ರೂಮ್‌ಗಳಲ್ಲಿರುವ ಹಿಡನ್ ಕ್ಯಾಮೆರಾಗಳಿಂದ ಸುರಕ್ಷಿತವಾಗಿರಲು ಏನು ಮಾಡಬೇಕು? ನಟಿ ದಿಯಾ ಮಿರ್ಜಾ ಕಂಡುಕೊಂಡು ಪರಿಹಾರವಿದು...  

ಬಾಲಿವುಡ್ ಹಾಟ್ ನಟಿ ಕಮ್ ಮಮ್ಮಿ ದಿಯಾ ಮಿರ್ಜಾ ಸೋಷಿಯಲ್ ಮೀಡಿಯಾದಲ್ಲಿ ಪರ್ಸನಲ್ ಲೈಫ್ ಅಂಡ್ ಪರ್ಸನಲ್ ಸ್ಪೇಸ್‌ ಬಗ್ಗೆ ಧ್ವನಿ ಎತ್ತಿದ್ದಾರೆ. ಕ್ರಿಕೆಟರ್ ವಿರಾಟ್ ರೂಮ್‌ ವಿಡಿಯೋ ವೈರಲ್ ಆಗುತ್ತಿದ್ದಂತೆ ದಿಯಾ ಬಾತ್‌ರೂಮ್‌ ವಿಡಿಯೋ ಬಗ್ಗೆ ಚರ್ಚೆ ಶುರುವಾಗಿದೆ. ಈ ಸಮಸ್ಯೆಯಿಂದ ಪಾರಾಗಲು ಹೆಣ್ಣುಮಕ್ಕಳು ಏನು ಮಾಡಬೇಕು ಎಂದು ಹಂಚಿಕೊಂಡಿದ್ದಾರೆ. 

ಒಂದಾನೊಂದು ಕಾಲದಲ್ಲಿ ದಿಯಾ ಮಿರ್ಜಾ ಸ್ನಾನ ಮಾಡುತ್ತಿರುವ ವಿಡಿಯೋ ವೈರಲ್ ಅಗಿತ್ತು. ಹಲವು ತಿಂಗಳುಗಳ ಕಾಲ ಸುದ್ದಿಯಲ್ಲಿದ್ದ ನಟಿ ಪರ್ಸನಲ್ ಲೈಫ್‌ ಬಗ್ಗೆ ಚಿಂತಿಸಿ ಅಂದಿನಿಂದ ಸಾಮಾಜಿಕ ಜಾಲತಾಣದಿಂದ ದೂರು ಉಳಿದು ಬಿಟ್ಟರು. ಈಗ ಆ ಘಟನೆ ಬಗ್ಗೆ ಮತ್ತೆ ಹೇಳಿಕೆ ಕೊಟ್ಟಿದ್ದಾರೆ. ಈಗ ತುಂಬಾನೇ ಜಾಗೃತೆಯಿಂದ ಹೋಟೆಲ್‌ ರೂಮ್ ಆಯ್ಕೆ ಮಾಡಿಕೊಳ್ಳುತ್ತೀನಿ. ಮ್ಯಾನೇಜರ್‌ಗೆ ಮೊದಲೇ ಕರೆ ಮಾಡಿ ನಾನು ಬಂದು ಆಯ್ಕೆ ಮಾಡಿಕೊಂಡ ರೂಮ್‌ನೇ ನನಗೆ ಕೊಡಬೇಕು ಹಾಗೆ ನಾನು ರೂಮ್ ಚೆಕ್ ಮಾಡುವಾಗ ನನ್ನ ಜೊತೆ ನಿಮ್ಮ ಟೀಂ ಇರಬೇಕು ಎಂದು ಮೊದಲೇ ತಿಳಿಸುವೆ. ಕ್ಯಾಮೆರಾ ಎಲ್ಲಿ ಎಲ್ಲಿಇದೆ ಹೇಗೆ ಹುಡುಕಬೇಕು ಎಂದು ಕಲಿತುಕೊಂಡಿರುವೆ ಎಂದು ದಿಯಾ ಇಟೈಮ್ಸ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ವಿರಾಟ್ ವಿಡಿಯೋಗೆ ಅನುಷ್ಕಾ ರಿಯಾಕ್ಷನ್:

'ಅಭಿಮಾನಿಗಳು ಕೃತಜ್ಞತೆ ಅಥವಾ ಅಭಿಮಾನವನ್ನು ತೋರದೇ ಬೇಸರ ಮೂಡುವಂತೆ ನಡೆದುಕೊಂಡಿರುವುದು ಈ ಹಿಂದೆಯೂ ನಡೆದಿವೆ. ಆದರೆ ಇದರಷ್ಟು ಕೆಟ್ಟ ಘಟನೆ ಎಂದೂ ನಡೆದಿಲ್ಲ. ಸೆಲೆಬ್ರಿಟಿಗಳಾದರೆ ಎಲ್ಲವನ್ನೂ ಹ್ಯಾಂಡಲ್‌ ಮಾಡಬೇಕು ಎಂಬ ಚಿಂತನೆ ನಿಮ್ಮಲ್ಲಿದ್ದರೆ, ನೀವೂ ಈ ಸಮಸ್ಯೆಯ ಒಂದು ಭಾಗ ಎಂಬುದನ್ನು ಮರೆಯಬೇಡಿ. ಒಬ್ಬ ವ್ಯಕ್ತಿಯ ಖಾಸಗೀಯತೆ ಮತ್ತು ವೈಯಕ್ತಿಕ ಸ್ವಾತಂತ್ರಕ್ಕೆ ಧಕ್ಕೆ ತರುವ ಕೆಟ್ಟ ನಡತೆ ಇದಾಗಿದೆ. ಆತ್ಮ ನಿಯಂತ್ರಣ ಎಲ್ಲರಿಗೂ ಸಹಕಾರಿಯಾಗುತ್ತದೆ. ಒಂದು ವೇಳೆ ಇದೇ ಘಟನೆ ನಿಮ್ಮ ಬೆಡ್‌ರೂಮಲ್ಲಿ ನಡೆದರೆ ಹೇಗಿರುತ್ತದೆ ಎಂದು ಯೋಚಿಸಿ' ಎಂದು ಅನುಷ್ಕಾ ಕಾಮೆಂಟ್ ಮಾಡಿದ್ದರು. 

