ಇದು ನಡೆದದ್ದು ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ನ ಸೂರತ್‌ನಲ್ಲಿ. ಹೋಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಸೂರತ್: ಸನ್ನಿ ಲಿಯೋನ್ ಹೆಸರು ಕೇಳದ ಪಡ್ಡೆ ಹುಡುಗರೇ ಇಲ್ಲವೇನೋ. ಮಾಜಿ ನೀಲಿತಾರೆ ಹಾಗೂ ಬಾಲಿವುಡ್‌ನ ಪ್ರಖ್ಯಾತ ಮಾದಕ ನಟಿ ಸನ್ನಿ ಲಿಯೋನ್ ಅವರನ್ನು ವಯಸ್ಸಿನ ಮಿತಿಯಿಲ್ಲದೇ ಆರಾಧಿಸುವ ಒಂದು ವರ್ಗವೇ ಇದೆ ಎಂದರೆ ಅದು ಅತಿಶಯೋಕ್ತಿಯಲ್ಲ. ಇಂತಹ ಸನ್ನಿ ಲಿಯೋನ್‌ ಅವರಿಗೆ ಓರ್ವ ರಿಪೋರ್ಟ್‌ 'ರಾತ್ರಿ ಪ್ರೊಗ್ರಾಂಗೆ' ನೀವೆಷ್ಟು ಚಾರ್ಜ್ ಮಾಡುತ್ತೀರಾ ಎಂದು ಕೇಳಿ ತಗಲಾಕಿಕೊಂಡಿದ್ದರು. ಇದಕ್ಕೆ ಸನ್ನಿ ಲಿಯೋನ್ ಕೊಟ್ಟ ಪ್ರತಿಕ್ರಿಯೆಗೆ ಇಡೀ ಬಾಲಿವುಡ್ ಒಂದು ಕ್ಷಣ ಬೆಚ್ಚಿ ಬಿಚ್ಚಿಬಿದ್ದಿತ್ತು.

ಹೌದು, ಇದು ನಡೆದದ್ದು ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ನ ಸೂರತ್‌ನಲ್ಲಿ. ಹೋಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. 2016ರ ಮಾರ್ಚ್ 24ರಂದು ಸೂರತ್‌ನಲ್ಲಿ 'Play Holi with Sunny Leone'(ಸನ್ನಿ ಲಿಯೋನ್ ಜತೆ ಹೋಳಿ ಆಡಿ) ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಮಾಧ್ಯಮವೊಂದರ ಪತ್ರಕರ್ತರೊಬ್ಬರು, ಸನ್ನಿ ಲಿಯೋನ್‌ಗೆ ನೀವು ರಾತ್ರಿ ಪ್ರೋಗ್ರಾಂಗೆ ಎಷ್ಟು ಚಾರ್ಜ್ ಮಾಡುತ್ತೀರಾ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಸಾಮಾನ್ಯವಾಗಿ ಪತ್ರಕರ್ತರ ಜತೆ ಉತ್ತಮ ಒಡನಾಟ ಹೊಂದಿರುವ ಸನ್ನಿ, ಪತ್ರಕರ್ತನ ಈ ಪ್ರಶ್ನೆಗೆ ಉರಿದು ಹೋಗಿದ್ದಾರೆ. ಹೋಟೆಲ್ ಕಾರಿಡಾರ್‌ನಲ್ಲಿ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಸನ್ನಿ ಹಿಂದೆ-ಮುಂದೆ ನೋಡದೇ ಕಪಾಳಮೋಕ್ಷ ಮಾಡಿದ್ದರು.

Scroll to load tweet…

ಇದಾದ ಬಳಿಕ ಕಾರ್ಯಕ್ರಮದ ಆಯೋಜಕರ ಬಳಿ, ನಮ್ಮ ಸುತ್ತಮುತ್ತ ಜರ್ನಲಿಸ್ಟ್‌ಗಳು ಇಲ್ಲದೇ ಇದ್ದರೆ ಮಾತ್ರ ನಾವು ಪ್ರದರ್ಶನ ನೀಡುತ್ತೇನೆ ಎಂದು ಷರತ್ತು ಹಾಕಿದ್ದರು. ಇದಾದ ಬಳಿ ಸನ್ನಿ ಲಿಯೋನ್ ಸ್ಟೇಜ್‌ ಮೇಲೆ 15 ನಿಮಿಷಗಳ ಪ್ರೋಗ್ರಾಂ ನೀಡಿದ್ದರು.

IPL ವೇಳೆಯಲ್ಲಿ ಬೆತ್ತಲೆ ಫೋಟೋ ಶೇರ್‌ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಪೂನಂ ಪಾಂಡೆ..!

ಈ ಘಟನೆಯ ಕುರಿತಂತೆ ಮಾತನಾಡಿದ ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್‌ , "ಸನ್ನಿ ಲಿಯೋನ್ ರಿಪೋರ್ಟರ್‌ಗೆ ಸರಿಯಾಗಿಯೇ ಮಾಡಿದ್ದಾರೆ. ಹೀಗಾಗಿ ನಾವು ಯಾವುದೇ ಕಂಪ್ಲೇಂಟ್ ನೀಡುತ್ತಿಲ್ಲ. ಈ ಕಾರ್ಯಕ್ರಮದ ಆಯೋಜಕರು ಕೂಡಾ ಕಾಲೇಜ್ ಮಕ್ಕಳಾಗಿರುವುದರಿಂದ ಅವರ ಭವಿಷ್ಯ ಹಾಳಾಗಬಾರದು ಎಂದು ನಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿಲ್ಲ. ಆದರೆ ಮತ್ತೊಮ್ಮೆ ಗುಜರಾತ್‌ಗೆ ಬರುವಾಗ ಸನ್ನಿ ಲಿಯೋನ್ ಖಂಡಿತವಾಗಿಯೂ ಸಾವಿರ ಬಾರಿ ಯೋಚಿಸಲಿದ್ದಾರೆ" ಎಂದು ಹೇಳಿದ್ದಾರೆ.

ಇನ್ನು ಈ ಘಟನೆಯನ್ನು ಮುಚ್ಚಿಹಾಕುವಂತಹ ಕೆಲಸಗಳು ನಡೆದವು ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಕುರಿತಂತೆ ಮಿಡ್ ಡೇ ವೆಬ್‌ಸೈಟ್‌ ವರದಿಯನ್ನು ಸನ್ನಿ ಲಿಯೋನ್ ಸಾರಾ ಸಗಟಾಗಿ ತಳ್ಳಿ ಹಾಕಿದ್ದರು. ಇದೊಂದು ಆಧಾರ ರಹಿತ ಸುಳ್ಳು. ಒಂದು ಸುದ್ದಿ ಬರೆಯುವ ಮುನ್ನ ಸರಿಯಾದ ಫ್ಯಾಕ್ಟ್ ಚೆಕ್ ಮಾಡಿ. ಸುಮ್ಮನೇ ಸುದ್ದಿ ಪ್ರಸಾರಕ್ಕಾಗಿ ಏನೋನೇ ಬರೆಯಬೇಡಿ ಎಂದು ಮಾಜಿ ನೀಲಿತಾರೆ ಸನ್ನಿ ಟ್ವೀಟ್ ಮಾಡಿ ಅಸಮಧಾನ ಹೊರಹಾಕಿದ್ದರು.

Scroll to load tweet…
Scroll to load tweet…