Asianet Suvarna News Asianet Suvarna News

ರಾಮ್ ಚರಣ್ ಮೆಗಾ ಹೀರೋ ಎಂದು ಹಾಡಿ ಹೊಗಳಿದ ಫ್ರೆಂಚ್‌ ನಟ ಬ್ರಾವೋ!

ಟಾಲಿವುಡ್ ನಟ ರಾಮ್ ಚರಣ್ ಭಾರತೀಯ ಚಿತ್ರರಂಗದ ಅದ್ಭುತ ನಟ, ಮೆಗಾ ಹೀರೊ ಎಂದು ಫ್ರೆಂಚ್ ಖ್ಯಾತ ನಟ ಬ್ರಾವೋ ಹಾಡಿ ಹೊಗಳಿದ್ದಾರೆ.

Emily in Paris lucas bravo calls ram charan a fantastic actor rav
Author
First Published Aug 16, 2024, 6:43 PM IST | Last Updated Aug 21, 2024, 11:23 PM IST

Actor Ram charan news ಟಾಲಿವುಡ್ ನಟ ರಾಮ್ ಚರಣ್ ಭಾರತೀಯ ಚಿತ್ರರಂಗದ ಅದ್ಭುತ ನಟ, ಮೆಗಾ ಹೀರೊ ಎಂದು ಫ್ರೆಂಚ್ ಖ್ಯಾತ ನಟ ಬ್ರಾವೋ ಹಾಡಿ ಹೊಗಳಿದ್ದಾರೆ.

ಬ್ರಾವೋ ಅವರ ಎಮಿಲಿ ಇನ್ ಪ್ಯಾರಿಸ್(Emily in Paris) ನ ನಾಲ್ಕನೇ ಸೀಸನ್ ನೆಟ್ ಫ್ಲಿಕ್ಸ್(NETFLIX) ನಲ್ಲಿ ಪ್ರಸಾರವಾಗಲಿದೆ. ಈ ಸಂದರ್ಭದಲ್ಲಿ ಚಿತ್ರದ ಪ್ರಚಾರದ ವೇಳೆ 'ನೀವು ಇಷ್ಟಪಡುವ ಭಾರತೀಯ ಸಿನಿಮಾ ಅಥವಾ ನಟರು ಇದ್ದಾರೆಯೇ ಎಂದು ಪ್ರಶ್ನಿಸಲಾಯಿತು.  ಅದಕ್ಕೆ ಪ್ರತಿಕ್ರಿಯಿಸಿದ ಬ್ರಾವೋ,  ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್(RRR)ಚಿತ್ರ ವೀಕ್ಷಿಸಿದ್ದೇನೆ. ಅದರಲ್ಲಿನ ಕೆಲವು ದೃಶ್ಯಗಳಂತೂ ಉಸಿರು ಬಿಗಿಹಿಡಿದು ನೋಡಿದ್ದೇನೆ.  ಚಿತ್ರದಲ್ಲಿನ ರಾಮ್ ಚರಣ್ ನಟನೆ ಅದ್ಭುತವಾಗಿದೆ. ನಾನು ಅವರ ಅಭಿಮಾನಿ ಎಂದು ಹಾಡಿಹೊಗಳಿದ್ದಾರೆ.

ಆರ್‌ಆರ್‌ ಆರ್ ಚಿತ್ರದಲ್ಲಿನ ಅವರ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ದೇಶಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ. ಅವರೊಂದಿಗೆ ಜೂನಿಯರ್ ಎನ್ ಟಿಆರ್ ಸಹ ತೆಲಂಗಾಣ ಗೊಂಡ ನಾಯಕ ಕೊಮುರಂ ಭೀಮ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಎರಡು ಭಾಗಗಳಲ್ಲಿ ಬಂದ ಈ ಚಿತ್ರ ಬರೋಬ್ಬರಿ 1200 ಕೋಟಿ ರೂ ಬಾಚಿದೆ. ಇದಲ್ಲದೆ, ಇದು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದು ಭಾರತೀಯ ಚಿತ್ರರಂಗದ ಶಕ್ತಿಯನ್ನು ಜಗತ್ತಿಗೆ ತೋರಿಸಿದೆ.

