ಮಿಲ್ಲರ್ಸ್ ಗರ್ಲ್ ಚಿತ್ರ ಇದೀಗ ವಿವಾದಕ್ಕೆ ಕಾರಣವಾಗಿದೆ. ಮಾರ್ಟಿನ್ ಫ್ರಿಮನ್ ಹಾಗೂ ಜೆನ್ನಾ ನಡುವಿನ ಸೆಕ್ಸ್ ಸೀನ್‌ಗಳೇ ಈ ವಿವಾದಕ್ಕೆ ಕಾರಣವಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಸಿನಿಮಾಗಳು ಬೋಲ್ಡ್ ಸೀನ್‌ಗಳಿಲ್ಲದೇ ಅಂತ್ಯಗೊಳ್ಳುವುದಿಲ್ಲ. ಕತೆ ಏನೇ ಆಗಿದ್ದರೂ ಇಂಟಿಮೇಟ್ ಸೀನ್‌ಗಳನ್ನು ತುರುಕಲಾಗುತ್ತದೆ. ಆದರೆ ಬಾಲಿವುಡ್ ಚಿತ್ರಗಳಲ್ಲಿ ಬೋಲ್ಡ್ ಸೀನ್ ಸಾಮಾನ್ಯವಾಗಿದೆ. ಇತ್ತ ಹಾಲಿವುಡ್ ಚಿತ್ರಗಳಲ್ಲಿ ಕತೆಗೆ ತಕ್ಕಂತೆ ಸೆಕ್ಸ್ ಸೀನ್‌ಗಳನ್ನು ಸೃಷ್ಟಿಸಲಾಗುತ್ತದೆ. ಇದೀಗ ಮಿಲ್ಲರ್ಸ್ ಗರ್ಲ್ ಅನ್ನೋ ಚಿತ್ರ ಇದೇ ಸೆಕ್ಸ್ ಸೀನ್‌ಗಳಿಂದ ಭಾರಿ ವಿವಾದಕ್ಕೆ ಕಾರಣವಾಗಿದೆ. ಸಿನಿ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ 52ರ ಹರೆಯ ಮಾರ್ಟಿನ್ ಫ್ರಿಮನ್, ನಾಯಕಿ ಜೆನ್ನಾ ಒರ್ಟೆಗಾ ಜೊತೆ ಸೆಕ್ಸ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ನಡುವೆ ವಯಸ್ಸಿನ ಅಂತರ ಹಾಗೂ ಸೆಕ್ಸ್ ಸೀನ್‌ಗೆ ವಿರೋಧ ವ್ಯಕ್ತವಾಗಿದೆ.
ಮಲ್ಲಿರ್ಸ್ ಗರ್ಲ್ ಚಿತ್ರದಲ್ಲಿ 52ರ ಹರೆಯ ನಾಯಕ ಮಾರ್ಟಿನ್ ಫ್ರಿಮನ್ ಅಧ್ಯಾಪಕನ ಪಾತ್ರ ನಿಭಾಯಿಸಿದ್ದಾರೆ. ಇತ್ತ ಜೆನ್ನಾ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಟರ್ ಜೊತೆಗೆ ಲೈಂಗಿಕ ಸಂಬಂಧ ಬೆಳೆಸುವ ಕತೆಯನ್ನೊಳಗೊಂಡ ಈ ಚಿತ್ರದಲ್ಲಿ ಸೆಕ್ಸ್ ಸೀನ್‌ಗಳ ಸಂಖ್ಯೆಯೂ ಹೆಚ್ಚಿದೆ. ಟೀಚರ್ ಮಾರ್ಟಿನ್ ತನ್ನ ತರಗತಿಯಲ್ಲಿ ಸೆಕ್ಸ್ ಕತೆಯನ್ನು ಬರೆದುಕೊಂಡು ಬರಲು ವಿದ್ಯಾರ್ಥಿಗಳಿಗೆ ಸೂಚನೆ ನೀಡುತ್ತಾನೆ.
