Asianet Suvarna News Asianet Suvarna News

ನಿರ್ದೇಶಕ ಮಣಿರತ್ನಂಗೆ ಕೊರೊನಾ ಪಾಸಿಟಿವ್; ಆಸ್ಪತ್ರೆಗೆ ದಾಖಲು

ಕೊರೋನಾ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾದ ನಿರ್ದೇಶಕ ಮಣಿರತ್ನಂ.... 

Film maker Mani Ratnam tests positive for covid19 vcs
Author
Bangalore, First Published Jul 19, 2022, 12:58 PM IST

 ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿರತ್ನಂ ಅವರಿಗೆ ಕೊರೋನಾ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಯಲ್ಲಿರುವ ನಿರ್ದೇಶಕರ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರು ಬುಲೆಟಿನ್‌ ರಿಲೀಸ್ ಮಾಡಬೇಕಿದೆ. ಆಪ್ತರಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಮಣಿರತ್ನಂ ಕ್ಷೇಮವಾಗಿದ್ದಾರೆ ಆದರೆ ವಯಸ್ಸಾಗಿರುವ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ. 

ಕೆಲವು ದಿನಗಳ ಹಿಂದೆ 70 ವರ್ಷ ಮಲಯಾಳಂ ನಿರ್ದೇಶಕ ಪ್ರತಾಥ್ ಪೊಥೆನ್ ಅಗಲಿದ್ದರು, ಅವರ ಅಂತಿಮ ದರ್ಶನ ಪಡೆಯಲು ಮಣಿರತ್ನಂ ಆಗಮಿಸಿದ್ದರು. ಇದರ ಜೊತೆಗೆ ಚೆನ್ನೈನಲ್ಲಿ ಪೊನ್ನಿಯಿನ್ ಸೆಲ್ವ ಸಿನಿಮಾ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು. ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿರುವ ನಿರ್ದೇಶಕರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. 

Film maker Mani Ratnam tests positive for covid19 vcs

ಪೊನ್ನಿಯಿನ್ ಸೆಲ್ವ ಫಸ್ಟ್‌ಲುಕ್‌:

ನಿರ್ದೇಶಕ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರದ ಮೂಲಕ ಐಶ್ವರ್ಯಾ ರೈ ಬಚ್ಚನ್ ಮತ್ತೆ ತಮಿಳು ಸಿನಿಮಾಗೆ ಮರಳಿದ್ದಾರೆ. ಪೊನ್ನಿಯಿನ್ ಸೆಲ್ವನ್  ಸಿನಿಮಾದಲ್ಲಿ ಐಶ್ವರ್ಯಾ ರೈ ಪಜುವೂರಿನ ರಾಜಮನೆತನದ ರಾಜಕುಮಾರಿ ನಂದಿನಿಯ ಪಾತ್ರವನ್ನು ಮಾಡಲಿದ್ದಾರೆ. ಇಂದು (ಜುಲೈ 6) ಚಿತ್ರ ತಂಡವೂ ಐಶ್ವರ್ಯಾ ಅವರ ಫಸ್ಟ್‌ಲುಕ್ ಅನ್ನು ರಿಲೀಸ್ ಮಾಡಿದ್ದು, ಫಸ್ಟ್‌ಲುಕ್‌ನಲ್ಲಿ ರಾಣಿಯಂತೆ ಐಶ್ ಕಂಗೊಳಿಸುತ್ತಿದ್ದಾರೆ. ಪೊನ್ನಿಯಿನ್ ಸೆಲ್ವನ್ ಭಾಗ 1ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಮಣಿರತ್ನಂ ಸಿನಿಮಾದಲ್ಲಿ ಐಶ್ವರ್ಯಾ ರೈಗೆ ನೆಗೆಟಿವ್‌ ರೋಲ್‌!

