ಮುಗಿಬಿದ್ದ ಫ್ಯಾನ್ಸ್: ತಾತನ ಸಮಾಧಿ ತಲುಪಲು Jr NTR ಹರಸಾಹಸ
ತಾತನ ಸಮಾಧಿ ತಲುಪಲು Jr NTR ಹರಸಾಹಸ ಪಟ್ಟಿದ್ದಾರೆ. ಒಮ್ಮೆಗೆ ಮುಗಿಬಿದ್ದ ಫ್ಯಾನ್ಸ್ ನೋಡಿ ನೆಟ್ಟಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ.

ಜನಪ್ರಿಯ ನಟ, ಆಂಧ್ರ ಪ್ರದೇಶದ ಮಾಜಿ ಸಿಎಂ ನಂದಮೂರಿ ತಾರಕ ರಾಮರಾವ್ ಅವರ 10ನೇ ಜನ್ಮಜಯಂತೋತ್ಸವವಿಂದು. ನಟನಾಗಿ, ಸಿಎಂ ಆಗಿ NTR ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದರು. 100ನೇ ಜನ್ಮಜಯಂತೋತ್ಸವದ ಸಮಯದಲ್ಲಿ ಅಭಿಮಾನಿಗಳು, ಗಣ್ಯರು NTR ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು NTR ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.
ಎನ್‌ಟಿಆರ್ ಮಕ್ಕಳು ಹಾಗೂ ಮೊಮ್ಮಕ್ಕಳು ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಎನ್ ಟಿ ಆರ್ ಮೊಮ್ಮಗ ಖ್ಯಾತ ನಟ ಜೂ.ಎನ್ ಟಿ ಆರ್ ತಾತನ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಲು ಹರಸಾಹಸ ಪಟ್ಟಿದ್ದಾರೆ. ಎನ್‌ಟಿಆರ್ ಘಾಟ್ ತಲುಪಲು ಜೂ.ಎನ್ ಟಿ ಆರ್ ಕಷ್ಟಪಟ್ಟಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳ ವರ್ತನೆ ಕಂಡು ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.
ತಾತನ ಸಮಾಧಿಗೆ ನಮನ ಸಲ್ಲಿಸಲು ಜೂ.ಎನ್ ಟಿ ಆರ್ ಇಂದು ಬೆಳಗ್ಗೆಯೇ ಎನ್ ಟಿ ಆರ್ ಘಾಟ್‌ಗೆ ಎಂಟ್ರಿ ಕೊಟ್ಟರು. ಆದರೆ ಅಪಾರ ಸಂಖ್ಯೆಯ ಅಭಿಮಾನಿಗಳು ಒಮ್ಮೆಗೆ ಮುಗಿಬಿದ್ದರು. ಜೂ.ಎನ್ ಟಿ ಆರ್ ತಾತನ ಸಮಾಧಿ ತಲುಪಲು ಹರಸಾಹಸ ಪಡುವಂತೆ ಆಯಿತು. ಕಷ್ಟ ಪಟ್ಟು ಅಭಿಮಾನಿಗಳ ಮಧ್ಯೆಯೇ ನುಗ್ಗಿಕೊಂಡು ಸಮಾಧಿಗೆ ಭೇಟಿ ಮಾಡಿ ನಮನ ಸಲ್ಲಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೂ.ಎನ್ ಟಿ ಆರ್ ತುಂಬಾ ತಾಳ್ಮೆ ಇಂದನೆ ನಡೆದುಕೊಂಡು ಬಂದು ಗೌರವ ಸಲ್ಲಿಸಿದರು.
ವಿಶೇಷ ಎಂದರೆ ಜೂ.ಎನ್ ಟಿ ಆರ್ ಬರುತ್ತಿದ್ದಂತೆ ಅಭಿಮಾನಿಗಳು ಸಿಎಂ ಸಿಎಂ ಎಂದು ಕೂಗುತ್ತಿದ್ದರು. ತಾತನ ಹಾಗೆ ಜೂ.ಎನ್ ಟಿ ಆರ್ ಕೂಡ ಮುಂದಿನ ದಿನಗಳಲ್ಲಿ ಸಿಎಂ ಆದರೂ ಅಚ್ಚರಿ ಇಲ್ಲ. ಇಂದು ಸಿನಿಮಾರಂಗದಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ಜೂ.ಎನ್ ಟಿ ಆರ್ ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರು ಕೊಡಬಹುದು.
Jr.NTR ಮದುವೆಗೆ ಖರ್ಚು ಮಾಡಿದ ಹಣ ಎಷ್ಟು? ಪತ್ನಿ ಪ್ರಣತಿ ಧರಿಸಿದ್ದ ಸೀರೆ ಬೆಲೆ ಕೇಳಿದ್ರೆ ನಿಜಕ್ಕೂ ಹೌಹಾರ್ತೀರಾ!
ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಜನರಿಗೆ ಸ್ವಲ್ಪವೂ ಸಾಮಾಜ್ಯ ಜ್ಞಾನವಿಲ್ಲ, ಅವರು ಬಂದು ಏನು ಪ್ರಯೋಜನ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮನುಷ್ಯನ ಸಹನೆಗೂ ಒಂದು ಮಿತಿ ಇದೆ ಎಂದು ಮತ್ತೋರ್ವ ಕಾಮೆಂಟ್ ಮಾಡಿದ್ದಾರೆ.
80 ಕೋಟಿ ರೂ ಪ್ರೈವೇಟ್ ಜೆಟ್ ಸೇರಿ ಜೂ.ಎನ್‌ಟಿಆರ್ ಬಳಿ ಇದೆ ಐಷಾರಾಮಿ 6 ಕಾರು!
ಜೂ.ಎನ್ ಟಿ ಆರ್ ಸಿನಿಮಾಗಳು
ಜೂ.ಎನ್ ಟಿ ಆರ್ ಸದ್ಯ 30ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಿದ್ದು ಚಿತ್ರೀಕರಣ ನಡೆಯುತ್ತಿದೆ. ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಜಾನ್ವಿ ಸೌತ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ವಿಲನ್ ಆಗಿ ನಟಿಸುತ್ತಿದ್ದಾರೆ. ಕೊರಟಾಲ ಶಿವ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಜೂ.ಎನ್ ಟಿ ಆರ್ ವಾರ್-2ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೃತಿಕ್ ರೋಷನ್ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಮೂಡಿ ಬರುತ್ತಿದ್ದು ಅಯಾನ್ ಮುಖರ್ಜಿ ಆಕ್ಷನ್ ಕಟ್ ಹೇಳಲಿದ್ದಾರೆ.