ಆಗ ನನಗಿನ್ನೂ 19 ವರ್ಷ... ಸೌತ್ ನಿರ್ಮಾಪಕ ಮಂಚಕ್ಕೆ ಕರೆದ್ರು... ಅನುಭವ ಹೇಳಿದ ಬಿಗ್ಬಾಸ್ ಅಂಕಿತಾ
ಟೀಚರ್ ಸೂಚನೆಯಂತೆ ವಿದ್ಯಾರ್ಥಿಗಳು ಸೆಕ್ಸ್ ಸ್ಟೋರಿ ಬರೆದುಕೊಂಡು ತರಗತಿಗೆ ಹಾಜರಾಗುತ್ತಾರೆ. ಈ ಪೈಕಿ ವಿದ್ಯಾರ್ಥಿನಿ ಜೆನ್ನಾ ಬರೆದಿರುವ ಸೆಕ್ಸ್ ಸ್ಟೋರಿ ಟೀಚರ್ ಮಾರ್ಟಿನ್ ಗಮನಸಳೆಯುತ್ತದೆ. ಇದೇ ಸೆಕ್ಸ್ ಸ್ಟೋರಿಯಿಂದ ಟೀಚರ್ ಹಾಗೂ ವಿದ್ಯಾರ್ಥಿನಿ ನಡುವಿನ ಸಂಬಂಧ ಗಾಢವಾಗುತ್ತದೆ. ಬಳಿಕ ಲೈಂಗಿಕ ಸಂಬಂಧ ಸೇರಿದಂತೆ ಚಿತ್ರ ಮುಂದುವರಿಯುತ್ತದೆ.
ಚಿತ್ರ ಪ್ರೇಕ್ಷಕರಿಗೆ 31 ವರ್ಷಗಳ ನಡುವಿನ ಅಂತರದಿಂದ ಸೆಕ್ಸ್ ಸೀನ್ ಉತ್ತಮವಾಗಿ ಕಾಣಿಸುವುದಿಲ್ಲ. ಈ ಸೀನ್ ನೋಡಲು ಮುಜುಗರವಾಗುತ್ತದೆ ಎಂದು ಹಲವರು ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರ ಕೆಟ್ಟ ಸಂದೇಶ ನೀಡುತ್ತಿದೆ ಅನ್ನೋ ವಾದವೂ ಹುಟ್ಟಿಕೊಂಡಿದೆ. ಮಿಲ್ಲರ್ಸ್ ಗರ್ಲ್ ಚಿತ್ರ ಕೆಲ ಎಲ್ಲೆಗಳನ್ನ ಮೀರಿದೆ. ಸೆಕ್ಸ್ ಸೀನ್‌ಗಳು ಹಿತಕ್ಕಿಂತ ಕಸಿವಿಸಿಯಾಗುವಂತಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿತ್ರದ ಕುರಿತು ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಆದರೆ ಮಿಲ್ಲರ್ಸ್ ಗರ್ಲ್ ಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಉತ್ತಮ ಗಳಿಕೆಯನ್ನು ಮಾಡುತ್ತಿದೆ. ಚಿತ್ರಕತೆಗೆ ತಕ್ಕಂತೆ ಮೌಲ್ಯಯುತ ಸೀನ್‌ಗಳನ್ನು ಚಿತ್ರೀಸಲಾಗಿದೆ.ಸಮಾಜದಲ್ಲಿ ನಡೆಯುತ್ತಿರುವ ಸತ್ಯವನ್ನೇ ಸಿನಿಮಾದ ಮೂಲಕ ಬಿಚ್ಚಿಡುವ ಪ್ರಯತ್ನ ಮಾಡಿದ್ದೇವೆ ಎಂದು ಚಿತ್ರತಂಡ ಹೇಳಿದೆ.