ಈ ಸಿನಿಮಾದಲ್ಲಿ ದೇವದಾಸ್ ನಟಿ ಐಶ್ವರ್ಯಾ ದ್ವಿಪಾತ್ರವನ್ನು ನಿರ್ವಹಿಸಲಿದ್ದಾರೆ.  ಪಜುವೂರಿನ ರಾಜಕುಮಾರಿ ನಂದಿನಿ ಹಾಗೂ ಮಂದಾಕಿನಿ ದೇವಿಯಾಗಿ ಐಶ್ವರ್ಯಾ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಈ ಸಿನಿಮಾದಲ್ಲಿ ನಟಿಸುತ್ತಿರುವ ಚಿಯಾನ್ ವಿಕ್ರಮ್ ಮತ್ತು ಕಾರ್ತಿ ಅವರ ಫಸ್ಟ್ ಲುಕ್ ಪೋಸ್ಟರ್‌ಗಳು ಈಗಾಗಲೇ ಪ್ರತಿ ಚಿತ್ರ ರಸಿಕರ ಗಮನ ಸೆಳೆದಿವೆ. ಅವರು ಪೊನ್ನಿಯಿನ್ ಸೆಲ್ವನ್‌ನ ನಲ್ಲಿ ಕ್ರಮವಾಗಿ ಆದಿತ್ಯ ಕರಿಕಾಳನ್ ಮತ್ತು ವಂತಿಯತೇವನ್ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ತಮಿಳು (Tamil) , ಹಿಂದಿ (Hindi), ತೆಲುಗು (telugu), ಮಲಯಾಳಂ (Malayalam) ಮತ್ತು ಕನ್ನಡ ಭಾಷೆಯಲ್ಲಿ ಈ ಸಿನಿಮಾ ತೆರೆ ಕಾಣಲಿದೆ. 

ಸಿನಿಮಾ ಮಾತ್ರವಲ್ಲ ಹುಟ್ಟಿನಿಂದಲೇ ಇಳಯ-ಮಣಿ ಜೋಡಿ ಸೂಪರ್ ಹಿಟ್ !

ಕೋವಿಡ್‌ ಕೊಂಚ ಇಳಿಕೆ: 16,935 ಕೇಸು, 51 ಮಂದಿ ಸಾವು:

ದೇಶದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಕೊಂಚ ಇಳಿಕೆ ಕಂಡುಬಂದಿದ್ದು, ಸೋಮವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 16,953 ಹೊಸ ಕೋವಿಡ್‌ ಪ್ರಕರಣ ದಾಖಲಾಗಿವೆ. 51 ಸೋಂಕಿತರು ಸಾವಿಗೀಡಾಗಿದ್ದಾರೆ. ಆದರೆ ದೈನಂದಿನ ಪಾಸಿಟಿವಿಟಿ ದರವು 161 ದಿನಗಳ (ಐದೂವರೆ ತಿಂಗಳು) ಬಳಿಕ ಶೇ.6 ಮೀರಿದ್ದು, ಶೇ.6.48ರಷ್ಟುಪಾಸಿಟಿವಿಟಿ ದಾಖಲಾಗಿದೆ.. ಚೇತರಿಕೆ ದರವು ಶೇ.98.47ರಷ್ಟಿದೆ. ದೇಶ ಈವರೆಗೆ ಒಟ್ಟು 200 ಕೋಟಿ ಡೋಸ್‌ ಕೋವಿಡ್‌ ಲಸಿಕೆಯನ್ನು ವಿತರಿಸಿ ದಾಖಲೆ ಸೃಷ್ಟಿಸಿದೆ. ಈ ನಡುವೆ, ಸಕ್ರಿಯ ಪ್ರಕರಣಗಳ ಸಂಖ್ಯೆ 1.44 ಲಕ್ಷಕ್ಕೆ ಏರಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4.37 ಕೋಟಿಗೆ ಮತ್ತು ಸಾವಿನ ಸಂಖ್ಯೆ 5.25 ಲಕ್ಷಕ್ಕೆ ತಲುಪಿದೆ.

Follow Us:
Download App:
  • android
  • ios