Farah Khan YouTube earnings : ಬಾಲಿವುಡ್ ನಿರ್ದೇಶಕಿ ಫರಾ ಖಾನ್ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದು, ಅವರ ಅಡುಗೆ ವ್ಲಾಗ್ ಹೆಚ್ಚು ಪ್ರಸಿದ್ಧಿ ಪಡೆದಿದೆ. ಯೂಟ್ಯೂಬ್ ಚಾನೆಲ್ ಗಳಿಕೆ ಎಷ್ಟು ಎಂಬುದನ್ನು ಫರಾ ಖಾನ್ ಈಗ ಬಹಿರಂಗಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಒಂದೊಂದು ಯೂಟ್ಯೂಬ್ ಚಾನೆಲ್ (YouTube channel), ಇನ್ಸ್ಟಾ ಖಾತೆ ಹೊಂದಿದ್ದಾರೆ. ಅನೇಕರ ಗಳಿಕೆ ಮೂಲ ಈಗ ಸೋಶಿಯಲ್ ಮೀಡಿಯಾ. 9 -6 ಗಂಟೆ ಕೆಲ್ಸ ಬಿಟ್ಟು ಕಂಟೆಂಟ್ ಕ್ರಿಯೆಟ್ ಮಾಡಲು ಶುರು ಮಾಡಿರುವ ಸಾಮಾನ್ಯ ಜನರೇ ಕೈತುಂಬ ಸಂಪಾದನೆ ಮಾಡಿ, ಮನೆ ಮೇಲೆ ಮನೆ ಕಟ್ಟುತ್ತಿದ್ದಾರೆ. ಇನ್ನು ಸೆಲೆಬ್ರಿಟಿಗಳು ಕೇಳ್ಬೇಕಾ? ಮೊದಲೇ ಫೇಮಸ್ ಆಗಿರುವ ಸೆಲೆಬ್ರಿಟಿಗಳಿಗೆ ಸಬ್ಸ್ಕ್ರೈಬರ್ ಚಿಂತೆ ಹೆಚ್ಚಾಗಿ ಕಾಡೋದಿಲ್ಲ. ಸುಲಭವಾಗಿ ಅಭಿಮಾನಿಗಳು ಚಾನೆಲ್ ಸಬ್ಸ್ಕ್ರೈಬ್ ಮಾಡ್ತಾರೆ. ಇದ್ರಿಂದ ಅವರ ಗಳಿಕೆ ಡಬಲ್ ಆಗಿದೆ. ಇದಕ್ಕೆ ಬಾಲಿವುಡ್ ಸಿನಿಮಾ ನಿರ್ದೇಶಕಿ ಹಾಗೂ ಡಾನ್ಸ್ ಕೋರಿಯೋಗ್ರಫರ್ ಫರಾ ಖಾನ್ ಕೂಡ ಸೇರಿದ್ದಾರೆ. ಸ್ವತಃ ಫರಾ ಖಾನ್, ಸೋಶಿಯಲ್ ಮೀಡಿಯಾದ ಗಳಿಕೆ ಬಗ್ಗೆ ಹೇಳಿಕೊಂಡಿದ್ದಾರೆ.

ಸಿನಿಮಾಗಿಂತ ಕಂಟೆಂಟ್ ಕ್ರಿಯೇಟ್ (Content Creation) ನಿಂದ ಬರ್ತಿರುವ ಹಣ ಹೆಚ್ಚು : 

ಫರಾ ಖಾನ್ (Farah Khan) ಸದ್ಯ ಸಿನಿಮಾದಿಂದ ದೂರವಿದ್ದಾರೆ. ಅವರು ಸೆಲೆಬ್ರಿಟಿ ಶೋ ಹಾಗೂ ಚಾನೆಲ್ ನಲ್ಲಿ ಬ್ಯುಸಿ. ಕೆಲ ದಿನಗಳ ಹಿಂದಷ್ಟೆ ಫರಾ ಖಾನ್, ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದಾರೆ. ಅದ್ರಲ್ಲಿ ಫರಾ ಖಾನ್ ಕುಕ್ ದಿಲೀಪ್ ಜೊತೆ ಸೇರಿ ಅಡುಗೆ ಮಾಡ್ತಾರೆ. ಫರಾ ಖಾನ್ ಅವರಿಂದ ಕುಕ್ ದಿಲೀಪ್ ಕೂಡ ಪ್ರಸಿದ್ಧಿಗೆ ಬಂದಿದ್ದು ಒಂದು ಕಡೆಯಾದ್ರೆ ಫರಾ ಖಾನ್ ಈ ವ್ಲಾಗ್ ಜನಪ್ರಿಯತೆ ಗಳಿಸಿದೆ. ಯೂಟ್ಯೂಬ್ ಸಬ್ಸ್ಕ್ರೈಬರ್ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಸದ್ಯ ಫರಾ ಖಾನ್ ಯೂಟ್ಯೂಬ್ ಚಾನೆಲ್ ನಲ್ಲಿ 2.4 ಮಿಲಿಯನ್ ಸಬ್ಸ್ಕ್ರೈಬರ್ ಇದ್ದಾರೆ. ಇದ್ರಿಂದ ದೊಡ್ಡ ಮಟ್ಟದ ಹಣ ಫರಾ ಖಾನ್ ಖಾತೆ ಸೇರ್ತಿದೆ. ಸಾನಿಯಾ ಮಿರ್ಜಾ ಅವರ ಪಾಡ್ಕ್ಯಾಸ್ಟ್ನಲ್ಲಿ ಇದರ ಬಗ್ಗೆ ಫರಾ ಖಾನ್ ಚರ್ಚಿಸಿದ್ದಾರೆ.