ಸ್ವಲ್ಪ ವಯಸ್ಸಾದ್ಮೇಲೆ ಪೋಷಕರೇ ಮಕ್ಕಳಾಗ್ತಾರೆ, ನಾವು ಅವರಿಗೆ ಪಾಲಕರಾಗಬೇಕು: ಜಾನ್ವಿ ಕಪೂರ್ ಪ್ರೌಢ ಮಾತು

ಗ್ಲೋಬಲ್ ಸ್ಟಾರ್ ರಾಮ್ ಚರಣ್ ತಮ್ಮ ಪ್ರತಿ ಸಿನಿಮಾ ಬಿಡುಗಡೆಗೆ ಮೊದಲು ಕೋಟ್ಯಂತರ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿಸುತ್ತಾರೆ.  ಸಿನಿಮಾ ಬಿಡುಗಡೆಗಾಗಿ ಉತ್ಸಾಹದಿಂದ ಕಾಯುವಂತೆ ಮಾಡುತ್ತಾರೆ. ಚೀತಾ, ಮಗಧೀರ ಸಿನಿಮಾದಿಂದ ಇಲ್ಲಿಯವರೆಗೆ ಪ್ರತಿ ಚಿತ್ರದಲ್ಲೂ ಅದ್ಭುತವಾಗಿ ನಟಿಸಿದ್ದಾರೆ. ರಾಮ್ ಚರಣ್ ಎಂತಹ ಅದ್ಭುತ ನಟನೆಂದು ತಿಳಿಯಬೇಕಾದರೆ ರಂಗಸ್ಥಳಂ ವೀಕ್ಷಿಸಬೇಕು. ಕಿವುಡನ ಪಾತ್ರದ ಮೂಲಕ ಅದ್ಭುತವಾಗಿ ನಟಿಸಿದ್ದಾರೆ.  ಅವರ ಯಾವುದೇ ಸಿನಿಮಾವನ್ನು ತೆಗೆದುಕೊಂಡರೂ ವೈವಿಧ್ಯಮಯ ಪಾತ್ರಗಳ ಮೂಲಕ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನದ ಚೀತಾ ಚಿತ್ರದಿಂದ ಅವರ ಚಲನಚಿತ್ರ ವೃತ್ತಿಜೀವನ ಪ್ರಾರಂಭಿಸಿದ ಇಂದು  ವಿಶ್ವದರ್ಜೆಯ ಸ್ಟಾರ್ ನಟನಾಗಿ ಬೆಳೆದು ನಿಂತಿದ್ದಾರೆ.  ತಮ್ಮ ತಂದೆ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರ ಪರಂಪರೆಯನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

'ಬಡತನದಿಂದ ಹೊರ ಬರೋದೊಂದೇ ಇದ್ದ ಗುರಿ' ಚಿತ್ರರಂಗಕ್ಕೆ ಬರೋ ಮುನ್ನಿನ ಜೀವನ ನೆನೆಸಿಕೊಂಡ ವಿಜಯ್ ಸೇತುಪತಿ

ರಾಮ್ ಚರಣ್ ಪ್ರಸ್ತುತ ಶಂಕರ್ ಅವರ ಮುಂಬರುವ ಚಿತ್ರ ಗೇಮ್ ಚೇಂಜರ್ ನಲ್ಲಿ ನಟಿಸುತ್ತಿದ್ದಾರೆ.  ಚಿತ್ರೀಕರಣ ಈಗಾಗಲೇ ಬಹುತೇಕ ಮುಗಿದಿದೆ. ಇವುಗಳ ಹೊರತಾಗಿ ಇನ್ನೂ ಎರಡು ಚಿತ್ರಗಳು ರಾಮ್ ಚರಣ್‌ ಕೈಯಲ್ಲಿವೆ. ಆ ಸಿನಿಮಾಗಳ ಚಿತ್ರೀಕರಣ ಹಂತದಲ್ಲಿವೆ. 'ಉಪ್ಪೇನ' ಚಿತ್ರದ ನಿರ್ದೇಶಕ ಬುಚ್ಚಿಬಾಬು ಜೊತೆಗೆ ಸುಕುಮಾರ್ ನಿರ್ದೇಶನದ ಮತ್ತೊಂದು ಚಿತ್ರದಲ್ಲೂ ಕೂಡ ರಾಮ್ ಚರಣ್ ನಟಿಸುತ್ತಿದ್ದಾರೆ. ಲುಕಾಸ್ ಬ್ರಾವೋ ರಾಮ್ ಚರಣ್ ಅಭಿನಯವನ್ನು ಹೊಗಳಿದ್ದು ಟಾಲಿವುಡ್‌ನಲ್ಲಿ ಮತ್ತೆ ಚರ್ಚೆ ಶುರುವಾಗಿದೆ. ರಾಮ್‌ ಚರಣ್ ಅವರ ಮುಂಬರುವ ಸಿನಿಮಾದ ನಿರೀಕ್ಷೆ ಅಭಿಮಾನಿಗಳಲ್ಲಿ ಇನ್ನಷ್ಟು ಹೆಚ್ಚಾಗುತ್ತಿದೆ.

Latest Videos
Follow Us:
Download App:
  • android
  • ios