ಅಮ್ಮ ನೀನೂ ಸ್ವಲ್ಪ ಸ್ವಾರ್ಥಿಯಾಗು, ಜೀವನ ಪ್ರೀತಿ ಉಳಿಸಿಕೋ!

ಬಾಳಿಗೆ ಬೆಳಕಾದ ಮಗ:

ಉದ್ಯಮಿ ವೈಭವ್ ರೇಖಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿಯಾ ಮಿರ್ಜಾ ಮೇ 14ರಂದು ಗಂಡು ಮಗುವುಗೆ ಜನ್ಮ ನೀಡಿದ್ದಾರೆ. ಪ್ರಿಮೆಚ್ಯೂರ್ ಮಗು ಹುಟ್ಟಿದ್ದ ಕಾರಣ 2 ತಿಂಗಳು ಐಸಿಯುನಲ್ಲಿ ಇಡಲಾಗಿತ್ತು. ಗರ್ಭಾವಸ್ಥೆಯಲ್ಲಿ ತನಗೆ ಬ್ಯಾಕ್ಟೀರಿಯಾ ಸೋಂಕು ತಗುಲಿತ್ತು ಮತ್ತು ಜೀವಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ ಎಂದು ಎಮೋಷನಲ್‌ ಪೋಸ್ಟ್‌ ಮೂಲಕ ದಿಯಾ ಈ ವಿಷಯವನ್ನು ಶೇರ್‌ ಮಾಡಿಕೊಂಡಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಮಗು ಬರ ಮಾಡಿಕೊಂಡ ಕಾರಣ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು. ಗರ್ಭಿಣಿಯಾಗಿ ಮದುವೆ ಮಾಡಿಕೊಂಡರು ಎಂದು ಟ್ರೋಲ್ ಮಾಡುತ್ತಿದ್ದರೆ. 

ಮದರ್‌ಹುಡ್‌ ಬಗ್ಗೆನೂ ದಿಯಾ ಬರೆದುಕೊಂಡಿದ್ದರು. 'ಮಕ್ಕಳನ್ನು ಬಯಸುವ ಕಾರಣ ನಾವು ಮದುವೆಯಾಗುವುದಿಲ್ಲ ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನಾವು ಒಟ್ಟಿಗೆ ಪರಸ್ಪರ ನಿರ್ಧರಿಸಿದ್ದರಿಂದ ಮದುವೆಯಾಗಿದ್ದೇವೆ. ಮದುವೆಗೂ ನನ್ನ ಪ್ರೆಗ್ನೆಂಸಿಗೂ ಯಾವುದೇ ಸಂಬಂಧವಿಲ್ಲ.ವೈದ್ಯಕೀಯ ಕಾರಣಗಳ ಪ್ರಕಾರ ಸುರಕ್ಷಿತವೆಂದು ಭಾವಿಸದ ಹೊರತು ಎಂದಿಗೂ ಪ್ರೆಗ್ನೆಂಸಿ ಘೋಷಿಸುವುದಿಲ್ಲ. ಈ ಸುದ್ದಿ ನನ್ನ ಜೀವನದ ದೊಡ್ಡ ಒಳ್ಳೆಯ ಸುದ್ದಿ. ಇದು ಸಂಭವಿಸಲು ನಾನು ಹಲವು ವರ್ಷಗಳಿಂದ ಕಾಯುತ್ತಿದ್ದೇನೆ. ಮೆಡಿಕಲ್‌ ರಿಸನ್‌ ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ನಾನು ಈ ವಿಷಯ ಮುಚ್ಚಿಡುವ ಪ್ರಶ್ನೆಯೇ ಇಲ್ಲ.ತಾಯಿಯಾಗುವುದು ಜಗತ್ತಿನ ಅತಿದೊಡ್ಡ ಗಿಫ್ಟ್‌. ಈ ಭಾವನೆಯನ್ನು ವ್ಯಕ್ತಪಡಿಸಲು ಯಾವುದೇ ಅವಮಾನ ಇರಬಾರದು. ಮಹಿಳೆಯಾಗಿ, ನಮ್ಮ ಆಯ್ಕೆಗಳ ಬಗ್ಗೆ ನಾವು ವಿಶೇಷ ಕಾಳಜಿ ವಹಿಸಬೇಕು. ನಾವು ಒಬ್ಬಂಟಿಯಾಗಿರಲು ಬಯಸುತ್ತೀವಾ, ನಾವು ಪೋಷಕರಾಗಲು ಬಯಸುತ್ತೀವಾ, ಮಗುವನ್ನು ಬಯಸುತ್ತೀವಾ ಅಥವಾ ಮದುವೆಯಾಗಲು ಬಯಸುತ್ತೀವಾ, ಇವೆಲ್ಲವೂ ಕೊನೆಯಲ್ಲಿ ನಾವೇ ತೆಗೆದುಕೊಳ್ಳುವ ನಿರ್ಧಾರವಾಗಿರಬೇಕು ಎಂದು ಟ್ರೋಲ್‌ ಮಾಡಿದವರನ್ನು ಬಾಯಿ ಮುಚ್ಚಿಸಿದ್ದರು.