ಗರ್ಲ್‌ಫ್ರೆಂಡ್‌ಗಾಗಿ 530 ಕೋಟಿ ರೂ ಸರ್ಕಾರದ ವಿಮಾನ ಬಳಸಿದ್ರಾ FBI ಮುಖ್ಯಸ್ಥ ಕಾಶ್ ಪಟೇಲ್, ಟೀಕೆ, ಆರೋಪಿಗಳಿಗೆ ಕಾಶ್ ಪಟೇಲ್ ಉತ್ತರಿಸಿದ್ದಾರೆ. ಇದೇ ವೇಳೆ ಪತ್ನಿ ಬಗ್ಗೆ ಮೌನವಾಗಿರುವ ಕಾಶ್ ಪಟೇಲ್ ಗರ್ಲ್‌ಫ್ರೆಂಡ್ ಪರ ಬ್ಯಾಟ್ ಬೀಸುತ್ತಿದ್ದಾರೆ ಎಂದು ಮತ್ತೊಂದು ಆರೋಪ ಕೇಳಿಬಂದಿದೆ.
ವಾಶಿಂಗ್ಟನ್ (ನ.04) ಅಮೆರಿಕದ ಪ್ರತಿಷ್ಠಿತ ತನಿಖಾ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್(ಎಫ್‌ಬಿಐ) ಮುಖ್ಯಸ್ಥ ಕಾಶ್ ಪಟೇಲ್ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಕಾಶ್ ಪಟೇಲ್ ಎಫ್‌ಬಿಐ ಮುಖ್ಯಸ್ಥರಾಗಿ ಆಯ್ಕೆಯಾದಾಗಲೇ ವಿವಾಗಳು ಆರಂಭಗೊಂಡಿತ್ತು. ಭಾರತೀಯ ಮೂಲದ ಕಾಶ್ ಪಟೇಲ್ ಆಯ್ಕೆಗೂ ವಿರೋಧವಿತ್ತು. ಇದೀಗ ಹೊಸ ವಿವಾದ ಭುಗಿಲೆದ್ದಿದೆ. ಕಾಶ್ ಪಟೇಲ್ ತಮ್ಮ ಗರ್ಲ್‌ಫ್ರೆಂಡ್ ಮ್ಯೂಸಿಕ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸರ್ಕಾರದ ಬರೋಬ್ಬರ 530 ಕೋಟಿ ರೂಪಾಯಿ ಮೌಲ್ಯದ ವಿಮಾನ ಬಳಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ಕಾಶ್ ಪಟೇಲ್ ಪತ್ನಿ ಹಾಗೂ ಗರ್ಲ್‌ಫ್ರೆಂಡ್ ತುರಿತು ಟೀಕೆ, ಜಟಾಪಟಿಗಳು ನಡೆಯುತ್ತಿದೆ.
ಅಲೆಕ್ಸಿ ವಿಲಿಕಿನ್ಸ್ ಮ್ಯೂಸಿಕ್ ಕಾರ್ಯಕ್ರಮದ ಸುತ್ತ ವಿವಾದ
ಕಾಶ್ ಪಟೇಲ್ ತಮ್ಮ ಗರ್ಲ್‌ಫ್ರೆಂಡ್ ಅಲೆಕ್ಸ್ ವಿಲಿಕಿನ್ಸ್ ಮ್ಯೂಸಿಕ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸರ್ಕಾರದ ವಿಮಾನ ಬಳಸಿದ್ದಾರೆ. ಪೆನ್ಸಿಲ್ವೇನಿಯಾದ ರಸ್ಲಿಂಗ್ ಸ್ಪರ್ಧೆಯಲ್ಲಿ ಮ್ಯೂಸಿಕ್ ಕಾರ್ಯಕ್ರಮವಿತ್ತು. ಇದಕ್ಕಾಗಿ ತೆರಿಗೆ ಪಾವತಿದಾರ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದ ವಿಮಾನದಲ್ಲಿ ತೆರಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಎಫ್‌ಬಿಐ ಹಾಗೂ ಕಾಶ್ ಪಟೇಲ್ ತಿರುಗೇಟು ನೀಡಿದ್ದಾರೆ. ಹೀಗೆ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಇದೀಗ ಗರ್ಲ್‌ಫ್ರೆಂಡ್ ಹಾೂ ಪತ್ನಿ ವಿಚಾರ ಮುನ್ನಲೆಗೆ ಬಂದಿದೆ.
ಕಾಶ್ ಪಟೇಲ್ ಅಮೆರಿಕ ಎಫ್‌ಬಿಐ ಮುಖ್ಯಸ್ಥ, ಅವರ ಭದ್ರತೆ ಬಗ್ಗೆ ಗೊತ್ತಿದೆಯಾ?
