ಸಾನಿಯಾ ಮಿರ್ಜಾ ಪುತ್ರ ಸಿನಿಮಾಗೆ ಎಂಟ್ರಿ? ಕಡಿಮೆ ಬೆಲೆಗೆ ಸಿಕ್ಕ ಹೀರೋ ಎಂದ ನಿರ್ದೇಶಕಿ ಫರಾ ಖಾನ್
ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ(Sania Mirza) ಪುತ್ರ ಇಝಾನ್ ಮಿರ್ಜಾ ಮಲಿಕ್(Izhaan Mirza Malik) ಸದ್ಯ ಸುದ್ದಿಯಲ್ಲಿದ್ದಾರೆ. ಟೆನ್ನಿಸ್ ತಾರೆಯ ಪುತ್ರ ಇಝಾನ್ ಸಿನಿಮಾದಲ್ಲಿ ಹೀರೋ ಆಗಲು ಹೊರಟಿದ್ದಾನೆ. ಪುಟ್ಟ ಪೋರ ಇಝಾನ್ ನನ್ನು ಹೀರೋ ಮಾಡುತ್ತಿದ್ದಾರೆ ಬಾಲಿವುಡ್‌ನ ಖ್ಯಾತ ನಿರ್ದೇಶಕಿ ಫರಾ ಖಾನ್.
ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ(Sania Mirza) ಪುತ್ರ ಇಝಾನ್ ಮಿರ್ಜಾ ಮಲಿಕ್(Izhaan Mirza Malik) ಸದ್ಯ ಸುದ್ದಿಯಲ್ಲಿದ್ದಾರೆ. ಟೆನ್ನಿಸ್ ತಾರೆಯ ಪುತ್ರ ಇಝಾನ್ ಸಿನಿಮಾದಲ್ಲಿ ಹೀರೋ ಆಗಲು ಹೊರಟಿದ್ದಾನೆ. ಪುಟ್ಟ ಪೋರ ಇಝಾನ್ ನನ್ನು ಹೀರೋ ಮಾಡುತ್ತಿದ್ದಾರೆ ಬಾಲಿವುಡ್‌ನ ಖ್ಯಾತ ನಿರ್ದೇಶಕಿ ಫರಾ ಖಾನ್. ಹೌದು, ಸಾನಿಯಾ ಮಿರ್ಜಾ ಪುತ್ರನ ಜೊತೆ ಇರುವ ಸುಂದರ ಫೋಟೋ ಶೇರ್ ಮಾಡಿರುವ ಫರಾ ಖಾನ್ ಕಡಿಮೆ ಬೆಲೆಗೆ ಹೊಸ ಹೀರೋ ಸಿಕ್ಕಿದ್ದಾನೆ ಎಂದು ಹೇಳಿದ್ದಾರೆ. ಇಝಾನ್ ಮಿರ್ಜಾ ಜೊತೆ ಇರುವ ಸುಂದರ ಫೋಟೋವನ್ನು ಶೇರ್ ಮಾಡಿದ್ದಾರೆ.
ಅಂದಹಾಗೆ ಸಾನಿಯಾ ಪುತ್ರ ಇಝಾನ್ ಬಳಿ 500 ರೂಪಾಯಿಯ ನೋಟ್ ಇದೆ. ಈ ಬಗ್ಗೆ ಬರೆದುಕೊಂಡಿರುವ ಫರಾ ಖಾನ್, 'ನನಗೆ ಕಡಿಮೆ ಬೆಲೆಗೆ ಹೀರೋ ಸಿಕ್ಕಿದ್ದಾನೆ. ಇಝಾನ್ ಮಿರ್ಜಾ ಮಲಿಕ್. ಈ ಕ್ಯೂಟಿ ಕೇವಲ 500 ರೂಪಾಯಿಗೆ ನನ್ನ ಸಿನಿಮಾಗೆ ಸಹಿ ಮಾಡಿದ್ದಾನೆ. ಸಾನಿಯಾ ಈ ರಿಯಾಯಿತಿಗೆ ಧನ್ಯವಾದಗಳು' ಎಂದು ಹೇಳಿದ್ದಾರೆ. ಫರಾ ಖಾನ್ ಹೊಸ ಹೀರೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫರಾ ಖಾನ್ ಫೋಟೋಗೆ ಸಾನಿಯಾ ಮಿರ್ಜಾ ಹಾರ್ಟ್ ಇಮೋಜಿ ಹಾಕಿದ್ದಾರೆ.