'ಬೆಳದಿಂಗಳ ಬಾಲೆ' ನಿವೇದಿತಾ ಗೌಡಗೆ ಮತ್ತೆಮತ್ತೆ ನೆಟ್ಟಿಗರು ಕೇಳೋ ಪ್ರಶ್ನೆ ಇದು.. ಉತ್ತರ ಕೊಡ್ತಾರಾ?

ಕಂಟೆಂಟ್ ಕ್ರಿಯೇಟ್ ನಿಂದ ನನ್ನ ಗಳಿಕೆ ಹೆಚ್ಚಾಗಿದೆ ಎಂದು ಫರಾ ಖಾನ್ ಹೇಳಿದ್ದಾರೆ. ಈಗ ನಾನು ಯೂಟ್ಯೂಬ್ ನಲ್ಲಿ ಸಂಪಾದನೆ ಮಾಡಿದ ಹಣವನ್ನು ಸಿನಿಮಾ ನಿರ್ದೇಶನದ ವೇಳೆಯೂ ಪಡೆದಿಲ್ಲ ಎಂದು ಫರಾ ಖಾನ್ ಹೇಳಿಕೊಂಡಿದ್ದಾರೆ. ನಿರ್ದೇಶನ, ಕಂಟೆಂಟ್ ಕ್ರಿಯೇಟ್ ಹಾಗೂ ಡಾನ್ಸ್ ಕೋರಿಯೋಗ್ರಫಿ ಇದ್ರಲ್ಲಿ ಒಂದನ್ನು ಆಯ್ಕೆ ಮಾಡ್ಕೊಳ್ಳಿ ಅಂತ ಸಾನಿಯಾ ಮಿರ್ಜಾ ಕೇಳಿದ ಪ್ರಶ್ನೆಗೆ ಫರಾ ಖಾನ್ ಕಂಟೆಂಟ್ ಕ್ರಿಯೇಟ್ ಎಂದಿದ್ದಾರೆ. ಈ ಮೂವರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದಾದ್ರೆ, ಕಂಟೆಂಟ್ ಕ್ರಿಯೇಟನ್ ನಲ್ಲಿ ಹೆಚ್ಚು ಹಣವಿದೆ ಎಂದಿದ್ದಾರೆ.

ಅಂದುಕೊಂಡಂಗಿಲ್ಲ ರಶ್ಮಿಕಾ ಮಂದಣ್ಣ!.. ಈ 'ಮಹಾನಟಿ'ಯ ಮತ್ತೊಂದು ನಿಜ ಮುಖ ಬಯಲು!

ಫರಾ ಖಾನ್ ನಿರ್ದೇಶಿಸಿದ ಕೊನೆಯ ಚಿತ್ರ "ಹ್ಯಾಪಿ ನ್ಯೂ ಇಯರ್", ಇದು ಬಾಕ್ಸ್ ಆಫೀಸ್ನಲ್ಲಿ 383 ಕೋಟಿ ರೂಪಾಯಿ ಗಳಿಸಿತ್ತು. ಈ ಚಿತ್ರ 2014ರಲ್ಲಿ ಬಿಡುಗಡೆಯಾಗಿತ್ತು. ಇದಕ್ಕೂ ಮುನ್ನ ಫರಾ ಖಾನ್, ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಜೊತೆ ಮಾಡಿದ್ದ "ತೀಸ್ ಮಾರ್ ಖಾನ್" ಫ್ಲಾಪ್ ಆಗಿತ್ತು. ಓಂ ಶಾಂತಿ ಓಂ ಮತ್ತು ಮೈ ಹೂ ನಾ ಫರಾ ಖಾನ್ ಅವರ ಪ್ರಸಿದ್ಧ ಸಿನಿಮಾಗಳು. 11 ವರ್ಷಗಳಿಂದ ಯಾವುದೇ ಸಿನಿಮಾ ಮಾಡದ ಫರಾ ಖಾನ್ ನಷ್ಟದಲ್ಲಿಲ್ಲ. ಫರಾ ಖಾನ್ 300 ಕೋಟಿ ಸಿನಿಮಾದಲ್ಲಿ ಸಾಕಷ್ಟು ಹಣ ಸಂಪಾದನೆ ಮಾಡಿದ್ದಾರೆ ಎನ್ನುವ ಮಾತನ್ನು ತಳ್ಳಿ ಹಾಕಿದ್ದು, ಅದಕ್ಕಿಂತ ನಾನು ಯೂಟ್ಯೂಬ್ ನಲ್ಲಿ ಹೆಚ್ಚು ಗಳಿಸಿದ್ದೇನೆ ಎಂದಿದ್ದಾರೆ. ಕಂಟೆಂಟ್ ಕ್ರಿಯೇಟ್ ನಲ್ಲಿ ಹೆಚ್ಚು ಹಣ ಸಂಪಾದನೆ ಮಾಡ್ತಿದ್ದೇನೆ ಆದ್ರೆ ನನಗೆ ಆಸಕ್ತಿ ಇರೋದು ಸಿನಿಮಾ ನಿರ್ದೇಶನದಲ್ಲಿ ಎಂದಿದ್ದಾರೆ.