ಕಾಶ್ ಪಟೇಲ್ ಅಮೆರಿಕದ ಪ್ರತಿಷ್ಠಿತ ತನಿಖಾ ಸಂಸ್ಥೆಯ ಮುಖ್ಯಸ್ಥ. ಕಾಶ್ ಪಟೇಲ್‌ಗೆ ಗರಿಷ್ಠ ಮಟ್ಟದ ಭದ್ರತೆ ಇದೆ. ಇದಕ್ಕೆ ಹಲವು ಕಾರಣಗಳೂ ಇವೆ. ಕಾಶ್ ಪಟೇಲ್ ಎಲ್ಲಿಗೆ ಹೋಗಬೇಕಿದ್ದರೂ ಸರ್ಕಾರದ ವಿಮಾನ ಬಳಸುತ್ತಾರೆ. ಕಾರಣ ಅವರಿಗೆ ಭದ್ರತೆ ನೀಡುವು ಜವಾಬ್ದಾರಿ ಸರ್ಕಾರದ ಮೇಲಿದೆ. ಇತರ ಸಾರ್ವಜನಿಕ ವಿಮಾನದಲ್ಲಿ ಕಾಶ್ ಪಟೇಲ್ ಪ್ರಯಾಣ ಮಾಡಿದರೆ ಭದ್ರತೆ ಸವಾಲಾಗಲಿದೆ. ಕಾಶ್ ಪಟೇಲ್ ತಮ್ಮ ವೈಯುಕ್ತಿಕ ಕಾರ್ಯಕ್ಕೆ ಸರ್ಕಾರದ ವಿಮಾನ ಬಳಸಿದರೆ ಅದರ ಮೊತ್ತ ಅವರು ಪಾವತಿಸುತ್ತಾರೆ. ಇದಕ್ಕೆ ನಿರ್ದಿಷ್ಟ ನೀತಿ, ನಿಯಮವಿದೆ ಎಂದು ಎಫ್‌ಬಿಐ ಸ್ಪಷ್ಟಪಡಿಸಿದೆ.
ಟೀಕಿಸಿ ಆದರೆ ಅಲೆಕ್ಸಿ ಬಗ್ಗೆ ಯಾಕೆ?
ಕಾಶ್ ಪಟೇಲ್ ಈ ಟೀಕೆಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ನಾನು ಸಾರ್ವನಿಕ ಜೀವನದಲ್ಲಿದ್ದೇನೆ. ಹೀಗಾಗಿ ಟೀಕೆಗಳು ಸಾಮಾನ್ಯ. ನನ್ನ ಬಗ್ಗೆ, ಕೆಲಸದ ಬಗ್ಗೆ, ನೀತಿ, ನಿರ್ಧಾರಗಳ ಬಗ್ಗೆ ಟೀಕಿಸಿ. ಆದರೆ ನನ್ನ ಕಾರಣದಿಂದ ನನ್ನ ಪಾರ್ಟ್ನರ್ ಕುರಿತು ಟೀಕೆ ಯಾಕೆ, ಆಕೆ ಹೆಮ್ಮೆಯ ಹೆಣ್ಣು. ಆಕೆಯ ದೇಶದ ಸೆನ್ಸೇಶನ್ ಮ್ಯೂಸಿಕ್ ರಾಕ್. ಮ್ಯೂಸಿಕ್ ಕ್ಷೇತ್ರದಲ್ಲಿ ಅಲೆಕ್ಸಿ ದೇಶಕ್ಕಾಗಿ ಹಲವು ಕೊಡುಗೆ ನೀಡಿದ್ದಾರೆ ಎಂದು ಕಾಶ್ ಪಟೇಲ್ ಹೇಳಿದ್ದಾರೆ. ನೀವು ಎಷ್ಟೇ ಟೀಕೆ, ಆರೋಪ ಮಾಡಿದರೂ ಎಫ್‌ಬಿಐ ಗುರಿ, ಮುಂದಿನ ಕಾರ್ಯತಂತ್ರಗಳಲ್ಲಿ ಯಾವುದೇ ಬದಲಾವಣೆ ಇರವುದಿಲ್ಲ. ಎಫ್‌ಬಿಐ ವಿಚಲಿತಗೊಳ್ಳುವುದಿಲ್ಲ ಎಂದು ಕಾಶ್ ಪಟೇಲ್ ಹೇಳಿದ್ದಾರೆ.
ಕಾಶ್ ಪಟೇಲ್ ಪ್ರತಿಕ್ರಿಯೆ ಬೆನ್ನಲ್ಲೇ ಇದೀಗ ಹೊಸ ಆರೋಪ, ಟೀಕೆಗಳು ಕೇಳಿಬರುತ್ತಿದೆ. ಹಲವರು ಕಾಶ್ ಪಟೇಲ್ ಪತ್ನಿ ಹಾಗೂ ಗರ್ಲ್‌ಫ್ರೆಂಡ್ ಬೇರೆ ಬೇರೆ ಎಂದಿದ್ದಾರೆ. ಅಮರಿಕ ಎಫ್‌ಬಿಐ ಪರಿಸ್ಥಿತಿ ನೋಡಿ, ಮುಖ್ಯಸ್ಥರ ಗೆಳತಿ ಪರವಾಗಿ ಟ್ವೀಟ್ ಮಾಡುತ್ತಿದೆ. ಪತ್ನಿ ಕುರಿತಲ್ಲ ಎಂದು ವ್ಯಂಗ್ಯವಾಡಿದ್ದಾರೆ.