ಅಂದಹಾಗೆ ಫರಾ ಖಾನ್ ಜೊತೆ 500 ರೂಪಾಯಿ ಹಿಡಿದು ಕುಳಿತಿರುವ ಇಝಾನ್ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಈ ಬಗ್ಗೆ ಸಾನಿಯಾ ಅಥವಾ ಫರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಫರಾ ಖಾನ್ ಜೊತೆ ಫೋಟೋಗೆ ಪೋಸ್ ನೀಡಿದ್ದನ್ನು ನೋಡಿ ನೆಟ್ಟಿಗರು ಇಝಾನ್ ಸಿನಿಮಾರಂಗ ಪ್ರವೇಶ ಮಾಡಿದ್ದಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇಝಾನ್ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರೂ ಅಚ್ಚರಿ ಪಡಬೇಕಿಲ್ಲ.
Sania Mirza: ಟೆನಿಸ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ ಅನೇಕ ಸಿನಿ ತಾರೆಯರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಅದೇ ಸ್ನೇಹ ಸಂಬಂಧ ಪುತ್ರನನ್ನು ಬಾಲಿವುಡ್ ಲೋಕಕ್ಕೆ ಎಂಟ್ರಿ ಕೊಡಿಸಿದರು ಅಚ್ಚರಿ ಇಲ್ಲ. ಇಝಾನ್ ಮಿರ್ಜಾ ಮಲಿಕ್, ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟ್ ಆಟಗಾರ ಮಲಿಕ್ ಅವರ ಪುತ್ರ. ಭಾರತದ ಟೆನ್ನಿಸ್ ತಾರೆ ಸಾನಿಯ ಮಿರ್ಜಾ 2010ರಲ್ಲಿ ಪಾಕಿಸ್ತಾನದ ಕ್ರಿಕೆಟರ್ ಶೋಯೆಬ್ ಮಲಿಕ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೈದರಾಬಾದ್ ನಲ್ಲಿ ಸಂಪ್ರದಾಯ ಬದ್ಧವಾಗಿ ಸನಿಯಾ, ಶೋಯೆಬ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟರು. 2018ರಲ್ಲಿ ಈ ಜೋಡಿ ಮೊದಲ ಮಗುವಿನ ತಂದೆ-ತಾಯಿಯಾದರು.
Happy Birthday Sania Mirza: 35ನೇ ವಸಂತಕ್ಕೆ ಕಾಲಿರಿಸಿದ ಮೂಗುತಿ ಸುಂದರಿ
ಬಾಲಿವುಡ್ ಸ್ಟಾರ್ ನಿರ್ದೇಶಕಿ ಫರಾ ಖಾನ್ ಬಗ್ಗೆ ಹೇಳುವುದಾದರೆ ಸದ್ಯ ಕರಣ್ ಜೋಹರ್ ಅವರ ರಾಕಿ ಔರ್ ರಾಣಿಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಣ್ವೀರ್ ಸಿಂಗ್ ಮತ್ತು ಅಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಹಿರಿಯಕಲಾವಿದರಾದ ಧರ್ಮೇಂದ್ರ, ಜಯ ಬಚ್ಚನ್ ಮತ್ತು ಶಬಾನಾ ಅಜ್ಮಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಕರಣ್ ಜೋಹರ್ ಅನೇಕ ವರ್ಷಗಳ ಬಳಿಕ ನಿರ್ದೇಶಕ್ಕೆ ಮರಳಿದ್ದಾರೆ.