್ಟು ಹಣ ಭರಿಸಲು ಸಾಧ್ಯವಿಲ್ಲ. ಹಾಗಾಗಿ ನಿರ್ಮಾಪಕರು ಆತುರ ಮಾಡುವುದು ಬೇಡ ಎನ್ನಲಾಗಿದೆ. ಯುಎಫ್ ಓ .ಕ್ಯೂಬ್ ತಂಡ ಅವರ ನಿರ್ಧಾರ ತಿಳಿಸುವ ವರೆಗೂ ಕಾಯಿರಿ ಎಂದು ಸೂಚನೆ ನೀಡಲಾಗಿದೆ.

ಕೇಂದ್ರ ಸಮ್ಮತಿಸಿದ್ರೂ ಸ್ಟೇಟ್ ಪರ್ಮಿಷನ್‌ಗಾಗಿ ಕಾಯ್ತಿವೆ ಥಿಯೇಟರ್ಸ್‌..!

ಚಲನಚಿತ್ರ ನಿರ್ಮಾಪಕರ ಸಂಘದಲ್ಲಿ ಸುದ್ದಿಗೋಷ್ಟಿ ನಡೆದಿದ್ದು, ಥಿಯೇಟರ್ ಓಪನ್  ಹಾಗೂ ಸಿನಿಮಾ ಬಿಡುಗಡೆ ವಿಚಾರವಾಗಿ ಪ್ರೇಸ್ ಮೀಟ್  ನಡೆಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ . ಕೆ ಮಂಜು . ಎ ಗಣೇಶ್ ಹಾಗೂ ಸುರೇಶ್ ಕುಮಾರ್ ಭಾಗಿಯಾಗಿದ್ದರು. ಸರ್ಕಾರದ ನಿಯಮಾವಳಿಗಳ ಬಗ್ಗೆ ಕೆಲ ನಿರ್ಮಾಪಕರಿಗೆ ಅಸಮಾಧಾನ ಇದೆ. ದೊಡ್ಡ ಬಜೆಟ್ ಸಿನಿಮಾಗಳಿಗೆ 50% ವರ್ಕ್ ಆಗಲ್ಲ ಅಂತಿದ್ದಾರೆ ನಿರ್ಮಾಪಕರು.

ಹಾಗಾಗಿ ಯಾರೂ ಸಿನಿಮಾ ರಿಲೀಸ್ ಗೆ ರೆಡಿ ಇಲ್ಲ . 280 ಚಿತ್ರಗಳು ಈಗಾಗಲೇ ರಿಲೀಸ್ ಗೆ ರೆಡಿ ಆಗಿವೆ.  ಶೇರ್ ವ್ಯವಸ್ಥೆಯಲ್ಲಿ ಸಿನಿಮಾ ರಿಲೀಸ್ ಮಾಡಲು ಹೆಚ್ಚು ಒತ್ತು ನೀಡಲಾಗುತ್ತಿದೆ. ನಿರ್ಮಾಪಕರು ಮತ್ತು ಥಿಯೇಟರ್ ಮಾಲೀಕರು ಸಾಕಷ್ಟು ಸಮಸ್ಯೆಯಲ್ಲಿದ್ದಾರೆ. ಹಾಗಾಗಿ ಸಿನಿಮಾ ಪ್ರದರ್ಶನ ಮಾಡಿ ಅದ್ರಲ್ಲಿ ಬರೋ ಲಾಭದಲ್ಲಿ ಶೇರ್ ತೆಗೆದುಕೊಳ್ಳುವಂತೆ ಮಾತುಕತೆ ಆಗುತ್ತಿದೆ ಎಂದಿದ್ದಾರೆ.

ಯುಎಫ್‌ಒ ಎಂದರೇನು:

ಫುಲ್ ಲೆಂಗ್ತ್ ಸಿನಿಮಾ ಹಾಗೂ ಥಿಯೇಟರ್‌ ಕಂಟೆಂಟ್‌ಗಳನ್ನು ಸ್ಯಾಟ್‌ಲೈಟ್‌ ಮೂಲಕ ಡೆಲಿವರಿ ಮಾಡುವ ಕಂಪನಿ UFO. ಇದು ಭಾರತದ ಅತ್ಯಂತ ದೊಡ್ಡ ಸಿನಿಮಾ ಡಿಸ್ಟ್ರಿಬ್ಯೂಷನ್ ನೆಟ್‌ವರ್ಕ್.